ಕುಂಬಳೆ: ಕೇರಳ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ನಗರದ ನಗರಸಭಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮ ಸಾವಿರಾರು ಕಾರ್ಯಕರ್ತರ ಸಂಭ್ರಮದೊಂದಿಗೆ ಮುಗಿಲು ಮುಟ್ಟಿತು. ಬೆಳಿಗ್ಗೆ 8.30ರ ವೇಳೆಗೆ ಕ್ರೀಡಾಂಗಣದತ್ತ ಆಗಮಿಸ ತೊಡಗಿದ ವಿವಿಧೆಡೆಗಳ ಕಾರ್ಯಕರ್ತರ ತಂಡ ಮೋದಿಯವರಿಗೆ ಘೋಷಣೆ ಕೂಗುತ್ತಿರುವುದು ಕಂಡುಬಂತು.9.30ರ ವೇಳೆಗೆ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. ಸುಮಾರು 55 ಸಾವಿರಕ್ಕಿಂತಲೂ ಅಧಿಕ ಮಂದಿ ಮೋದಿಯವರ ಪ್ರಚಾರ ಭೇಟಿಗೆ ಸಾಕ್ಷಿಯಾದರು.ಕಾಸರಗೋಡು ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರ,ಕಣ್ಣೂರು ಜಿಲ್ಲೆ […]
ಕುಂಬಳೆ: ರಾಜ್ಯದಲ್ಲಿ ಅನಿವಾರ್ಯ ರಾಜಕೀಯ ಬದಲಾವಣೆಗೆ ಕಾಲ ಸನ್ನಿಹಿತವಾಗಿದ್ದು, ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅನುಕೂಲಕರ ವಾತಾವರಣ ಹಿಂದಿಗಿಂತ ಇಂದು ಅತಿ ಹೆಚ್ಚಿದೆಯೆಂದು ಮಲೆಯಾಳಂ ಚಲನಚಿತ್ರ ತಾರೆ, ಭರತ್ ಸುರೇಶ್ ಗೋಪಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಬೃಹತ್ ಚುನಾವಣಾ ಪ್ರಚಾರ ಸಭೆಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಕಳೆದ 60 ವರ್ಷಗಳ ಎಡ,ಬಲ ರಂಗಗಳ ಸ್ವಾರ್ಥ ಲಾಲಸೆಯ […]
ಮಂಗಳೂರು : ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್, ಬಿಜೆಪಿ ಪಕ್ಷದ ಹಿರಿಯ ನಾಯಕರು ಸೇರಿದಂತೆ ಚಿತ್ರ ನಟ ನಟಿಯರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಶುಕ್ರವಾರ ಕಾಂಗ್ರೆಸ್ ಪರ ನಗರದಲ್ಲಿ ಮತಯಾಚನೆ ಸಲುವಾಗಿ ಆಗಮಿಸಿದ ಕನ್ನಡ ಚಿತ್ರ ನಟಿ ರಮ್ಯ ಮಂಗಳೂರಿನ ತೊಕ್ಕೋಟು ಆಸುಪಾಸಿನಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ಕೈಗೊಂಡರು. ಪ್ರಚಾರಕ್ಕು ಮುನ್ನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮ ಆಡಳಿತ ಹಾಗು […]
ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೊ ರವರನ್ನು ಬೆಂಬಲಿಸುವಂತೆ ಬುಧವಾರ ಜಿಲ್ಲಾ ಕಾಂಗ್ರೆಸ್ ನ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಆಶ್ರಯದಲ್ಲಿ ಬುಧವಾರ ನಡೆದ ವಕೀಲರ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಹಿರಿಯ ವಕೀಲರಾದ ಸೀತಾರಾಮ ಶೆಟ್ಟಿ, ಪುರುಷೋತ್ತಮ ಪೂಜಾರಿ, ವೆಲೆಂಟೈನ್ ಡಿ’ಸಿಲ್ವಾ, ನಾರಾಯಣ ಪೂಜಾರಿ, ಬಿ. ಇಬ್ರಾಹಿಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಎಂ.ಪಿ. ಶೆಣೈ, ರಾಜೇಂದ್ರ ಕುಮಾರ್, ಎಂ.ಪಿ. ನೊರೋನ್ಹಾ ಉಪಸ್ಥಿತರಿದ್ದು, ಜೆ.ಆರ್. ಲೋಬೊ ಅವರಿಗೆ ಬೆಂಬಲ […]
ಮಂಗಳೂರು : ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 117 ಸ್ಥಾನವನ್ನು ಪಡೆಯುವುದಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದಾಗಿ ವಾರ್ತಾಮಿತ್ರ ಕನ್ನಡ ಮಾಸ ಪತ್ರಿಕೆ ಸಂಪಾದಕ ಅಕ್ಬರ್ ಉಳ್ಳಾಲ್ ಭವಿಷ್ಯ ನುಡಿದಿದ್ದಾರೆ. ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುರಿತು ಮಾತನಾಡಿದ ಅವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪಕ್ಷದ ಹಿರಿಯ ನಾಯಕರು ಹಾಗು ಕಾರ್ಯಕರ್ತರ ನಡುವಿನ ಭಿನಾಭಿಪ್ರಾಯಗಳು ಮತ್ತು ಅನ್ಯ ಪಕ್ಷಗಳ ಕೆಲವು ಪಕ್ಷಾಂತರ ನಾಯಕರು ವಲಸೆ ಬಂದಿರುವುದು ಕಾರಣವಾಗಿದೆ. ಆದರೆ […]
ಮಂಗಳೂರು : ರಾಜ್ಯ ಸರಕಾರ ಮತ್ತು ಎಲ್ಲ ಪಕ್ಷಗಳ ಕಸರತ್ತಿನ ಮಧ್ಯೆಯೂ ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಲೋಕಲ್ ಇಲೆಕ್ಷನ್ ಗೆ ದಿನಾಂಕ ನಿಗದಿಪಡಿಸಿದೆ. ಅದು ವಿವಿಧ ಪಕ್ಷಗಳ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಇಂಜೆಕ್ಷನ್ ಚುಚ್ಚಿದಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್… ಹೀಗೆ ನಾನಾ ಪಕ್ಷಗಳಲ್ಲೂ ಆಕಾಂಕ್ಷಿಗಳ ಸಾಲು ಉದ್ದಕ್ಕೆ ಬೆಳೆದಿದೆ. ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಬಂಟ್ವಾಳ, […]
ಮಂಗಳೂರು :ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿ ಜಯಭೇರಿ ಭಾರಿಸಿದೆ ಈ ಹಿನ್ನಲೆಯಲ್ಲಿ ಮಂಗಳೂರು ಬಿಜೆಪಿ ಕಚೇರಿ ಮುಂಭಾಗದಲ್ಲಿ ನೆರೆದ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚುವುದದರ ಮೂಲಕ ಸಂಭ್ರಮ ಆಚರಿಸಿದರು. ಬಿಜೆಪಿ ನಗರಸಮಿತಿ ಅಧ್ಯಕ್ಷರಾದ ಶ್ರೀಕರ ಪ್ರಭು ಮಾತನಾಡಿ, ನರೇಂದ್ರ ಮೋದಿ ದೇಶ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ತಮ್ಮ ಅಭಿವೃದ್ದಿ ಕಾರ್ಯಗಳಿಂದಲೇ ಗುಜರಾತಿನ ಹಾಗೂ ದೇಶದ ಜನರ ಮನಸ್ಸನ್ನು ಗೆದ್ದಿದ್ದಾರೆ. ವಿರೋಧ […]