ಪತ್ರಕರ್ತರು ಸಮಾಜದಲ್ಲಿನ ಪಾಸಿಟಿವ್ ಸುದ್ದಿಗಳನ್ನು ಬೆಳಕಿಗೆ ತರಬೇಕು : ಶಾಸಕ ವೇದವ್ಯಾಸ್‌ ಕಾಮತ್‌ 

Friday, January 5th, 2024
Journalist Meeting

ಮಂಗಳೂರು : ಪತ್ರಕರ್ತರು ಪ್ರಾಮಾಣಿಕವಾಗಿ ಸುದ್ದಿ ಮಾಡಬೇಕಿದ್ದು, ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನ ನಡೆಸಬೇಕಾಗಿದೆ. ಸಮಾಜದಲ್ಲಿನ ಪಾಸಿಟಿವ್ ಸುದ್ದಿಗಳನ್ನು ಬೆಳಕಿಗೆ ತರಬೇಕಿದೆ. ಈ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಪತ್ರಕರ್ತರ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಸಮಾಜಮುಖಿ ಪತ್ರಿಕೋದ್ಯಮಕ್ಕೆ ದಾರಿ ದೀಪವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ. ಮಂಗಳೂರು ಹೊರವಲಯದ ಅಡ್ಯಾರ್‌ ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 90ನೇ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನ ಪತ್ರಕರ್ತರು ಮಾದರಿಯಾಗಿ […]

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ

Tuesday, November 21st, 2023
journalist-4th

ಮಂಗಳೂರು : ದಕ್ಷಿಣ‌ ಕನ್ನಡ ಜಿಲ್ಲೆಯ ಪತ್ರಕರ್ತರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಕ್ಷೇತ್ರಕ್ಕೆ ಹೊಸ ಸ್ವರೂಪ ಮತ್ತು ಮಾದರಿಯನ್ನು ನೀಡಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನ.21 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿಯ ಜನರ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಕೆಲಸ ಸೇರಿ […]

ಮಂಗಳೂರು ; ಗಡಿನಾಡಿನಲ್ಲಿ ಸಂಭ್ರಮಿಸಿದ ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವ

Tuesday, February 1st, 2022
Kannada Jagruti

ಉಳ್ಳಾಲ: ಸಾಮರಸ್ಯದ ಬಾಳಿಗೆ ಗಡಿನಾಡುಗಳೇ ಆಡಿಪಾಯವಾಗಿವೆ. ಆದುದರಿಂದ ಭಾಷೆಗಳ ಒಳಗಿನ ದ್ವೇಷ ಸಲ್ಲದು. ಗಡಿನಾಡಿನ ಭಾಗದಲ್ಲಿನ ಸಾಹಿತಿಗಳು, ಕಲಾವಿದರು, ಪತ್ರಕರ್ತರು ಅಲ್ಲದೆ ಎಲ್ಲಾ ಪ್ರತಿಭೆಗಳನ್ನು ಗುರುತಿಸುವಂತಾದಾಗ ನಮ್ಮ ಭಾಷೆಗಳು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಇನ್ನೂ ಕನ್ನಡ ನಾಡು ನುಡಿಯ ಸೇವೆ ನಿರಂತರವಾಗಿ ನಡೆಯಬೇಕು ಎಂದು ಕರ್ನಾಟಕ ವಿಧಾನಸಭಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ, ಮಾಜಿ ಸಚಿವ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ತಿಳಿಸಿದರು. ಕರ್ನಾಟಕ ಸರ್ಕಾರದ ಕರ್ನಾಟಕ […]

ಭತ್ತದ ಕೃಷಿ ಗೆ ಪ್ರೋತ್ಸಾ ಹ ನೀಡುವ ಕಾರ್ಯ ಶ್ಲಾಘನೀಯ -ಡಾ.ರಾಜೇಂದ್ರ ಕೆ.ವಿ.

Saturday, November 13th, 2021
journalist

ಬಂಟ್ವಾಳ :ಜಿಲ್ಲೆಯಲ್ಲಿ ಬತ್ತದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಬತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಅವರು ಇಂದು ವಿಟ್ಲ ಮಿತ್ತಳಿಕೆ ಯ ತಿಮಾರು ಗದ್ದೆಯಲ್ಲಿಂದು ಭತ್ತದ ಕೃಷಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯ ನಿರತ ಪತ್ರಕ ರ್ತರ ಸಂಘ ಹಾಗೂ ಮಿತ್ತಳಿಕೆ […]

ಮಂಗಳೂರಿನಿಂದ ನೆರೆ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳನ್ನು ಕಳುಹಿಸಿಕೊಟ್ಟ ಪತ್ರಕರ್ತರು

Tuesday, August 13th, 2019
KPSM-Flood Relief

ಮಂಗಳೂರು: ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಹಭಾಗಿತ್ವದಲ್ಲಿ ನೆರೆ ಸಂತ್ರಸ್ತರಿಗೆ ನೀಡಲಾದ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳನ್ನು ಬೆಳ್ತಂಗಡಿ ಹಾಗೂ ಚಾರ್ಮಾಡಿ ಗ್ರಾಮಸ್ಥರಿಗೆ ಕೊಂಡೊಯ್ಯುವ ಲಾರಿಗೆ ಕರ್ನಾಟಕ ರಾಜ್ಯ ಅಖಿಲ ಭಾರತ್ ಕಾಂಗ್ರೆಸ್ ಟ್ರಾನ್ಸ್ ಪೋಟ್೯ ಸುನೀಲ್ ಪಾಯ್ಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪ ಇಂದು ಚಾಲನೆ ನೀಡಿದರು. ಈ […]

ಪತ್ರಕರ್ತರು ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು : ಗಣೇಶ್ ಕಾಸರಗೋಡು

Sunday, July 3rd, 2016
Ganesh Kasaragod

ಕಾಸರಗೋಡು : ವಸ್ತುನಿಷ್ಠ ವರದಿಯನ್ನು ನೀಡುತ್ತಾ ಪತ್ರಿಕಾರಂಗಕ್ಕೆ ಶೋಭೆ ತರುವ ಜೊತೆಗೆ ವ್ಯಕ್ತಿತ್ವವನ್ನು ಯುವ ಪತ್ರಕರ್ತರು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಿನಿಮಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು. ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ ಕನ್ನಡ ಪತ್ರಿಕಾ ದಿನಾಚರಣೆಯನ್ನು ದೀಪ ಬೆಳಗಿಸಿ ಅವರು ಮಾತನಾಡುತ್ತಿದ್ದರು. ಗಡಿನಾಡಿನಲ್ಲಿ […]

ಪತ್ರಕರ್ತರಿಗೆ ಅಂಚೆ ಮತ ಸೌಲಭ್ಯ ಒದಗಿಸುವಂತೆ ಮನವಿ

Thursday, April 3rd, 2014
Press Club

ಮಂಗಳೂರು : ಪತ್ರಕರ್ತರಿಗೆ ಅಂಚೆ ಮತ ಅಥವಾ ಚುನಾವಣಾ ಕರ್ತವ್ಯ ದೃಢಪತ್ರದ (ಇಡಿಸಿ) ಸೌಲಭ್ಯ ಒದಗಿಸುವಂತೆ ಕೋರಿ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದ. ಕ. ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಬುಧವಾರ ಮನವಿ ನೀಡಲಾಯಿತು. ದ. ಕ. ಜಿಲ್ಲೆಯಲ್ಲಿ ನಕ್ಸಲ್‌ ಪೀಡಿತ ಪ್ರದೇಶವಿರುವುದರಿಂದ ಗ್ರಾಮೀಣ ಪ್ರದೇಶಗಳಿಗೆ ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡುವ ಅವಶ್ಯಕತೆ ಇರುತ್ತದೆ. ಚುನಾವಣೆ ದಿನದಂದು ಪತ್ರಕರ್ತರು ಬೆಳಗ್ಗಿನಿಂದ ರಾತ್ರಿ ವರೆಗೆ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ […]