Blog Archive

ಸ್ವಯಂಚಾಲಿತವಾಗಿ ಕೈ ಸ್ಯಾನಿಟೈಸ್ ಮಾಡಿಕೊಳ್ಳಬಹುದಾದ ಮಿನಿ ಯಂತ್ರ

Wednesday, July 22nd, 2020
jyotikiran

ಮೂಲ್ಕಿ: ಯಂತ್ರವನ್ನು ಮುಟ್ಟದೆ ಸ್ಯಾನಿಟೈಸರ್ ನಳ್ಳಿ ಬಳಿ ಕೈ ಇಟ್ಟರೆ ಸಾಕು ಒಂದಷ್ಟು ಸ್ಯಾನಿಟೈಸರ್ ನೇರವಾಗಿ ಕೈಗೆ ಬೀಳುವಂತಹ ಸ್ವಯಂಚಾಲಿತ ಮಿನಿ ಯಂತ್ರವನ್ನು ಹಳೆಯಂಗಡಿ ಬಳಿಯ ಶಾಲಾ ಶಿಕ್ಷಕಿಯೊಬ್ಬರು ರೂಪಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಡುಪಣಂಬೂರು ಗ್ರಾಮ ಪಂಚಾಯಿತಿಯ ತೋಕೂರು ತಪೋವನದ ನಿಟ್ಟೆ ವಿದ್ಯಾ ಸಂಸ್ಥೆಯ ಡಾ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿರುವ, ಸುರತ್ಕಲ್‌ ನಿವಾಸಿ ಜ್ಯೋತಿ ಕಿರಣ್ ಬಂಜನ್ ಎಸ್. ಈ ಯಂತ್ರವನ್ನು ಶೋಧಿಸಿದವರು. ‌ಅದಕ್ಕೆ ಅವರು ಮಾಡಿರುವ ವೆಚ್ಚ ₹300 ಮಾತ್ರ! ‘ಸಾರ್ವಜನಿಕವಾಗಿ […]

ಸುರತ್ಕಲ್ ನಲ್ಲಿ ಅನಧಿಕೃತ ಕ್ಲಿನಿಕ್ ಬಂದ್ ಮಾಡಿದ‌ ಆರೋಗ್ಯ ಇಲಾಖೆ

Thursday, April 16th, 2020
Raghavendra-clinic

ಮಂಗಳೂರು : ನೋಂದಣಿಗೊಳ್ಳದೆ ಸುರತ್ಕಲ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗೀ ವೈದ್ಯರ ಕ್ಲಿನಿಕ್ ಮೇಲೆ‌‌ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಲಿನಿಕ್ ಗೆ ಗುರುವಾರ  ಬೀಗ ಜಡಿದಿದ್ದಾರೆ. ಸುರತ್ಕಲ್ ನಲ್ಲಿ ಡಾ. ದಿನಕರ ರಾವ್ ಎಂಬವರಿಗೆ ಸೇರಿದ  ಶ್ರೀ ರಾಘವೇಂದ್ರ ಕ್ಲಿನಿಕ್ ಇದರ ನೋಂದಣಿ 2017ರಲ್ಲಿಯೇ ಮುಕ್ತಾಯವಾಗಿದ್ದು, ನಂತರ ನವೀಕರಣಗೊಳ್ಳದೆ ಕ್ಲಿನಿಕ್ ಕಾರ್ಯಾಚರಿಸುತ್ತಿತ್ತು. ಜಿಲ್ಲಾ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣಾಧಿಕಾರಿಯವರ ನಿರ್ದೇಶನದ ಮೇರೆಗೆ ಇಲಾಖೆಯ ಅಧಿಕಾರಿ ಡಾ.ಸಿಖಂದರ್ ಪಾಶಾ ಅವರು ಕ್ಲಿನಿಕ್ ಗೆ ದಾಳಿ ಮಾಡಿ, ಕ್ಲಿನಿಕನ್ನು ಮುಂದಿನ‌ ಆದೇಶದವರೆಗೆ […]

ತೀವ್ರ ಉಸಿರಾಟದ ಸಮಸ್ಯೆಯಿಂದ ಯುವಕ ಮೃತ ; ಗಂಟಲ ದ್ರವ ಕೊರೋನಾ ಪರೀಕ್ಷೆಗೆ

Wednesday, April 15th, 2020
Youth

ಮಂಗಳೂರು : ಯುವಕನೊಬ್ಬ ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮೃತಪಟ್ಟ ಘಟನೆ ಇಂದು ಸಂಜೆ ಸುರತ್ಕಲ್ ಸಮೀಪದ ಅಗರಮೇಲು ಎಂಬಲ್ಲಿ ನಡೆದಿದೆ. ಕೊರೋನಾ ಶಂಕೆಯ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯರು ಆತನ ಗಂಟಲ ದ್ರವವನ್ನು ಪರೀಕ್ಷೆಗಾಗಿ ರವಾನಿಸಿದ್ದಾರೆ. 27ರ ಹರೆಯದ ಯುವಕನಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮನೆಮಂದಿ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಕರೆಸಿದ್ದರು. ಆಂಬುಲೆನ್ಸ್ ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತ ಯುವಕನ ಗಂಟಲ ದ್ರವವನ್ನು ಸಂಗ್ರಹಿಸಿ […]

ಸುರತ್ಕಲ್ : ಕುಳಾಯಿ ಬಳಿ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅಮೋನಿಯಾ ಸೋರಿಕೆ

Saturday, February 22nd, 2020
suratkal

ಸುರತ್ಕಲ್ : ಇಲ್ಲಿನ ಕುಳಾಯಿಯ ಬಳಿಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅಮೋನಿಯಾ ಸೋರಿಕೆಯಾಗಿ ಪರಿಸರದಲ್ಲಿ ಆತಂಕದ ಪರಿಸ್ಥಿತಿ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಇಲ್ಲಿನ ವಿಜಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅವಗಢ ನಡೆದಿದ್ದು, ಸ್ಥಳಕ್ಕೆ ಹಲವು ಅಗ್ನಿ ಶಾಮಕ ದಳಗಳು ದೌಡಾಯಿಸಿದೆ.ಇಲ್ಲಿನ ವಿಜಯ ಮಂಜುಗಡ್ಡೆ ಉತ್ಪಾದನಾ ಘಟಕದಲ್ಲಿ ಅವಗಢ ನಡೆದಿದ್ದು, ಸ್ಥಳಕ್ಕೆ ಹಲವು ಅಗ್ನಿ ಶಾಮಕ ದಳಗಳು ದೌಡಾಯಿಸಿದೆ. ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಘಟನೆ ನಡೆದಿದ್ದು, ಸ್ಥಳೀಯರಿಗೆ ಉಸಿರು ಕಟ್ಟಿದ ಅನುಭವವಾಗಿದೆ. ಕೂಡಲೇ ಸ್ಥಳೀಯ […]

ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಯುವತಿ

Friday, December 13th, 2019
Kulayi

ಮಂಗಳೂರು : ಯುವಕನೋರ್ವ ಚಲಾಯಿಸುತ್ತಿದ್ದ ಕಾರಿನಲ್ಲಿ ಯುವತಿಯೊರ್ವಳು ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದನ್ನು ವಾಹನ ಚಾಲಕರು ಗಮನಿಸಿದ್ದಾರೆ. ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿಯೊರ್ವಳು ಪತ್ತೆಯಾದ ಘಟನೆ ಮಂಗಳೂರು ಹೊರ ವಲಯದ ಸುರತ್ಕಲ್ ನ ಕುಳಾಯಿ ಎಂಬಲ್ಲಿ ನಡೆದಿದೆ. ಅನುಮಾನಗೊಂಡು ವಾಹನ ಸವಾರರು ಕಾರನ್ನು ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ ಆದರೆ ಕಾರನ್ನು ಚಲಾಯಿಸುತ್ತಿದ್ದ ಯುವಕ ಕಾರು ನಿಲ್ಲಿಸದೆ ಮುಂದಕ್ಕೆ ಹೋದಾಗ ಸ್ಥಳೀಯರು ಕಾರನ್ನು ಬೆನ್ನಟ್ಟಿ ತಡೆದು ಪ್ರಶ್ನಿಸಿದಾಗ ಯುವಕ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ […]

ಸುರತ್ಕಲ್ : ಟೋಲ್ ಗುತ್ತಿಗೆ ನವೀಕರಿಸದಿರಲು ಹೋರಾಟ ಸಮಿತಿ ಆಗ್ರಹ

Saturday, October 26th, 2019
jayakumar

ಸುರತ್ಕಲ್ : ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್(ಮುಕ್ಕ) ಅಕ್ರಮ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹದ ಗುತ್ತಿಗೆ ನವೆಂಬರ್ ಹದಿನೈದಕ್ಕೆ ಮುಕ್ತಾಯಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಟೋಲ್ ಗುತ್ತಿಗೆಯನ್ನು ನವೀಕರಿಸದೆ, ಹೆದ್ದಾರಿ ಪ್ರಾಧಿಕಾರ ತೆಗೆದು ಕೊಂಡ ತೀರ್ಮಾನದಂತೆ ಟೋಲ್ ಕೇಂದ್ರವನ್ನು ಅಲ್ಲಿಂದ ತೆರವುಗೊಳಿಸಬೇಕು, ಹಾಗೂ ಹೆದ್ದಾರಿ ಗುಂಡಿಗಳಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವ ಸುರತ್ಕಲ್, ನಂತೂರು ಹೆದ್ದಾರಿಯನ್ನು ತಕ್ಷಣ ದುರಸ್ತಿಗೊಳಿಸಬೇಕು, ದುರ್ಬಲಗೊಂಡು ಸಂಚಾರಕ್ಕೆ ಅಯೋಗ್ಯಗೊಂಡಿರುವ ಕೂಳೂರು ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆಯನ್ನು ನಿರ್ಮಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ […]

ಕಾವೂರ್‌ ವಿದ್ಯಾ ಜ್ಯೋತಿ ಶಾಲೆಯಲ್ಲಿ ರಾಬಿನ್ ಹುಡ್ ಆರ್ಮಿ ಸಂಘಟನೆಯಿಂದ ‘ಬೊನ್ ಅಪೆಟಿಟ್-ಎ ಮೀಲ್ ಟು ಹೀಲ್’ ಕಾರ್ಯಕ್ರಮ

Thursday, October 3rd, 2019
kavoor

ಕಾವೂರು : ಅಕ್ಟೋಬರ್ 2 ಗಾಂಧೀ ಜಯಂತಿ ಪ್ರಯುಕ್ತ ರಾಬಿನ್ ಹುಡ್ ಆರ್ಮಿ ಸಂಘಟನೆಯು ’ಬೊನ್ ಅಪೆಟಿಟ್- ಎ ಮೀಲ್ ಟೂ ಹೀಲ್’ ಎಂಬ ಕಾರ್ಯಕ್ರಮವನ್ನು ಕಾವೂರು ವಿದ್ಯಾ ಜ್ಯೋತಿ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ಈ ಸಂಭರ್ದದಲ್ಲಿ ಅಲ್ಲಿನ ನೆರೆದ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಋತುಸ್ರಾವ ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಅರಿವು ಮೂಡಿಸಿದರು. ಸುಮಾರು 50 ಜನ ಸಂಘಟನೆಯಲ್ಲಿ ಸ್ವಯಂಸೇವಕರಿದ್ದು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಅನ್ನು ವಿತರಿಸಿದರು. ರಾಬಿನ್ ಹುಡ್ ಆರ್ಮಿ ಸಂಘಟನೆಯಲ್ಲಿ […]

ಹೆದ್ದಾರಿ ರಸ್ತೆಗಳ ದುರಸ್ತಿ : ಅಕ್ಟೋಬರ್‌ ಅಂತ್ಯದೊಳಗೆ ಪೂರ್ಣ

Friday, September 13th, 2019
Nalin-kumar

ಮಂಗಳೂರು : ಹದಗೆಟ್ಟಿರುವ ರಾಷ್ಟ್ರೀಯ/ರಾಜ್ಯ ಹೆದ್ದಾರಿಗಳು, ಘಾಟಿ ರಸ್ತೆಗಳು, ಲೋಕೋಪಯೋಗಿ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿಯನ್ನು ಅಕ್ಟೋಬರ್‌ ಅಂತ್ಯದೊಳಗೆ ಪೂರ್ಣಗೊಳಿ ಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದ್ದಾರೆ. ಅವರು ದ.ಕ. ಜಿ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಂತ್ರಿಕ ಅಥವಾ ಆರ್ಥಿಕ ನೆಪ ಹೇಳಿ ಕಾಮಗಾರಿ ವಿಳಂಬವಾಗಬಾರದು. ಕೇಂದ್ರ ಮಾತ್ರವಲ್ಲ ರಾಜ್ಯ ಸರಕಾರದಿಂದ ಹಣಕಾಸಿನ ನೆರವು ಅವಶ್ಯವಿದ್ದರೆ […]

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು : ಪ್ಲಾಸ್ಟಿಕ್ ಬಳಕೆದಾರರ ಮೇಲೆ ದಂಡ

Tuesday, September 3rd, 2019
banned-plastic

ಮಂಗಳೂರು : ಪ್ಲಾಸ್ಟಿಕ್ ನಿಷೇಧದ ಕುರಿತು ಇತೀಚೆಗೆ ಕಟ್ಟುನಿಟ್ಟಿನ ಕ್ರಮ ಅಳವಡಿಸಲಾಗಿದ್ದು, ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸದಂತೆ ಈ ಹಿಂದೆ ಅಧಿಕಾರಿಗಳು ಸೂಚಿಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ನಗರದ ಅಂಗಡಿ ಮುಂಗಟ್ಟುಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಭಾರಿ ದಂಡ ವಿಧಿಸಿ ಅವರ ಬಳಿಯಲ್ಲಿದ್ದ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಸೆಂಟ್ರಲ್ ಮಾರುಕಟ್ಟೆ,ಕದ್ರಿ, ಸುರತ್ಕಲ್, ಬಂದರು ಮತ್ತು ಲಾಲ್ ಬಾಗ್ ಪ್ರದೇಶದಲ್ಲಿ ಕಾರ್ಯಚರಣೆ ಪ್ರಾರಂಭಿಸಿದ್ದು ಕದ್ರಿ ಭಾಗದಲ್ಲಿ ಸುಮಾರು 50 ಕೆ.ಜಿಯಷ್ಟು […]

ಸ್ವಲ್ಪ ಶಬ್ದವಾದರೂ ಬೊಗಳುವ ನಾಯಿ ವಿರುದ್ಧ ಪೊಲೀಸರಿಗೆ ದೂರು

Monday, July 8th, 2019
Dog Barking

ಸುರತ್ಕಲ್‌:  ಸಾಕು ನಾಯಿಯೊಂದು  ನಮ್ಮ ನೆಮ್ಮದಿ ಕೆಡಿಸುತ್ತಿದೆ. ಅದರ ಬೊಗಳುವಿಕೆಯಿಂದ ವಿದ್ಯಾರ್ಥಿಗಳಿಗೆ ಓದಲಾಗುತ್ತಿಲ್ಲ ಎಂದು ಸ್ಥಳೀಯರು ಸುರತ್ಕಲ್‌ ಪೊಲೀಸರಿಗೆ ದೂರು ನೀಡಿದ ಕುತೂಹಲಕಾರಿ ಪ್ರಕರಣ ವರದಿಯಾಗಿದೆ! ಸುರತ್ಕಲ್‌ ಸಮೀಪದ ಕಾನದ  ಶರತ್‌ ಅವರು ಶ್ವಾನ ಪ್ರೇಮಿಯಾಗಿದ್ದು ಮೂರು ಶ್ವಾನಗಳನ್ನು ಸಾಕಿದ್ದರು. ಅವುಗಳು ಸ್ವಲ್ಪ ಶಬ್ದವಾದರೂ ಬೊಗಳಿ ಯಜಮಾನನನ್ನು ಎಚ್ಚರಿಸುತ್ತವೆ. ನಿರಂತರ ಅವುಗಳ ಬೊಗಳುವಿಕೆಯಿಂದ ನಮಗೆ ತೊಂದರೆಯಾಗುತ್ತದೆ ಎಂದು ಕೆಲವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಶರತ್‌ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಶ್ವಾನವನ್ನು ದೂರ ಬಿಡಿ, ಇಲ್ಲವೆ ಮನೆ […]