ಮಂಗಳೂರು ನೆಹರೂ ಮೈದಾನದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2022
Republic day

ಮಂಗಳೂರು : ದ.ಕ. ಜಿಲ್ಲಾಡಳಿತದ ವತಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಮಂಗಳೂರು ನೆಹರೂ ಮೈದಾನದಲ್ಲಿ ಆಚರಿಸಲಾಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಜಿಲ್ಲೆಯಲ್ಲಿ 20 ವರ್ಷಗಳಿಂದ ಜೀವಂತ ಸಮಸ್ಯೆ ಆಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆ ಯನ್ನು ಪರಿಹರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಗುರುತಿಸಲಾಗಿರುವ 66000 ಹೆಕ್ಟೇರ್ […]

ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

Monday, November 1st, 2021
Kannada Rajyotsava

ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ನ.01ರ ಸೋಮವಾರ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು 66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದೇಶದ ತ್ರಿವರ್ಣ ಧ್ವಜಾರೋಹಣ ಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ರಾಜ್ಯ ಮತ್ತು ಜಿಲ್ಲೆಯಾದ್ಯಂತ ಸುಖಃ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಹಾಗೂ ಸಮಸ್ತ ನಾಗರಿಕರು ಶಾಂತಿಯುತ, ಸಹಬಾಳ್ವೆ […]

ಮಂಗಳೂರು ನೆಹರೂ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ

Sunday, August 15th, 2021
S angara

ಮಂಗಳೂರು : ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನ ದಲ್ಲಿ  ಆ.15ರ ಭಾನುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ನಮ್ಮ ದೇಶವಿಂದು ಇಡೀ ವಿಶ್ವದಲ್ಲೇ ಒಂದು ಚಾರಿತ್ರಿಕ ಕಾಲಘಟ್ಟದಲ್ಲಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ  ದೊರೆತು ೭೫ವರ್ಷ ತುಂಬಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಅಮೃತ ಮಹೋತ್ಸವ ಎನ್ನಲಾಗುತ್ತಿದೆ. ಸನ್ಮಾನ್ಯ ಪ್ರಧಾನ […]

ಉಸ್ತುವಾರಿ ಸಚಿವರಿಂದ ಕರಾವಳಿ ಉತ್ಸವದ ಮೆರವಣಿಗೆ ಉದ್ಘಾಟನೆ

Friday, January 10th, 2020
KaravaliUthsava

ಮಂಗಳೂರು : ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ ಹತ್ತರಿಂದ ಇಪ್ಪತ್ತರವರೆಗೆ ನಡೆಯುವ ಕರಾವಳಿ ಉತ್ಸವದ ಸಾಂಸ್ಕತಿಕ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೆಹರೂ ಮೈದಾನದಲ್ಲಿ ಗುರುವಾರ ಉದ್ಘಾಟಿಸಿದರು. ಮಂಗಳೂರಿನಲ್ಲಿ ನಡೆಯುವ ಕರಾವಳಿ ಉತ್ಸವ ರಾಜ್ಯ ಹೆಮ್ಮೆ ಪಡುವಂತಹ ಕಾರ್ಯಕ್ರಮ ಎಂದು ಅವರು ಹೇಳಿದರು. ಪಣಂಬೂರು ಬೀಚ್‍ ಉತ್ಸವ, ಸಾಂಸ್ಕತಿಕ ಉತ್ಸವಗಳು ಕರಾವಳಿಯ ಸಾಂಸ್ಕತಿಯನ್ನು ಬಿಂಬಿಸುವ ಉತ್ಸವ ಎಂದು ಅವರು ಬಣ್ಣಿಸಿದರು. ಸಾಂಸ್ಕತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳ ವೈವಿಧ್ಯಮಯ ಕಲಾ […]

ಕ್ರೀಡೆಯಿಂದ ದೈಹಿಕ ಕ್ಷಮತೆ ಕಾಪಾಡಿಕೊಳ್ಳಬಹುದು : ಡಾ.ಎಂ.ಎನ್.ರಾಜೇಂದ್ರ ಕುಮಾರ್

Monday, December 2nd, 2019
v4

ಮಂಗಳೂರು : ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತಕ ಸಂಘದ ವತಿಯಿಂದ ಭಾನುವಾರ ನಗರ ನೆಹರೂ ಮೈದಾನದ ಬಳಿಯ ಫುಟ್‌ಬಾಲ್ ಮೈದಾನದಲ್ಲಿ ನಡೆದ ಪತ್ರಕರ್ತರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ದಿನನಿತ್ಯ ಸುದ್ದಿಯ ಬೆನ್ನತ್ತಿ ಹೋಗುವ ಪತ್ರಕರ್ತರು ಕ್ರೀಡಾಕೂಟ ಆಯೋಜಿಸುತ್ತಿರುವುದು ಒಳ್ಳೆಯ ವಿಷಯ. ಮಾನಸಿಕ ನೆಮ್ಮದಿಗೂ ಕ್ರೀಡೆ […]

ಮನುಷ್ಯ ಮನುಷ್ಯನನ್ನು ದ್ವೇಷಿಸುವ ಧರ್ಮ ಯಾವುದು ಇರಲು ಸಾಧ್ಯ ಇಲ್ಲ: ಸಿದ್ದರಾಮಯ್ಯ

Tuesday, December 4th, 2018
siddaramaih

ಮಂಗಳೂರು: ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರ ಎಲ್ಲ ಕಾರ್ಯಗಳಲ್ಲಿ ವಿಫಲವಾಗಿದ್ದು, ಅವರ ಮಾತುಗಳೆಲ್ಲವೂ ಸುಳ್ಳಾಗಿವೆ. ಅಧಿಕಾರ ಅನುಭವಿಸುವಾಗ ರಾಮನ ಮರೆತ ಅವರು, ಈಗ ಅವರಿಗೆ ರಾಮನ ನೆನಪಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮನುಷ್ಯ ಮನುಷ್ಯನನ್ನು ದ್ವೇಷಿಸುವ ಧರ್ಮ ಯಾವುದು ಇರಲು ಸಾಧ್ಯ ಇಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವಂತಹ ಧರ್ಮವೇ ಎಲ್ಲ ಧರ್ಮಗಳ ಜೀವಾಳ. ಪ್ರೀತಿ-ವಿಶ್ವಾಸ ಇಲ್ಲದಿದ್ದರೆ ಅದು ಧರ್ಮವೇ ಅಲ್ಲ. ಕೆಲವರು […]

ನೆಹರೂ ಮೈದಾನದಲ್ಲಿ 72ನೇ ಸ್ವಾತಂತ್ರೋತ್ಸವ ಆಚರಣೆ..!

Thursday, August 16th, 2018
Independence (2)

ಮಂಗಳೂರು: ದ.ಕ. ಜಿಲ್ಲೆಯು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ನಗರದ ನೆಹರೂ ಮೈದಾನದಲ್ಲಿ ನಿನ್ನೆ ಸರಳ ರೀತಿಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ರಾಷ್ಟ್ರ ಧ್ವಜ ಅರಳಿಸಿ ಪೆರೇಡ್ ವೀಕ್ಷಣೆಯ ಮೂಲಕ ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸಂದೇಶ ನೀಡಿದ ಅವರು, ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧರ ಜತೆಗೆ ಜಿಲ್ಲೆಯ ನಾಯಕರಾದ ಕುದ್ಮುಲ್ ರಂಗರಾಯ, ಕೆ.ಆರ್. ಕಾರಂತ, ಡಾ. ಅನಿ ಬೆಸೆಂಟ್, […]

ಅಂತಾರಾಷ್ಟ್ರೀಯ ಮಟ್ಟದ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌

Wednesday, January 31st, 2018
cricket-pitch

ಮಂಗಳೂರು: ನಗರದ ಕ್ರಿಕೆಟ್‌ ಪ್ರೇಮಿಗಳಿಗೆ ಪೂರಕವಾಗುವ ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿ.ವಿ.ಕಾಲೇಜಿನ ಆಶ್ರಯದಲ್ಲಿ ಕರಾವಳಿ ಕ್ರಿಕೆಟ್‌ ಅಕಾಡೆಮಿಯು ಕಾಲೇಜಿನ ಮೈದಾನದಲ್ಲಿ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಿಚ್‌ ನಿರ್ಮಾಣಕ್ಕೆ ಇಲ್ಲಿ ಯೋಚಿಸಲಾಗಿದ್ದು, ಇಂದಿನಿಂದ ಕಾಮಗಾರಿ ಆರಂಭವಾಗಲಿದೆ. ವಿ.ವಿ.ಕಾಲೇಜಿನ ಸುಮಾರು 2 ಎಕ್ರೆ ವ್ಯಾಪ್ತಿಯ ಕ್ರೀಡಾಂಗಣದ ಪೈಕಿ ಸುಮಾರು 1 ಎಕ್ರೆ ವ್ಯಾಪ್ತಿ ಪ್ರದೇಶದಲ್ಲಿ 36×40 ಅಡಿಗಳ ಮೂರು ಟರ್ಫ್‌ ಕ್ರಿಕೆಟ್‌ ಪಿಚ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದರ […]

ರಾಷ್ಟ್ರಮಟ್ಟದ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್ ದಕ್ಷಿಣ ಕನ್ನಡ ಬಾಲಕ- ಬಾಲಕಿಯರ ಮೇಲುಗೈ

Saturday, November 4th, 2017
karate championship

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸ್ಪರ್ಧಿಗಳು ರಾಷ್ಟ್ರಮಟ್ಟದ ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್‌ನ ಬಾಲಕ- ಬಾಲಕಿಯರ ವಿಭಾಗದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಬಣ್ಣದ ಬೆಲ್ಟ್‌ಗಳ ಸ್ಪರ್ಧೆಗಳು ಮೊದಲ ದಿನ ನಡೆದವು. ಕಿಕ್ಕಿರಿದು ಸೇರಿದ್ದ ಸಮರ ಕಲೆಯ ಅಭಿಮಾನಿಗಳ ಸಮ್ಮುಖದಲ್ಲಿ ಪುಟಾಣಿಗಳು ತಮ್ಮ ಕೌಶಲ ಪ್ರದರ್ಶಿಸಿದರು. ಫಲಿತಾಂಶ:8 ವರ್ಷ ವಯೋಮಿತಿ ಬಾಲಕಿಯರ ಕಟಾ ಸ್ಪರ್ಧೆ: ನಮಿತಾ (ಬಜ್ಪೆ)-1 ; ದ್ಯುತಿ (ಮಂಗಳೂರು)-2 ; ಸಮನ್ವಿ ಪೂಜಾರಿ (ಉಡುಪಿ)-3 ; ಸುಹಾನಾ ಪೂಜಾರಿ (ಕಿನ್ನಿಗೋಳಿ)-3. 8 ವರ್ಷ ವಯೋಮಿತಿ ಬಾಲಕಿಯರ ಕುಮಿಟೆ: ಹಿಮಾನಿ (ಮಂಗಳೂರು)-1 ; […]

ನೆಹರೂ ಮೈದಾನದಲ್ಲಿ 4 ಹಾಗೂ 5ರಂದು ಇಂಡಿಯನ್‌ ಕರಾಟೆ ಚಾಂಪಿಯನ್‌ಶಿಪ್‌

Friday, November 3rd, 2017
karate

ಮಂಗಳೂರು: ಇಂಡಿಯನ್‌ ಕರಾಟೆ ಚಾಂಪಿಯನ್‌ಶಿಪ್‌ ನಗರದ ನೆಹರೂ ಮೈದಾನದಲ್ಲಿ ಈ ತಿಂಗಳ 4 ಹಾಗೂ 5ರಂದು ನಡೆಯಲಿದೆ. ಕರಾಟೆ ಚಾಂಪಿಯನ್‌ಶಿಪ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಚಾಲನೆ ನೀಡಲಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ 2 ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಕರಾಟೆಯ ರೋಚಕ ಅನುಭವ ನೀಡುವ ಜತೆಗೆ ಉತ್ಸಾಹಿ ತರುಣರಿಗೆ ಸ್ಫೂರ್ತಿಯಾಗಲಿದೆ. ಈ ನಿಟ್ಟಿನಲ್ಲಿ ಕರಾವಳಿ ಮಣ್ಣಿನಲ್ಲಿ ಅರಳಿದ ಕರಾಟೆಯ ಕುರಿತ ಡೀಟೈಲ್ ಸ್ಟೋರಿ ಇಲ್ಲಿದೆ. ಕರಾಟೆ ಅತ್ಯಂತ ಪ್ರಾಚೀನ ಸಮರಕಲೆಗಳಲ್ಲೊಂದು. ಭಾರತದಲ್ಲಿ ಕೂಡಾ […]