1 ಟನ್‌ಗೆ 100 ರೂ. ನಂತೆ ಮರಳು ವಿತರಿಸಲು ಯೋಜನೆ : ಸಚಿವ ಮುರುಗೇಶ ನಿರಾಣಿ

Friday, April 9th, 2021
nirani

ಮಂಗಳೂರು : ರಾಜ್ಯದಲ್ಲಿ ಹೊಸ ಗಣಿ ನೀತಿಯ ಕರಡು ಸಿದ್ಧವಾಗಿದ್ದು ಅತ್ಯಂತ ಕಡಿಮೆ ದರದಲ್ಲಿ ಮರಳು ದೊರಕಿಸುವ ಉದ್ದೇಶದಿಂದ  1 ಟನ್‌ಗೆ 100 ರೂ. ನಂತೆ ಮರಳು ವಿತರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಗುರುವಾರ ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಈ ಬಗ್ಗೆ ವಿವಿಧ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆದು ಈ ತಿಂಗಳಾಂತ್ಯದೊಳಗೆ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿದೆ. ಈ […]

ಸ್ಯಾಂಡ್ ಬಜಾರ್ ಆಪ್ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಮರಳು ಒದಗಿಸಲು ಒತ್ತಾಯ

Tuesday, November 17th, 2020
Sand Bazar

ಮಂಗಳೂರು  :  ಸ್ಯಾಂಡ್ ಬಜಾರ್ ಸ್ಥಾಪಿಸುವ ಮೂಲಕ ಗ್ರಾಹಕರಿಗೆ ಕಡಿಮೆ ಮತ್ತು ನ್ಯಾಯಯುತ ದರದಲ್ಲಿ ಗುಣಮಟ್ಟ್ಟದ ಮರಳನ್ನು ಒದಗಿಸಿಕೊಳ್ಳಲು ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಪ್ರಸ್ತುತ 3 ಯುನಿಟ್ ಮರಳಿಗೆ 17,000/- ರಿಂದ 20,000/- ತನಕ ದರ ವಿಧಿಸಲಾಗುತಿದೆ, ಸಿಮೆಂಟಿಗಿಂತಲೂ ಮರಳಿನ ದರ ಜಾಸ್ತಿಯಾಗಿರುತ್ತದೆ. ಆದುದರಿಂದ ದರ ನಿಗದಿಪಡಿಸಿ ಸ್ಯಾಂಡ್ ಬಜಾರ್ ಮೂಲಕವೇ ಮರಳು ನೀಡಲು ಕಾಂಗ್ರೆಸ್  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ಹಿಂದೆ ಕುಮಾರಸ್ವಾಮಿಯವರ […]

ಯುನಿಟ್ ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ದೊರಕಲಿದೆ : ರಾಧಾಕೃಷ್ಣ

Monday, September 21st, 2020
Radhakrishana

ಮಂಗಳೂರು: ಮಾಜಿ ಸಚಿವ ರಮಾನಾಥ ರೈಯವರು ಎರಡು ಸಾವಿರಕ್ಕೆ ಮರಳು ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದನ್ನು ಟೀಕಿಸಿದ್ದರು ಆದರೆ ಯುನಿಟ್ ಗೆ 2 ಸಾವಿರ ರೂ.ನಂತೆ ಎಲ್ಲರಿಗೂ ಮರಳು ದೊರಕಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಧಾಕೃಷ್ಣ ಹೇಳಿದ್ದಾರೆ. ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ ಮರಳು ಮಾಫಿಯಾ ನಡೆಯುತ್ತಿತ್ತು ನಾವು 2 ಸಾವಿರ ರೂ.ಗೆ ಎಲ್ಲರಿಗೂ ಮರಳು ವಿತರಣೆ ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲು  ಹೇಳಿದ್ದರು. ಇದಕ್ಕೆ ಪರವಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಜಿಲ್ಲೆಯಲ್ಲಿ ಮರಳು ಮಾಫಿಯಾ […]

ಅಕ್ರಮ ಮರಳು ಸಾಗಾಟ : ಮೂವರು ಆರೋಪಿಗಳು ಬಂಧನ

Saturday, October 5th, 2019
hiriyadka

ಉಡುಪಿ : ಇಲ್ಲಿನ ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರು ಹೊಳೆಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಧುಕರ ಪೂಜಾರಿ , ನಾಗರಾಜ ಶೆಟ್ಟಿ, ಗಿರೀಶ ಶೆಟ್ಟಿ ಬಂಧಿತರು. ಇವರು ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು ಟೆಂಪೊದಲ್ಲಿ ತುಂಬಿಸಿ ಸಾಗಾಟ ಮಾಡುವ ಸಿದ್ದತೆಯಲ್ಲಿದ್ದರು, ಈ ವೇಳೆ ಖಚಿತ ಮಾಹಿತಿ ಮೆರೆಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇನ್ನು ಇವರನ್ನು ವಿಚಾರಣೆ ನಡೆಸಿದಾಗ ಮರಳನ್ನು ತೆಗೆಯಲು ಪರವಾನಿಗೆ ಇರುವುದಿಲ್ಲ ಎಂಬ […]

ಮನೆ, ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ಮರಳು ಭೂಗರ್ಭದಿಂದ ಸರಬರಾಜು

Friday, October 28th, 2016
sand

ಮಂಗಳೂರು: ಮನೆ, ಕಟ್ಟಡ ನಿರ್ಮಾಣಗಳಿಗೆ ಬೇಕಾಗುವ ಮರಳು ಇನ್ನು ಮುಂದೆ ಸಾಗರ ಭೂಗರ್ಭದ ಒಳಗಿನಿಂದ ಸರಬರಾಜು ಆಗಲಿದೆ. ಸಮುದ್ರ ತೀರದಿಂದ 10 ಕಿ.ಮೀ. ವ್ಯಾಪ್ತಿಯ ಹೊರಗೆ (ಸಮುದ್ರದೊಳಗೆ) ಕೇರಳ ವ್ಯಾಪ್ತಿಯ 2,797 ಚ.ಕಿ.ಮೀ. ಪ್ರದೇಶದಲ್ಲಿ ನಿರ್ಮಾಣ ಯೋಗ್ಯ ಮರಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿಯ 4,525 ಚ.ಕಿ.ಮೀ. ಭೂಗರ್ಭ ಪ್ರದೇಶದಲ್ಲಿ ನಿರ್ಮಾಣ ಯೋಗ್ಯ ಮತ್ತು ಕಾರ್ಬೊನೇಟ್ ಮರಳು ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭೂ ಸರ್ವೇಕ್ಷಣಾ ಇಲಾಖೆಯ ಡೈರೆಕ್ಟರ್ ಜನರಲ್ […]

ಜಿಲ್ಲಾಧಿಕಾರಿ ನೇತೃತ್ವದಲ್ಲಿ ವ್ಯಾಪಕ ಕಾರ್ಯಾಚರಣೆ 100 ಲೋಡ್ ಹೊಯ್ಗೆ ವಶ

Thursday, August 25th, 2016
Sand

ಕಾಸರಗೋಡು: ಜಿಲ್ಲಾಧಿಕಾರಿ ಕೆ. ಜೀವನ್ ಬಾಬುರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕಂದಾಯ ಅಧಿಕಾರಿಗಳ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಮರಳು ವಶಪಡಿಸಲಾಗಿದೆ. ಮಂಜೇಶ್ವರ ಕೊಡ್ಲಮೊಗರಿನಲ್ಲಿ ನಡೆಸಿದ ದಾಳಿ ಮತ್ತು ತಪಾಸಣೆಯಲ್ಲಿ 100 ಲೋಡ್ ಮರಳುಗಳನ್ನು ಬುಧವಾರ ಮುಂಜಾನೆ ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿದೆ. ಮಂಜೇಶ್ವರದ ಹೊರತಾಗಿ ಕಾಸರಗೋಡು, ಹೊಸದುರ್ಗ ಮತ್ತು ತೃಕರಿಪುರ ಎಂಬೆಡೆಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮಂಜೇಶ್ವರದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಎನ್. ದೇವಿರಾಜ್, ಗ್ರಾಮಾಧಿಕಾರಿ ಮುಹಮ್ಮದ್ ಕುಂಞಿ, […]