Blog Archive

ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸಿಗರಿಂದ ಬೃಹತ್ ಪಾದಯಾತ್ರೆ ಪ್ರತಿಭಟನೆ

Wednesday, September 11th, 2019
paadayatre

ಬಂಟ್ವಾಳ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದುರಸ್ತಿಗೆ ಆಗ್ರಹಿಸಿ ಬಂಟ್ವಾಳ ಕಾಂಗ್ರೆಸ್ ವತಿಯಿಂದ ಬುಧವಾರ ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಪ್ರತಿಭಟನೆ ನಡೆಯಿತು. ಮೆಲ್ಕಾರ್ ಜಂಕ್ಷನ್ ನಿಂದ ಪ್ರತಿಭಟನೆ ಆರಂಭಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಳಿಕ ಬಿ.ಸಿ.ರೋಡ್ ಮಿನಿ ವಿಧಾನಸೌಧದ ವರೆಗೆ ಪಾದಾಯಾತ್ರೆಯ ಮೂಲಕ ಆಗಮಿಸಿ ಹೆದ್ದಾರಿ ದುರಸ್ತಿಗಾಗಿ ತಹಶೀಲ್ದಾರ್ ಅವರ ಮೂಲಕ ಸರಕಾರವನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಜಿ.ಪಂ, ತಾ.ಪಂ ಸದಸ್ಯರು, ಕಾಂಗ್ರೆಸ್ ನ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು […]

30 ಅಂಶಗಳ ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ

Sunday, April 7th, 2019
congress - manifesto

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ರವಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾ ಉಸ್ತುವಾರಿ ಬಿ.ರಮಾನಾಥ ರೈ ಬಿಡುಗಡೆಗೊಳಿಸಿದರು. ಒಟ್ಟು 30 ಅಂಶಗಳು ಪ್ರಣಾಳಿಕೆಯಲ್ಲಿ ಸೇರಿವೆ ಅರಬ್ಬೀ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ದಿನದ 24 ಗಂಟೆಯೂ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ಹೈಕೋರ್ಟ್ ವಿಭಾಗೀಯ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಪ್ರಯತ್ನ, ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಮಟದ್ಟ ಮೀನುಗಾರಿಕಾ ಕೇಂದ್ರ ಸ್ಥಾಪನೆ, ಐಟಿ-ಬಿಟಿ ಮೂಲಕ ಶಾಶ್ವತ ಉದ್ಯೋಗ ಕಲ್ಪಿಸಲು ಪ್ರಯತ್ನ, […]

ಅಂಬರೀಶ್, ಜಾಫರ್ ಶರೀಫ್ ನೀಡಿರುವ ಕೊಡುಗೆಗಳು ಅನನ್ಯ: ಬಿ. ರಮಾನಾಥ ರೈ

Tuesday, November 27th, 2018
congress

ಮಂಗಳೂರು : ಇತೀಚಿಗೆ ನಿಧನರಾದ ಖ್ಯಾತ ಚಿತ್ರನಟ ಹಾಗೂ ಮಾಜಿ ಸಚಿವರ ಅಂಬರೀಶ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಜಾಫರ್ ಶರೀಫ್‌ರು ರಾಜ್ಯಕ್ಕೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಗಳು ಅನನ್ಯವಾದುದು ಎಂದು ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಹೇಳಿದರು. ದಿನಾಂಕ ೨೬-೧೧-೨೦೧೮ ರಂದು ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎರ್ಪಡಿಸಿದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ವಿಕಾಸಕ್ಕೆ ಕಾರಣ ಪುರುಷರಾದ ಜಾಫರ್ ಶರೀಫ್‌ರು […]

ಕಾಂಗ್ರೆಸ್ ಕಛೇರಿ ಸಹಾಯಕಿ ಶ್ರೀಮತಿ ರಾಜೀವಿಯವರ ನಿಧನಕ್ಕೆ ಶ್ರೀ ಬಿ.ರಮಾನಾಥ ರೈ ಸಂತಾಪ

Saturday, October 27th, 2018
ramanth-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಳೆದ ೩೫ ವರ್ಷಗಳಿಂದ ಕಛೇರಿ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ರಾಜೀವಿಯವರು ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿದ್ದರು. ಇವರಿಗೆ 57 ವರ್ಷ ಆಗಿರುತ್ತದೆ. ಇವರು ೩ ಗಂಡು ಹಾಗೂ 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ಸಂತಾಪ ಸೂಚಿಸಿದರು. ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಮ.ನ.ಪಾ ಮುಖ್ಯ ಸಚೇತಕ […]

ರಾಜ್ಯದಲ್ಲಿ ಬಿಜೆಪಿಯ ಅಧ್ಯಕ್ಷರಾದಿಯಾಗಿ ಎಲ್ಲರೂ ಬೇಲ್ ಗಾಡಿಗಳೇ: ಬಿ. ರಮಾನಾಥ ರೈ

Tuesday, July 17th, 2018
ramanath-rai

ಮಂಗಳೂರು: ಕಾಂಗ್ರೆಸ್ ನ ಅನೇಕ ನಾಯಕರು ಬೇಲ್ ಗಾಡಿಗಳು ಎಂಬುದಾಗಿ ಜನರಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಅಧ್ಯಕ್ಷರಾದಿಯಾಗಿ ಎಲ್ಲರೂ ಬೇಲ್ ಗಾಡಿಗಳೇ. ಅವರನ್ನು ಪ್ರಧಾನಿ ಏನು ಮಾಡುತ್ತಾರೆ ಎಂಬುದನ್ನು ಹೇಳಲಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಸವಾಲೆಸೆದಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರಕಾರದ ಆಡಳಿತ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸರಕಾರ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಗಿಮಿಕ್ ಮಾಡುತ್ತಿರುವುದೇ ಹೊರತು […]

ಶಾಂತಿಯುತ ಬಂಟ್ವಾಳವೇ ನನ್ನ ಗುರಿ : ರಾಜೇಶ್ ನಾಯ್ಕ್

Tuesday, May 22nd, 2018
rajesh-naik

ಬಂಟ್ವಾಳ: ವಿಧಾನಸಭಾ ಚುನಾವಣೆಯಲ್ಲಿ ಏಳನೇ ಗೆಲುವಿನ ಉತ್ಸಾಹದಲ್ಲಿದ್ದ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಿದವರು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು. 2013ರ ಚುನಾವಣೆಯಲ್ಲಿ ರೈ ವಿರುದ್ಧ 17,850 ಮತಗಳ ಅಂತರದಲ್ಲಿ ಸೋತಿದ್ದ ರಾಜೇಶ್ ನಾಯ್ಕ್ ಈ ಬಾರಿ 15,971 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜೇಶ್ ನಾಯ್ಕ್ ಮಂಗಳೂರು ತಾಲೂಕಿನ ಗಂಜಿಮಠದ ತೆಂಕ ಎಡಪದವು ಗ್ರಾಮದ ನಿವಾಸಿ. ರಮೇಶ ನಾಯ್ಕ್ ಮತ್ತು ಸರೋಜಿನಿ ಆರ್. ನಾಯ್ಕ್ ದಂಪತಿಯ ಇಬ್ಬರು ಮಕ್ಕಳ […]

ಐದು ವರ್ಷದಿಂದಲೇ ನಡೆದಿತ್ತು ರಾಜೇಶ್ ನೈಕ್‌ ಚುನಾವಣಾ ತಯಾರಿ!

Friday, May 11th, 2018
rajesh-naik

ಬಂಟ್ವಾಳ: ರಾಜೇಶ್ ನೈಕ್‌ಅವರಿಗೆ ಈ ಬಾರಿಗೆಲ್ಲುವ ಸಾಧ್ಯತೆ ನೂರಕ್ಕೆತೊಂಭತ್ತೊಂಭತ್ತರಷ್ಟುಇದೆಎನ್ನುವುದಕ್ಕೆಕಾರಣಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗಳಿಸಿಕೊಂಡಿರುವ ಜನಬೆಂಬಲ. ಹಾಗಂತ ರಾಜೇಶ್ ನೈಕ್‌ಅವರಿಗೆ ಈ ಮಟ್ಟದಯಶಸ್ಸು ಸುಮ್ಮಸುಮ್ಮನೆ ಒಲಿದಿಲ್ಲ. ಅವರು ಕಳೆದ ಐದು ವರ‍್ಷಗಳಲ್ಲಿ ಎಡೆಬಿಡದೆ ಇದಕ್ಕಾಗಿ ಶ್ರಮಿಸಿದ್ದಾರೆ. ಕಳೆದ ಬಾರಿ 2003 ರಲ್ಲಿಚುನಾವಣೆ ನಡೆದಾಗರಾಜೇಶ್ ನೈಕ್ ಈ ಪರಿ ಜನ ಬೆಂಬಲವನ್ನು ಗಳಿಸಿರಲಿಲ್ಲ. ಯಾಕೆಂದರೆ ಅದು ಅವರ ಪ್ರಥಮ ಚುನಾವಣೆಯಾಗಿತ್ತು. ಅದರೊಂದಿಗೆ ಅವರು ಎದುರಿಸಬೇಕಾಗಿರುವುದು ಕರ‍್ನಾಟಕದ ಘಟಾನುಘಟಿ ರಾಜಕಾರಣಿ ಎಂದೇ ಹೆಸರು ಮಾಡಿರುವ ಬಿ ರಮಾನಾಥ ರೈಅವರನ್ನು. ಅಷ್ಟೇ ಅಲ್ಲದೆ […]

ಬಿಜೆಪಿಯವರಿಗೆ ಪ್ರಚಾರ ಮಾಡಲು ವಿಷಯವೇ ಇಲ್ಲ: ಬಿ.ರಮಾನಾಥ ರೈ

Friday, April 27th, 2018
ramanath-rai

ಬಂಟ್ವಾಳ: ಬಿಜೆಪಿಯವರಿಗೆ ಪ್ರಚಾರ ಮಾಡಲು ವಿಷಯವೇ ಇಲ್ಲ. ಅದಕ್ಕಾಗಿ ತನ್ನ ಮೇಲೆ ಸುಳ್ಳು ಆರೋಪವನ್ನು ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಹೇಳಿದ್ದಾರೆ. ಮಂಗಳವಾರ ಕೊಳ್ನಾಡ್ ಗ್ರಾಮದ ಬೂತ್ ಮಟ್ಟದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಯು ತನ್ನ ಮೇಲೆ ಧರ್ಮ ವಿರೋಧಿ ಹಣೆಪಟ್ಟಿ ಕಟ್ಟಿ, ಅಪಪ್ರಚಾರದ ಮೂಲಕ ಮತವನ್ನು ತಮ್ಮತ್ತ ಸೆಳೆದುಕೊಳ್ಳುವುದು ಕೂಡಾ ರಾಜಧರ್ಮವಲ್ಲ ಎಂದು ಹೇಳಿದರು. ಬಂಟ್ವಾಳ ಕ್ಷೇತ್ರಕ್ಕೆ ಸುಮಾರು ಸಾವಿರದ […]

ನಾಮಪತ್ರ ಸಲ್ಲಿಸುವ ಮುನ್ನ ಜನಾರ್ದನ ಪೂಜಾರಿಯಿಂದ ಆಶೀರ್ವಾದ ಪಡೆದ ರೈ

Wednesday, April 18th, 2018
janardhan

ಮಂಗಳೂರು: ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರು ನಾಮಪತ್ರ ಸಲ್ಲಿಸುವುದಕ್ಕೆ ಪೂರ್ವಭಾವಿಯಾಗಿ ಇಂದು ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಕೇಂದ್ರ ಸಚಿವರೂ ಆಗಿರುವ ಜನಾರ್ದನ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಳಿವೇ ಇಲ್ಲ, ಜಿಲ್ಲೆಯಲ್ಲಿ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಪಡೆಯುವುದರೊಂದಿಗೆ ರಾಜ್ಯದಲ್ಲೂ ಅತೀ ಹೆಚ್ಚಿನ ಸ್ಥಾನ ಗಳಿಸುತ್ತದೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಪೂಜಾರಿಯವರು ಇದೇ ವೇಳೆ ನುಡಿದರು. ರೈ ಅವರೇ ನಿಮ್ಮಂಥ […]

ದ.ಕ. ಜಿಲ್ಲೆಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಗೆ ದಿನಾಂಕ ಫಿಕ್ಸ್‌‌‌

Wednesday, April 18th, 2018
u-t-kader

ಮಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭಗೊಂಡಿದೆ. ರಾಜಕೀಯ ಪಕ್ಷದ ಬಹುತೇಕ ಪ್ರಮುಖ ಅಭ್ಯರ್ಥಿಗಳು ಏ. 19 ರಿಂದ ನಾಮಪತ್ರ ಸಲ್ಲಿಸಲು ತಿರ್ಮಾನಿಸಿದ್ದಾರೆ. ಏ.1 9 ರಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಬಿ.ರಮಾನಾಥ ರೈ, ಮೂಡಬಿದ್ರೆ ಕಾಂಗ್ರೆಸ್ ಆಭ್ಯರ್ಥಿ ಕೆ.ಅಭಯಚಂದ್ರ ಜೈನ್, ಸುಳ್ಯದ ಕಾಂಗ್ರೆಸ್ ಅಭ್ಯರ್ಥಿ ಡಾ. ರಘು, ಮಂಗಳೂರು ಉತ್ತರ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ನಾಮಪತ್ರ ಸಲ್ಲಿಸಲಿದ್ದಾರೆ. ಏ. 20ರಂದು ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಅಂಗಾರ, […]