ವೀರ ಮರಣವನ್ನಪ್ಪಿದ ಭಾರತೀಯ ಸೇನೆಯ ಯೋಧರಿಗೆ ಕದ್ರಿ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ

Friday, November 24th, 2023
ವೀರ ಮರಣವನ್ನಪ್ಪಿದ ಭಾರತೀಯ ಸೇನೆಯ ಯೋಧರಿಗೆ ಕದ್ರಿ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ

ಮಂಗಳೂರು : ರಾಷ್ಟ್ರಭಕ್ತ ನಾಗರಿಕರು ಮಂಗಳೂರು ಇವರ ವತಿಯಿಂದ ರಜೌರಿಯ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಸೇನೆಯ ಸಮರಕಲಿಗಳಾದ ಕ್ಯಾಪ್ಟನ್ ಎಂ ವಿ ಪ್ರಾಂಜಲ್, ಕ್ಯಾಪ್ಟನ್ ಶುಭಂ ಗುಪ್ತಾ, ಹವಾಲ್ದಾರ್ ಅಬ್ದುಲ್ ಮಜೀದ್, ಲ್ಯಾನ್ಸ್ ನಾಯಕ್ ಸಂಜಯ್ ಬಿಷ್ಟ್ ಹಾಗೂ ಪ್ಯಾರಾಟ್ರೂಪರ್ ಸಚಿನ್ ಲಾರ್ ಇವರಿಗೆ ಇಂದು ಸಂಜೆ ಕದ್ರಿ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಕ್ಯಾಪ್ಟನ್ ಬೃಜೇಶ್ ಚೌಟ, ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಕೆ ಪಿ ಟಿ […]

ನಮ್ಮನ್ನು ನಿರ್ವಹಿಸಿಕೊಂಡರೆ ಒತ್ತಡ ನಿರ್ವಹಣೆಯ ಪ್ರಶ್ನೆಯಿಲ್ಲ: ಮಮತಾ ಆಚಾರ್

Saturday, December 11th, 2021
mamatha-achar

ಮಂಗಳೂರು: ನಾವು ಒತ್ತಡವನ್ನು ನಿರ್ವಹಿಸುವ ಬದಲು  ನಮ್ಮನ್ನು ನಾವು ಚೆನ್ನಾಗಿ ನಿರ್ವಹಿಸಿಕೊಂಡರೆ ಒತ್ತಡದ ಸಮಸ್ಯೆಯೇ ಉದ್ಭವವಾಗುವುದಿಲ್ಲ, ಎಂದು ಖ್ಯಾತ ಆಪ್ತ ಸಮಾಲೋಚಕಿ ಶ್ರೀಮತಿ ಮಮತಾ ಆಚಾರ್ ಅಭಿಪ್ರಾಯಪಟ್ಟರು. ನಗರದ  ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಪ್ರಥಮ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶುದ್ಧ ಗಾಳಿ, ಉತ್ತಮ ಆಹಾರ, ಸಾಕಷ್ಟು ನೀರು, ಧ್ಯಾನ, ವ್ಯಾಯಾಮ, ಸಮಯ ನಿರ್ವಹಣೆ ನಮ್ಮನ್ನು ಒತ್ತಡದಿಂದ ದೂರವಿಡಬಲ್ಲವು. ಮುಕ್ತವಾಗಿ ಮಾತನಾಡಬಹುದಾದ ಹಳೆಯ ಸ್ನೇಹಿತರು, ಹವ್ಯಾಸಗಳೂ ನಮಗೆ ನೆರವಾಗಬಲ್ಲವು. “ಮನಸ್ಸು ಹರಿಯುವ ನೀರಿನಂತೆ […]

ದಿ. ಸುಧೀರ್ ಪುರಾಣಿಕ್ ಹಾಗೂ ದಿ. ಪ್ರದೀಪ್ ಕೋಟ್ಯಾನ್ ರವರಿಗೆ ಪುಷ್ಪ ನಮನ

Wednesday, November 17th, 2021
Karkala-BJP

ಕಾರ್ಕಳ   : ಕಾರ್ಕಳದಲ್ಲಿ ಜಾತಿ, ಮತ, ಪಕ್ಷ ಭೇದವಿಲ್ಲದ ಅಜಾತ ಶತ್ರು ಎಂಬ ಖ್ಯಾತಿಯ ಶ್ರೀ ಸುಧೀರ್ ಪುರಾಣಿಕ್ ಹಾಗೂ ಪುರಸಭಾ ಮಾಜಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ, ಬಿಲ್ಲವ ಸಮಾಜದ ಮುಂದಾಳು ಸ್ನೇಹ ಜೀವಿಯಾಗಿ ಭಾರತೀಯ ಜನತಾ ಪಕ್ಷದ ಮುಂದಾಳು ಆಗಿರುವ ಶ್ರೀ ಪ್ರದೀಪ್ ಕೋಟ್ಯಾನ್ ಇವರ ಶ್ರದ್ಧಾಂಜಲಿ ಕಾರ್ಯಕ್ರಮ, ನುಡಿನಮನ ಮತ್ತು ಪುಸ್ಪಾರ್ಚನೆ ಕಾರ್ಕಳ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ನಡೆಯಿತು. ಪಕ್ಷದ ಪ್ರಮುಖರಾದ ಬೋಳ ಪ್ರಭಾಕರ ಕಾಮತ್, ಹಿರಿಯರಾದ ರಾಮಚಂದ್ರ ನಾಯಕ್, ಕರ್ನಾಟಕ […]

ಸಂಗೀತ ಕ್ಷೇತ್ರದ ದಿಗ್ಗಜ ಕಲಾವಿದರಿಗೆ ಶ್ರದ್ಧಾಂಜಲಿ

Friday, September 24th, 2021
Kalkura

ಮಂಗಳೂರು  : ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಚೇತನಗಳಾದ ಸರೋಜಾ ರಾವ್ ಮತ್ತು ಎಂ.ಆರ್. ಸಾಯಿನಾಥ್ ಅವರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಗೀತ ಗುರುಪರಂಪರೆಯ ಶಿಕ್ಷಣ ಪದ್ಧತಿಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಶಕ್ತಿ ನೀಡಿದ ಕೆಲವೇ ಕೆಲವರಲ್ಲಿ ಸರೋಜಮ್ಮ ಒಬ್ಬರಾಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಸರೋಜಮ್ಮ ಅವರದು ನಿಷ್ಕಲ್ಮಶ ವ್ಯಕ್ತಿತ್ವವಾಗಿತ್ತು. ಇವರ ಅಗಲಿಕೆಯಿಂದ ಸಂಗೀತ […]

ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಹಳ ದುಃಖದ ದಿನ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Monday, September 13th, 2021
ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಹಳ ದುಃಖದ ದಿನ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಬೆಂಗಳೂರು  : ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬಹಳ ದುಃಖದ ದಿನ. ನಮ್ಮ ಹಿರಿಯ ನಾಯಕರಾದ, ಹಾಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ  ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಉಡುಪಿ ಪಾಲಿಕೆ ಸದಸ್ಯರಾಗಿ ರಾಜಕಾರಣ ಪ್ರಾರಂಭಿಸಿ ಸತತ ನಾಲ್ಕು ಬಾರಿ ಸಂಸತ್ ಸದಸ್ಯರಾಗಿ, ಕೇಂದ್ರದ ಮಂತ್ರಿಯಾಗಿ, ನಂತರ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಸಸ್ಯಹಾರಿಗಳು. ನಿತ್ಯ ಕನಿಷ್ಠ ಒಂದೂವರೆ ಗಂಟೆ ಯೋಗ ಮಾಡುತ್ತಿದ್ದರು. ಆರೋಗ್ಯದ ಮೇಲೆ ಅಷ್ಟು ಕಾಳಜಿ […]

ಸಂಚಾರಿ ವಿಜಯ್ ಗೆ ಶ್ರದ್ಧಾಂಜಲಿ, ಮರಣದ ಬಳಿಕ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಅಭಯಚಂದ್ರ ಜೈನ್

Friday, June 18th, 2021
Abhayachandra Jain

ಮಂಗಳೂರು  : ನಟ ಸಂಚಾರಿ ವಿಜಯ್ ಮರಣ ನಂತರವೂ ಏಳು ಜನರಿಗೆ ಅಂಗಗಳನ್ನು ನೀಡಿ ಇತರರಿಗೆ ಜೀವದಾನದ ಮಾದರಿಯಾಗಿದ್ದಾರೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಂದು ಸಂಚಾರಿ ವಿಜಯ್ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಮರಣಾ ನಂತರ ತಾನೂ ಕೂಡಾ ತನ್ನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು. ನಾನು  ಮರಣ ಹೊಂದಿದ  ಬಳಿಕ ನನ್ನ ಅಂಗಾಂಗಳನ್ನು ದಾನ ಮಾಡುವಂತೆ   ವಿಲ್  ಬರೆಯಲು ನಿರ್ಧರಿಸಿದ್ದೇನೆ ಎಂದು ಹೇಳಿದ ಅವರು, ದ.ಕ. ಜಿಲ್ಲಾ […]

ಎಸ್.ಪಿ.ಬಿ. ಯವರಿಗೆ ಮಂಗಳೂರಿನಲ್ಲಿ “ಗಾನ ನಮನ” ಶ್ರದ್ಧಾಂಜಲಿ

Saturday, September 26th, 2020
SPB gnannamana

ಮಂಗಳೂರು : ಚಿತ್ರರಂಗದ ಸಾಹಿತ್ಯಗಳಿಗೆ ಭಾವನಾತ್ಮಕವಾಗಿ ಸಾತ್ವಿಕ ಶಕ್ತಿಯನ್ನು ತುಂಬಿದ ಮಹಾನ್ ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ” ಎಸ್.ಪಿ.ಬಿ. ಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ” ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು. ಭಾರತೀಯ ಭಾಷೆಗಳೆಲ್ಲವನ್ನು ಸಮಾನ ಗೌರವದಿಂದ ಕಂಡಿರುವ ಎಸ್.ಪಿ.ವಿಶೇಷವಾಗಿ ನಮ್ಮೀ ಪ್ರದೇಶದ […]

ಪತ್ರಕರ್ತೆ ಸೀತಾಲಕ್ಷ್ಮೀಗೆ ಶ್ರದ್ಧಾಂಜಲಿ

Thursday, May 14th, 2020
sheetalakshmi

ಮಂಗಳೂರು : ಮಂಗಳವಾರ ನಿಧನರಾದ ವಿಜಯ ಕರ್ನಾಟಕದ ಹಿರಿಯ ಉಪಸಂಪಾದಕಿ ಡಾ.ಸೀತಾಲಕ್ಷ್ಮೀ ಕೆ.ವಿ. ಅವರಿಗೆ ದಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಜಯ ಕರ್ನಾಟಕದ ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್‍ನಾಥ್ ಮಾತನಾಡಿ, ಪತ್ರಿಕೆಯ ಮಂಗಳೂರು ಆವೃತ್ತಿಯ ಆರಂಭದ ದಿನದಿಂದಲೂ ಕಾರ್ಯ ನಿರ್ವಹಿಸುತ್ತಿದ್ದ ಸೀತಾಲಕ್ಷ್ಮೀ, ಸ್ನಾತಕೋತ್ತರ ಪದವಿ, ಎಂಫಿಲ್, ಎರಡೆರಡು ಡಾಕ್ಟರೇಟ್ ಜತೆಗೆ ಪುಸ್ತಕಗಳನ್ನು ಕೂಡಾ ಬರೆದು, ಕನ್ನಡ ಸಾಹಿತ್ಯ ಲೋಕಕ್ಕೆ […]

ಅಗಲಿದ ಮಿತ್ರನಿಗೆ ಪತ್ರಕರ್ತರಿಂದ ಶ್ರದ್ಧಾಂಜಲಿ

Wednesday, July 24th, 2019
nagesh

ಮಂಗಳೂರು: ಡೆಂಗ್ಯೂ ಜ್ವರದಿಂದ ಭಾನುವಾರ ತಡರಾತ್ರಿ ಸಾವನ್ನಪ್ಪಿದ ಖಾಸಗಿ ಸುದ್ದಿವಾಹಿನಿಯ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‍ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ವತಿಯಿಂದ ನಡೆದ ಸಭೆಯಲ್ಲಿ ಅಗಲಿದ ಗೆಳೆಯನಿಗೆ ಪತ್ರಕರ್ತರು ನುಡಿನಮನ ಸಲ್ಲಿಸಿದರು. ಮೌನಪ್ರಾರ್ಥನೆ ಸಲ್ಲಿಸಿ ಅಗಲಿದ ಆತ್ಮಕ್ಕೆ ಸದ್ಗತಿ ಕೋರಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಸದಾ ನಗುಮುಖದೊಂದಿಗೆ […]

ಏರ್ ಇಂಡಿಯಾ IX 812 ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

Wednesday, May 22nd, 2019
Tribute

ಮಂಗಳೂರು : ಏರ್ ಇಂಡಿಯಾ  IX 812 ವಿಮಾನ ದುರಂತದ ವಾರ್ಷಿಕ ಸ್ಮರಣಾರ್ಥ ಮಡಿದವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನಗರ ಹೊರವಲಯದ ಕೂಳೂರು ಸೇತುವೆ ಸಮೀಪದ ಉದ್ಯಾನವನದಲ್ಲಿ ಬುಧವಾರ ನಡೆಯಿತು. ದ.ಕ.ಜಿಲ್ಲಾಡಳಿತ, ನವಮಂಗಳೂರು ಬಂದರು ಮಂಡಳಿ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ದ.ಕ.ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಮುರಳಿ ಮೋಹನ್ ಚೂಂತಾರ್, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ದ.ಕ.ಜಿ.ಪಂ. ಸಿಇಒ ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಮಂಗಳೂರು ತಹಶೀಲ್ದಾರ್ […]