ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ನಿಧನ

Tuesday, January 16th, 2024
Ramanatha-Hegde

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ. ರಮಾನಾಥ ಹೆಗ್ಡೆ (72) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ನಗರದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಅಂತಿಮ ದರ್ಶನ ಜ.17ರಂದು ಮಂಗಳಾದೇವಿ ದೇವಸ್ಥಾನ ಸಮೀಪದ ಸ್ವಗೃಹದಲ್ಲಿ ಬೆಳಗ್ಗೆ 8.00 ರಿಂದ 11.00 ವರೆಗೆ ನಡೆಯಲಿದೆ. 11.30ಕ್ಕೆ ನಂದಿಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಮೃತರು ಪತ್ನಿ, ಪುತ್ರ […]

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ನವರಾತ್ರಿ ಉತ್ಸವ ಅಕ್ಟೋಬರ್ 7 ರಿಂದ 16, 2021

Wednesday, October 6th, 2021
Mangaladevi Nvaratri

ಮಂಗಳಾದೇವಿ ದೇವಸ್ಥಾನದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಾಲ್ಕು ಜೋಡಿಗಳ ಮದುವೆ, ಜಂಟಿ ದಾಳಿ

Sunday, June 20th, 2021
Mangaladevi

ಮಂಗಳೂರು : ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ನಾಲ್ಕು ಜೋಡಿಗಳ ಮದುವೆ ಅದ್ದೂರಿಯಾಗಿ ನಡೆಯುತ್ತಿತ್ತು. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ( ಮನಪಾ) ಸಹಾಯಕ ಆಯುಕ್ತ ಮತ್ತು ಕಂದಾಯ ಇಲಾಖೆಯ ಉಪ ಆಯುಕ್ತ ಜಂಟಿ ದಾಳಿ ನಡೆಸಿ ಮದುವೆ ನಿಲ್ಲಿಸಿದ್ದಾರೆ. ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯವರ ಪುತ್ರಿಯ ವಿವಾಹ ಸೇರಿದಂತೆ ನಾಲ್ಕು ಜೋಡಿಗಳ ಮದುವೆಯನ್ನು ಏರ್ಪಡಿಸಲಾಗಿತ್ತು. ಮದುವೆ ಹಿನ್ನೆಲೆ ದೇವಸ್ಥಾನದ ಮುಂಭಾಗದಲ್ಲಿ 40ಕ್ಕೂ ಹೆಚ್ಚು ಕಾರು […]

ಪತ್ನಿ ಸಾವಿನ ನಾಲ್ಕೇ ದಿನದಲ್ಲಿ, ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ್ ಜೋಗಿ ಮೃತ್ಯು

Sunday, May 23rd, 2021
Machendranath

ಮಂಗಳೂರು : ಮಂಗಳಾದೇವಿ ದೇವಸ್ಥಾನದಲ್ಲಿ ಸುಮಾರು ಮೂವತ್ತ ನಾಲ್ಕು ವರ್ಷಗಳಿಂದ ಸ್ಯಾಕ್ಸೊಫೋನ್ ಕಲಾವಿದ ರಾಗಿದ್ದ, ಅಂತರರಾಷ್ಟ್ರೀಯ ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ್ ಜೋಗಿ ಅವರು ಕೊರೋನಾ ಸೋಂಕು ಬಾಧಿತರಾಗಿ ಭಾನುವಾರ ಮದ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರ ಪತ್ನಿ ಸುಶೀಲಾ ಮಚ್ಚೇಂದ್ರನಾಥ್ ಅವರು ನಾಲ್ಕು ದಿನದ ಹಿಂದೆ ಮೇ 19ರಂದು ಕೊರೋನಾ ಸೋಂಕಿಗೆ ತುತ್ತಾಗಿ ಮೃತರಾಗಿದ್ದರು. ಗಂಡ ಹೆಂಡತಿ ಇಬ್ಬರು ಕೊರೋನಾ ಸೋಂಕು ಕಾಣಿಸಿಕೊಂಡು ದೇರಳಕಟ್ಟೆಯ ಕೆ.ಯಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೇ  ಮೊದಲ ವಾರದಿಂದ  ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಬುಧವಾರ […]

ಕರ್ನಾಟಕ ಬ್ಯಾಂಕ್ ವತಿಯಿಂದ ಮಂಗಳಾದೇವಿ ದೇವಸ್ಥಾನಕ್ಕೆ ಡಿಶ್ ವಾಶ್ ಯಂತ್ರ

Friday, April 2nd, 2021
dish wash

ಮಂಗಳೂರು : ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಸಂದರ್ಭದಲ್ಲಿ ತಟ್ಟೆಗಳ ಶುಚಿತ್ವಕ್ಕಾಗಿ ಡಿಶ್ ವಾಶ್ ಅನ್ನು ಕರ್ನಾಟಕ ಬ್ಯಾಂಕ್ ವತಿಯಿಂದ ಬ್ಯಾಂಕ್ ನ ಅಧ್ಯಕ್ಷ ಶ್ರೀ ಮಹಾಬಲೇಶ್ವರ ಭಟ್ ಅವರು ಗುರುವಾರ ಶ್ರೀ ಕ್ಷೇತ್ರಕ್ಕೆ ಸಮರ್ಪಸಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಕ್ಷೇತ್ರದ ಅರ್ಚಕರು ಮುಂತಾದವರು ಉಪಸ್ಥಿತರಿದ್ದರು

ಮಹತೋಭಾರ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ

Sunday, October 18th, 2020
Mangaladevi

ಮಂಗಳೂರು: ಮಹತೋಭಾರ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವವು ಅಕ್ಟೋಬರ್ 17 ರಿಂದ ಆರಂಭಗೊಂಡಿದೆ. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನಸಂದಣಿ ಸೇರದಂತೆ ಉತ್ಸವದ ಸಮಯ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ ಎಂದು ಎಂದು ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಹೇಳಿದ್ದಾರೆ. ಮಹಾನವಮಿಯಂದು ಚಂಡಿಕಾಹೋಮ, ವಾಹನ ಪೂಜೆ (ಆಯುಧ ಪೂಜೆ), ರಾತ್ರಿ ದೊಡ್ಡ ವಿಶೇಷ ರಂಗಪೂಜೆ ನಂತರ ಸಣ್ಣ ರಥೋತ್ಸವ ನೆರವೇರಿಸಲಾಗುವುದು. ವಿಜಯದಶಮಿಯಂದು ಬೆಳಿಗ್ಗೆ ತೆನೆ ಹಬ್ಬದ ಅಂಗವಾಗಿ 8 ಗ್ರಾಮದ ಜನರಿಗೆ ತೆನೆ ನೀಡುವ ಪದ್ಧತಿ […]

ಮಂಗಳಾದೇವಿ ದೇವಸ್ಥಾನದಲ್ಲಿ ‘ಪಾಂಡೆಮಿಕ್’ ಕಿರುಚಿತ್ರ ಬಿಡುಗಡೆ

Saturday, August 15th, 2020
pandemic film

ಮಂಗಳೂರು : ಇತಿಹಾಸ ಪ್ರಸಿದ್ದ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಮೆಗಾಮೀಡಿಯಾ ಎಂಟರ್‌ಟೈನ್ ಮೆಂಟ್ ಇದರ ನಿರ್ಮಾಣದಲ್ಲಿ ಸಿದ್ದವಾದ ಕಿರುಚಿತ್ರ `ಪಾಂಡೆಮಿಕ್’ ಅನ್ನು ಮಂಗಳಾದೇವಿ ದೇವಸ್ಥಾನದ ಅಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಬಿಡುಗಡೆ ಮಾಡಿದರು. ಉತ್ತಮ ಸಂದೇಶವಿರುವ ಚಿತ್ರವನ್ನು ಜನ ಇಷ್ಟ ಪಡುತ್ತಾರೆ. ಕೊರೋನದಂತಹ ಮಹಾಮಾರಿಯಿಂದ ಜನ ನಲುಗಿ ಹೋಗಿದ್ದಾರೆ, ಜನ ಅದಾಯವಿಲ್ಲದೆ ಸಂಕಷ್ಟಕ್ಕ ಕ್ಕೊಳಗಾಗಿದ್ದಾರೆ. ಮಕ್ಕಳವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ಇಂತಹ ಸಂದೇಶವಿರುವ ಚಿತ್ರಗಳು ಇನ್ನು ಬಂದಿಲ್ಲ, ನಿಮ್ಮ ಚಿತ್ರ ಯಶಸ್ವಿಯಾಗಲಿ ಎಂದು ರಮಾನಾಥ ಹೆಗ್ಡೆ ಹಾರೈಸಿದರು. ಈ […]

ವಿಶ್ವಹಿಂದು ಪರಿಷದ್ ವತಿಯಿಂದ 40 ನೇ ವರ್ಷದ ವರಮಹಾಲಕ್ಷಿ ಪೂಜೆ

Saturday, August 1st, 2020
varamahalashmi pooje

ಮಂಗಳೂರು  : ವಿಶ್ವಹಿಂದು ಪರಿಷದ್ ಮಾತೃಶಕ್ತಿ ಮಂಗಳೂರು ಇದರ ವತಿಯಿಂದ 40 ನೇ ವರ್ಷದ ವರಮಹಾಲಕ್ಷಿ ಪೂಜೆಯು ಶ್ರೀಮಂಗಳಾದೇವಿ ದೇವಸ್ಥಾನ ದಲ್ಲಿ ನಡೆಯಿತು, ಕೊರೋನಾ ಮಹಾಮಾರಿಯಿಂದಾಗಿ ಜಿಲ್ಲಾಡಳಿತದ ಮಾರ್ಗ ಸೂಚಿಯಂತೆ ಸರಳ ರೀತಿಯಲ್ಲಿ ನಡೆಯಿತು, ವೈದಿಕರಾದ ಶ್ರೀ ಶ್ರೀನಿವಾಸ್ ಐತಾಳ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನಡೆಸಿದರು, ವಿಶ್ವಹಿಂದು ಪರಿಷದ್ ಮತ್ತು ಮಾತೃಶಕ್ತಿ ಪ್ರಮುಖರು ಈ ಪೂಜೆಯಲ್ಲಿ ಉಪಸ್ಥಿತಿಯಿದ್ದರು

ನಗರಾದ್ಯಂತ ವರಮಹಾಲಕ್ಷ್ಮೀ ಪೂಜೆಗೆ ಸಿದ್ಧತೆ

Thursday, August 8th, 2019
Varamahalakshmi Pooje

ಮಂಗಳೂರು : ನಗರಾದ್ಯಂತ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆಗಳು ಬಿರುಸುಗೊಂಡಿವೆ. ಸಾರ್ವಜನಿಕರು ಪೂಜೆಗೆ ಬೇಕಾದ ಹೂವು, ಬಳೆ, ಅರಶಿನ, ಕುಂಕುಮ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರೆ, ಇತ್ತ ವ್ಯಾಪಾರ ವಹಿವಾಟೂ ಜೋರಾಗಿದೆ. ದೇವಾಲಯಗಳಲ್ಲಿ ಹಬ್ಬಕ್ಕಾಗಿಯೇ ವಿಶೇಷ ತಯಾರಿಗಳು ನಡೆಯುತ್ತಿವೆ. ವರಮಹಾಲಕ್ಷ್ಮೀ ಪೂಜೆಗೆ ಮುಖ್ಯವಾಗಿ ಬೇಕಾಗಿರುವುದೇ ಹೂ ಹಣ್ಣುಗಳು. ನಗರದ ಗಲ್ಲಿಗಲ್ಲಿಗಳಲ್ಲಿ ವ್ಯಾಪಾರಸ್ಥರು ಹೂ ಮಾರಾಟದಲ್ಲಿ ತೊಡಗಿದ್ದಾರೆ. ಮಲ್ಲಿಕಟ್ಟೆ, ಬಿಜೈ, ಕಂಕನಾಡಿ, ಹಂಪನಕಟ್ಟೆ, ಸ್ಟೇಟ್ಬ್ಯಾಂಕ್‌ ರಸ್ತೆ ಬದಿಗಳಲ್ಲಿ ಹೊರ ಜಿಲ್ಲೆಗಳಿಂದ ಬಂದ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡಗಿದ್ದಾರೆ. ಮಲ್ಲಿಗೆ, ಹಬ್ಬಲ್ಲಿಗೆ, ಗುಲಾಬಿ… ಹೀಗೆ ನಾನಾ ರೀತಿಯ […]

ಮಂಗಳಾದೇವಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯ ನಾಗರಪಂಚಮಿ

Monday, August 5th, 2019
Mangaladevi

ಮಂಗಳೂರು  :  ಶ್ರೀ ಮಂಗಳಾದೇವಿ ಅಮ್ಮನವರ ದೇವಳಕ್ಕೆ ಮುಂಭಾಗದಲ್ಲಿ ನೇರ ಅಭಿಮುಖ ವಾಗಿರುವ, ಅಶ್ವಥ ವೃಕ್ಷರಾಜನ ಅಲಂಕೃತ ನಾಗಬನದ ನಾಗದೇವರ ಸಾನಿಧ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಪೂರ್ವ ಶಿಷ್ಠ ಸಂಪ್ರದಾಯದಂತೆ ಶ್ರೀ ದೇವರ ಪೂಜಾ ಕೈಂಕರ್ಯಗಳು ಬಹು ವಿಜೃಂಭಣೆಯಿಂದ ನೆರವೇರಿತು. ಶ್ರೀ ಕ್ಷೇತ್ರದಲ್ಲಿ ಪ್ರತ್ಯಕ್ಷ ನಾಗದೇವರ ಸಾನಿಧ್ಯ ವಿರುವುದರಿಂದ ಮಂಗಳಕರನಾದ ಶ್ರೀ ನಾಗ ದೇವರು ತಾಯಿಯ ದೇವಳದ ರಕ್ಷಣೆಯೊಂದಿಗೆ, ಬೇಡಿ ಬರುವ ಸರ್ವರಿಗೂ ಸಂತಾನ ಸಂಪತ್ತುಗಳನ್ನು ಅನುಗ್ರಹಿಸಿ, ಸರ್ವ ಸಮೃದ್ಧಿಯನ್ನು ಕೃಪೆದೋರಿದನು. ದೇವಳದಲ್ಲಿ ನಾಗರ ಪಂಚಮಿಯಂದು ಕ್ಷೀರವನ್ನಿಟ್ಟು ನಾಗರ […]