ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಮೂವರು ಎಸ್‌ಡಿಪಿಐ ಕಾರ್ಯಕರ್ತರಿಗೆ ಜಾಮೀನು

Tuesday, August 17th, 2021
sdpi workers

ಪುತ್ತೂರು : ಪುತ್ತೂರಿನ ಕಬಕದಲ್ಲಿ ಗ್ರಾಮ ಸ್ವರಾಜ್ಯ ರಥಕ್ಕೆ ಎಸ್‌ಡಿಪಿಐ ಕಾರ್ಯಕರ್ತರು ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು ಮಂಜೂರಾಗಿದೆ. ನ್ಯಾಯಾಂಗ ಬಂಧನಕ್ಕೊಳಗಾಗಿದ್ದ  ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಝೀಜ್, ಸಮೀರ್, ಅಬ್ದುಲ್ ರಹಿಮಾನ್ ನನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮೂವರಿಗೂ ಪುತ್ತೂರು ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.  

ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ಅವ್ಯಹಾರ, ಆರೋಪಿತರಿಗೆ ಜಾಮೀನು

Sunday, July 19th, 2020
kateelu

ಮೂಡಬಿದ್ರೆ  : ಕಟೀಲು ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆಯುತ್ತಿದೆ, ವಿಶೇಷ ಪೂಜೆ, ಯಕ್ಷಗಾನ ಮೇಳದ ಹೆಸರಲ್ಲಿ ಹಣ ವಸೂಲಿ,  ಚಿನ್ನದ ರಥ ಸೇವೆಗೆ ಹಣ ವಸೂಲಿ, ಚಂಡಿಕಾ ಯಾಗ.  ಹೋಮದ  ಹೆಸರಲ್ಲಿ ಹಣ ವಸೂಲಿ ನೆಡೆಯುತ್ತಿದೆ ಎಂದು  ಅಲ್ಲದೆ ಸಾರ್ವಜನಿಕರ ದುಡ್ಡು ದೇವರ ಹೆಸರಲ್ಲಿ ಅಸ್ರಣ್ಣ ಕುಟುಂಬದ ಮನೆ ಸೇರುತ್ತದೆ.  ಸರಕಾರೀ ದೇವಸ್ಥಾನದಲ್ಲಿ ವಸೂಲಿ ಒಂದು ಕಡೆಯಾದರೆ ಅದಕ್ಕೆ ರಶೀದಿ ಬೇರೆಯೇ ತೋರಿಸಲಾಗುತ್ತಿತ್ತು ಎಂದು ತನಿಖಾ ವರದಿ ಮಾಡಲಾಗಿತ್ತು. ಈ ಬಗ್ಗೆ ಅಸ್ರಣ್ಣ ಕುಟುಂಬಸ್ಥರು ನ್ಯಾಯಾಲಯದಲ್ಲಿ ಒಂದು ಕೋಟಿ […]

ಜಾಮೀನು ನೀಡಿ ಸಮಸ್ಯೆಯ ಸುಳಿವಿನಲ್ಲಿ ಸಿಲುಕಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ.

Tuesday, April 21st, 2020
Arali Ekka

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಇಬ್ಬರ ಸಾಲದ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಜಾಮೀನು ನೀಡಿ ತಾವು ಸಂಕಷ್ಟ ಅನುಭವಿಸುತ್ತಿರುವ ಸಾಧ್ಯತೆ ಇರುತ್ತದೆ ನಿಮ್ಮ ವಿಚಾರವನ್ನು ಸಂಪೂರ್ಣವಾಗಿ ಅರಿತುಕೊಂಡು ನಿಮ್ಮಿಂದ ಸಹಾಯ ಪಡೆದು ಪಲಾಯನ ಮಾಡುತ್ತಾರೆ. ಸಾಲ ಕೊಡಿಸುವ ತನಕ ನಿಮ್ಮ ಹಿಂದೆ ದುಂಬಾಲು ಬಿದ್ದು ಒಳ್ಳೆಯ ಮಾತುಗಳನ್ನಾಡಿ, ನಂಬಿಕೆ ಗಿಟ್ಟಿಸಿಕೊಂಡು ನಂತರ ಕಣ್ಣಿಗೂ ಸಹ ಕಾಣದೆ ಮಾಯವಾಗುವರು. ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೇ, ಖಂಡಿತ ಇಲ್ಲ ನಿಮ್ಮನ್ನು ಸಾಲ ತೀರಿಸಲು ಪೀಡಿಸುತ್ತಾರೆ. ಅನಿವಾರ್ಯವಾಗಿ […]

ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಆರ್ದ್ರಾಗೆ ಷರತ್ತು ಬದ್ದ ಜಾಮೀನು

Tuesday, March 24th, 2020
Ardra

ಬೆಂಗಳೂರು :  ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿ ದೇಶ ದ್ರೋಹದ ಕೆಲಸ ಮಾಡಿ  ಬಂಧನಕ್ಕೊಳಗಾಗಿದ್ದ ಆರ್ದ್ರಾಗೆ ಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ. ಬೆಂಗಳೂರು ಟೌನ್ ಹಾಲ್ ಮುಂದೆ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿ ದೇಶದೊಳಗೆ ಪಾಕಿಸ್ತಾನದ ಪರ ಒಲವು ತೋರಿಸಿದ್ದಳು. ಆರ್ದ್ರಾಗೆ ಬೆಂಗಳೂರು 56ನೇ ಸೆಷನ್ಸ್ ಕೋರ್ಟ್ ಜಾಮೀನು ಮಂಜುರು ಮಾಡಿದೆ. ನ್ಯಾಯಾಧೀಶ ನಾರಾಯಣ ಪ್ರಸಾದ್ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ. ಸಿಎ ಎ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಬಂಧಿಸಲ್ಪಟ್ಟ ಅಮೂಲ್ಯ ಲಿಯೋನ […]

ದೆಹಲಿ ಹೈಕೋರ್ಟಿನಿಂದ ಡಿಕೆ ಶಿವಕುಮಾರ್ ಗೆ ಜಾಮೀನು ಮಂಜೂರು

Wednesday, October 23rd, 2019
DKShi

ನವದೆಹಲಿ : ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ. ದೆಹಲಿ ಹೈಕೋರ್ಟಿನ ನ್ಯಾ.ಸುರೇಶ್ ಕುಮಾರ್ ಕೈಟ್ ಜಾಮೀನು ಆದೇಶವನ್ನು ಪ್ರಕಟಿಸಿದರು. ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಸುಮಾರು ಗುರುವಾರ (ಅಕ್ಟೋಬರ್ 17) 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾ. ಸುರೇಶ್ ಕುಮಾರ್ ಕೈಟ್ ಇಂದಿಗೆ ಆದೇಶವನ್ನು ಕಾಯ್ದಿರಿಸಿದ್ದರು. ವಿದೇಶಕ್ಕೆ ತೆರಳುವ ಮೊದಲು ಅನುಮತಿ ಪಡೆಯಬೇಕು, 25 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ನೀಡಬೇಕು ಎಂಬುದಾಗಿ ಷರತ್ತು […]

ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ: ಪತ್ರಕರ್ತ ಸಂತೋಷ್ ಗೆ ಜಾಮೀನು

Wednesday, November 14th, 2018
journalist

ಕೊಡಗು: ಪ್ರವಾದಿ ಮೊಹಮ್ಮದ್ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಕೋರ್ಟ್ನ ನ್ಯಾಯಾಧೀಶ ಮೋಹನ್ ಗೌಡ ಅವರು ಅರ್ಧಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದ ಬಳಿಕ ಸಂತೋಷ್ಗೆ ಷರತ್ತುಬದ್ಧ ಜಾಮೀನು ನೀಡಿದರು. 50 ಸಾವಿರ ರೂ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೌಲ್ಯದ ಇನ್ನಿಬ್ಬರ ಬಾಂಡ್ ಪಡೆದು ಸಂತೋಷ್ರನ್ನು ಬಿಡುಗಡೆಗೊಳಿಸಲು ಆದೇಶ ನೀಡಿದರು. ಸುಪ್ರೀಂ ಕೋರ್ಟ್ನಲ್ಲಿ […]

ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

Monday, October 3rd, 2016
baskar-shetty-murder-case

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣದ ಸಾಕ್ಷ್ಯನಾಶ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶ್ರೀನಿವಾಸ ಭಟ್ಟ ಮತ್ತು ರಾಘವೇಂದ್ರ ಎಂಬುವವರು ಕೊಲೆ ಪ್ರಕರಣದ ಸಾಕ್ಷ್ಯನಾಶ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿದ್ದರು. ಭಾನುವಾರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಶ್ರೀನಿವಾಸ್ ಭಟ್‌‌ ಕೊಲೆ ಪ್ರಕರಣದ ಮೂರನೇ ಆರೋಪಿಯಾಗಿರುವ ನಿರಂಜನ್ ಭಟ್‌‌ ಅವರ ತಂದೆಯಾಗಿದ್ದಾರೆ.ಇನ್ನು ರಾಘವೇಂದ್ರ ನಿರಂಜನ್ ಭಟ್‌‌ನ […]

ಬಾಳಿಗಾ ಕೊಲೆ ಪ್ರಕರಣ: ಜಾಮೀನು ಪಡೆದಿದ್ದ ನರೇಶ್ ಶೆಣೈ ಬಿಡುಗಡೆ

Tuesday, September 20th, 2016
naresh-shenoy

ಮಂಗಳೂರು: ನಗರದ ಆರ್.ಟಿ.ಐ ಕಾರ್ಯಕರ್ತ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಬಿಡುಗಡೆಗೊಂಡಿದ್ದಾರೆ. ಶನಿವಾರ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಜೈಲು ಅಧೀಕ್ಷಕರಿಗೆ ಬಿಡುಗಡೆಯ ಆದೇಶ ಪತ್ರ ತಲುಪಿರಲಿಲ್ಲ ಆದ್ದರಿಂದ ತಡವಾಗಿತ್ತು. ಭಾನುವಾರ ರಜಾ ಕಾರಣ ಎರಡು ದಿನ ಜೈಲಿನಲ್ಲೇ ಇರುವಂತಾಯಿತು. ಅಂತಿಮವಾಗಿ ಸೋಮವಾರ ಸಂಜೆ ಬಿಡುಗಡೆಗೊಂಡರು. ಜೈಲಿನಿಂದ ಹೊರಬಂದ ಅವರನ್ನು ಆಪ್ತರು ಕಾರಿನಲ್ಲಿ ಗುಪ್ತಸ್ಥಳಕ್ಕೆ ಕರೆದೊಯ್ದರು. ಈ ಸಂದರ್ಭ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ […]

ವಿವಿ ಕ್ಯಾಂಪಸ್‌ನ ವಿಜ್ಞಾನ ವಿಭಾಗದ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಆರೋಪಿಗೆ ಜಾಮೀನು

Saturday, September 17th, 2016
santhosh

ಮಂಗಳೂರು: ಮಂಗಳೂರು ವಿವಿ ಕ್ಯಾಂಪಸ್‌ನ ವಿಜ್ಞಾನ ವಿಭಾಗದ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಆರೋಪಿಗೆ ಜಾಮೀನು ಸಿಕ್ಕಿದೆ. ಬುಧವಾರ ಕೊಣಾಜೆ ಪೊಲೀಸರು ಆರೋಪಿ ಸಂತೋಷ್‌ನನ್ನು ಬಂಧಿಸಿದ್ದರು. ಸುಳ್ಯ ತಾಲೂಕಿನ ಎಡಮಂಗಲ ಮುರೋಳಿ ನಿವಾಸಿ ಎಂ.ಸಂತೋಷ್ (22) ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ಸಿಕ್ಕಿಬಿದ್ದಿದ್ದ. ಸಂತೋಷ್ ಸಾಗರ ಪ್ರಾಣಿವಿಜ್ಞಾನ ವಿಭಾಗದ ದ್ವಿತೀಯ ಎಂ.ಎಸ್‌ಸಿ ವಿದ್ಯಾರ್ಥಿ. ತಾನೇ ಈ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದ. ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾದ ಬಗ್ಗೆ ಸೆ.1ರಂದು ವಿವಿ ಕುಲಸಚಿವರು ಕೊಣಾಜೆ ಪೊಲೀಸ್ ಠಾಣೆಗೆ […]

ಪಡೀಲ್‌ ಹೋಂ ಸ್ಟೇ ದಾಳಿ ಪ್ರಕರಣಕ್ಕೆ 1 ವರ್ಷ,ಒಟ್ಟು 35 ಮಂದಿ ಜಾಮೀನಿನಲ್ಲಿ ಬಿಡುಗಡೆ

Sunday, July 28th, 2013
Homestay one year

ಮಂಗಳೂರು: ಪಡೀಲ್‌ ಹೋಂ ಸ್ಟೇ ದಾಳಿ ಪ್ರಕರಣಕ್ಕೆ 1 ವರ್ಷವಾಗಿದ್ದು, 2012 ಜುಲೈ 28 ರಂದು ಶನಿವಾರ ಮಧ್ಯಾಹ್ನ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ ಅಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣದಲ್ಲಿ 44 ಮಂದಿ ಆರೋಪಿಗಳ ಪೈಕಿ 38 ಮಂದಿಯನ್ನು ಬಂಧಿಸಲಾಗಿದ್ದು, 6 ಮಂದಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಬಂಧಿತ 38 ಮಂದಿಯಲ್ಲಿ ಮೂವರನ್ನು ಹೊರತು ಪಡಿಸಿ ಉಳಿದ 35 ಮಂದಿ ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದಾರೆ. ಇದೇ ಜು. 21 […]