Blog Archive

ಕಟೀಲು ದೇವಿಗೆ ಅವಹೇಳನ ಮಾಡಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಬೇಕು: ಐವನ್‌ ಡಿ’ಸೋಜಾ

Monday, September 12th, 2016
ivan-dsouza

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಟೀಲು ದೇವಿಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಶೀಘ್ರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಬೇಕು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಆತ ಪ್ರಕರಣದ ಪ್ರಮುಖ ಆರೋಪಿಗಳ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಆದುದರಿಂದ ಪೊಲೀಸ್‌ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಈ ಬಗ್ಗೆ ನಾನು ಈಗಾಗಲೇ ಮುಖ್ಯಮಂತ್ರಿ […]

ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಲಾಗುವುದು: ಡಿ.ವಿ.ಎಸ್

Tuesday, August 23rd, 2016
Sadananda-gouda

ಮಂಗಳೂರು: ಭಾರತೀಯ ಜನತಾ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಮಂಗಳವಾರ ದಿಲ್ಲಿಯಲ್ಲಿ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ಅವರು ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ನಾಯಕರು ಒಟ್ಟಾಗಿ ಶ್ರಮಿಸಲಿದ್ದಾರೆ ಎಂದರು. ಪಕ್ಷದೊಳಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ನಿಜ. ಆಗಸ್ಟ್‌ 23ರಂದು ದಿಲ್ಲಿಯಲ್ಲಿ ನಡೆಯುವ ಪಕ್ಷದ ಕೋರ್‌ ಕಮಿಟಿ […]

ಶಬರಿಮಲೆ ಸೇವಾ ಮತ್ತು ಪ್ರಸಾದಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುಧ್ದ ಪ್ರತಿಭಟನೆ

Tuesday, August 23rd, 2016
Shabarimale protest

ಪೆರ್ಲ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಪೆರ್ಲ ಇದರ ನೇತೃತ್ವದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ವಠಾರದಲ್ಲಿ ಶಬರಿಮಲೆ ಸೇವಾ ಮತ್ತು ಪ್ರಸಾದಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುಧ್ದ ಪ್ರತಿಭಟನಾ ಸಭೆ ಭಾನುವಾರ ನಡೆಯಿತು. ಶಬರಿಮಲೆ ದೇಶವ್ಯಾಪಿ ಪ್ರಸಿಧ್ಧಿ ಪಡೆದ ಕ್ಷೇತ್ರವಾಗಿದ್ದು ಸರಕಾರದ ಖಜಾನೆಗೆ ಕೋಟಿ ಆದಾಯ ಬರುತ್ತಿದೆ. ಹಾಗಿದ್ದರೂ ಮತ್ತೂ ಬೆಲೆ ಏರಿಕೆ ನಡೆಸಿದ್ದು ರಾಜ್ಯಸರಕಾರದ ನಿಲುವು ಖಂಡನೀಯ. ಈ ಬಗ್ಗೆ ಹಿಂದೂ ಸಂಘಟನೆಗಳು, ಅಯ್ಯಪ್ಪ ಭಕ್ತವೃಂದಗಳು ರಾಜಕೀಯ ಬೇಧ ಮರೆತು ಪ್ರತಿಭಟಿಸಬೇಕಾದ […]

ಅಪ್ರಸ್ತುತ ಭೂದಾಖಲೆ ನೋಂದಾವಣಾ ಶುಲ್ಕ ಏರಿಕೆ ನ್ಯಾಯವಲ್ಲ-ಹಕೀಂ ಕುನ್ನಿಲ್

Friday, August 12th, 2016
Bhudakhale-nondavani

ಕುಂಬಳೆ: ಭೂ ದಾಖಲೆಗಳ ನೋಂದಾವಣಿ ಮತ್ತು ದಾನಪತ್ರ,ಪಾಲುಪಟ್ಟಿ ಮೊದಲಾದ ಅತ್ಯಾವಶ್ಯಕ ವಿಚಾರಗಳಲ್ಲಿ ನೂತನ ರಾಜ್ಯ ಸರಕಾರ ಅಪರಿಮಿತ ಶುಲ್ಕ ಏರಿಕೆಗೊಳಿಸಿ ಅನ್ಯಾಯವೆಸಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಟೀಕೆ ವ್ಯಕ್ತಪಡಿಸಿದರು. ಕುಂಬಳೆ ಬ್ಲಾಕ್ ಕಾಂಗ್ರೆಸ್ಸ್ ಸಮಿತಿಯ ನೇತೃತ್ವದಲ್ಲಿ ಗುರುವಾರ ರಾಜ್ಯ ಸರಕಾರದ ಹೊಸ ಅಪ್ರಬುದ್ದ ಭೂದಾಖಲೆ ನೋಂದಾವಣಿ ಕಾನೂನಿಗೆದುರಾಗಿ ಕುಂಬಳೆ ಸರ್ವೇ ಕಾರ್ಯಾಲಯಕ್ಕೆ ನಡೆಸಿದ ಮಾರ್ಚ್‌ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನ ಸಾಮಾನ್ಯರಲ್ಲಿ ಕುಟುಂಬದ ಆಸ್ತಿಗಳ ಪಾಲುಮಾಡಿಕೊಳ್ಳುವುದು,ತಂದೆ ಮಕ್ಕಳಿಗೆ ಆಸ್ತಿಯನ್ನು ದಾನಪತ್ರ ಮಾಡಿಕೊಡುವುದು ಮೊದಲಾದವುಗಳಿಗೆ […]

ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ

Thursday, November 14th, 2013
BJP-YM

ಮಂಗಳೂರು: ಮಂಗಳೂರು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತೊಕ್ಕೊಟ್ಟು-ಬಬ್ಬುಕಟ್ಟೆವರೆಗಿನ ರಸ್ತೆಯ ದುರಸ್ತಿಯನ್ನು ಖಂಡಿಸಿ  ಬುಧವಾರ ನಗರದ ತೊಕ್ಕೊಟ್ಟಿನಲ್ಲಿ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಜಯರಾಂ ಶೆಟ್ಟಿ ಮಾತನಾಡಿ, ಒಳಚರಂಡಿ ಕಾಮಗಾರಿಗಾಗಿ ತೊಕ್ಕೊಟ್ಟಿನಿಂದ ಬಬ್ಬುಕಟ್ಟೆವರೆಗೆ ಅಗೆಯಲಾಗಿರುವ ರಸ್ತೆ ದುರಸ್ಥಿಪಡಿಸುವಂತೆ ಒತ್ತಾಯಿಸಿ , ರಾಜ್ಯ ಸರಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ತೊಕ್ಕೊಟ್ಟಿ ನಿಂದ ಬಬ್ಬುಕಟ್ಟೆವರೆಗಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಆರು ತಿಂಗಳ ಹಿಂದೆಯೂ ನಡೆದಂತಹ ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿ ರುವ ಭರವಸೆಗಳು ಇನ್ನೂ ಈಡೇರಿಲ್ಲ. ಎಡಿಬಿಯಿಂದ ಲೋಕೋಪಯೋಗಿ ಇಲಾಖೆಗೆ […]

ರಾಜ್ಯ ಸರಕಾರ ಬರಪೀಡಿತ ಪ್ರದೇಶಗಳಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ : ಮೊಯ್ಲಿ

Monday, April 16th, 2012
Veerappa Moily

ಮಂಗಳೂರು : ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಖಾತೆ ಸಚಿವ ಡಾ| ಎಂ. ವೀರಪ್ಪ ಮೊಲಿ ಅವರು ಭಾನುವಾರ ಮಂಗಳೂರಿನಲ್ಲಿ ವಿಶ್ವ ದೇವಾಡಿಗ ಸಮಾಜದ  ಸಭೆಯಲ್ಲಿ ಪತ್ರಕರ್ತರ ಪಶ್ನೆಗಳಿಗೆ ಉತ್ತರಿಸಿ ರಾಜ್ಯದ 123 ತಾಲೂಕುಗಳು ಬರಪೀಡಿತವಾಗಿವೆ ಎಂದು ಮೂರು ತಿಂಗಳ ಹಿಂದೆ ಸರಕಾರ ಗುರುತಿಸಿದ್ದು, ಬಳಿಕ ಪರಿಸ್ಥಿತಿ ನಿಬಾಯಿಸಲು ಯಾವುದೇ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಬಂಧಿಸಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದವರು ಅವರದೇ ತಾಪತ್ರಯ, ಅಂತಃಕಲಹಗಳಲ್ಲಿ ಮುಳುಗಿದ್ದರು. ವಿಷಯ ತಿಳಿದು ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರದ […]

ಜಿಲ್ಲಾಧಿಕಾರಿ ಪೊನ್ನುರಾಜ್ ವರ್ಗಾವಣೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

Wednesday, November 3rd, 2010
ಜಿಲ್ಲಾಧಿಕಾರಿ ಪೊನ್ನುರಾಜ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ಅವರ ಶಿವಮೊಗ್ಗ ವರ್ಗಾವಣೆಯ ಆದೇಶವನ್ನು ರಾಜ್ಯ ಸರಕಾರ ರದ್ದುಗೊಳಿಸಿದ್ದು ಪಂಕಜ್‌ಕುಮಾರ್ ಪಾಂಡೆ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿಯೇ ಮುಂದುವರಿಸಲು ಸೂಚಿಸಿದೆ. ಇವರ ಜೊತೆ ವರ್ಗಾವಣೆಗೊಂಡ ಇನ್ನು ಮೂರು ಜನ ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ದ.ಕ ಜಿಲ್ಲಾಪಂಚಾಯತ್ ಸಿಇಓ ಪಿ ಶಿವಶಂಕರ್ ಅವರ ಆದೇಶವನ್ನು ತಡೆ ಹಿಡಿಯಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ವಿ.ಬಿ.ಪಾಟೀಲರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. […]