`ಬಿ‌.ಸಿ.ರೋಡ್ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾವಿರಾರು ಕಾರ್ಯಕರ್ತರು

Monday, September 16th, 2024
bc-road-chalo

ಬಂಟ್ವಾಳ : ವಿ.ಎಚ್.ಪಿ ಮತ್ತು ಭಜರಂಗದಳದ ಸಾವಿರಾರು ಕಾರ್ಯಕರ್ತರು ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಬೆಳಿಗ್ಗೆ `ಬಿ‌.ಸಿ.ರೋಡ್ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗೂತ್ತಾ ಪೋಲೀಸರು ಹಾಕಿದ ಬ್ಯಾರಿಕೇಡ್ ಗಳನ್ನ ಲೆಕ್ಕಿಸದೆ ಮುಂದೆ ಸಾಗಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪರಿಸ್ಥಿತಿ ಕೈ ಮೀರಿಹೋಗುವ ಹಂತಕ್ಕೆ ತಲುಪಿದಾಗ ಪೋಲೀಸರು ಬಸ್ ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಕಾರ್ಯಕರ್ತರಿಗೆ ತಡೆಯೊಡ್ಡಿದರು. ಬಳಿಕ ಹೆದ್ದಾರಿಯಲ್ಲಿ […]

ನಂದಾವರ ದೇವಸ್ಥಾನದ ಸಭಾಭವನದಲ್ಲಿ ದಾಸರ ಪದ ಭಜನಾ ಸ್ಪರ್ಧೆ

Sunday, October 10th, 2021
Nandavara Bajane

ಬಂಟ್ವಾಳ  : ಶ್ರೀ ವಿನಾಯಕ ದುರ್ಗಾಂಭ ಕ್ಷೇತ್ರ , ವಿಶ್ವ ಹಿಂದೂ‌ಪರಿಷತ್, ಭಜರಂಗದಳ ಸಜೀಪ ವಲಯದ ವತಿಯಿಂದ ದಾಸರ ಪದ ಭಜನಾ ಸ್ಪರ್ಧೆ ನಂದಾವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದಕ್ಷಿಣ ಪ್ರಾಂತ ಭಜರಂಗದಳ ಸಂಯೋಜಕ ಸುನಿಲ್ ಕೆ.ಆರ್. ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಶುಭ ಹಾರೈಸಿದರು. ನಂದವಾರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಸಮಿತಿ ಸದಸ್ಯರಾದ ಅರುಣ್, ಯಶವಂತ ದೇರಾಜೆ ವಿಶ್ವ ಹಿಂದೂ ಪರಿಷತ್ […]

ಲವ್ ಜಿಹಾದ್: ಭಜರಂಗದಳ ಕಾರ್ಯಕರ್ತನ ಬಂಧನ

Friday, January 19th, 2018
love-jihad

ಮಂಗಳೂರು: ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದ ಕಾನೂನು ಪದವಿ ವಿದ್ಯಾರ್ಥಿನಿ ರೇಷ್ಮಾ ಶಂಕಿತ ಲವ್ ಜಿಹಾದ್ ಪ್ರಕರಣಕ್ಕೆ ಟ್ವೀಸ್ಟ್ ಸಿಕ್ಕಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಮಂಗಳೂರಿನ ಬಜರಂಗದಳದ ಕಾರ್ಯಕರ್ತನೊಬ್ಬನನ್ನು ಬಂಧಿಸಿದ್ದಾರೆ. ಕಾಸರಗೋಡು ಮೂಲದ ಶ್ರೀಮಂತ ಉದ್ಯಮಿಯೊಬ್ಬರ ಪುತ್ರಿ ರೇಷ್ಮಾ ಮುಂಬೈ ನ ಇಕ್ಬಾಲ್ ಚೌಧರಿ ಎಂಬವರೊಂದಿಗೆ ಕಾಣೆಯಾಗಿದ್ದರು. ಇದು ಲವ್ ಜಿಹಾದ್ ಪ್ರಕರಣ ಎಂದು ರೇಷ್ಮಾ ಹೆತ್ತವರು ಹಾಗು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದ್ದು ಇತ್ತಿಚೆಗೆ ಭಾರಿ ಸುದ್ದಿಯಾಗಿತ್ತು. ಆದರೆ ಒಂದೆಡೆ ರೇಷ್ಮಾ ಹೆತ್ತವರು ಇದು ಲವ್ […]

ರಸ್ತೆಯಲ್ಲಿ ಮರಳು ಸಾಗಾಟ ನಡೆಸಲು ಬಿಡುವುದಿಲ್ಲ:ಅರುಣ್ ಕುಮಾರ್ ಪುತ್ತಿಲ

Monday, October 9th, 2017
arun kumar puttila

ಮಂಗಳೂರು : ಏಕರೂಪದ ಮರಳು ನೀತಿಯನ್ನು ಕೈಬಿಟ್ಟು ಕರಾವಳಿ ಭಾಗದ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿ, ನಾಳೆಯಿಂದಲೇ ಮರಳು ಸಾಗಾಟದ ಲಾರಿಗಳನ್ನು ರಸ್ತೆಯಲ್ಲಿ ಸಂಚರಿಸಲು ಬಿಡುವುದಿಲ್ಲ ಎಂದು ಪುತ್ತೂರಿನ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮುಖಂಡ ಅರುಣ್ ಕುಮಾರ್ ಪುತ್ತಿಲ ರಾಜ್ಯಾಡಳಿತಕ್ಕೆ ಎಚ್ಚರಿಕೆ ನೀಡಿದರು. ಮರಳು ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿ ನೀತಿ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ಇಲ್ಲಿನ ಉಪವಿಭಾಗಾಧಿಕಾರಿ […]

ವಿಶ್ವ ಹಿಂದು ಪರಿಷತ್, ಭಜರಂಗದಳದಿಂದ ಮಂಗಳೂರಿನಲ್ಲಿ ಚೀನಾ ವಸ್ತುಗಳನ್ನು ಸುಟ್ಟು ಪ್ರತಿಭ‌ಟನಾ ಪ್ರದರ್ಶನ

Friday, September 1st, 2017
china item

ಮಂಗಳೂರು : ಬಜರಂಗದಳ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರಕ್ಕಾಗಿ ಆಂದೋಲನವನ್ನು ಹಮ್ಮಿಕೊಂಡ ಹಿನ್ನಲೆಯಲ್ಲಿ  ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್, ಭಜರಂಗದಳದ ಕಾರ್ಯಕರ್ತರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಪ್ರತಿಭ‌ಟನಾ ಪ್ರದರ್ಶನ ನಡೆಸಿದರು. ಮಂಗಳೂರಿನ ಕದ್ರಿ ಮೈದಾನದಲ್ಲಿ ಸೇರಿದ ನೂರಾರು ವಿ.ಎಚ್.ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಚೀನಾ ನಿರ್ಮಿತ ಆಟಿಕೆ ಸಾಮಾಗ್ರಿ, ಎಲೆಕ್ಟ್ರಾನಿಕ್ ಉಪಕರಣ ಹಾಗೂ ಚೀನಾದಿಂದ ಆಮದಾದ ಇತರ ವಸ್ತುಗಳನ್ನು ದಹಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ.ಪುರಾಣಿಕ್  ಮಾತನಾಡಿ  ಚೀನಾ ಭಾರತದ ಸೇನೆಗೆ […]

ಪನೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಗುತ್ತಿಗೆಯನ್ನು ಹಿಂದೂಗಳ ಹೊರತು ಅನ್ಯ ಮತೀಯರಿಗೆ ನೀಡಬಾರದು: ಆಡಳಿತಾಧಿಕಾರಿಯವರಿಗೆ ಮನವಿ

Friday, October 21st, 2016
Panolibailu

ಬಂಟ್ವಾಳ: ಇತಿಹಾಸ ಪ್ರಸಿದ್ದ ಬಂಟ್ವಾಳ ತಾಲೂಕಿನ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ಉತ್ಸವಾದಿಗಳು ನಡೆಯುವ ಸಂದರ್ಭ ದೈವಸ್ಥಾನದ ವಿದ್ಯುತ್ ಅಲಂಕಾರ, ದೈವಸ್ಥಾನಕ್ಕೆ ಬಣ್ಣ ಬಳಿಯುವುದು, ಪುಪ್ಪಾಲಂಕಾರ ಮಾಡುವ ಗುತ್ತಿಗೆಯನ್ನು ಹಿಂದೂಗಳ ಹೊರತು ಅನ್ಯ ಮತೀಯರಿಗೆ ನೀಡಬಾರದು ಎಂದು ಆಗ್ರಹಿಸಿ ಬಂಟ್ವಾಳ ತಾ. ಹಿಂದೂ ಪರಿಷತ್ ಹಾಗೂ ಭಜರಂಗದಳ ಸಜೀಪ ವಲಯದ ವತಿಯಿಂದ ಆಡಳಿತಾಧಿಕಾರಿಯವರಿಗೆ ಮನವಿ ನೀಡಲಾಯಿತು. ಕಳೆದ ವಾರ್ಷಿಕ ಉತ್ಸವ ಸಂದರ್ಭ ಅನ್ಯಮತೀಯರಿಗೆ ಗುತ್ತಿಗೆಯನ್ನು ನೀಡಿದ ಕಾರಣ ಪುಷ್ಪಾಲಂಕಾರ ಮಾಡುವಾಗ ನಾಗನ ಕಟ್ಟೆಗೆ ತುಳಿಯುವುದು, ಹಿಂದೂ ಹುಡುಗಿಯರನ್ನು ಚುಡಾಯಿಸುವುದು, […]

ಭಜರಂಗದಳ ಕಾರ್ಯಕರ್ತ ರೌಡಿ ಶೀಟರ್‌ ಶರಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಶ

Saturday, August 20th, 2016
Sharan

ಮಂಗಳೂರು: ಭಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್‌ ಶರಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಲೆರೋ ಕಾರಿನ ಸಮೇತ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಶರಣ್ ಹಂತಕರು ಬೊಲೆರೋ ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದರು ಎಂಬ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯೊಂದು ದೊರೆತಿತ್ತು. ಕೊಲೆ ನಡೆದ ಕೆಲವೇ ಕ್ಷಣದಲ್ಲಿ ಕಾರ್ಯಪ್ರವೃತರಾದ ಪೊಲೀಸ್ ತಂಡ ಹಂತಕರಿಗಾಗಿ ಜಿಲ್ಲೆಯಾದ್ಯಂತ ವ್ಯಾಪಕ ಬಲೆ ಬೀಸಿದ್ದರು. ಈ ನಡುವೆ ಕೊಲೆ ನಡೆದ ಕೆಲವೇ ಸಮಯದಲ್ಲಿ ಹಂತಕರು ಪರಾರಿಯಾಗಲು ಯತ್ನಿಸುತ್ತಿದ್ದ ಬೊಲೆರೋ […]

ಕಾವೂರು ಪ್ರತಿಭಟನೆಗೆ ಯಡಿಯೂರಪ್ಪ ಭೇಟಿ

Sunday, October 19th, 2014
BSY

ಮಂಗಳೂರು : ಮೂಲ್ಕಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಯಡಿಯೂರಪ್ಪ ಕಾವೂರಿನಲ್ಲಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ನ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‌ವೈ ಹಲ್ಲೆ ನಡೆಸಿದ ಎಸ್‌ಐಯನ್ನು ಸರ್ಕಾರ ಕೂಡಲೆ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಕಾವೂರು ಪೊಲೀಸ್‌ ಠಾಣೆಯೆದುರು ಶುಕ್ರವಾರ ದಿಂದ ಸಂಘಟನೆಯ ಕಾರ್ಯಕರ್ತನ ಮೇಲೆ ವೀನಾ ಕಾರಣ ಹಲ್ಲೆ ನಡೆಸಿದ ಠಾಣಾ ಎಸ್‌ಐ ಉಮೇಶ್‌ ಕುಮಾರ್‌ ಅವರ ಅಮಾನತಿಗೆ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್‌ ಸಂಘಟನೆಯ […]

ಸುಳ್ಯ ತಾಲೂಕಿನ ಪೆರುವಾಯಿಯಿಂದ ಕೇರಳಕ್ಕೆ ಅಕ್ರಮ ದನ ಸಾಗಾಟ; ಭಜರಂಗದಳದ ಕಾರ್ಯಕರ್ತರಿಂದ ತಡೆ

Saturday, July 6th, 2013
Cattle Trasportation

ಬಂಟ್ವಾಳ: ಪೆರುವಾಯಿಯಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭ ಭಜರಂಗದಳದ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈ ಸಂದರ್ಭ  ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಯ್ ಕೈ ನಡೆದಿದ್ದು, ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ. ಸುಳ್ಯ ತಾಲೂಕಿನ ಎಣ್ಮೂರು ಗ್ರಾಮದ ನಿಂತಿಕಲ್ಲು ಕಡೆಯಿಂದ ಕುದ್ದುಪದವು ಪೆರುವಾಯಿ ಮಾರ್ಗವಾಗಿ ಕೇರಳಕ್ಕೆ ಹಸುಗಳನ್ನು ಸಾಗಾಟ ಮಾಡುವುದನ್ನು ಮುಳಿಯದಲ್ಲಿ ಭಜರಂಗದಳದ ಕಾರ್ಯಕರ್ತ ಚೇತನ್ ಎಂಬವರು ನೋಡಿ, ಪೆರುವಾಯಿಯಲ್ಲಿದ್ದ ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಎಂಟು ಮಂದಿ ಕಾರ್ಯಕರ್ತರನ್ನೊಳಗೊಂಡ ತಂಡ ಕಾರನ್ನು ಅಡ್ಡಗಟ್ಟಿ […]