ಮಂಗಳೂರು : ಡಿಕೆಶಿ ಬಂಧನ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Wednesday, September 4th, 2019
pratibhatane

ಮಂಗಳೂರು : ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಬಂಧನ ವಿರೋಧಿಸಿ ಕೈ ಕಾರ್ಯಕರ್ತರು ಹಲವೆಡೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರು ಸೇರಿದಂತೆ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ದ.ಕ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ, ಕಾಂಗ್ರೆಸ್-ಜೆಡಿಎಸ್‌ನ 17 ಶಾಸಕರನ್ನು ಕೋಟಿ ಕೋಟಿ ಆಮಿಷ ನೀಡಿ ಮುಂಬೈಗೆ ಕಳುಹಿಸಿದಾಗ ಇಡಿ, ಐಟಿ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು. ಮಾಜಿ ಸಚಿವ […]

ಮುಂದಿನ ಬಾರಿ ಸ್ಪರ್ಧಿಸಲ್ಲ: ಶಕುಂತಳಾ ಶೆಟ್ಟಿ

Thursday, May 17th, 2018
shakuntala-shetty

ಪುತ್ತೂರು: ಮುಂದಿನ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಹೊಸ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಲಾಗುವುದು. ತಾನು ಸ್ಪರ್ಧಿಸುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಘೋಷಿಸಿದ್ದಾರೆ. ಪುತ್ತೂರು ಖಾಸಗಿ ಬಸ್‌ ನಿಲ್ದಾಣ ಸಮೀಪದ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಇದುವರೆಗೆ ನಾಲ್ಕು ಸಲ ಸೋತಿದ್ದೇನೆ. ಈ ಸೋಲಿನಿಂದ ಕಂಗೆಟ್ಟಿಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ. ಸದ್ಯದಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆಸುತ್ತೇನೆ ಎಂದರು. ಯಾರಿಗೂ ನೋವು ಕೊಡಬೇಡಿ, ಅಕ್ರಮಗಳಲ್ಲಿ ಭಾಗಿಯಾಗಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತನ್ನೂ ಹೇಳಿದರು. […]

ಪುತ್ತೂರಿನ ಜನಪ್ರಿಯ ಶಾಸಕಿ ಶಕುವಕ್ಕ

Friday, May 11th, 2018
shakuntala-shetty

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎರಡನೇ ದೊಡ್ಡನಗರ ಪುತ್ತೂರು ಹೇಳಿ ಕೇಳಿ ಬಿಜೆಪಿ ಭದ್ರಕೋಟೆ.1994ರಿಂದ 2008ರ ವರೆಗೆ ಇಲ್ಲಿ ಬಿಜೆಪಿಯದ್ದೇ ರಾಜ್ಯಭಾರ.ಅದಕ್ಕೂ ಮೊದಲು ಇಲ್ಲಿ ಪರಿವಾರದ ಶಾಸಕರೇ ಆಯ್ಕೆ ಆಗಿದ್ದರು. ಕಳೆದ ಬಾರಿ ಬಿಜಪಿಯಿಂದ ವಲಸೆ ಬಂದ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಪುತ್ತೂರನ್ನು ಗೆದ್ದು ಕೊಟ್ಟರು. ಒಂದು ಬಾರಿ ಬಿಜೆಪಿಯಿಂದಲೂ ಆಯ್ಕೆ ಆಗಿದ್ದ ಶಕುವಕ್ಕ ಇಂದು ಪುತ್ತೂರಿನ ಜನಪ್ರಿಯ ಶಾಸಕಿ. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಶಿವರಾಮ ಕಾರಂತರ ಕಾರ್ಯಕ್ಷೇತ್ರ ಬಾಲವನ , ಬಿರುಮಲೆ […]

ವಂಚನೆಯಲ್ಲಿ ಮೋದಿ, ಯಡಿಯೂರಪ್ಪ ಸಮಾನರು: ಶಾಸಕಿ ಶಕುಂತಳಾ ಶೆಟ್ಟಿ

Thursday, May 10th, 2018
shakuntala-shetty

ಪುತ್ತೂರು: ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಪ್ರಕಾರ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದಾಗಿ ಹೇಳಿದ ಕೇಂದ್ರ ಸರಕಾರ ಅನಂತರ ಪ್ರತ್ಯೇಕವಾದಿಗಳ ಜತೆ ಸೇರಿ ಸರಕಾರ ರಚಿಸಿದೆ. ಅದೇ ರೀತಿ ಯಡಿಯೂರಪ್ಪ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ತಾವೇ ಸಿಕ್ಕಿ ಬೀಳಲಿಲ್ಲವೇ? ಎಂದು ಕಾಂಗ್ರೆಸ್‌ ಅಭ್ಯರ್ಥಿ ಶಕುಂತಳಾ ಟಿ. ಶೆಟ್ಟಿ ಪ್ರಶ್ನಿಸಿದ್ದಾರೆ. ಬುಧವಾರ ಚುನಾವಣಾ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಯಾವ […]

ಪುತ್ತೂರು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ, ಕಾಂಗ್ರೆಸ್ಸ್ ಕಾರ್ಯಕರ್ತರು ತಟಸ್ಥ

Friday, May 4th, 2018
hemanath shetty

ಪುತ್ತೂರು : ಈ ಬಾರಿ ಪುತ್ತೂರು ಕಾಂಗ್ರೆಸ್ಸ್ ನಲ್ಲಿ ಎರಡು ಬಣಗಳಾಗಿದ್ದು, ಪಕ್ಷದೊಳಗೆ ಶಕುಂತಳಾ ಶೆಟ್ಟಿಯವರನ್ನು ಸೋಲಿಸಲು ರಣತಂತ್ರ ನಡೆಯುತ್ತಿದೆ. ಅದನ್ನು ಸರಿಪಡಿಸಲು ಪುತ್ತೂರು ಚುನಾವಣಾ ಕಚೇರಿಯಲ್ಲಿ ಗುರುವಾರ ನಡೆದ ಸಭೆಗೆ ದ.ಕ ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ, ಮೈಸೂರು ವಿಭಾಗದ ಉಸ್ತುವಾರಿ ವಿಷ್ಣುನಾಥನ್ ಆಗಮಿಸಿದ್ದರು. ಅದರೂ ಭಿನ್ನಮತೀಯರು ಬಾರದೆ ಸಂಧಾನ ವಿಫಲಗೊಂಡಿದೆ. ಕಾವು ಹೇಮನಾಥ ಶೆಟ್ಟಿಯವರು ಹಾಗೂ ಪುತ್ತೂರು ನಗರಸಭೆಯ ಸದಸ್ಯರು ಶಕುಂತಳಾ ಶೆಟ್ಟಿಯವರನ್ನು ಬೆಂಬಲಿಸದೆ, ಪಚಾರಕ್ಕೂ ಹೋಗದೆ […]

ದೈವಾರಾಧನೆಯ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವುದು ಮಹತ್ವದ ಕಾರ್ಯ : ಶಕುಂತಳಾ ಶೆಟ್ಟಿ

Monday, February 19th, 2018
shakuntala

ಪುತ್ತೂರು: ದೈವಾರಾಧನೆಯು ಸಮಾನತೆಯ ಸಂಕೇತವಾಗಿ ದೈವಾರಾಧನೆ ನಡೆಯುತ್ತದ್ದು, ದೈವಾರಾಧನೆಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ಮಹತ್ವದ ಕಾರ್ಯ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು. ಅವರು ರವಿವಾರ ಪುತ್ತೂರು ದೈವಾರಾಧಕರ ಕೂಟ ಕೇಂದ್ರ ಸಮಿತಿಯ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆದ ದೈವಾರಾಧಕರ ಪರ್ವ-2018ನ್ನು ಉದ್ಘಾಟಿಸಿದರು. ಸಮಾಜದಲ್ಲಿ ಜಾತಿ, ಮತ, ಧರ್ಮ, ಬೇಧವೆನ್ನದೆ ಬಂಧುತ್ವದ ನೆಲೆಗಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಸಂಘಟನೆಯಾಗಿ ದೈವಾರಾಧಕರ ಕೂಟ ಕೆಲಸ ಮಾಡುತ್ತಿದ್ದು, ನಮ್ಮ ಹಿರಿಯರು ಭೂತಾರಾಧನೆಯನ್ನು ಯಾವುದೇ […]

ಸಾಧನೆ ಜನರಿಗೆ ತಿಳಿಸಿ ಕಾಂಗ್ರೆಸ್‌ ಗೆಲ್ಲಿಸಿ: ಶಾಸಕಿ ಶಕುಂತಳಾ ಶೆಟ್ಟಿ

Friday, January 19th, 2018
shankuntala-shetty

ಪುತ್ತೂರು: ವಿಧಾನಸಭಾ ಕ್ಷೇತ್ರವೊಂದರ ಅಭಿವೃದ್ಧಿಗೆ 800 ಕೋಟಿ ರೂ. ಅನುದಾನ ತರಿಸುವ ಸಾಧನೆ ಮಾಡಿದ್ದು, ಪಕ್ಷದ ನರ-ನಾಡಿಗಳನ್ನು ಅರಿತಿರುವ ಕಾರ್ಯಕರ್ತರು ಮುಂದಿನ ಬಾರಿಯೂ ಕಾಂಗ್ರೆಸ್‌ ಗೆಲುವಿಗೆ ತಮ್ಮ ಶ್ರಮವನ್ನು ತೋರ್ಪಡಿಸಬೇಕು ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ವಿನಂತಿಸಿದರು. ಸುಭದ್ರಾ ಸಭಾಂಗಣದಲ್ಲಿ ಗುರುವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಬ್ಲಾಕ್‌ ವ್ಯಾಪ್ತಿಯ ಬೂತ್‌ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು. ರಾಜ್ಯ ಸರಕಾರದ ಸಾಧನಾ ಸಮಾವೇಶಕ್ಕೆ ಪುತ್ತೂರಿನಲ್ಲಿ ದಾಖಲೆಯ […]

ಮುಖ್ಯಮಂತ್ರಿ ಕಾರ್ಯಕ್ರಮ ಯಶಸ್ವಿಗಾಗಿ ಶಾಸಕರ ಗ್ರಾಮ ಭೇಟಿ

Wednesday, January 3rd, 2018
puttur

ಪುತ್ತೂರು: ಜ. 7 ರಂದು ಪುತ್ತೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆಗಮಿಸಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಗ್ರಾಮಗಳಿಗೆ ಭೇಟಿ ನೀಡಿ ಮನವಿ ಮಾಡಿದರು. ಕೆದಂಬಾಡಿ ಗ್ರಾಮ ವಲಯ ಕಾಂಗ್ರೆಸ್ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು ಅವರ ಮನೆಯಲ್ಲಿ ನಡೆದ ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ಸಮುದಾಯಕ್ಕೂ ಹಿತವಾಗಿರುವ ಸರಕಾರವನ್ನೇ ನೀಡಿದೆ. ಬಡವರ ಕಣ್ಣೀರೊರೆಸುವ ಕೆಲಸವನ್ನು ಮಾಡಿದೆ. […]

ಪುತ್ತೂರು ಪುರಸಭಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಆಯ್ಕೆ

Wednesday, October 1st, 2014
ಪುತ್ತೂರು ಪುರಸಭಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಆಯ್ಕೆ

ಪುತ್ತೂರು: ಪುತ್ತೂರು ಪುರಸಭೆಗೆ ಮಂಗಳವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸುವ ಮೂಲಕ ಬಂಡಾಯ ಅಭ್ಯರ್ಥಿ ಕಾಂಗ್ರೆಸ್‌ನ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಪುರಸಭಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅವರು 18 ಮತಗಳನ್ನು ಪಡೆದು ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸಿದರು. ಮಂಗಳವಾರ ಬೆಳಗ್ಗೆ ಕಾಂಗ್ರೆಸ್‌ನಿಂದ ಎಚ್‌. ಮಹಮ್ಮದಾಲಿ ಮತ್ತು ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಹಾಗೂ ಬಿಜೆಪಿಯಿಂದ ವಿಶ್ವನಾಥ ಗೌಡ ನಾಮಪತ್ರ ಸಲ್ಲಿಸಿದ್ದರು. ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳದೇ ಚುನಾವಣಾ ಕಣದಲ್ಲಿ […]

ಅಕ್ರಮ-ಸಕ್ರಮ ಶೀಘ್ರ ವಿಲೇವಾರಿ- ಶಾಸಕಿ ಶಕುಂತಳಾ ಶೆಟ್ಟಿ

Friday, August 22nd, 2014
Shakuntala shetty

ವಿಟ್ಲ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿರುವ ರೈತರ ಜಮೀನನ್ನು ಅಕ್ರಮ-ಸಕ್ರಮ ಕಾರ್ಯಕ್ರಮದಡಿ ಶೀಘ್ರ ವಿಲೇವಾರಿ ಮಾಡಲಾಗುವುದು. ಆದರೆ, ಕುಮ್ಕಿ ಜಮೀನು, ಬನ, ಕಾನ, ಅರಣ್ಯ ಪ್ರದೇಶಗಳನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ. ಶಾಸಕಿ ಗುರುವಾರ ವಿಟ್ಲ ಪ್ರವಾಸಿ ಮಂದಿರದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಅಕ್ರಮ ಸಕ್ರಮ ವಿಚಾರಣೆ ನಡೆಸಿದರು. ಕರ್ನಾಟಕ ಭೂಕಂದಾಯ ಕಾಯಿದೆ ಪ್ರಕಾರ […]