“ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ” -ಗಣೇಶ್ ರಾವ್

Friday, June 14th, 2024
"ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ" -ಗಣೇಶ್ ರಾವ್

ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ನಗರದ ಭಾರತ್ ಸಿನೆಮಾಸ್ ನಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಬಳಿಕ ಮಾತಾಡಿದ ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಚೇರ್ ಮೆನ್ ಗಣೇಶ್ ರಾವ್ ಅವರು, “ತುಡರ್ ಅಂದರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ಬಿಡುಗಡೆಯಾಗಿರುವ ತುಳು ಸಿನಿಮಾ ತುಳು ತುಡರ್ […]

ಬಂಟ ಜನ ಪ್ರತಿನಿಧಿಗಳಿಗೆ ಸರಕಾರದಲ್ಲಿ ಮಾನ್ಯತೆ ನೀಡಲಿ : ಎ ಸದಾನಂದ ಶೆಟ್ಟಿ

Friday, August 13th, 2021
sadananda Shetty

ಮಂಗಳೂರು : ಪ್ರತಿಷ್ಠಿತ ಬಂಟ ಸಮುದಾಯವು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಉದ್ಯಮ, ಶಿಕ್ಷಣ, ಕೈಗಾರಿಕೆ, ಸಿನಿಮಾ ಸಹಿತ ಹಲವಾರು ಕ್ಷೇತ್ರಗಳಲ್ಲಿ, ದೇಶವಿದೇಶಗಳಲ್ಲಿ ಸಾಧನೆಗಳನ್ನು ಮಾಡಿದ ದಾಖಲೆಗಳಿವೆ. ಈ ನಿಟ್ಟಿನಲ್ಲಿ ಬಂಟ ಜನ ಪ್ರತಿನಿಧಿಗಳಿಗೆ ಸರಕಾರದಿಂದ ಮಾನ್ಯತೆ ನೀಡದಿರುವುದು ಸಮಂಜಸವಲ್ಲ, ಈ ಕೂಡಲೇ ಮುಖ್ಯ ಮಂತ್ರಿಗಳು ಬಲಿಷ್ಠ ಬಂಟ ಸಮುದಾಯದ ಶಾಸಕರಿಗೆ ಸರಕಾರದಲ್ಲಿ ಮಾನ್ಯತೆ ನೀಡಬೇಕೆಂದು ಇಂಟರ್ ನ್ಯಾಶನಲ್ ಬಂಟ್ಸ ವೆಲ್ ಫೇರ್ ಟ್ರಸ್ಟನ ಅಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಎ. […]

ನಟಿ ವಿನ್ನಿ ಫರ್ನಾಂಡಿಸ್‌ ಗೆ ಹೃದಯಾಘಾತ

Thursday, July 29th, 2021
Vinni - Fernandes

ಮಂಗಳೂರು : ಕನ್ನಡ, ತುಳು, ಕೊಂಕಣಿ ಭಾಷೆಯ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ವಿನ್ನಿ ಫರ್ನಾಂಡಿಸ್‌ (63) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿನ್ನಿ ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು. ಹಾಸ್ಯ, ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಪತಿ ವಿನ್ಸೆಂಟ್‌, ಮಕ್ಕಳಾದ ಪ್ರತಾಪ್‌, ಬಬಿತಾ ಅವರನ್ನು ಅಗಲಿದ್ದಾರೆ.    

ಜು.31ರಂದು  ಕನ್ನಡ -ತಮಿಳು ದ್ವಿಭಾಷೆಯಲ್ಲಿ ವಿನೂತನ ಚಿತ್ರ `ಹವಾಲ’ ಒಟಿಟಿಯಲ್ಲಿ ಬಿಡುಗಡೆ

Sunday, July 19th, 2020
hawala

ಮಂಗಳೂರು: ಕೊರೋನಾ ಲಾಕ್‌ಡೌನ್ ಸಿನಿಮಾ ರಂಗಕ್ಕೂ ಬಲವಾದ ಪೆಟ್ಟು ನೀಡಿದೆ. ಆದರೆ ಚಿತ್ರತಂಡದ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಚಿತ್ರ ಪ್ರೇಮಿಗಳಿಗಾಗಿ ವಿನೂತನವಾದ ಕಥಾ ಹಂದರ ಹೊಂದಿದ `ಹವಾಲ’ ಚಿತ್ರ ನಿರ್ಮಾಣಗೊಂಡಿದ್ದು, ಇದೇ ಜು.31 ರಂದು ವರ್ಲ್ಡ್ ಪ್ರೀಮಿಯರ್ (ಒಟಿಟಿ)ನಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಶಶಿ ಕುಮಾರ್ ಪಂಡಿತ್ ಅರ್ಪಿಸುವ ಈ ಚಿತ್ರದ ನಿರ್ಮಾಣವನ್ನು ನಿರ್ಮಾಪಕ ಪುತ್ತೂರಿನ ಪ್ರವೀಣ್ ಶೆಟ್ಟಿ ಮಾಡಿದ್ದು, ಚಿತ್ರ ಭೂಗತ ಲೋಕದ ಅತ್ಯದ್ಭುತವಾದ ರೋಚಕ ಕಥೆಯನ್ನೊಳಗೊಂಡಿದೆ. ಸೋಚ್ ಸಿನಿಮಾಸ್ ಇವರ […]

ಸಿನಿಮಾ ಬದುಕಿನ ವಾಸ್ತವಕ್ಕೆ ಕನ್ನಡಿ ಹಿಡಿದ ಶ್ರೀದೇವಿ ಅಂತ್ಯ

Wednesday, February 28th, 2018
actor

ಕೊನೆಗೂ ನಟಿ ಶ್ರೀದೇವಿಯ ಸಾವಿನ ಕುರಿತಂತೆ ಇದ್ದ ಸಂಶಯ ದೂರವಾಗಿದೆ. ‘ಶ್ರೀದೇವಿ ಅವರ ಸಾವು ಈ ಮೊದಲು ಹೇಳಿದಂತೆ ಹೃದಯ ಸ್ತಂಭನದಿಂದ ನಡೆದಿಲ್ಲ, ‘ಬಾತ್ ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ದುಬೈ ಪೊಲೀಸರೇ ಹೇಳಿಕೆ ನೀಡಿ, ತನಿಖೆಯನ್ನು ಮುಗಿಸಿರುವುದರಿಂದ ಈ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಭಾರತದ ಒಂದು ಕಾಲದ ಸೂಪರ್ ಸ್ಟಾರ್ ಕಲಾವಿದೆಯ ಸಾವಿನ ಕುರಿತಂತೆ ಕುಟುಂಬ ದ್ವಂದ್ವ ಹೇಳಿಕೆಯನ್ನು ನೀಡಿದಾಗ ಅನುಮಾನ ಹುಟ್ಟುವುದು ಸಹಜವೇ ಆಗಿದೆ. ಆಕೆಯ ಪತಿ ಬೋನಿಕಪೂರ್ ಸಹಿತ […]

ರಂಗ್‌ರಂಗ್‌ದ ದಿಬ್ಬಣ ಕರಾವಳಿಯಾದ್ಯಂತ ತೆರೆಗೆ; ಕರಾವಳಿಯ ಪ್ರತಿಭಾವಂತರೇ ನಿರ್ಮಿಸಿದ ಸಿನಿಮಾ

Saturday, November 4th, 2017
rang rangda dibbana

ಮಂಗಳೂರು: ವಾರಿನ್ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ಶರತ್ ಕೋಟ್ಯಾನ್ ನಿರ್ಮಾಣದ ಕೃಷ್ಣಪ್ರಸಾದ್ ಉಪ್ಪಿನಕೋಟೆ ನಿರ್ದೇಶನದ ರಂಗ್ ರಂಗ್‌ದ ದಿಬ್ಬಣ ನವಂಬರ್ 3ರಂದು ಮಂಗಳೂರಿನ ಜ್ಯೋತಿ ಮಂದಿರದಲ್ಲಿ ಬಿಡುಗಡೆಗೊಂಡಿತು. ಜೆಪ್ಪಿನಮೊಗರು ವನದುರ್ಗೆ ಮಂತ್ರ ಮೂರ್ತಿ ದೈವಸ್ಥಾನದ ಮೊಕ್ತೇಸರರಾದ ಯೋಗೀಶ್ ಭಟ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ‘ರಂಗ್ ರಂಗ್‌ದ ದಿಬ್ಬಣ’ ತುಳು ಸಿನಿಮಾ ನೂರು ದಿನಗಳ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಳು […]

ಸೆಪ್ಟಂಬರ್ 6 ರಂದು “ಪಾರು ಐ ಲವ್ ಯು” ಚಲನಚಿತ್ರ ತೆರೆಗೆ

Tuesday, August 20th, 2013
Paru-I Love You film

ಮಂಗಳೂರು : ಜಗತ್ ಜ್ಯೋತಿ ಮೂವಿ ಮೇಕರ್‍ಸ್ ಲಾಂಛನದಲ್ಲಿ ನಿರ್ಮಾಣಗೊಂಡ “ಪಾರು ಐ ಲವ್ ಯು” ಸಿನಿಮಾವು ಇದೇ ಬರುವ ತಿಂಗಳು ಸೆ.6 ರಂದು ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ರಂಜನ್ ರವರು ಸೋಮವಾರ ನಗರದ ಹೊಟೇಲ್ ವುಡ್‌ಲ್ಯಾಂಡ್ಸ್ ನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಈ ಚಿತ್ರ ತಾನು ನಟಿಸಿರುವ ಮೊದಲ ಸಿನಿಮಾವಾಗಿದೆ. ನಾವೂ ಪ್ರತಿಯೊಂದು ಜಿಲ್ಲೆಗಳಿಗೂ ಹೋಗಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ.  ಸಿನಿಮಾದ ಮಾಹಿತಿಯು ಇನ್ನೂ ಮಂಗಳೂರಿನ ಜನತೆಗೆ ತಲುಪಿಲ್ಲ  ಈ ಹಿನ್ನೆಲೆಯಲ್ಲಿ ಪ್ರಚಾರ  […]

ಪೂಜಾ ಗಾಂಧಿಗೆ ಹೊಸ ಚಿತ್ರವೊಂದರಲ್ಲಿ ಸೆಕ್ಷೀ ಪಾತ್ರ ಸಿಕ್ಕಿದೆಯಂತೆ.

Wednesday, September 28th, 2011
pooja-gandhi

ಬೆಂಗಳೂರು : ಇದುವರೆಗೆ ಮೈ ತುಂಬಾ ಬಟ್ಟೆ ಹಾಕಿಕೊಂಡು ನಟಿಸುತ್ತಿದ್ದ ‘ಮಳೆ’ ಹುಡುಗಿ ಪೂಜಾ ಗಾಂಧಿಗೆ ಹೊಸ ಚಿತ್ರವೊಂದರಲ್ಲಿ ಸೆಕ್ಷೀ ಪಾತ್ರ ಸಿಕ್ಕಿದೆಯಂತೆ. ಮುಂಗಾರು ಮಳೆಯ ನಂತರ ಒಂದಷ್ಟು ಜನಪ್ರಿಯತೆಯನ್ನು ಈಗಲೂ ಉಳಿಸಿಕೊಂಡಿರುವ ನಾಯಕಿ ಈಕೆ. ಸದ್ಯ ಆಕೆ ಒಪ್ಪಿಕೊಂಡ ಚಿತ್ರಗಳು ಖಾಲಿಯಾಗಿವೆ. ಅನಿರೀಕ್ಷಿತವಾಗಿ ಬಂದಿರುವ ಆಫರ್ ಒಂದನ್ನು ಕಣ್ಮುಚ್ಚಿ ಒಪ್ಪಿಕೊಂಡಿರುವ ಆಕೆ ಇದುವರೆಗೂ ನಟಿಸಿರದಷ್ಟು ವಿಭಿನ್ನವಾದ ಮತ್ತು ಮಾದಕ ಪಾತ್ರವನ್ನು ಇದರಲ್ಲಿ ಮಾಡುತ್ತಿದ್ದಾರಂತೆ! ‘ಕೋಟೆ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು. ಅವರು ನಿರ್ಮಿಸುತ್ತಿರುವ ‘ದಂಡುಪಾಳ್ಯ’. ಸಿನಿಮಾದಲ್ಲಿ […]

ದರ್ಶನ್ -ನಿಖಿತಾ ಲವ್ ಸ್ಟೋರಿ

Friday, September 23rd, 2011
Darshan Nikhitha

ಸಿನಿಮಾಗಳಲ್ಲಿ ರೌಡಿ ಪಾತ್ರಗಳನ್ನು ಮಾಡುತ್ತಿದ್ದ ದರ್ಶನ್, ನಿಜ ಜೀವನದಲ್ಲಿ ಮರ್ಯಾದಾ ಪುರುಷೋತ್ತಮ ಅಂತಾನೇ ಮೊನ್ನೆಯವರೆಗೆ ಎಲ್ಲರೂ ಭಾವಿಸಿದ್ದರು. ಆದರೆ ಅದೆಲ್ಲ ಸುಳ್ಳು ಅನ್ನೋದನ್ನು ವಿಜಯಲಕ್ಷ್ಮಿ ಹೇಳಿದ್ದಾರೆ. ನಿಖಿತಾ ಮಾತ್ರವಲ್ಲದೆ, ಇತರರ ಜತೆಗೂ ಅವರು ಸಂಬಂಧ ಹೊಂದಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗಲೆಲ್ಲ ತನ್ನ ಮೇಲೆ ಹಲ್ಲೆ ನಡೆಯುತ್ತಿತ್ತು ಅಂತ ದೂರಿದ್ದಾರೆ. ವಿಜಯಲಕ್ಷ್ಮಿ, ಪೊಲೀಸರಿಗೆ ಹೇಳಿರುವ ಪ್ರಕಾರ , ದರ್ಶನ್ ಚಿತ್ರವಿಚಿತ್ರ ರೀತಿಯಲ್ಲಿ ನನಗೆ ಕಿರುಕುಳ ನೀಡುತ್ತಿದ್ದರು. ಅದು ಎಲ್ಲಿಯವರೆಗೆ ಎಂದರೆ, ನಾನು ಗರ್ಭಿಣಿಯಾಗಿದ್ದಾಗಲೂ ಹಲ್ಲೆ ನಡೆಸುವಷ್ಟರ ಮಟ್ಟಿಗೆ […]

ಮಂಗಳೂರಿನಲ್ಲಿ ನವೆಂಬರ್ 14 ರಿಂದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ

Monday, November 8th, 2010
ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಮಂಗಳೂರು : ಬೆಳ್ಳಿ ಸಾಕ್ಷಿ ಮತ್ತು ಬೆಳ್ಳಿ ಮಂಡಲ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಇದರ ವತಿಯಿಂದ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ  ನವೆಂಬರ್ 14 ರಿಂದ 17ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತಾದ ಪತ್ರಿಕಾಗೋಷ್ಟಿ ಇಂದು ಮಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲಿನಲ್ಲಿ ಮಧ್ಯಾಹ್ನ ನಡೆಯಿತು. ಸಮಕಾಲೀನ ಸಮಾಜಿಕ ಸಂಗತಿಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ದೃಶ್ಯಮಾಧ್ಯಮದ ಪ್ರಭಾವಿ ಅಂಗವಾದ ಚಲನಚಿತ್ರ ಮಾಧ್ಯಮವನ್ನು ಬಳಸಿಕೊಂಡು ಸಿನಿಮಾ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಿ ಸದಭಿರುಚಿಯ ಪ್ರೇಕ್ಷಕ ಸಮುದಾಯವನ್ನು ರೂಪಿಸಿ ಆ […]