ಕುಡುಪು ಆನಂತ ಪದ್ಮನಾಭ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ದಲ್ಲಿ ಶೃದ್ಧಾ ಭಕ್ತಿಯ ನಾಗರ ಪಂಚಮಿ

Friday, August 9th, 2024
kudupu-nagarapanchami

ಮಂಗಳೂರು : ನಾಗರ ಪಂಚಮಿ ಹಬ್ಬವನ್ನು ನಾಡಿನೆಲ್ಲೆಡೆ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಎಲ್ಲೆಡೆ ನಾಗರಾಧನೆ ಶೃದ್ಧಾ ಭಕ್ತಿಯಿಂದ ನಡೆಯುತ್ತಿದ್ದು, ಕುಡುಪು ಆನಂತ ಪದ್ಮನಾಭ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಶರವು ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಮೊದಲಾದೆಡೆ ಭಕ್ತರು ಬೆಳಗ್ಗಿನಿಂದಲೇ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಕೈಗೊಂಡರು. ಇಂದು ನಾಗಾರಾಧನೆ ಕುಟುಂಬದ ಮೂಲ ನಾಗಬನಗಳಲ್ಲಿಯೂ ನಡೆಯುತ್ತಿದ್ದು ಮುಂಜಾನೆಯಿಂದಲೇ ಜನರು ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ. ನಾಗರಾಧನೆ ಕ್ಷೇತ್ರಗಳಲ್ಲಿ ಸಾವಿರಾರು […]

ನಾಗರ ಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತ್ಯಕ್ಷನಾದ ನಿಜ ನಾಗರ

Monday, July 27th, 2020
ನಾಗರ ಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತ್ಯಕ್ಷನಾದ ನಿಜ ನಾಗರ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗನಿಗೆ ಹಾಲೆರೆಯುವ ಸಂದರ್ಭದಲ್ಲಿ ನಿಜ ನಾಗರ ದರ್ಶನ ನೀಡಿ ಅರ್ಚಕರಿಗೆ ಮತ್ತು ಅಲ್ಲಿ ನೆರೆದಿದ್ದವರಿಗೆ ಆಶ್ಚರ್ಯಮೂಡಿಸಿದೆ. ಮೊದಲಿಗೆ ದೇಗುಲದ ನಾಗಪ್ರತಿಷ್ಟೆ ಮಂಟಪದ ಬಳಿ, ನಂತರ ಅರ್ಚಕರು ನಾಗಮಂಟಪದಲ್ಲಿ ಪೂಜೆ ನಡೆಸುತ್ತಿದ್ದ ವೇಳೆ ಹೊರಾಂಗಣದಲ್ಲಿ ಹಾವು ಪ್ರತ್ಯಕ್ಷವಾಗಿದೆ ಎನ್ನಲಾಗಿದೆ. ನಾಗರಪಂಚಮಿಯನ್ನು ಶನಿವಾರ ಪೂರ್ವ ಶಿಷ್ಠ ಸಂಪ್ರದಾಯದಂತೆ ಆಚರಿಸಲಾಯಿತು. ಮದ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. […]

ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ ಎಂದು ನಾಗರ ಪಂಚಮಿಯನ್ನು ಟೀಕಿಸಿದ ಸತೀಶ ಜಾರಕಿಹೊಳಿ !

Friday, July 24th, 2020
satish-Jarakiholi

ಮಂಗಳೂರು : ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವ ಸಂಪ್ರದಾಯವನ್ನು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಟೀಕಿಸುತ್ತಾ, ಇದು ಅವೈಜ್ಞಾನಿಕ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ. ಹಾಗಾಗಿ ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಿ ಎಂದು ಹಿಂದೂ ವಿರೋಧಿ ಕರೆ ನೀಡುವ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ. ಅದಲ್ಲದೇ ಕರ್ನಾಟಕದಲ್ಲಿ ಪ್ರತಿ ವರ್ಷ 40 ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ, ನಾಗನಿಗೆ ಹಾಲು ಎರೆಯವ ಬದಲು, ಬಡಮಕ್ಕಳಿಗೆ ಹಾಲು ನೀಡಿ ಎಂದು ಕರೆ ನೀಡಿದ್ದಾರೆ. ಇದು […]

ಮಂಜೇಶ್ವರದ ಹಲವೆಡೆ ಸಂಭ್ರಮದ ನಾಗರ ಪಂಚಮಿ ಆಚರಣೆ

Monday, August 8th, 2016
Manjeshwara-Nagarapanchamy

ಕಾಸರಗೋಡು/ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಹಲವೆಡೆ ಭಾನುವಾರ ನಾಗರಪಂಚಮಿ ಆಚರಣೆಯ ಸಂಭ್ರಮ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು. ಬೆಳಗ್ಗಿನಿಂದಲೇ ವಿವಿಧ ನಾಗ ದೇವಾಲಯಗಳಲ್ಲಿ ಭಕ್ತರು ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು. ಹದಿನೆಂಟು ಪೇಟೆಗೊಳಪಟ್ಟ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನ, ಬಂಗ್ರ ಮಂಜೆಶ್ವರದ ಶ್ರೀ ಕಾಳಿಕಾ ಪರಮೆಶ್ವರಿ ದೇವಸ್ಥಾನ, ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನ, ಉಪ್ಪಳದ ಕೋಡಿಬೈಲು ತರವಾಡು ಮನೆ, ಕುಂಬಳೆಯ ಕಳತ್ತೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕಾಸರಗೋಡು ನಗರದ ಮಲ್ಲಿಕಾರ್ಜುನ ಕ್ಷೇತ್ರ ಮುಂಬಾಗವಿರುವ ನಾಗನ ಕಟ್ಟೆ, ರಾಜ್ಯ ಸಾರಿಗೆ […]

ಕರಾವಳಿ ಜಿಲ್ಲೆಯ ವಿವಿದೆಡೆಯಲ್ಲಿ ನಾಗರ ಪಂಚಮಿ ಹಬ್ಬ

Monday, August 8th, 2016
Kudupu temple

ಮಂಗಳೂರು: ತುಳುವರ ಆಟಿ ಅಮಾವಾಸ್ಯೆ ಕಳೆದು ಬರುವುದೇ ನಾಗರ ಪಂಚಮಿ ಹಬ್ಬ. ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಬರುವ ಈ ಹಬ್ಬ, ಕೆಲವೊಮ್ಮೆ ಸೋನೆ ತಿಂಗಳಿನಲ್ಲಿ ಬರುವುದೂ ಇದೆ. ಅದೆನೇ ಆದರೂ ಆ ಬಳಿಕ ಬರುವ ಹಬ್ಬಗಳು ಸಾಲು ಸಾಲಾಗಿ ನಾಡಿಗೆ ಸಂಭ್ರಮ ತರಲಿವೆ. ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ಸ್ಥಾನವಿದೆ. ನಾಗ ಪಂಚಮಿ ನಾಗಾರಾಧನೆಗೆ ಸಂಬಂಧಿಸಿದ ವಿಶಿಷ್ಟ ದಿನದಂದು ತುಳು ನಾಡಿನ ಉದ್ದಗಲಕ್ಕೂ ಎಲ್ಲಾ ಜಾತಿ-ಜನಾಂಗದವರೂ ನಾಗನಿಗೆ ಹಾಲೆರೆಯುತ್ತಾರೆ. ತುಳುನಾಡಿನ ಅಲ್ಲಲ್ಲಿ ನಾಗಂಡಗಳಿವೆ. ಅಂದರೆ ಇದರ ಅರ್ಥ […]

ಸುಬ್ರಹ್ಮಣ್ಯದಲ್ಲಿ ಭಕ್ತಿ ಸಂಭ್ರಮದ ನಾಗರ ಪಂಚಮಿ:ಹಾಲು ಸಮರ್ಪಿಸಿದ ಭಕ್ತರು

Friday, August 1st, 2014
kukke Subrahmanya

ಸುಬ್ರಹ್ಮಣ್ಯ : ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು. ಈ ನಿಮಿತ್ತ ಶ್ರೀ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ಭಕ್ತಾಧಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ನಾಗರಾಜನಿಗೆ ಪುರೋಹಿತ ಕುಮಾರ ಭಟ್ ಎರೆದರು. ತನುವಿನೊಂದಿಗೆ ಹಿಂಗಾರ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು. ಮಹಾಪೂಜೆಯ ನಂತರ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ನೈವೇಧ್ಯ ಸಮರ್ಪಣೆ ನೆರವೇರಿತು. ಕುಕ್ಕೆಯಲ್ಲಿ ಪ್ರತಿದಿನ ನಡೆಯುವ ಆಶ್ಲೇಷಾ ಬಲಿ,ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ, […]