ಸಿಐಟಿಯು ರಾಜ್ಯಾಧ್ಯಕ್ಷ ಬಿ. ಮಾಧವ ನಿಧನ

Wednesday, June 19th, 2019
B Madhava

ಮಂಗಳೂರು:  ಸಿಐಟಿಯು ರಾಜ್ಯಾಧ್ಯಕ್ಷ ಬಿ. ಮಾಧವ (83)ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ನಿಧನರಾದರು. ಬಿ. ಮಾಧವ ಅವರು ಭಾರತ ಕಮ್ಯುನಿಷ್ಠ ಪಕ್ಷ ( ಮಾರ್ಕ್ಸವಾದಿ) ದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು, ಸಿಐಟಿಯು ರಾಜ್ಯಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ಕಾರ್ಯದರ್ಶಿ, ಸಿಐಟಿಯು ಅಧ್ಯಕ್ಷ – ಹೀಗೆ ಹಲವು ಜವಾಬ್ದಾರಿ ಸ್ಥಾನಗಳಲ್ಲಿ ಹಾಗು ಕಾರ್ಮಿಕ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗು ಬಂಧು ಬಳಗವನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರ ಮದ್ಯಾಹ್ನ 2.30ರವರೆಗೆ […]

ಕನಿಷ್ಠ ಕೂಲಿಯನ್ನು ಜಾರಿಗೊಳಿಸಲು ಸಿಐಟಿಯು ಧರಣಿ

Tuesday, May 21st, 2019
citu

ಮಂಗಳೂರು : ರಾಜ್ಯ ಹೈಕೋರ್ಟ್‌ನ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ದ.ಕ. ಜಿಲ್ಲಾ ಸಮಿತಿಯು ಮಂಗಳವಾರ ಕದ್ರಿಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಧರಣಿ ನಡೆಸಿತು. ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು, ಸ್ಕೀಮ್ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು, ತಂದೆ ತಾಯಿಗಳನ್ನೊಳಗೊಂಡು 5 ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ ರೂ.18,000/- ನಿಗದಿಗೊಳಿಸಬೇಕು, ಬೆಲೆಯೇರಿಕೆ ಸೂಚ್ಯಾಂಕ ನಿಗದಿಯಲ್ಲಿನ ಮೋಸ ನಿಲ್ಲಿಸಬೇಕು,10 ರೂ.ಇದ್ದ ಕಾರ್ಮಿಕ ಸಂಘದ […]

ಅಖಿಲ ಭಾರತ್ ಬಂದ್ ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

Tuesday, January 8th, 2019
Bundh

ಮಂಗಳೂರು :  ಸಿಐಟಿಯು, ಎಐಟಿಯುಸಿ, ಎಚ್‌ಎಂಎಸ್ ಮತ್ತು ಇಂಟಕ್ ಸಹಿತ ಇತರ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜಿತಗೊಂಡಿರುವ ಸಾರಿಗೆ ನೌಕರರು  ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಅಂಗಡಿ, ಮಳಿಗೆ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕ್ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದರಿಂದ ಸೇವೆ ಭಾಗಶಃ ವ್ಯತ್ಯಯಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ರಿಕ್ಷಾ ಚಾಲಕರ ಸಂಘ ಬಂದ್‌ಗೆ ಬೆಂಬಲ ಸೂಚಿಸಿದೆಯಾದರೂ, ಕೆಲವು ಸಂಘಟನೆಗಳುಕೈಜೋಡಿಸಿಲ್ಲ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರಿಕ್ಷಾಗಳು ಓಡಾಡುತ್ತಿವೆ. ಮಾಲ್ […]

ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹ… ಕಾರ್ಮಿಕ ಭವಿಷ್ಯ ನಿಧಿ ಕಚೇರಿಗೆ ಮುತ್ತಿಗೆ

Wednesday, March 14th, 2018
CIT-mangaluru

ಮಂಗಳೂರು: ಆಧಾರ್‌ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ಕಡ್ಡಾಯಗೊಳಿಸಬಾರದು, ಈಗಾಗಲೇ ಪಿಎಫ್‌ ಕಚೇರಿಯಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕವನ್ನು ಅಧಿಕೃತಗೊಳಿಸಬೇಕು. ಪಿಂಚಣಿದಾರರಿಗೆ ಸೌಲಭ್ಯ ಪಡೆಯುವ ನಿಯಮವನ್ನು ಸರಳೀಕರಣಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಕಾರ್ಮಿಕ ಭವಿಷ್ಯನಿಧಿ ಕಚೇರಿಗೆ ಸಿಐಟಿಯು ನೇತೃತ್ವದಲ್ಲಿ ಮುತ್ತಿ ಹಾಕಲಾಯಿತು. ಈ ವೇಳೆ ಕಾರ್ಮಿಕರನ್ನು ಉದ್ದೇಶಿಸಿ ಸಿಐಟಿಯು ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಮಾತನಾಡಿ, ನವ ಉದಾರೀಕರಣ ನೀತಿಯನ್ನು ವೇಗವಾಗಿ ಜಾರಿ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಹಿತಾಸಕ್ತಿಗಿಂತಲೂ […]

ಸಿಐಟಿಯು ನೇತೃತ್ವದಲ್ಲಿ ಭವಿಷ್ಯನಿಧಿ ಕಚೇರಿಗೆ ಕಾರ್ಮಿಕರಿಂದ ಬೃಹತ್ ಮುತ್ತಿಗೆ

Tuesday, March 13th, 2018
CPF-office

ಮಂಗಳೂರು: ದಿನಾಂಕ 13-03-2018 ರಂದು ಮಂಗಳೂರು ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆಗೆ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಮುತ್ತಿಗೆ ಕಾರ್ಯಕ್ರಮವು ನಡೆಯಿತು. ಸಂಸ್ಥೆಯಲ್ಲಿರುವ ಸದಸ್ಯರಿಗೆ ಆಧಾರ ಕಾರ್ಡ್‌ನ್ನು ಯಾವುದೇ ಕಾರಣಕ್ಕೂ ಕಡ್ಡಾಯಗೊಳಿಸಬಾರದು, ಈಗಾಗಲೇ ಪ್ರೊವಿಡೆಂಟ್ ಪಂಡ್ ಕಚೇರಿಯಲ್ಲಿ ದಾಖಲಾಗಿರುವ ಹುಟ್ಟಿದ ದಿನಾಂಕವನ್ನು ಅಧಿಕೃತಗೊಳಿಸಬೇಕು, ಪಿಂಚಣಿದಾರರಿಗೆ ಅವರ ಸೌಲಭ್ಯವನ್ನು ಪಡೆಯುವರೇ ಕ್ರಮ ನಿಯಮವನ್ನು ಸರಳೀಕರಣಗೊಳಿಸಬೇಕು, ಪಿಂಚಣಿದಾರರ ಜೀವಿತ ಪ್ರಮಾಣ ಪತ್ರಕ್ಕಾಗಿ ಪ್ರತಿ ಬ್ಯಾಂಕಿನಲ್ಲಿಯೇ ಹೆಬ್ಬೆಟ್ಟು ಗುರುತು ಪಡೆಯುವ ವ್ಯವಸ್ಥೆ ಮಾಡಬೇಕು, ಎಲ್ಲಾ ಪ್ರೊವಿಟೆಂಟ್ ಪಂಡ್ ಖಾತೆದಾರರ ಹಣ ಅವರಿಗೆ ಲಭ್ಯವಿರುವಂತೆ ವ್ಯವಸ್ಥೆ […]

ಸಿಐಟಿಯು: ದ.ಕ. ಜಿಲ್ಲಾ ಸಮಿತಿ ವತಿಯಿಂದ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಧರಣಿ

Wednesday, October 25th, 2017
CITU

ಮಂಗಳೂರು: ದ.ಕ. ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿಯ ಮುಂಭಾಗ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಬುಧವಾರ ಧರಣಿ ನಡೆಯಿತು. ಕರ್ನಾಟಕ ಕಾರ್ಮಿಕರಿಗೆ ಕನಿಷ್ಠ ಕೂಲಿ 18 ಸವಾರ ರೂ. ನೀಡಲು ಒತ್ತಾಯಿಸಿ, ಗುತ್ತಿಗೆ ಪದ್ಧತಿ ನಿಷೇದಕ್ಕಾಗಿ, ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಲು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಯಿತು. ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ […]

ಬೀದಿಬದಿ ವ್ಯಾಪಾರಸ್ಥರ ಮೇಲಿನ ದಾಳಿಯನ್ನು ಖಂಡಿಸಿ ಸಿಐಟಿಯು ಪ್ರತಿಭಟನೆ

Friday, August 18th, 2017
citu

ಮಂಗಳೂರು: ಬೀದಿಬದಿ ವ್ಯಾಪಾರಸ್ಥರ ಮೇಲಾಗುತ್ತಿರುವ ನಿರಂತರ ದಾಳಿಯನ್ನು ಖಂಡಿಸಿ ಹಾಗೂ ಪರ್ಯಾಯ ವ್ಯವಸ್ಥೆಗಾಗಿ ಒತ್ತಾಯಿಸಿ ಬೀದಿಬದಿ ವ್ಯಾಪಾರಸ್ಥರು ಸಿಐಟಿಯು ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವ ಮಂಗಳೂರು ಮಹಾನಗರ ಪಾಲಿಕೆ ನಿರಂತರವಾಗಿ ದಾಳಿ ನಡೆಸುವ ಮೂಲಕ ಬೀದಿಬದಿ ವ್ಯಾಪಾರಸ್ಥರನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿದರು. […]

ಸೆಂಟ್ರಲ್‌ ಮಾರುಕಟ್ಟೆಯ ವ್ಯಾಪಾರಿ ಸಂಘದ ಪ್ರತಿಭಟನಾ ಸಭೆಯಲ್ಲಿ ಲಾಠಿ ಪ್ರಹಾರ

Sunday, January 5th, 2014
Bidi Badi vyapari

ಮಂಗಳೂರು : ನಗರದ ಸೆಂಟ್ರಲ್‌ ಮಾರುಕಟ್ಟೆಯ ವ್ಯಾಪಾರಿ ಸಂಘದ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ‌ ಜನವರಿ 4 ರ ಶನಿವಾರ ನಡೆದಿದೆ. ಬೀದಿ ವ್ಯಾಪಾರಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮಾರುಕಟ್ಟೆಯ ವ್ಯಾಪಾರಿಗಳು ಸಭೆ ನಡೆಸಿದಾಗ ಸಿಐಟಿಯು ಸಂಘಟನೆಯ ಕಾರ್ಯಕರ್ತರು ಬೀದಿ ವ್ಯಾಪಾರಿಗಳನ್ನು ಬೆಂಬಲಿಸಿ ಏಕಾಏಕಿ ವರ್ತಕರ ವಿರುದ್ಧ ಧಿಕ್ಕಾರದ ಘೊಷಣೆಗಳನ್ನು ಕೂಗಿದರು ಆಗ ಪ್ರತಿಭಟನೆ ಉಗ್ರ ಸ್ವರೂಪ ತಾಳುವ ಮೊದಲು ಪೊಲೀಸರು ನಿಯಂತ್ರಣಕ್ಕೆ ಮುಂದಾದರು. ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ […]

ಸರ್ಕಾರದಿಂದಲೂ ಜೀತಪದ್ಧತಿ: ಬಿ.ಎಂ.ಭಟ್ ಆರೋಪ

Friday, December 6th, 2013
akshara

ಪುತ್ತೂರು: ಸಿಐಟಿಯು ನೇತೃತ್ವದ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳವೂ ಸೇರಿದಂತೆ ಹಲವು ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಕಾರ್ಯಕರ್ತರು ಗುರುವಾರ ಪುತ್ತೂರಿನ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯ ದರ್ಶಿ ಬಿ.ಎಂ. ಭಟ್  ಮಾತನಾಡಿ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಮೂಲಕ ಜೀತದಾಳು ಪದ್ಧತಿ ಅನುಸರಿ ಸುತ್ತಿರುವ ಹೋಟೆಲ್ ಇನ್ನಿತರ ಸಂಸ್ಥೆ ಗಳ ವಿರುದ್ಧ ಕನಿಷ್ಠ […]

ಬಿಎಸ್ಎನ್ಎಲ್ ಪ್ರಧಾನ ಕಛೇರಿ ಎದುರು ಸಿಐಟಿಯು ವತಿಯಿಂದ ದರಣಿ

Tuesday, December 14th, 2010
ಬಿಎಸ್ಎನ್ಎಲ್ ಪ್ರಧಾನ ಕಛೇರಿ ಎದುರು ಸಿಐಟಿಯು ವತಿಯಿಂದ ದರಣಿ

ಮಂಗಳೂರು; ಬಿಎಸ್ಎನ್ಎಲ್ ದಿನಕೂಲಿ ಕಾರ್ಮಿಕರ ಕೆಲಸದ ಭದ್ರತೆಗಾಗಿ ಸಿಐಟಿಯು ವತಿಯಿಂದ ಒಂದು ದಿನದ ಧರಣಿ ಸತ್ಯಾಗ್ರಹವು ಇಂದು ಬೆಳಿಗ್ಗೆ ನಗರದ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಮುಂದುಗಡೆ ನಡೆಯಿತು. ಕೇಂದ್ರ ಸರಕಾರದ ಅಧೀನತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಹಾಗೂ ಎಲ್ಲಾ ಎಕ್ಸ್ಚೇಂಚ್ ಕೇಂದ್ರಗಳಲ್ಲಿ ದಿನಕೂಲಿ ಕಾರ್ಮಿಕರಿಗಾಗಿ ಗುತ್ತಿಗೆದಾರರ ಅಡಿಯಲ್ಲಿ ಕಳೆದ 12 ವರ್ಷಗಳಿಂದ ವೇತನ ಹೊರತು ಪಡಿಸಿ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿದ್ದಾರೆ. ಕೆಲಸದ ಒತ್ತಡಗಳ ಮಧ್ಯೆ ಗ್ರಾಹಕರಿಗೆ ಅನುಕೂಲವಾಗುವಂತೆ ಸದಾ ದುಡಿಯುತ್ತಿರುವ ಈ ಕಾರ್ಮಿಕರಿಗೆ ಕೆಲಸದ ಭದ್ರತೆಯಿಲ್ಲ […]