ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮುಸ್ಲಿಮೇತರ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ನಿಲ್ಲಿಸದಿದ್ದರೆ ಬೃಹತ್ ಪ್ರತಿಭಟನೆ : ಶ್ರೀರಾಮ ಸೇನೆ

Thursday, September 30th, 2021
Sri-Rama-Sene

ಮಂಗಳೂರು : ಸುಪ್ರೀಂ ಕೋರ್ಟ್ ಆದೇಶ ಇದೆ ಎಂದು ರಾಜ್ಯ ಸರಕಾರ ಹಿಂದೂಗಳ ದೇವಸ್ಥಾನ ಉರುಳಿಸಿದೆ. ಅದೇ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಮುಸ್ಲಿಮರು ಮಸೀದಿಗಳಲ್ಲಿ ಐದು ಹೊತ್ತು ಕೂಗುವ ಬಾಂಗ್ ನಿಲ್ಲಿಸಲು ಧೈರ್ಯ ಇಲ್ಲ ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದ್ದಾರೆ. ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ಆಚರಣೆ ಎಂದು ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮುಸ್ಲಿಮೇತರ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಕೂಡಲೇ ನಿಲ್ಲಿಸಬೇಕು ಇಲ್ಲದಿದ್ದರೆ […]

ವೆನ್ಲಾಕ್‌ ಘಟನೆ : ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಬಂಧಿಸಿ ಹಿಂಸೆ ನೀಡಿದುದರ ವಿರುದ್ಧ ಪ್ರತಿಭಟನೆ

Thursday, June 20th, 2019
Sri Rama Sene

ಮಂಗಳೂರು : ಮಂಗಳೂರಿನ ಸರಕಾರಿ ಆಸ್ಪತ್ರೆ ವೆನ್ಲಾಕ್‌ನಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿಸುತ್ತಿರುವ  ಸಿಬ್ಬಂದಿಗಳ ವೈದ್ಯರ ವಿಚಾರವನ್ನು ಸಾಮಾಜಿಕ ಜಾಲ ತಾಣದ ಮೂಲಕ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಿದ  ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಬಂಧಿಸಿ ಹಿಂಸೆ ನೀಡಿದುದರ ವಿರುದ್ಧ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಮುಖಂಡರು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಜೇಶ್ವರಿಯವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಗಾಯಾಳುವಿನ ಬಗ್ಗೆ ಸಿಬ್ಬಂದಿಗಳು ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ  ಎಂದು ಆರೋಪಿಸಲಾಯಿತು. ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಅಧೀಕ್ಷಕಿ […]

ದೇವತೆಗಳು-ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಗಳ ಮಾರಾಟ ತಡೆಯುವಂತೆ ಮನವಿ

Friday, November 2nd, 2018
crackers

ಮಂಗಳೂರು : ದೇವತೆಗಳು-ರಾಷ್ಟ್ರಪುರುಷರ ಚಿತ್ರಗಳಿರುವ ಮತ್ತು ಚೀನಾ ಪಟಾಕಿಗಳ‌ ಅಕ್ರಮ ಮಾರಾಟದ ಮೇಲೆ ಕಾನೂನು ಕಾರ್ಯಚರಣೆಯನ್ನು ಮಾಡಲು ಒತ್ತಾಯಿಸಿ ಮಂಗಳೂರಿನ ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ಇವರಿಗೆ ಮನವಿ ನೀಡಲಾಯಿತು. ಮಾರುಕಟ್ಟೆಯಲ್ಲಿ ಶ್ರೀಲಕ್ಷ್ಮೀ, ಶ್ರೀಕೃಷ್ಣ, ಶ್ರೀವಿಷ್ಣು ಇತ್ಯಾದಿ ದೇವತೆಗಳ ಹಾಗೂ ನೇತಾಜಿ ಸುಭಾಷಚಂದ್ರ ಬೋಸ್, ಲೋಕಮಾನ್ಯ ತಿಲಕ ಇತ್ಯಾದಿ ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ. ಇಂತಹ ಪಟಾಕಿಗಳನ್ನು ಉರಿಸಿದಾಗ ದೇವತೆಗಳ ಹಾಗೂ ರಾಷ್ಟ್ರಪುರುಷರ ಚಿತ್ರವು ಛಿದ್ರವಾಗಿ ರಸ್ತೆಯ ತುಂಬಾ ಹರಡುತ್ತದೆ. ಇದರಿಂದ ಅದು […]

ವಿಧಾನಸಭಾ ಚುನಾವಣೆ: 30 ಕ್ಷೇತ್ರಗಳಲ್ಲಿ ಹಿಂದೂ ಮಹಾಸಭಾ ಸ್ಪರ್ಧೆ

Friday, April 20th, 2018
election

ಮಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಭಾದ ರಾಜ್ಯಾಧ್ಯಕ್ಷ ನಾ. ಸುಬ್ರಹ್ಮಣ್ಯ ರಾಜು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಿಂದೂ ಕೇಸರಿ ಪಡೆಗಳು ಒಟ್ಟಾಗಿ 150 ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದೆ. ಅದರಂತೆ ಇದೀಗ ಹಿಂದೂ ಮಹಾಸಭಾವಲ್ಲದೆ, ಸಂಪೂರ್ಣ ಭಾರತೀಯ ಕ್ರಾಂತಿ ಪಕ್ಷ 15 ಕ್ಷೇತ್ರಗಳಲ್ಲಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ 35 ಮಂದಿಯನ್ನು ಚುನಾವಣಾ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮುಂದಿನ […]

ಮಂಗಳೂರು ಪಬ್‌ ಅಟ್ಯಾಕ್‌ ಪ್ರಕರಣ: ಮುತಾಲಿಕ್‌ ಸೇರಿ ಎಲ್ಲ ಆರೋಪಿಗಳು ಖುಲಾಸೆ

Tuesday, March 13th, 2018
muthalik

ಮಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಮಂಗಳೂರಿನ ಪಬ್ ದಾಳಿ ಪ್ರಕರಣದ ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 30 ಮಂದಿ ಆರೋಪಿಗಳನ್ನು ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಖುಲಾಸೆಗೊಳಿಸಿದೆ. ನಗರದ ಬಲ್ಮಠ ರಸ್ತೆಯಲ್ಲಿರುವ ಅಮ್ನೇಶಿಯಾ ಪಬ್‌ನಲ್ಲಿದ್ದ ಯುವತಿಯರ ಮೇಲೆ 2009ರ, ಜನವರಿ 24ರಂದು ಹಲ್ಲೆ ನಡೆದಿತ್ತು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ಪ್ರಮುಖರಾದ ಪ್ರಮೋದ್ ಮುತಾಲಿಕ್ ಅವರನ್ನೂ ಬಂಧಿಸಲಾಗಿತ್ತು. ಇದೀಗ […]

ಗೋಡ್ಸೆ ಅನುಯಾಯಿ ಆದಿತ್ಯನಾಥ್ ರಿಂದ ನಮಗೆ ಪಾಠ ಬೇಡ: ಸಿದ್ದರಾಮಯ್ಯ

Monday, January 8th, 2018
congress-war

ಉಡುಪಿ: ಕಲ್ಲಡ್ಕ ಪ್ರಭಾಕರ ಭಟ್ ಶಾಲೆಗೆ ಮಾತ್ರ ಏಕೆ ಊಟ, ಬೇರೆ ಶಾಲೆಗಳಿಗೂ ಕೊಡಬಹುದಲ್ಲಾ? ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಫ್ಟ್ ಹಿಂದುತ್ವ ಅಂದರೆ ಏನು? ಈ ಸಾಫ್ಟ್, ಹಾರ್ಡ್ ಏನೂ ಇಲ್ಲ. ನಾನು ದೇವಸ್ಥಾನಗಳಿಗೆ ಹೋಗುತ್ತೇನೆ. ಹಾಗಂತ ಎಲ್ಲಾ ದೇವಸ್ಥಾನಕ್ಕೆ ಹೋಗಲ್ಲ. ಕೃಷ್ಣಮಠಕ್ಕೆ ಹೋಗದೇ ಇರೋದು ದೊಡ್ಡ ವಿಷಯ ಅಲ್ಲ ಎಂದು ತಮ್ಮ ವಿರುದ್ಧ ಆರೋಪಗಳಿಗೆ ಉತ್ತರಿಸಿದರು. ಕರಾವಳಿಯಲ್ಲಿ ಉಲ್ಬಣವಾಗಿರುವ ಕೋಮು ಸಂಘರ್ಷಕ್ಕೆ ಕೋಮುವಾದಿ […]

ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ‘ಸಂತ ಯಾತ್ರೆ’

Friday, November 18th, 2016
Santha Yathra

ಮಂಗಳೂರು: ಚಿಕ್ಕಮಗಳೂರಿನ ದತ್ತಪೀಠ ಉತ್ಸವದ ಪೂರ್ವಭಾವಿಯಾಗಿ ಹಾಗೂ ಶ್ರೀರಾಮ ಸೇನೆಯ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ‘ಸಂತ ಯಾತ್ರೆ’ ಮಂಗಳೂರಿನಾದ್ಯಂತ ನಿನ್ನೆ ನಡೆಯಿತು. ಸಂತ ಯಾತ್ರೆಯು ಕದ್ರಿ ಮಂಜುನಾಥ ಕ್ಷೇತ್ರದಿಂದ ಹೊರಟು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಮಾಪನಗೊಂಡಿತು. ಯಾತ್ರೆಯಲ್ಲಿ ಉತ್ತರ ಭಾರತದ ದಿಗಂಬರ ಅಖಾಡಾ, ಜುನಾ ಅಖಾಡಾ, ವೈಷ್ಣವ ದಿಗಂಬರ ಅಖಾಡಾಗಳಿಂದ ಸುಮಾರು 60ಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಿದ್ದರು. ಯಾತ್ರೆಯಲ್ಲಿ ಶ್ರೀದತ್ತಾತ್ರೇಯರ ರಥದೊಂದಿಗೆ ಆಕರ್ಷಕ ಟ್ಯಾಬ್ಲೋದಲ್ಲಿ ಸಂತರು ಸಾಗಿದರು. ಈ ಸಂದರ್ಭದಲ್ಲಿ ನಡೆದ ಬೈಕ್ ಜಾಥಾಗೆ ಆರ್ಯ […]

ಮುತಾಲಿಕ್ ಎರಡು ಕಡೆ ಚುನಾವಣಾ ಅಖಾಡಕ್ಕೆ : ಪ್ರಹ್ಲಾದ್‌ ಜೋಶಿ, ಅನಂತ್ ಕುಮಾರ್‌ ಗೆ ಪೈಪೋಟಿ

Friday, March 28th, 2014
Muthalik

ಬೆಂಗಳೂರು, : ಬೆಳಗ್ಗೆ ಬಿಜೆಪಿ ಸೇರಿ ಸಂಜೆ ಪಕ್ಷದಿಂದ ಹೊರಬಂದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎರಡು ಕಡೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಪ್ರಮೋದ್ ಮುತಾಲಿಕ್ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ ವಿರುದ್ಧ ಧಾರವಾಡ ಕ್ಷೇತ್ರದಲ್ಲಿ ಮತ್ತು ಅನಂತ್ ಕುಮಾರ್‌ ವಿರುದ್ಧ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು, ಎರಡೂ ನಾಮಪತ್ರಗಳು […]

ಹಿಂದೂ ಜನಾಂಗದ ವಿರುದ್ದ ತಾರತಮ್ಯ: ಮುತಾಲಿಕ್

Wednesday, November 27th, 2013
mutalik

ಮಂಗಳೂರು : ಶ್ರೀರಾಮ ಸೇನೆಯ ವತಿಯಿಂದ ನಗರದ ಆರ್ಯಸಮಾಜದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು. ನೂತನ ಸಂಘಟನೆ `ರಾಮ್‍ಸೇನಾ’ವನ್ನು ಸ್ಥಾಪಿಸುವ ಮೂಲಕ ಶ್ರೀರಾಮ ಸೇನೆಯನ್ನು ತ್ಯಜಿಸಿದ್ದೇನೆಂದು ಸ್ವತಃ ಪ್ರಸಾದ್ ಅತ್ತಾವರ್ ಹೇಳುತ್ತಿದ್ದರೂ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತ್ರ ಅವರು ನಮ್ಮಲ್ಲೇ ಇದ್ದಾರೆ ಎನ್ನುವ ಹೇಳಿಕೆ ನೀಡಿರುವುದು ಕಾರ್ಯಕರ್ತ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಾದ್ ಅತ್ತಾವರ್  ಶ್ರೀರಾಮ ಸೇನೆ ತ್ಯಜಿಸಿಲ್ಲ. ಅವರು ನಮ್ಮಲ್ಲೇ ಇದ್ದಾರೆ. ಅಲ್ಲದೇ […]

ಸೌಜನ್ಯಾ ಕೊಲೆ ಪ್ರಕರಣದ ತನಿಖೆ ಸಿಬಿಐ ಗೆ ಒಪ್ಪಿಸಲು ಶ್ರೀರಾಮ ಸೇನೆ ಆಗ್ರಹ

Thursday, November 22nd, 2012
Sri Rama Sene

ಮಂಗಳೂರು :ಸೌಜನ್ಯಾ ಕೊಲೆ ಪ್ರಕರಣದ ತನಿಖೆಯನ್ನು ತತ್‌ಕ್ಷಣ ಸಿಬಿಐಗೆ ಒಪ್ಪಿಸಬೇಕು ಎಂದು ದ.ಕ. ಶ್ರೀರಾಮ ಸೇನೆ ರಾಜ್ಯ ವಕ್ತಾರ ಮಧುಕರ ಮುದ್ರಾಡಿ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆಯೂ ಹಲವು ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಹಿಂದಿನ ಯಾವುದೇ ಪ್ರಕರಣದಲ್ಲಿ ಕೂಡಾ ನೈಜ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸ್‌ ಇಲಾಖೆಯ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಜಿಲ್ಲೆಯಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿವೆ. ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ಅಸ್ವಸ್ಥ ಸಂತೋಷ್‌ ರಾವ್‌ನನ್ನು ಬಂಧಿಸಲಾಗಿದ್ದರೂ ಈ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು […]