ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಜೀವನದೆಡೆಗೆ ನಡಿಗೆ

Friday, September 7th, 2018
Sucide

ಮಂಗಳೂರು  : ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಸಂತ ಆಗ್ನೆಸ್ ಕಾಲೇಜು, ಸಂತ ಅಲೋಶಿಯಸ್ ಕಾಲೇಜು, ರೋಶನಿ ನಿಲಯ ಮತ್ತು ಅನೇಕ ಸಾಮಾಜಿಕ ಕಳಕಳಿಯುಳ್ಳ ನಾಗರೀಕರು ಮತ್ತು ಲೋಕೋಪಕಾರಿಗಳ ಬೆಂಬಲದೊಂದಿಗೆ, ಸುಶೆಗ್ ಚ್ಯಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಸ್ಥಾಪಿತವಾದ ಮಂಗಳೂರಿನ ಆತ್ಮಹತ್ಯೆ ಲೈಫ್‌ಲೈನ್ ಅಕ್ಟೋಬರ್ 2017 ರಂದು ಕಾರ್ಯಚರಣೆಗೆ ಬಂದಿತು. ಆತ್ಮಹತ್ಯೆ ತಡೆಗಟ್ಟುವಿಕೆ, ಮಾನಸಿಕ ಆರೋಗ್ಯದ ವಿಕಾಸ, ಜಾಗೃತಿ ಮೂಡಿಸುವುದು, ಸಮಾಜಿಕ ಜಾಗೃತಿ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾಹಿತ್ಯ ಪ್ರಕಟನೆ, ಸ್ವಯಂ ಸೇವಕರ ತರಬೇತಿ ಈ ಸುಸಾಯ್ಡ್ ಲೈಫ್ ಲೈನ್‌ನ ಉದ್ದೇಶಗಳಾಗಿವೆ. […]

ನೆರೆಹೊರೆಯವರನ್ನು ಜೊತೆ ಸೇರಿಸಿ ರೋಶನಿ ನಿಲಯ ವತಿಯಿಂದ ನೇಬರ್‌ಹುಡ್ ಸಭೆ

Saturday, August 25th, 2018
Roshani Nilaya

ಮಂಗಳೂರು : ನೆರೆಹೊರೆಯವರನ್ನು ಜೊತೆ ಸೇರಿಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರೋಶನಿ ನಿಲಯದ ಕುಟುಂಬ ಸೇವಾ ಸಂಸ್ಥೆ ಹಾಗೂ ಪೋಲಿಸ್ ಠಾಣೆ ಪಾಂಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ವೆಲೆನ್ಸಿಯಾ ಪರಿಸರದ ನೇಬರ್ ಹುಡ್ ಸಭೆಯನ್ನು ಆಯೋಜಿಸಲಾಯಿತು. ಪಾಂಡೇಶ್ವರ ಪೋಲಿಸ್ ಠಾಣೆಯ ಕಾನ್‌ಸ್ಟೇಬಲ್ ಚಂದ್ರಶೇಖರ್ ಜನ ಸ್ನೇಹಿ ಪೋಲಿಸ್ ಬಗ್ಗೆ ತಿಳಿಸುತ್ತಾ ಸ್ಮಾರ್ಟ್ ಫೋನ್ ಬಳಕೆದಾರರು ಪೊಲೀಸ್ ಆಪ್ ಮೂಲಕ ಪೊಲೀಸ್ ಠಾಣೆಯ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು, ಟ್ರಾಫೀಕ್ ಸಮಸ್ಯೆಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಕುಡ್ಲ ಟ್ರಾಫೀಕ್ […]

ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ

Sunday, August 24th, 2014
ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ

ಮಂಗಳೂರು : ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನ ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ ಎಂದು ರೋಶನಿ ನಿಲಯದಲ್ಲಿ ನಡೆದ ಸಮಾಜ ಕಾರ್ಯ ಮತ್ತು ಶಿಕ್ಷಣಕ್ಕೆ ಸಂಭಂಧಪಟ್ಟ ವಿಚಾರಗೋಷ್ಠಿಯಲ್ಲಿ ಸಮಾಜ ಕಾರ್ಯ ವಿಧ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಡಿ ಸಂಸ್ಥೆ ಹಾಗೂ ರೋಶನಿ ನಿಲಯ ಸಹಭಾಗಿತ್ವದಲ್ಲಿ ಆಯೋಜಿಸಿದ ಎಂ.ಎಸ್.ಡಬ್ಲು ಕ್ಷೇತ್ರ ಅಧ್ಯಯನದ ಪೂರ್ವಸಿದ್ದತಾ ಕಾರ್ಯಕ್ರಮವನ್ನು ಆಗಸ್ಟ್ 24 ರಂದು ನಡೆಸಲಾದ ಸಂದರ್ಭದಲ್ಲಿ ಫ್ರೊಫೆಸರ್ ರೀಟಾ ನರೋನ್ಹಾ ರವರು ಭಾಗವಹಿಸಿ, ಸಮಾಜ ಕಾರ್ಯ ಅಧ್ಯಯನಕ್ಕೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ […]

ರೋಶನಿ ನಿಲಯದಲ್ಲಿ ಎನ್.ಎಸ್.ಎಸ್ ಘಟಕದ ವನಮಹೋತ್ಸವ ಮತ್ತು ವಾರ್ಷಿಕ ಕಾರ್ಯಕ್ರಮಗಳಿಗೆ ಚಾಲನೆ

Monday, July 8th, 2013
Roshani Nilaya NSS Programme

ಮಂಗಳೂರು : ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನೆ, ಎನ್.ಎಸ್.ಎಸ್ ಘಟಕದ ವತಿಯಿಂದ 2013-14ನೇ ಸಾಲಿನ ವಾರ್ಷಿಕ ಯೋಜನೆಗಳ ಉದ್ಘಾಟನೆ ಮತ್ತು ವನಮಹೋತ್ಸವ ಆಚರಣೆ ಜುಲೈ 8, ಸೋಮವಾರ ಮರಿಯಾ ಪೈವಾ ಕುಸೇರಿಯೋ ಸಭಾಂಗಣ, ರೋಶನಿ ನಿಲಯ, ಮಂಗಳೂರು ಇಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಮತ್ತು ಪರಿಸರ ಸಚಿವ ಬಿ. ರಮಾನಾಥ ರೈ ವನಮಹೋತ್ಸವ ಮತ್ತು ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಾನು […]

ರೋಶನಿ ನಿಲಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಏಳನೇ ವರ್ಷಾಚರಣೆ

Saturday, October 13th, 2012
RTI Act

ಮಂಗಳೂರು : ವೈಟ್ ವಿಸ್ಟಲ್  ಮಂಗಳೂರು, ಸೋಶಿಯಲ್ ಚೇಂಜ್ ಮ್ಯಾನೇಜ್ ಮೆಂಟ್ ಪೋರಮ್, ಸ್ಕೂಲ್ ಅಪ್ ಸೋಶಿಯಲ್  ವರ್ಕ್ಸ್ ರೋಶನಿ ನಿಲಯ ಇವುಗಳ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಇಂದು ಬೆಳಿಗ್ಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ಏಳನೇ ವರ್ಷಾಚರಣೆಯ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ರವೀಂದ್ರ ಶಾನ್ ಭೋಗ್, ವಿದ್ಯಾವಂತರು ಮಾಹಿತಿಯನ್ನು ಪಡೆದುಕೊಳ್ಳುವುದು ಸುಲಭ. ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಬಗ್ಗೆ ಅರಿವಿರುವುದಿಲ್ಲ. ಅದನ್ನು ತಿಳಿಯಪಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. […]

ಹೆಚ್.ಐ.ವಿ ಬಗ್ಗೆ ಭಯ ಬೇಡ, ತಿಳುವಳಿಕೆ ಬೇಕು : ಡಾ. ಓ. ಆರ್. ಶ್ರೀರಂಗಪ್ಪ

Wednesday, December 1st, 2010
ಡಾ. ಓ. ಆರ್. ಶ್ರೀರಂಗಪ್ಪ

ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ದ.ಕ ಇದರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ರೆಡ್ ರಿಬ್ಬನ್ ಕ್ಲಬ್ಗಳು ಮತ್ತು ಸ್ಕೂಲ್ ಆಫ್ ಸೋಷಿಯಲ್ ವರ್ಕ್ಸ್, ರೋಶನಿ ನಿಲಯ, ಮಂಗಳೂರು ವತಿಯಿಂದ ಇಂದು ನಗರದ ರೋಶನಿ ನಿಲಯದಲ್ಲಿ ವಿಶ್ವ ಏಡ್ಸ್ ದಿನಾಚರಣೆಯು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ. ಡಾ. ಓ. ಆರ್. ಶ್ರೀರಂಗಪ್ಪ, ಜಿಲ್ಲಾ […]