Blog Archive

ಪಾಣೆಮಂಗಳೂರು ಗ್ರಾಮದ ಅಕ್ರಮ ಮನೆಗಳ ತೆರವು

Saturday, September 14th, 2019
pane-mangaluru

ಬಂಟ್ವಾಳ : ಪಾಣೆಮಂಗಳೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಕಟ್ಟಲಾಗಿದ್ದ ಸುಣ್ಣದಗೂಡು ಕಟ್ಟಡವನ್ನು ತಾಲೂಕು ಆಡಳಿತ, ಪುರಸಭಾಡಳಿತ ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ತೆರವುಗೊಳಿಸಿದೆ. ಪೊಲೀಸ್ ಬಂದೋಬಸ್ತ್ ನೊಂದಿಗೆ ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹಾಗೂ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮೊದಲಾದ ಅಧಿಕಾರಿಗಳು ಭಾಗವಹಿಸಿದ್ದರು. ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಡಿ.ಟಿ.ನಾಗರಾಜ್, ಪಿಎಸ್ಐ ಚಂದ್ರಶೇಖರ್    

ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಮತ್ತೆ ಭಾರೀ ಮಳೆಯಾಗುವ ಸೂಚನೆ

Thursday, August 8th, 2019
Subrhmanya

ಮಂಗಳೂರು : ಕರಾವಳಿಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಿರುವ ಹವಾಮಾನ ಇಲಾಖೆ ಮತ್ತೆ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗುವ ಸೂಚನೆ ನೀಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವರ್ಷಾಧಾರೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತೆ ಶಾಲೆ-ಕಾಲೇಜಿಗೆ ರಜೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಳದ ಸಮೀಪ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಪ್ರವಾಹ ಅಧಿಕವಾಗಿದ್ದು ನದಿಯಲ್ಲಿ ಬೃಹತ್ ಎರಡು ಮರಗಳು ನೀರಿನಲ್ಲಿ ಬಂದು ಕಿಂಡಿ ಅಣೆಕಟ್ಟಿಗೆ ಸಿಲುಕಿ ಕೃತಕ ಪ್ರವಾಹ ಉಂಟಾಗಿ ಶಿಶಿಲ […]

ಅಪಾಯದ ಮಟ್ಟಕ್ಕೆ ಮುಟ್ಟಿದ ಕುಮಾರಧಾರ ಹಾಗೂ ನೇತ್ರಾವತಿ ನದಿ ನೀರಿನ ಹರಿಯು

Thursday, August 8th, 2019
Bantwala-Natravati

ಮಂಗಳೂರು : ದ.ಕ. ಜಿಲ್ಲೆಯ ಕುಮಾರಧಾರ ಹಾಗೂ ನೇತ್ರಾವತಿ ನದಿ ಅಪಾಯದ ಮಟ್ಟದ ಸನಿಹದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಹರಿಯು 8.4 ಕ್ಕೆ ಮುಟ್ಟಿದ್ದು, ಅಪಾಯದ ಮಟ್ಟ 8.5 ಆಗಿದೆ. ಉಪ್ಪಿನಂಗಡಿ ಯಲ್ಲಿ ನೇತ್ರಾವತಿ ನದಿ ನೀರಿನ ಹರಿಯು ಗರಿಷ್ಟ 29.5 ಇದ್ದು ಈಗ  30.00 ಕ್ಕೆ ಮುಟ್ಟಿದ್ದು ಅಪಾಯದ ಮಟ್ಟ ಮೀರಿದೆ. ಉಪ್ಪಿನಂಗಡಿ ಯಲ್ಲಿ ಕುಮಾರಧಾರ ನದಿ  ನೀರಿನ ಹರಿಯು ಗರಿಷ್ಟ 28.5 ಇದ್ದು ಈಗ  […]

ಮಗನ ಅಗಲಿಕೆಯನ್ನು ಮಾತೃ ಹೃದಯ ಸಹಿಸದೆ ಸಂಕಟಪಡುತ್ತಿತ್ತು

Thursday, August 1st, 2019
sidhartha

ಚಿಕ್ಕಮಗಳೂರು: ಸಿದ್ಧಾರ್ಥ್ ಕಣ್ಮರೆಯಾಗಿ 36ಗಂಟೆಗಳ ನಂತರ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಬೋಳಾರ್‌ ಬಳಿಯ ಹುಯಿಗೆ ಬಜಾರ್‌ನಲ್ಲಿ ತೇಲುತ್ತಿದ್ದುದು ಮೀನುಗಾರಿಕೆಗಾಗಿ ಬುಧವಾರ ಬೆಳಗ್ಗೆ ನದಿ ಇಳಿದಿದ್ದ ರಿತೀಶ್‌ ಮತ್ತು ತಂಡಕ್ಕೆ ಕಂಡುಬಂದಿದೆ. 59 ವರ್ಷದ ಸಿದ್ಧಾರ್ಥ್ ಅವರ ಸಾವು ಕಾರ್ಪೋರೆಟ್ ವಲಯದಲ್ಲಿ ಆಘಾತ ಮೂಡಿಸಿದೆ. ಅವರು ಪತ್ನಿ ಮಾಳವಿಕಾ, ಪುತ್ರರಾದ ಅಮರ್ಥ್ಯ ಹೆಗ್ಡೆ, ಈಶಾನ್‌ ಹೆಗ್ಡೆ ಹಾಗೂ ವೃದ್ಧ ತಂದೆ ಗಂಗಯ್ಯ ಹೆಗ್ಡೆ, ತಾಯಿ ವಾಸಂತಿ ಹೆಗ್ಡೆ, ಮಾವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಅತ್ತೆ ಪ್ರೇಮಾ ಕೃಷ್ಣ ಸೇರಿದಂತೆ […]

ಮಾಡೂರಿನ ವ್ಯಕ್ತಿಯ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

Wednesday, May 15th, 2019
Lokesh-body

ಮಂಗಳೂರು  : ಕೋಟೆಕಾರ್ ಸಮೀಪದ ಮಾಡೂರಿನಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ರಾ.ಹೆ.66ರ ಉಳ್ಳಾಲ ನೇತ್ರಾವತಿ ನದಿಯಲ್ಲಿ ಮೇ 15 ರ ಬುಧವಾರ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೋಟೆಕಾರ್ ಸಮೀಪದ ಮಾಡೂರಿನ ಲೋಕೇಶ್ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ. ಕೃತ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಮೃತದೇಹ ಸಂಪೂರ್ಣವಾಗಿ ಊದಿಕೊಂಡಿದ್ದು ಗುರುತು ಪತ್ತೆಯಾಗ್ದ ಸ್ಥಿತಿಯಲ್ಲಿದೆ. ಉಳ್ಳಾಲ ನೇತ್ರಾವತಿ ಸೇತುವೆಯಡಿ ಮೃತದೇಹ ತೇಲುವುದನ್ನು ಕಂಡ ಸಾರ್ವಜನಿಕರು […]

ತೊಕ್ಕೊಟ್ಟು : ಅಳುತ್ತಾ ನೇತ್ರಾವತಿ ನದಿಗೆ ಹಾರಿದ ಯುವತಿ

Thursday, January 17th, 2019
Netravathi River

ತೊಕ್ಕೊಟ್ಟು : ಮೊಬೈಲಿನಲ್ಲಿ ಮಾತನಾಡುತ್ತಾ ಬಂದು ಅಳುತ್ತಾ ಯುವತಿ ಯೋರ್ವಳು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ನೇತ್ರಾವತಿ ಸೇತುವೆಯಲ್ಲಿ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್‌ ಸವಾರರಿಬ್ಬರು ನೇತ್ರಾವತಿ ಸೇತುವೆಯಲ್ಲಿ ಒಂಟಿ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಬೈಕನ್ನು ನಿಲ್ಲಿಸಿದ್ದರು.”ಏನಾದ್ರೂ ಸಹಾಯ ಮಾಡಬೇಕಾ’ ಎಂದು ಕೇಳುವಷ್ಟರಲ್ಲಿ ಆಕೆ ಏಕಾಏಕಿ ನದಿಗೆ ಹಾರಿದ್ದಾಳೆ. ಕತ್ತಲು ಆವರಿಸಿದ್ದರಿಂದಾಗಿ ನದಿಗೆ ಹಾರುವ ಧೈರ್ಯ ಆಗಲಿಲ್ಲ ಎಂದು ಬೈಕ್‌ ಸವಾರರು ತಿಳಿಸಿದ್ದಾರೆ. ಆಕೆ ಸುಮಾರು 22ರ ಹರೆಯದ […]

ಭಾನುವಾರ ನಡೆಯಲಿದೆ ‘ಜಯ-ವಿಜಯ’ ಕಂಬಳ

Friday, February 9th, 2018
kambala

ಮಂಗಳೂರು: ಇದೇ ಭಾನುವಾರ ನೇತ್ರಾವತಿ ನದಿ ತೀರದ ಜಪ್ಪಿನಮೊಗರು ಕಂಬಳ ಗದ್ದೆಯಲ್ಲಿ ಜಯ-ವಿಜಯ ಜೋಡುಕೆರೆ ಕಂಬಳ ಕೂಟ ಆಯೋಜಿಸಲಾಗಿದೆ. ಜೆ. ಜಯಗಂಗಾಧರ ಶೆಟ್ಟಿ- ಮನ್ಕು ತೋಟ ಗುತ್ತು ಹಾಗೂ ನಾಡಾಜೆ ಗುತ್ತು, ಸ್ಮರಣಾರ್ಥ ಈ ಕಂಬಳ ನಡೆಯುತ್ತಿದ್ದು, ಇದು ಆರನೇ ವರ್ಷದ ಕಂಬಳ ಕೂಟ. ಮಂಗಳೂರು ನಗರದ ಆಸುಪಾಸು ನಡೆಯುವ ಕೆಲವೇ ಕಂಬಳ ಕೂಟಗಳಲ್ಲಿ ಈ ಕಂಬಳ ಕೂಟವು ಅತ್ಯಂತ ಪ್ರಮುಖ ಎನ್ನಲಾಗುತ್ತದೆ. ತುಳುವರ ಹೆಮ್ಮೆ ಹಾಗೂ ಅವರ ಅಸ್ಮಿತೆಯ ಭಾಗವೂ ಕಂಬಳವನ್ನು ಉಳಿಸಲು ಈ ಪ್ರಯತ್ನವನ್ನು […]

ನೇತ್ರಾವತಿ ನದಿಯ ದಡದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ದಾಳಿ

Friday, November 10th, 2017
sand

ಮಂಗಳೂರು: ಮಂಗಳೂರು ಹೊರವಲಯದ ಅಡ್ಯಾರು ಗ್ರಾಮದ ಸಹ್ಯಾದ್ರಿ ಕಾಲೇಜ್ ನ ಹಿಂಬದಿಯಲ್ಲಿ ನೇತ್ರಾವತಿ ನದಿಯ ದಡದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ಮಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಯಂತ್ರೋಪಕರಣ ಸಹಾಯದಿಂದ ಮರಳನ್ನು ವಾಹನಗಳಿಗೆ ಲೋಡ್‌ ಮಾಡುವ ಬಗ್ಗೆ ಹಾಗೂ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಮರಳು ಶೇಖರಿಸಿ ವಾಹನಗಳಿಗೆ ಪ್ಲಾಸ್ಟಿಕ್‌ ಚೀಲದ ಮೂಲಕ ತುಂಬಿಸಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನಲೆಯಲ್ಲಿ ಹಿರಿಯ ಪೊಲೀಸ್ […]

ಬಂಟ್ವಾಳ: ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪರಿಶೀಲನೆ

Tuesday, October 10th, 2017
water tank

ಮಂಗಳೂರು: ಸಮಗ್ರ ಕುಡಿಯುವ ನೀರು ಯೋಜನೆಯ ಕಾಮಗಾರಿ,ಪುರಸಭಾ ವ್ಯಾಪ್ತಿಯ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಯು.ಐ.ಡಿ.ಎಸ್.ಎಸ್.ಎಂ.ಟಿ ಯೋಜನೆಯಡಿ 57.79 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಅವರು ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸೋಮವಾರ ಸಂಜೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ 30ವರ್ಷಗಳವರೆಗಿನ ಜನಸಂಖೆಯನ್ನು ಆಧರಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ದಿನವೊಂದಕ್ಕೆ ಒಟ್ಟು 42 ಲಕ್ಷ ಲೀಟರ್ ಕುಡಿಯುವ […]

ನೇತ್ರಾವತಿ ನದಿಯ ಜೊತೆಗೆ ಅಸಭ್ಯ ವರ್ತನೆಗೆ ಅವಕಾಶ ಇಲ್ಲ: ಅನಿಲ್ ಮಾದವ್ ದಾವೆ

Friday, December 30th, 2016
Alwas

ಮೂಡುಬಿದಿರೆ: ನೇತ್ರಾವತಿ ಈ ಭಾಗದ ಜನರ ಜೀವನದಿ. ನದಿತಿರುವು ಯೋಜನೆ ಮೂಲಕ ನೇತ್ರಾವತಿ ನದಿಯ ಜೊತೆಗಿನ ಯಾವುದೇ ಅಸಭ್ಯ ವರ್ತನೆಗೆ ನಾನು ಸಮ್ಮತಿ ನೀಡುವುದಿಲ್ಲ. ಎಲ್ಲರಿಗೂ ನೀರು ಬೇಕು. ಆದರೆ ಆ ನೀರಿನ ಮೂಲ ಯಾವುದು ಎಂಬುದನ್ನು ಯಾರೂ ಯೋಚನೆ ಮಾಡುವುದಿಲ್ಲ ಎಂದು ಕೇಂದ್ರ ಅರಣ್ಯ ಹಾಗೂ ಪರಿಸರಖಾತೆ ಸಚಿವ ಅನಿಲ್ ಮಾದವ್ ದಾವೆ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ- 2016ರ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಶ್ಚಿಮ ಘಟ್ಟ, […]