Blog Archive

ಬಿಜೆಪಿಯದ್ದು ಕೌರವರ ಪಕ್ಷ, ಕಾಂಗ್ರೆಸ್‌ ಪಾಂಡವರ ಪಕ್ಷ: ರಾಹುಲ್‌ ಗಾಂಧಿ ವಾಗ್ದಾಳಿ

Wednesday, March 21st, 2018
rahul-gandhi

ಮಂಗಳೂರು: ಬಿಜೆಪಿ ಕೌರವರ ಪಕ್ಷ, ಕಾಂಗ್ರೆಸ್ ಪಾಂಡವರ ಪಕ್ಷ. ಬಿಜೆಪಿಯದ್ದು ಸುಳ್ಳಿನ ಹಾದಿ, ಕಾಂಗ್ರೆಸ್‌ನದ್ದು ಸತ್ಯದ ನಡೆ ಎಂದು ಇಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಬ್ಬರಿಸಿದರು. ಕರಾವಳಿ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್, ಜನಾಶೀರ್ವಾದ ರೋಡ್ ಶೋ ನಡೆಸಿದ ಬಳಿಕ ನೆಹರೂ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು. ಕೌರವರಿಗೆ ಯುದ್ಧ ಗೆಲ್ಲಲು ಬೇಕಾದ ಎಲ್ಲ ತಂತ್ರಗಳು, ಸೈನ್ಯ ಬಲವೂ ಇತ್ತು. ಕೊನೆಗೆ ಸತ್ಯದ ಹಾದಿಯಲ್ಲಿ ಪಾಂಡವರು ಗೆದ್ದರು […]

ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ : ಐವನ್ ಡಿ. ಸೋಜಾ

Tuesday, March 20th, 2018
ivan-dsouza

ಮಂಗಳೂರು: ಬಿಜೆಪಿ, ಕೆಜೆಪಿ ಇನ್ನೂ ಜೀವಂತವಾಗಿದೆ. ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಬೇರೆಯವರ ಹುಳುಕು ಹುಡುಕುವುದಕ್ಕಿಂತ ಆಂತರಿಕ ಸಮಸ್ಯೆಯನ್ನು ಬಗೆಹರಿಸಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ. ಸೋಜಾ ವಾಗ್ದಾಳಿ ನಡೆಸಿದರು. ಮೂಡುಬಿದಿರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಹಣದ ಪ್ರಭಾವದ ಕುರಿತು ವೀರಪ್ಪ ಮೊಯ್ಲಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದೊಳಗಿನ ಸಮಸ್ಯೆಯನ್ನು ಹೈಕಮಾಂಡ್ ಸರಿಪಡಿಸಲಿದೆ. ಪ್ರತಿಯೊಂದರಲ್ಲಿಯೂ ಬಿಜೆಪಿ ಹುಳುಕು ಹುಡುಕುವುದು ಜಾಯಮಾನವಾಗಿದೆ ಎಂದು ಕಿಡಿಕರಿದರು.

ಸುರತ್ಕಲ್‌ನಲ್ಲಿ ರಾಹುಲ್ ಗಾಂಧಿ… ಮೋದಿ ವಿರುದ್ಧ ತೀವ್ರ ವಾಗ್ದಾಳಿ

Tuesday, March 20th, 2018
rahul-surathakal

ಮಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ದು, ಇಂದು ಕರಾವಳಿಯ ಸುರತ್ಕಲ್‌ಗೆ ಭೇಟಿ ನೀಡಿದರು. ಇಲ್ಲಿ ನಡೆದ ಬೃಹತ್‌ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕ‌‌ ಬಸವಣ್ಣ, ನಾರಾಯಣ ಗುರುಗಳು ನಡೆದಾಡಿದ ನಾಡು. ಅವರ ತತ್ವಾದರ್ಶನಗಳನ್ನು ತಮ್ಮ ಭಾಷಣದಲ್ಲಿ ಪ್ರಯೋಗಿಸುವ ಮೋದಿ ಸುಳ್ಳು ಹೇಳುತ್ತಲೇ ಬರುತ್ತಾರೆ. ಬಸವಣ್ಣನ ನುಡಿದಂತೆ ನಡೆ ತತ್ವದಂತೆ ಮೋದಿಯವರೇ ನೀವು ನಡೆದುಕೊಳ್ಳಿ ಎಂದರು. ಪ್ರಧಾನಿಯಾಗುವ ಮುನ್ನ ಪ್ರತಿಯೊಬ್ಬರ […]

ಕರಾವಳಿಗೆ ರಾಹುಲ್‌ ಗಾಂಧಿ ಆಗಮನ: ಸಿಎಂ ಸೇರಿ ಮುಖಂಡರಿಂದ ಅದ್ದೂರಿ ಸ್ವಾಗತ

Tuesday, March 20th, 2018
siddaramaih

ಉಡುಪಿ: ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರ್, ಕೆ.ಸಿ.ವೇಣುಗೋಪಾಲ್, ರಮಾನಾಥ ರೈ ಮತ್ತಿತರರು ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಿದರು. ಅಲ್ಲಿಂದ ಮತ್ತೆ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ತೆರಳಿದ ರಾಹುಲ್, ಎರ್ಮಾಳಿನ ಹೆಲಿಪ್ಯಾಡ್‌ನಲ್ಲಿ ಬಂದಿಳಿದರು. ಈ ವೇಳೆ ಹೆಲಿಪ್ಯಾಡ್‌ನಲ್ಲಿ ರಾಹುಲ್‌ ಗಾಂಧಿ ಅವರನ್ನು ಮಾಜಿ ಸಿಎಂ ವೀರಪ್ಪ ಮೊಯ್ಲಿ, […]

ಭಾರತವನ್ನು ಮುನ್ನಡೆಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ

Saturday, March 17th, 2018
rahul-gandhi

ನವದೆಹಲಿ : ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತವನ್ನು ಮುನ್ನಡೆಸಲು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. 84ನೇ ಕಾಂಗ್ರೆಸ್ ಸಮಗ್ರ ಅಧಿವೇಶನದ 2ನೇ ದಿನ ಮಾತನಾಡಿದ ಅವರು, ಭಾರತವನ್ನು ಒಗ್ಗೂಡಿಸಲು, ಮುನ್ನಡೆಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ದೇಶದ ಜನತೆ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಕೋಪವನ್ನು ಬಳಸುತ್ತಾರೆ, ನಾವು ಪ್ರೀತಿಯನ್ನು ಬಳಸೋಣ. ಇದೇ ನಮ್ಮ ಮತ್ತು […]

ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ಧತೆ

Friday, March 16th, 2018
shakuntala-shetty

ಪುತ್ತೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಬರುತ್ತಿದ್ದು, ಇದೇ 20ರಂದು ಮಂಗಳೂರಿನಲ್ಲಿ ನಡೆಯುವ ಬೃಹತ್ ರ‍್ಯಾಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಕ್ಷೇತ್ರಗಳಿಂದ ಹೆಚ್ಚಿನ ಕಾರ್ಯಕರ್ತರನ್ನು ಕರೆತಂದು ಶಕ್ತಿ ಪ್ರದರ್ಶನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಬ್ಲಾಕ್ ಕಾಂಗ್ರೆಸ್ ವಿವಿಧ ವಿಭಾಗಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ಈಗಾಗಲೇ ಪಕ್ಷದ […]

ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅಲೆ: ಯು.ಟಿ.ಖಾದರ್

Friday, March 16th, 2018
rahul-gandhi

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.20ರಂದು ನಗರಕ್ಕೆ ಆಗಮಿಸಲಿದ್ದು, ಈಗಾಗಲೇ ಜಿಲ್ಲೆಯಲ್ಲಿ ಅವರ ಪರವಾದ ಅಲೆ ಜೋರಾಗಿದೆ. ಈ ಅಲೆಯಲ್ಲಿ ಯಾರ್ಯಾರು ಕೊಚ್ಚಿ ಹೋಗಲಿದ್ದಾರೆ ಎಂಬುವುದನ್ನು ಹೇಳಲಾಗದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.20ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಕ್ಷೇತ್ರದಿಂದ ಸುಮಾರು 15000 ಮಂದಿ ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯಿಂದ ಸುಮಾರು 75000 ಮಂದಿ ಸೇರುವ ನಿರೀಕ್ಷೆ ಇದೆ. ಅದಕ್ಕಾಗಿಯೇ ವಿಶಾಲವಾದ ನೆಹರೂ […]

ರಾಹುಲ್ ಗಾಂಧಿ ಕರಾವಳಿ ಪ್ರವಾಸಕ್ಕೆ ಡೇಟ್ ಫಿಕ್ಸ್‌!

Tuesday, March 13th, 2018
Rahul-Gandhi

ಮಂಗಳೂರು: ಈಗಾಗಲೇ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಯಶಸ್ವಿ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ರಾಜ್ಯ ಕರಾವಳಿಯಲ್ಲೂ ಪ್ರಚಾರ ಕೈಗೊಳ್ಳುವ ದಿನ ನಿಗದಿಯಾಗಿದೆ. ಮಾರ್ಚ್‌ 20 ಹಾಗೂ 21ರಂದು ರಾಹುಲ್ ಗಾಂಧಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲು ಉದ್ದೇಶಿಸಿದೆ. ಪಕ್ಷದ ಪ್ರಮುಖರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಾರ್ಚ್ 20ರಂದು ಕರಾವಳಿ ಜಿಲ್ಲೆಗೆ ಆಗಮಿಸಿ ರಾಹುಲ್ ಗಾಂಧಿ ಮಂಗಳೂರಿನಲ್ಲಿಯೇ […]

ನಾನು ಹಿಂದೂ ಭಕ್ತ… ಈದ್‌‌ ಯಾಕೆ ಆಚರಿಸಬೇಕು?: ಯೋಗಿ ಆದಿತ್ಯನಾಥ್‌

Wednesday, March 7th, 2018
uttar-pradesh

ಲಕ್ನೋ: ನಾನು ಒಬ್ಬ ಹಿಂದೂ ಭಕ್ತ… ನಮ್ಮ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದ್ದು, ನಾನು ಈದ್‌ ಹಬ್ಬ ಯಾಕೆ ಆಚರಣೆ ಮಾಡಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿರುವ ಯೋಗಿ ಆದಿತ್ಯನಾಥ್‌, “ನಾನು ಹಿಂದೂ ಧರ್ಮದವನಾಗಿದ್ದು, ಹೀಗಾಗಿ ಈದ್‌ ಆಚರಿಸುವುದಿಲ್ಲ. ನನ್ನ ಸ್ವಂತ ಧರ್ಮದಲ್ಲಿ ನಾನು ಹೆಮ್ಮೆ ಪಡುತ್ತೇನೆ… ಇಷ್ಟಕ್ಕೂ ನಾನು ಏಕೆ ಈದ್ ಆಚರಿಸಬೇಕು? ಎಂದಿದ್ದಾರೆ. ಇದೇ ವೇಳೆ ಅವರು […]

ಮಾರ್ಚ್‌ನಲ್ಲಿ ದಕ್ಷಿಣ ಕನ್ನಡ ಪ್ರವಾಸ ಕೈಗೊಳ್ಳಲಿದ್ದಾರೆ ರಾಹುಲ್ ಗಾಂಧಿ

Wednesday, February 28th, 2018
rahul-gandhi

ಮಂಗಳೂರು: ಮುಂಬೈ-ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಪ್ರವಾಸದ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಕ್ಷಿಣ ಕನ್ನಡ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ಮಾರ್ಚ್ 10ಕ್ಕೂ ಮೊದಲು ರಾಹುಲ್ ಜಿಲ್ಲೆಯಲ್ಲಿ ಸಂಚಾರ ನಡೆಸಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಟಕೇಶ್ ಈ ಕುರಿತು ಮಾಹಿತಿ ನೀಡಿದರು. ‘ಮಾರ್ಚ್ ಮೊದಲ ವಾರದಲ್ಲಿ ರಾಹುಲ್ ಗಾಂಧಿ ಉಡುಪಿ ಮತ್ತು ದಕ್ಷಿಣ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ’ ಎಂದರು. ಸವದತ್ತಿ ಯಲ್ಲಮ್ಮನಿಗೆ ಉಘೇ ಎಂದು ಎಐಸಿಸಿ ಅಧ್ಯಕ್ಷ ರಾಹುಲ್! ‘ಮೂರು ಅಥವ […]