ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಗುರುಗಳೇ ಶಿಕ್ಷಕರು: ಸಚಿವ ಡಾ.ಕೆ.ಸುಧಾಕರ್

Monday, September 6th, 2021
Teachers Day

  ಚಿಕ್ಕಬಳ್ಳಾಪುರ :  ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಗುರುಗಳಾಗಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಶಿಕ್ಷಕ ವೃತ್ತಿಯು ಕೇವಲ ವೇತನಕ್ಕೆ ಕೆಲಸ ಮಾಡುವ ಉದ್ಯೋಗವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಜಿಲ್ಲಾಡಳಿತದಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಸಚಿವರು, ಪೊಲೀಸರು, ವೈದ್ಯರ ಕೆಲಸ ವೇತನಕ್ಕಾಗಿ ಮಾಡುವುದಲ್ಲ. ಅದೇ ರೀತಿ ಶಿಕ್ಷಕ ವೃತ್ತಿ ಕೂಡ ಒಂದು ಸೇವೆ. ಶಿಕ್ಷಕರು ಸುಮಾರು 30-35 ವರ್ಷಗಳ ವೃತ್ತಿ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ನೋಡುತ್ತಾರೆ. ಆ ವಿದ್ಯಾರ್ಥಿಗಳಲ್ಲಿ ಅನೇಕರು […]

ಪ್ರಸಕ್ತ ವರ್ಷ 5 ಸಾವಿರ ಶಿಕ್ಷಕರ ನೇಮಕ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Sunday, September 5th, 2021
CM-teachers-day

ಬೆಂಗಳೂರು:  ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 5 ಸಾವಿರ ಶಿಕ್ಷಕರ ನೇಮಕ ಮಾಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಘೋಷಿಸಿದರು. ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 5 ಸಾವಿರ ಶಿಕ್ಷಕರನ್ನು ನೇಮಕ […]

ಹಿಂದಿನ ಕಾಲದ ಶಿಕ್ಷಕರು ಜೀವನ ಸಾಫಲ್ಯತೆಯ ಮಾರ್ಗಗಳನ್ನು ಬೋಧಿಸುತ್ತಿದ್ದರು : ಪಶುಪತಿ ಶಾಸ್ತ್ರಿ

Saturday, September 8th, 2018
Pashupati

ಮೂಡುಬಿದಿರೆ : ಒಬ್ಬ ಪರಿಪೂರ್ಣ ಶಿಕ್ಷಕನಿಂದ ಮಾತ್ರ ಉತ್ತಮ ವಿದ್ಯಾರ್ಥಿಯನ್ನು ನಿರ್ಮಿಸಲು ಸಾದ್ಯ. ಹಿಂದಿನ ಕಾಲದ ಶಿಕ್ಷಕರು ಮಕ್ಕಳಿಗೆ ಕೇವಲ ವಿದ್ಯೆಯನ್ನು ಧಾರೆಯೆರೆಯುತ್ತಿರಲಿಲ್ಲ, ಅವರಲ್ಲಿ ಮಾನವೀಯ ಮೌಲ್ಯದೊಂದಿಗೆ ಜೀವನ ಸಾಫಲ್ಯತೆಯ ಮಾರ್ಗಗಳನ್ನು ಬೋಧಿಸುತ್ತಿದ್ದರು ಎಂದು ನಿವೃತ್ತ ಶಿಕ್ಷಕ ಪಶುಪತಿ ಶಾಸ್ತ್ರಿ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಆ ಕಾಲದ ಶಿಕ್ಷಕರು ತಾವು ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡುತ್ತಿದ್ದರು. ತಮ್ಮ ವಿದ್ಯಾರ್ಥಿಗಳಿಗೆ ಪ್ರೀತಿಯ ಪೆಟ್ಟು ಹಾಗು ಶಿಕ್ಷಾ […]

ಶಿಕ್ಷಕರ ದಿನಾಚರಣೆಯಂದು ಮುಂದುವರಿದ ಆರ್​ಎಂಎಸ್​ಎ ಶಿಕ್ಷಕರ ಪ್ರತಿಭಟನೆ

Wednesday, September 5th, 2018
rnss-teachers

ಮಂಗಳೂರು: ವೇತನ ಅನುದಾನ ಬಿಡುಗಡೆಗೆ ಅಗ್ರಹಿಸಿ ನಿನ್ನೆ ಧರಣಿ ನಡೆಸಿದ ಆರ್ಎಂಎಸ್ಎ ಶಿಕ್ಷಕರು ಇಂದು ಶಿಕ್ಷಕರ ದಿನಾಚರಣೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದ್ದಾರೆ. ಬೆಳ್ತಂಗಡಿ ಕ್ಷೇತ್ರ ಶಿಕ್ಣಣಾಧಿಕಾರಿ ಕಚೇರಿ ಮುಂದೆ ನಿನ್ನೆ ಧರಣಿ ಆರಂಭಿಸಿದ್ದ ಶಿಕ್ಷಕರು ಬೇಡಿಕೆ ಈಡೇರದಿದ್ದರೆ ಶಿಕ್ಷಕರ ದಿನಾಚರಣೆಯಂದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದರು. ಅದರಂತೆ ಬೆಳ್ತಂಗಡಿ ಶಿಕ್ಷಣಾಧಿಕಾರಿ ಕಚೇರಿ ಮುಂದೆ 24 ಶಿಕ್ಷಕರಿಂದ ಧರಣಿ ನಡೆಯುತ್ತಿದ್ದು, ಶಿಕ್ಷಕರ ದಿನಾಚರಣೆಯನ್ನು ಪ್ರತಿಭಟನಾ ಸ್ಥಳದಲ್ಲಿ ಸಾಂಕೇತಿಕವಾಗಿ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಧರ್ಮದ ಅಮಲು ಹತ್ತದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು : ರಮಾನಾಥ ರೈ

Tuesday, September 5th, 2017
Teachers day

ಮಂಗಳೂರು : ಚಿಕ್ಕ ಮಕ್ಕಳ ಮನಸ್ಸು ಶಿಕ್ಷಕರನ್ನು ಬಹುತೇಕವಾಗಿ ಅನುಸರಿಸುವುದರಿಂದ ಶಿಕ್ಷಕರು ಉತ್ತಮ ನಡವಳಿಕೆಯ ಮೂಲಕ ಶಾಲೆಗಳಲ್ಲಿ ಸಾಮಾಜಿಕ ಸಾಮರಸ್ಯ ಉಳಿಸುವ ನಿಟ್ಟಿನಲ್ಲಿ ಬೋಧನೆಯನ್ನು ಶಿಕ್ಷಕರು ಮಾಡಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಲಹೆ ನೀಡಿದ್ದಾರೆ. ನಗರದ ಪುರಭವನದಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಧರ್ಮದ ಅಮಲು ಹತ್ತದಂತೆ ಶಿಕ್ಷಕರು ಎಚ್ಚರಿಕೆ ವಹಿಸಬೇಕು. ದೇಶದ ಭವಿಷ್ಯಕ್ಕೆ ಉತ್ತಮ […]

ಪುರಭವನದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಸನ್ಮಾನ

Monday, September 5th, 2011
Shikshakar /ಶಿಕ್ಷಕರು

ಮಂಗಳೂರು : ದ.ಕ.ಜಿ.ಪಂ. ಸಾರ್ವಜನಿಕ ಇಲಾಖೆ, ದ.ಕ.ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಮಂಗಳೂರು ನಗರ ವಲಯ ಶಿಕ್ಷಕ ದಿನಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಸೋಮವಾರ ಜರಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಮ್ಮಾನ ಸಮಾರಂಭವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಶಿಕ್ಷಕರನ್ನು ಚುನಾವಣಾ ಸಂಬಂಧಿ ಕರ್ತವ್ಯಗಳು ಸೇರಿದಂತೆ ಇತರ ಇಲಾಖೆಗಳ ಕೆಲಸಗಳಿಗೆ ನಿಯೋಜಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ಶಿಕ್ಷಣದ ಗುಣಮಟ್ಟದ […]