ಕಾಸರಗೋಡಿನಲ್ಲಿ ದಾಖಲೆಗಳಿಲ್ಲದ 33.24 ಲಕ್ಷ ರೂ. ವಶ

Thursday, October 26th, 2023
money

ಕಾಸರಗೋಡು : ದಾಖಲೆಗಳಿಲ್ಲದ ಸುಮಾರು 33.24 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದ ಕಾಸರಗೋಡು ನಗರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮುಹಮ್ಮದ್ ಮತ್ತು ಸುಲೈಮಾನ್ ಬಂಧಿತ ಆರೋಪಿಗಳು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಗರದ ಜುವಲ್ಲರಿಯೊಂದರ ಸಮೀಪ ಇಬ್ಬರನ್ನು ಬಂಧಿಸಲಾಯಿತು. ಬಂಧಿತರ ಬಳಿ ಯಾವುದೇ ದಾಖಲೆ ಪತ್ರ ಲಭಿಸಿಲ್ಲ. ನಗರದಲ್ಲಿ ಅಕ್ರಮ ಹಣಕಾಸಿನ ವ್ಯವಹಾರ ದ ಬಗ್ಗೆ ಮಾಹಿತಿ ಲಭಿಸಿದ್ದರಿಂದ ದಾಳಿ ಹಾಗೂ ತಪಾಸಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ […]

ಪಣಂಬೂರು ಬೀಚ್ ಬಳಿ 90 ಲಕ್ಷ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ ವಶ

Monday, September 11th, 2023
Ambergris

ಮಂಗಳೂರು : ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಪಣಂಬೂರು ಬೀಚ್ ಬಳಿ ಇಂದು ದಾಳಿ ನಡೆಸಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಹೊಂದಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಬರ್ ಗ್ರೀಸ್ ಅಪರೂಪದ ವನ್ಯಜೀವಿ ಉತ್ಪನ್ನವಾಗಿದ್ದು ಅದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಮೌಲ್ಯಯುತವಾಗಿದೆ. ಮೂವರ ವಶದಿಂದ 90 ಲಕ್ಷ ರೂಪಾಯಿ ಮೌಲ್ಯದ 900 ಗ್ರಾಂ ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಉಡುಪಿ ಜಿಲ್ಲೆ ಸಾಲಿಗ್ರಾಮ ಗ್ರಾಮದ ಜಯಕರ (39) , ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನ […]

ದೈಹಿಕ ಶಿಕ್ಷಣ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ, ಶಿಕ್ಷಕನ ಬಂಧನ

Tuesday, October 26th, 2021
Sexual Ausslt

ಪುತ್ತೂರು: ಖಾಸಗಿ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ನನ್ನು ಪೋಕ್ಸೊ ಕಾಯ್ದೆಯಡಿ ಪುತ್ತೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ, ಕೊಂಬೆಟ್ಟು ನಿವಾಸಿ ಎಲ್ಯಾಸ್ ಪಿಂಟೋ ಬಂಧಿತ ಆರೋಪಿ. ಖಾಸಗಿ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿರುವ ಮಡಿಕೇರಿ ಮೂಲದ ಅಪ್ರಾಪ್ತ ವಿದ್ಯಾರ್ಥಿನಿಗೆ ಈತ ಅ.23ರಂದು ಲೈಂಗಿಕ ಕಿರುಕುಳ ನೀಡಿದ್ದು, ಆಕೆ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. […]

ಕೊಡ್ಯಮಲೆ ಗುಡ್ಡೆಯಲ್ಲಿ ಯುವಕನನ್ನು ಕಡಿದು ಕೊಲೆ ಮಾಡಿದ ಆರೋಪಿ ಪೊಲೀಸರಿಗೆ ಶರಣು

Monday, September 13th, 2021
rafiq murder

ಬಂಟ್ವಾಳ : ಕಕ್ಯೆಪದವು ಕೊಡ್ಯಮಲೆ ಗುಡ್ಡೆಯಲ್ಲಿ ಯುವಕನೋರ್ವನನ್ನು ಕಡಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ರಫೀಕ್ (26) ಎಂಬಾತ ಕೊಲೆಯಾದ ಯುವಕನಾಗಿದ್ದಾನೆ. ಕಕ್ಯೆಪದವು ನಿವಾಸಿ ಸಿದ್ದೀಕ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿ ಸಿದ್ಧಿಕ್ ಪುಂಜಾಲಕಟ್ಟೆ ಠಾಣೆಗೆ ಹಾಜರಾಗಿ ಪೊಲೀಸರಿಗೆ ಶರಣಾಗಿದ್ದಾನೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದ್ದು, ಪುಂಜಾಲಕಟ್ಟೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುಡ್ಡೆಯಂಗಡಿಯಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ 12 ಜನರ ಬಂಧನ

Tuesday, August 17th, 2021
animal hunt

ಮಂಗಳೂರು   : ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಯಡ್ಕ ಗುಡ್ಡೆಯಂಗಡಿಯಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ12 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್‌ ಮನೆಜಸ್‌‌, ಶ್ರೀನಿವಾಸ್‌, ಗುರುಪ್ರಸಾದ್‌, ಜೋಯಲ್‌ ಅನಿಲ್‌ ಡಿಸೋಜಾ, ಅನಜಯ್‌‌, ಸನತ್‌, ಹರೀಶ್‌ ಪೂಜಾರಿ, ಮೋಹನ್‌ ಗೌಡ, ನೋಣಯ್ಯ, ವಿನಯ್‌‌ ಪೂಜಾರಿ, ರಮೇಶ್‌ ಹಾಗೂ ಗಣೇಶ್‌ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 4 ಗನ್, 1 ಗ್ಯಾಸ್ ಸಿಲಿಂಡರ್, 12 ಮೊಬೈಲ್ ಫೋನ್, 2ಮರದ ತುಂಡು, ಗ್ಯಾಸ್ ಬರ್ನರ್, ನೆಟ್, 2 ಓಮ್ನಿ ಕಾರ್ ಮತ್ತು ಇತರ […]

ಪೊಲೀಸರು ಜಪ್ತಿ ಮಾಡಿದ 35 ಸಾವಿರ ವಾಹನಗಳ ದಂಡದ ಮೊತ್ತ ನೋಡಿ ಗೃಹ ಸಚಿವರೇ ಶಾಕ್!

Saturday, May 29th, 2021
Bommai

ಬೆಂಗಳೂರು : ಕೋವಿಡ್ 19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿದ ಪೊಲೀಸರು ಬರೋಬ್ಬರಿ 35905 ಸಾವಿರ ವಾಹನ ಜಪ್ತಿ ಮಾಡಿದ್ದಾರೆ. ಅದರಲ್ಲೂ 32 ಸಾವಿರ ದ್ವಿಚಕ್ರ ವಾಹನ. ಇವುಗಳಿಂದ ಸರಾಸರಿ ದಂಡ ಎಷ್ಟು ಸಂಗ್ರಹವಾಗುತ್ತದೆ. ಈ ದಂಡದ ಮೊತ್ತವನ್ನು ಏನು ಮಾಡುತ್ತಾರೆ ಎಂಬುದರ ಪೂರ್ಣ ವಿವರ ಇಲ್ಲಿದೆ ನೋಡಿ! 35 ಸಾವಿರ ವಾಹನ ಜಪ್ತಿ ರಾಜಧಾನಿಯಲ್ಲಿ ಬೆಳಗ್ಗೆ […]

ಮಾಸ್ಕ್‌ ಧರಿಸದಕ್ಕೆ ಫೊಟೊ ತೆಗೆದ ಪಿಡಿಒ ಕಪಾಳಕ್ಕೊಡೆದ ನಾಲ್ವರು ಆರೋಪಿಗಳ ಬಂಧನ

Thursday, May 27th, 2021
Rajendra Shetty

ಮಂಗಳೂರು : ಕೊರೋನಾ ನಿಯಮಗಳನ್ನು ಪಾಲಿಸದೆ ಮಾಸ್ಕ್‌ ಧರಿಸದ ಕಾರಣಕ್ಕಾಗಿ ಫೊಟೊ ತೆಗೆದ  ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪರಂಗಿಪೇಟೆಯ ಮಹಮ್ಮದ್‌ ಇದಾಯತುಲ್ಲಾ(25), ಅಹ್ಮದ್‌ ಬಶೀರ್(‌30), ಕುತ್ತಾರ್‌ನ ಅಬೂಬಕರ್‌ ಸಿದ್ದಿಕ್‌(26) ಹಾಗೂ ಪರಂಗಿಪೇಟೆ ಪುದುವಿನ ಅಬ್ದುಲ್‌ ಸಿದ್ದಿಕ್‌(33) ಬಂಧಿತರು. ಇವರಲ್ಲಿ ಇದಾಯತುಲ್ಲಾ ಹಾಗೂ ಬಶೀರ್‌ ವಿರುದ್ಧ ವಿವಿಧ ಪ್ರಕರಣಗಳು ಹಿಂದೆಯೂ ದಾಖಲಾಗಿವೆ. ಮೇ 25 ರಂದು ಮಲ್ಲೂರು ರಸ್ತೆಯಲ್ಲಿ ಈ ನಾಲ್ವರು ಮಾಸ್ಕ್‌ ಧರಿಸದೆ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದ […]

ಯುವಕರ ಚಿಕನ್ ಟಿಕ್ಕಾ ಪಾರ್ಟಿಗೆ ರೈಡ್ ಮಾಡಿ, ಚಿಕನ್ ತಿಂದ ಪೊಲೀಸರು

Monday, May 24th, 2021
kasaragod Chicken Party

ಕಾಸರಗೋಡು  : ಯುವಕರ ಗುಂಪೊಂದು ಗುಂಪೊಂದು  ಮೇ 23 ರ ಭಾನುವಾರ ನಗರದಲ್ಲಿ ದಲ್ಲಿ ಚಿಕನ್ ಟಿಕ್ಕಾ ಪಾರ್ಟಿ ಆಯೋಜಿಸಿತ್ತು. ಲಾಕ್‌ಡೌನ್ ನಿರ್ಬಂಧಗಳನ್ನು ಕಡೆಗಣಿಸಿ ಪಾರ್ಟಿ ಮಾಡಿದ್ದರಿಂದ ಪೊಲೀಸರು ರೇಡ್ ಮಾಡಿದ್ದರು, ಪೊಲೀಸರನ್ನು ಕಂಡು ಯುವಕರ ಗುಂಪು ಟಿಕ್ಕಾ ಮತ್ತು ದ್ವಿಚಕ್ರ ವಾಹನಗಳನ್ನು ಬಿಟ್ಟು ಪರಾರಿಯಾದರು. ಯುವಕರ ಗುಂಪು ಪರಾರಿಯಾದ ತಕ್ಷಣ ಪೊಲೀಸರು  ಬಿಸಿ ಬಿಸಿಯಾಗಿದ್ದ ಚಿಕನ್ ಟಿಕ್ಕಾಗಳನ್ನು ತಿಂದು ಮುಗಿಸಿ  ನಂತರ ದ್ವಿಚಕ್ರ ವಾಹನವನ್ನು ಮಿನಿ ಟ್ರಕ್‌ನಲ್ಲಿ ಲೋಡ್ ಮಾಡುವ ಮೂಲಕ ಪೊಲೀಸ್ ಠಾಣೆಗೆ ಕೊಂಡು ಹೋದ ಘಟನೆ ನಡೆದಿದೆ. ಕೇರಳದಲ್ಲಿ ಮೇ 8 ರಿಂದ ವಾರಾಂತ್ಯದ […]

ಬೈಕ್‌ಗೆ ನಾಯಿ ಕಟ್ಟಿ ರಸ್ತೆಯಲ್ಲಿ ಎಳೆದ ಪ್ರಕರಣ, ಓರ್ವ ಆರೋಪಿ ಬಂಧನ

Friday, April 23rd, 2021
neelappa

ಮಂಗಳೂರು :  ಅಮಾನವೀಯವಾಗಿ ನಾಯಿಯನ್ನು ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಬೈಕಿನಲ್ಲಿ ನಾಯಿ ಹಿಡಿದುಕೊಂಡಿದ್ದ ಹಿಂಬದಿ ಸವಾರ ಕೊಪ್ಪಳ ಜಿಲ್ಲೆಯ ನೀಲಪ್ಪ(30)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಎನ್‌ಐಟಿಕೆ ಕಾಲನಿಯಿಂದ ರಸ್ತೆಯಲ್ಲಿ ಎ.17ರಂದು ರಾತ್ರಿ ಬೈಕ್‌ನ ಹಿಂಬದಿಗೆ ಹಗ್ಗದಲ್ಲಿ ಕಟ್ಟಿಹಾಕಿ ನಾಯಿಯನ್ನು ಎಳೆದುಕೊಂಡು ಹೋಗುವ ದೃಶ್ಯದ ವಿಡಿಯೋವನ್ನು ಸಾಮಾಜಿಕ  ಜಾಲತಾಣದಲ್ಲಿ ಬಿಡಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ  ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದರು. ಈ ನಡುವೆ ವಿಡಿಯೋ ಮಾಡಿದವರು ವಿಳಂಬವಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. […]

ಮಂಗಳೂರು : ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪೊಲೀಸರು

Friday, April 23rd, 2021
Shops Close

ಮಂಗಳೂರು : ನಗರದ ಕೆಲವು ಜ್ಯುವೆಲ್ಲರಿ ಶಾಪ್, ಚಪ್ಪಲಿ ಅಂಗಡಿಗಳು, ಬಟ್ಟೆ ಬರೆ, ವಾಚ್ ಅಂಗಡಿಗಳು ಇಂದು ಕೂಡ ತೆರದಿದ್ದುದನ್ನು ಗಮನಿಸಿದ ಪೊಲೀಸರು ಅವುಗಳನ್ನು ಮುಚ್ಚಿವಂತೆ ಹೇಳಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಶುಕ್ರವಾರ ಬೆಳಿಗ್ಗೆ ಪೊಲೀಸರು ಮುಚ್ಚಿಸಿದ್ದಾರೆ. ಕೆಲವು ಅಂಗಡಿಗಳು ಇಂದು ಕೂಡ ತೆರೆದಿದ್ದ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿಅವುಗಳನ್ನು ಮುಚ್ಚಿಸಲಾಯಿತು, ನಗರದ ಕೇಂದ್ರ ಮಾರುಕಟ್ಟೆ, ಹಂಪನಕಟ್ಟೆ, ಮಿಲಾಗ್ರಿಸ್ ಮೊದಲಾದ ಕಡೆಗಳಲ್ಲಿ ಆಯುಕ್ತರು ಹಾಗು ಉಪ ಆಯುಕ್ತರ ನೇತೃತ್ವದಲ್ಲಿ ಅಗತ್ಯ […]