ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಥಮ ಪ್ರಾಶಸ್ತ್ಯ : ಶಾಸಕ ಕಾಮತ್

Wednesday, December 11th, 2019
Kamath

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಸೆಂಟ್ರಲ್ ವಾರ್ಡಿನ ಭವಂತಿ ಸ್ಟ್ರೀಟ್ ವೆಂಕಟರಮಣ ಆರ್ಕೇಡ್ ಹಿಂಬದಿಯ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಬೃಹತ್ ಚರಂಡಿ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಕುರಿತು ಮಾತನಾಡಿದ ಶಾಸಕ ಕಾಮತ್, ಪಾಲಿಕೆ ವ್ಯಾಪ್ತಿಯ ಸೆಂಟ್ರಲ್ ವಾರ್ಡಿನ ನಾಗರಿಕರ ಹಾಗೂ ಪಾಲಿಕೆ ಸದಸ್ಯೆ ಶ್ರೀಮತಿ ಪೂರ್ಣಿಮ ಅವರು ಈ ಕಾಮಗಾರಿ ನಡೆಸಿಕೊಡುವಂತೆ ಕೆಲ ತಿಂಗಳ ಹಿಂದೆ ನನ್ನಲ್ಲಿ ಕೇಳಿಕೊಂಡಿದ್ದರು. ಹಾಗಾಗಿ ರಾಘವೇಂದ್ರ ಸ್ವಾಮಿ ಮಠದ […]

ಶುದ್ಧ ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದ್ದು ಆಡಳಿತ ಸಂಸ್ಥೆಗಳ ಜವಾಬ್ದಾರಿ :ಕೃಷ್ಣ ಜೆ. ಪಾಲೇಮಾರ್

Friday, January 6th, 2017
palemar

ಮಂಗಳೂರು: ಮಹಾನಗರ ಪಾಲಿಕೆಯ 27 ವಾರ್ಡ್‌‌ಗಳಲ್ಲಿ ಕೈಗೊಂಡ ಕುಡಿಯುವ ನೀರಿನ ವೈಜ್ಞಾನಿಕ ತಪಾಸಣೆ ಸಂದರ್ಭ ಕೋಲಿಫಾರಂ ಮತ್ತು ಫೀಕಲ್ ಕೋಲಿಫಾರಂ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದ್ದು, ನೀರು ಸಂಪೂರ್ಣ ಮಲೀನಗೊಂಡಿದೆ. ಇದಕ್ಕೆ ಕಾರಣರಾದವರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಒತ್ತಾಯಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದ್ದು ಆಡಳಿತ ಸಂಸ್ಥೆಗಳ ಜವಾಬ್ದಾರಿ. ಆದರೆ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಗೊಳ್ಳಬೇಕಾಗಿದೆ: ಡಾ. ಜಗದೀಶ್

Thursday, December 15th, 2016
Tourism

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು ಎಂಬ ಕೂಗು ಕೇಳಿಬರುತ್ತಿದ್ದರೂ ಇನ್ನೂ ಅಭಿವೃದ್ಧಿಗೊಳ್ಳಬೇಕಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ. ಜಗದೀಶ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಂವಾದ, ಸಮಾಲೋಚನಾ ಸಭೆ ನಡೆಯಿತು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದರೂ ಇದರ ಸದುಪಯೋಗವಾಗುತ್ತಿಲ್ಲ. ಆ ನಿಟ್ಟಿನಲ್ಲಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ಸಂಪರ್ಕ ವ್ಯವಸ್ಥೆ, ಶುಚಿತ್ವಕ್ಕೆ ಗಮನಹರಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆ ಅನುಷ್ಠಾನಗೊಳಿಸಲು […]

ಮುಜರಾಯಿ ಇಲಾಖೆಯ ಕಾಯಕಲ್ಪಕ್ಕೆ ಆಧ್ಯತೆ: ಸಚಿವ ಲಮಾಣಿ

Friday, October 28th, 2016
Mujarayi Ilakhe

ಸುಬ್ರಹ್ಮಣ್ಯ: ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಡಿಯಲ್ಲಿ 60ಕ್ಕೂ ಮಿಕ್ಕಿ ದೇವಸ್ಥಾನಗಳಲ್ಲಿ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿದೆ. ಮುಜರಾಯಿ ಇಲಾಖೆ ತುಂಬಾ ಮುಜುಗರ ಇರುವ ಇಲಾಖೆಯಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಸಿಬ್ಬಂಧಿ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆಯಿದೆ. ನಾನು ಈ ಖಾತೆಯ ಜವಾಬ್ದಾರಿ ಸ್ವೀಕರಿಸಿದ ಬಳಿಕ ರಾಜ್ಯದ ಎಲ್ಲಾ ದೇವಸ್ಥಾನಗಳಿಗೆ ಕಾಯಕಲ್ಪ ನೀಡಲು ಆಧ್ಯತೆ ನೀಡುತ್ತೇನೆ ಎಂದು ಜವುಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿದರು. ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. […]

ಪ್ರವಾಸಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಸಹಿತ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ: ರಮಾನಾಥ ರೈ

Wednesday, September 28th, 2016
world-tourism-day

ಮಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿಗೆ ದ.ಕ. ಜಿಲ್ಲೆಯಲ್ಲಿ ವಿಫುಲ ಅವಕಾಶವಿದೆ. ಪ್ರವಾಸಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಸಹಿತ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವೆಂದು ಸಚಿವ ಬಿ.ರಮಾನಾಥ ರೈ ಹೇಳಿದರು. ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮದ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆಯಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು. ಜಿಲ್ಲಾಧಿಕಾರಿ ಡಾ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ […]

ದೈಹಿಕ, ಮಾನಸಿಕ, ಆರೋಗ್ಯವಂತವಾಗಿ ಮಗು ಬೆಳೆಯಲು ಅಂಗನವಾಡಿಯ ಶಿಕ್ಷಣ ಅಗತ್ಯ: ರಿತೇಶ್ ಬಾಳಿಗಾ

Friday, September 9th, 2016
rotary-club

ಬಂಟ್ವಾಳ: ವಿಶ್ವ ಸಾಕ್ಷರತಾ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ಬಂಟ್ವಾಳ ಇವರ ವತಿಯಿಂದ ನವೀಕರಣಗೊಳಿಸಿದ ಕೈಕುಂಜೆ ಅಂಗನವಾಡಿ ಕೇಂದ್ರವನ್ನು ರೋಟರಿಯ ಹಿರಿಯ ಸದಸ್ಯ ರಾಜೇಶ್ ಎಲ್.ನಾಯಕ್ ಹಸ್ತಾಂತರಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಸಮಾಜ ಸೇವೆಯ ಮೂಲಕ ರೋಟರಿಕ್ಲಬ್ ಸಾರ್ಥಕತೆಯನ್ನು ಪಡೆದಿದೆ. ಪುರಸಭೆ ಅಂ.ಕೇಂದ್ರಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಿದೆ,ಇನ್ನೂ ಮುಂದೆಯೂ ನೀಡಲಿದೆ ಎಂದರು. ಸ್ಫರ್ಧಾತ್ಮಕ ಯುಗದಲ್ಲಿ ಅಂ.ಕೇಂದ್ರಗಳು ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದ್ದರೆ ಉತ್ತಮ. ಇಂಗ್ಲೀಷ್ ಬಗ್ಗೆ ಅಭಿಮಾನ ಇರಲಿ ಅಂಧಾಭಿಮಾನ […]

ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ ಏರ್ಪಡಿಸಲು ಆದೇಶ

Monday, April 11th, 2016
Eelection Commission

ಕಾಸರಗೋಡು : ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಸರಗೋಡು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲೂ ಅಗತ್ಯದ ಮೂಲಭೂತ ಸೌಲಭ್ಯಗಳನ್ನು ಎ.30 ರೊಳಗೆ ಖಚಿತಪಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಇ.ದೇವದಾಸನ್ ತಿಳಿಸಿದ್ದಾರೆ. ಕಾಸರಗೋಡು ಕಲೆಕ್ಟರೇಟ್‌ನ ಮಿನಿ ಕಾನರೆನ್ಸ್ ಹಾಲ್‌ನಲ್ಲಿ ಜರಗಿದ ಚುನಾವಣಾ ಸೆಕ್ಟರಲ್ ಆಫೀಸರ್‌ಗಳ ಅವಲೋಕನಾ ಸಭೆಯಲ್ಲಿ ಅವರು ಈ ಬಗ್ಗೆ ಆದೇಶಿಸಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ಶೌಚಾಲಯ, ರ‍್ಯಾಂಪ್, ಕುಡಿಯುವ ನೀರು, ಪೀಠೋಪಕರಣಗಳು, ಗಾಲಿ ಕುರ್ಚಿ, ಪ್ರಥಮ ಚಿಕಿತ್ಸೆ , ವಿದ್ಯುತ್, ದೂರವಾಣಿ ಮೊದಲಾದ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಬೇಕಾಗಿದೆ. ಶೌಚಾಲಯದ ವ್ಯವಸ್ಥೆ […]

ಕಾಸರಗೋಡು ರೆಸ್ಟ್ ಹೌಸ್ ನೂತನ ಕಟ್ಟಡ ಉದ್ಘಾಟನೆ

Tuesday, January 19th, 2016
Rest House

ಕಾಸರಗೋಡು: ರೆಸ್ಟ್ ಹೌಸ್‌ನ(ವಿಶ್ರಾಂತಿ ಗೃಹ) ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು ಬ್ಲಾಕೊಂದನ್ನು ನಿರ್ಮಿಸಲಾಗುವುದೆಂದು ಲೋಕೋಪಯೋಗಿ ಸಚಿವ ವಿ.ಕೆ.ಇಬ್ರಾಹಿಂ ಕುಂಞಿ ಹೇಳಿದರು. ಅವರು ಕಾಸರಗೋಡಿನ ಲೋಕೋಪಯೋಗಿ ಇಲಾಖೆಯ ರೆಸ್ಟ್ ಹೌಸ್‌ಗೆ ನೂತನವಾಗಿ ನಿರ್ಮಿಸಿದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವುದರಿಂದ ಲೋಕೋಪಯೋಗಿ ಇಲಾಖೆ ರೆಸ್ಟ್ ಹೌಸ್‌ನ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 72 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನವೀಕರಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಲೋಕೋಪಯೋಗಿ ಕಟ್ಟಡ ವಿಭಾಗ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ […]

ಕಾವೂರು ಮೂಲಭೂತ ಸೌಕರ್ಯ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

Saturday, March 14th, 2015
yogish shetty

ಮಂಗಳೂರು : ಕುಂಜತ್ತಬೈಲು ಗ್ರಾಮದ ಕಾವೂರು ಶ್ರೀ ವೈದ್ಯನಾಥ ದೇವಸ್ಥಾನದಿಂದ ತೋಡಲ ಗುಡ್ಡೆ ಮಲ್ಲಿ ಲೇಔಟ್ ವರೆಗೆ ಸುಮಾರು 600 ಮನೆಗಳಿದ್ದು , ಅಲ್ಲದೆ ಆದಿಚುಂಚನಗಿರಿ ಶಾಲೆ ಹಾಗೂ ಮಠ ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳೆಂದು ಇಲ್ಲಿ ಸುಮಾರು 750 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿ ಉಪಯೋಗಿಸುವ ನೀರನ್ನು ರಸ್ತೆಗೆ ಬಿಡುತ್ತಿದ್ದು ಹಾಗೂ ತೆರೆದ ಚರಂಡಿಯಲ್ಲಿ ಶೌಚಾಲಯ ಹಾಗೂ ಇತರ ಕೊಳಚೆ ನೀರು ಹರಿಯುತ್ತಿದ್ದು, ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ ವಾಸನೆಯಿಂದಾಗಿ ಮೂಗು ಹಿಡಿದು ಹೋಗಬೇಕಾಗುತ್ತದೆ. ಈ ಪರಿಸ್ಥಿತಿಯು […]