Blog Archive

ಬಿಬಿಎಂಪಿಯಿಂದ ಸುಮಾರು 8 ಸಾವಿರ ಕೋಟಿ ಬಜೆಟ್ ಮಂಡನೆ

Monday, February 17th, 2014
mahanagara-palike

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2014-2015ನೇ ಸಾಲಿನ ಬಜೆಟ್‌ನ್ನು ಸೋಮವಾರ ಮಂಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸುಮಾರು 7779.51 ಕೋಟಿ ರುಪಾಯಿ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್ ಶಿವಪ್ರಸಾದ್ ಅವರು ಮಂಡಿಸಿದ್ದಾರೆ. ಬಿಬಿಎಂಪಿ ಬಜೆಟ್‌ನ ಪ್ರಮುಖ ಅಂಶಗಳು: ಬೆಂಗಳೂರಿನ 8 ದಿಕ್ಕುಗಳಲ್ಲಿ ಕೆಂಪೇಗೌಡ ಸ್ವಾಗತ ಗೋಪುರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 5 ಕೋಟಿ ರೂಪಾಯಿ ನಗರದಲ್ಲಿ ಸ್ವಚ್ಛತೆ ಕಾಪಾಡಲು ‘ಹಸಿರು’ ಪೊಲೀಸ್ ತಂಡ ರಚನೆ ಹೊಸ […]

ಜನರ ಸಮಸ್ಯೆಗಳ ಪರಿಶೀಲನೆ ಮಹಾನಗರ ಪಾಲಿಕೆ ಕಣ್ಣೂರು ವಾರ್ಡ್ 52ರಲ್ಲಿ ಶಾಸಕ ಜೆ.ಆರ್ ಲೋಬೊ

Thursday, September 26th, 2013
lobo-kannuru

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಣ್ಣೂರು ವಾರ್ಡ್ 52ಕ್ಕೆ ಶಾಸಕ ಜೆ.ಆರ್ ಲೋಬೊ ಬೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಶೀಲಿಸಿದರು. ಅಲ್ಲಿನ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಡ್ರೈನೇಜ್ ಹಾಗೂ ರಸ್ತೆ ದುರವಸ್ಥೆ. ಸುಮಾರು 300 ಮನೆಗಳು ರೈಲ್ವೆ ಹಳಿಯ ಪಕ್ಕದಲ್ಲಿರುವುದರಿಂದ ರೈಲು ಹಳಿ ದಾಟುವ ಸಂದರ್ಭ ತೊಂದರೆಗಳುಂಟಾಗುತ್ತದೆ. ರೈಲ್ವೆ ಹಳಿ ದಾಟುವ ವ್ಯವಸ್ಥೆಯನ್ನು ಆದ್ಯತೆಯ ಆಧಾರದ ಮೇರೆಗೆ ನಡೆಸಬೇಕಾಗಿದೆ. ಅಲ್ಲಿನ ಸಮಸ್ಯೆಗಳನ್ನೆಲ್ಲಾ ಪರಿಶೀಲಿಸಿ  ಜನರ ಅಗತ್ಯತೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸಂಬಂಧಿಸಿದ […]

ಬಡವರಿಗೆ ಸರ್ಕಾರದ ಸಹಾಯಧನ ವಿತರಿಸಿದ ಜೆ.ಆರ್.ಲೋಬೊ

Thursday, September 5th, 2013
lobo

ಮಂಗಳೂರು: ಬಡಕುಟುಂಬಗಳಿಗೆ ಸರ್ಕಾರದಿಂದ ಸಿಗುವ ವಿವಿಧ ರೀತಿಯ ಸಹಾಯಧನವನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ನಗರದ ಎನ್.ಜಿ.ಒ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಇಲಾಖೆ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಿದರೆ ಯಾವುದೇ ರೀತಿಯ ಕಾರ್ಯವನ್ನು ಸಾಧಿಸಬಹದು ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿದೆ. ಇಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೂಕ್ತ ರೀತಿಯ ಸಹಾಯಧನವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. […]

ಹೈಮಾಸ್ಟ್ ದ್ವೀಪ ಉದ್ಘಾಟಿಸಿದ ಶಾಸಕ ಲೋಬೊ

Monday, September 2nd, 2013
Dalit-leaders

ಮಂಗಳೂರು: ಜನರ ಬೇಡಿಕೆ ಹಾಗೂ ಆಶೋತ್ತರಗಳನ್ನು ನಿರಂತರವಾಗಿ ಸ್ಪಂದಿಸುವುದು ನಮ್ಮ ಧರ್ಮವಾಗಿದೆ ಈ ಊರಿನ ಅಭಿವೃದ್ದಿಗೆ ಸದಾ ಚಿಂತಿಸಿ ಅದಕ್ಕೆ ಪೂರಕವಾಗಿರುವ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ. ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ದೇವಮಾತೆ ಇಗರ್ಜಿ ಮರಿಯಗಿರಿ ಶಕ್ತಿನಗರ ಇದರ ಸಮೀಪ  ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾದ ಹೈಮಾಸ್ಟ್ ದ್ವೀಪವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಲೋಬೋರನ್ನು ಮತ್ತು ಸ್ಥಳೀಯ ಕಾರ್ಪೋರೇಟರ್ ಅಖಿಲ ಆಳ್ವರನ್ನು ಚರ್ಚ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. […]

ಕೌಟುಂಬಿಕ ಆಸ್ತಿ ವಿವಾದ ; ಪಾಲಿಕೆಯ ವಾಹನ ಚಾಲಕನಿಗೆ ಮಾರಣಾಂತಿಕ ಹಲ್ಲೆ

Sunday, July 21st, 2013
MCC driver

ಮಂಗಳೂರು : ಕೌಟುಂಬಿಕ ಆಸ್ತಿ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವಾಹನ ಚಾಲಕ ಅಶೋಕನಗರದ ರೋಹಿತ್‌ (26) ಅವರನ್ನು ಶನಿವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಅಪರಿಚಿತರು ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ್ದಾರೆ. ರೋಹಿತ್‌ ಅವರು ಬೆಳಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕರೆ ತರಲು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿದ ನಾಲ್ವರು ಅಪರಿಚಿತರು ಲೇಡಿಹಿಲ್‌ನಲ್ಲಿ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದರು  ಎಂದು ಆರೋಪಿಸಲಾಗಿದೆ. ಗಾಯಾಳು ರೋಹಿತ್‌ ಅವರನ್ನು ಆಸ್ಪತ್ರೆಗೆ […]

ನಿಗಧಿತ ಅವಧಿಯಲ್ಲಿ ಪಾಲಿಕೆ ಕಾಮಗಾರಿ ಪೂರೈಸುವಂತೆ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಸೂಚನೆ

Thursday, May 16th, 2013
N.Prakash

ಮಂಗಳೂರು : ಮಳೆಗಾಲ ಪ್ರಾರಂಭವಾಗುವುದಕ್ಕು ಮುನ್ನ ನಗರದ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ಮೇ 25 ರೊಳಗೆ ಪೂರ್ಣಗೊಳಿಸಬೇಕೆಂದು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು. ಅವರು ಬುಧವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾದ ಅಭಿವೃದ್ಧಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಪಾಲಿಕೆ ಮುಖ್ಯ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಬಾಲಕೃಷ್ಣ ಮಾತನಾಡಿ, ನೆರೆ ಪೀಡಿತ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, 10 ತಂಡಗಳ ಟಾಸ್ಕ್ಫೋರ್ಸ್‌ ರಚಿಸಲಾಗಿದೆ. ಇನ್ನುಳಿದಂತೆ  ಪಾಲಿಕೆಯಲ್ಲಿ ಈಗಾಗಲೇ 71 ಲಕ್ಷ ರೂಪಾಯಿ […]

ಮೇಯರ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ, ಗುಲ್ಜಾರ್ ಬಾನುರವರಿಗೆ ಜಯ

Thursday, February 7th, 2013
Gulzar Banu

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗುಲ್ಜಾರ್ ಬಾನುರವರ ವಿರುದ್ಧ ಬಿಜೆಪಿಯ ರೂಪಾ ಡಿ.ಬಂಗೇರ ಹಾಗೂ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು 3ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ  ನ್ಯಾಯಾಧೀಶರು ವಜಾಗೊಳಿಸಿದ್ದಾರೆ ಆ ಮೂಲಕ ಗುಲ್ಜಾರ್ ಬಾನುರವರ ಆಯ್ಕೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಹಾಲಿ ಐದು ವರ್ಷಗಳ ಅಧಿಕಾರಾವಧಿಯ ಅಂತಿಮ ಮೇಯರ್‌ ಸ್ಥಾನಕ್ಕೆ 7-3-2012ರಂದು ಮೀಸಲು ನೆಲೆಯಲ್ಲಿ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಗುಲ್ಜಾರ್‌ಬಾನು ಮತ್ತು ಬಿಜೆಪಿಯಿಂದ ರೂಪಾ ಡಿ. ಬಂಗೇರಾ ನಾಮಪತ್ರ ಸಲ್ಲಿಸಿದ್ದರು. ಆದರೆ ಆದರೆ, […]