ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ರಚಿತ “ನಗ್ನ ಸತ್ಯ ಹಾಗೂ ಲ್ಯಾಂಡ್, ಜಸ್ಟ್ ಅಂಡ್ ಆಡಿಯೋ ಟೇಪ್ ” ಪುಸ್ತಕಗಳ ಲೋಕಾರ್ಪಣೆ

Saturday, October 2nd, 2021
Ramakrishna Upadya

ಬೆಂಗಳೂರು : ರಾಜ್ಯ ಹಾಗೂ ದೇಶದ ಆಡಳಿತದಲ್ಲಿ ಭ್ರಷ್ಟತೆ ಮತ್ತು ಚುನಾವಣೆಗಳಲ್ಲಿನ ಜಾತಿ ಹಾಗೂ ಹಣಬಲ ಹಾಸುಹೊಕ್ಕಾಗಿವೆ. ಈ ಪರಿಸ್ಥಿತಿ ಎದುರಾಗಲು ನಾವೇ ಕಾರಣಕರ್ತರು. ಈ ವ್ಯವಸ್ಥೆಯ ಬದಲಾಯಿಸಲು ಸಮಾಜಕ್ಕೆ ಈ ವ್ಯವಸ್ಥೆಯನ್ನು ಎದುರಿಸುವ ಶಕ್ತಿ ಬರಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಸ್ಕೌಟ್ಸ್‌ ಹಾಗೂ ಗೈಡ್ಸ್‌ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಉಪಾಧ್ಯರಿಂದ ರಚಿತವಾಗಿ ಅನು ಪ್ರಕಾಶ ಹೊರತಂದಿರುವ “ನಗ್ನ ಸತ್ಯ ಹಾಗೂ Land, Lust & Audiotapes“ ಪುಸ್ತಕಗಳ ಲೋಕಾರ್ಪಣೆ ಮಾಡಿ […]

ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಕಾಸರಗೋಡು ಆಯ್ಕೆ

Wednesday, September 8th, 2021
Achuta Chevar

ಕಾಸರಗೋಡು : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2021 ಪ್ರಶಸ್ತಿ ಪ್ರಕಟಿಸಿದ್ದು, ತೃತೀಯ ಪುರಸ್ಕಾರಕ್ಕೆ ಕೇರಳ ರಾಜ್ಯದ ಕಾಸರಗೋಡು ಅಲ್ಲಿನ ಹಿರಿಯ ಕನ್ನಡಿಗ ಪತ್ರಕರ್ತ ಅಚ್ಯುತ ಎಂ.ಚೇವಾರ್ ಇವರನ್ನು ಆಯ್ಕೆ ಮಾಡಿದೆ ಎಂದು ಪತ್ರಕರ್ತರ ಸಂಘವು ತಿಳಿಸಿದೆ. 2021 ನೇ ಸಾಲಿನ ಕಪಸಮ ತೃತೀಯ ಪ್ರಶಸ್ತಿ ಹಿರಿಯ ಕನ್ನಡಿಗ ಪತ್ರಕರ್ತರಿಗೆ ಕೊಡಮಾಡಲಾಗುತ್ತಿದೆ. ಇತ್ತೀಚೆಗೆ ನಡೆಸಲ್ಪಟ್ಟ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಿರ್ಧಾರ ಹಾಗೂ ಪ್ರಶಸ್ತಿ […]

ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ಇನ್ನಿಲ್ಲ

Friday, November 6th, 2020
sooryanarayana Poovala

ಬಂಟ್ವಾಳ : ಕಳೆದ ಇಪ್ಪತ್ತೈದು ವರ್ಷಗಳಿಗಿಂತಲೂ ಅಧಿಕ ಕಾಲ ಪತ್ರಕರ್ತರಾಗಿ ಬಂಟ್ವಾಳದಿಂದ ಕರ್ತವ್ಯ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕಲ್ಲಡ್ಕ ಸಮೀಪ ಅಮ್ಟೂರು ಪೂವಳ ನಿವಾಸಿ ಸೂರ್ಯನಾರಾಯಣ ರಾವ್ ಪೂವಳ (51) ಅಲ್ಪಕಾಲದ ಅಸೌಖ್ಯದ ಬಳಿಕ ಶುಕ್ರವಾರ ಬೆಳಗಿನ ಜಾವ ತನ್ನ ಮನೆಯಲ್ಲಿ ನಿಧನ ಹೊಂದಿದರು. ಕೊರೊನಾದಿಂದ ಗುಣಮುಖರಾದ ಬಳಿಕ ಕಿಡ್ನಿ ವೈಫಲ್ಯದಿಂದ ಕಳೆದೆರಡು ತಿಂಗಳಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ತೀವ್ರ ಶುಗರ್ ಸಮಸ್ಯೆಯು ಅವರನ್ನು ಕಾಡಿತ್ತು. ಅವರು ನಿನ್ನೆಯಷ್ಟೇ ಡಿಸ್ಚಾರ್ಜ್ ಆಗಿದ್ದರು. ಮುಂಗಾರು ಪತ್ರಿಕೆ ಸಹಿತ […]

ಪಯ್ಣಾರಿ ಮಾಜಿ ಉಪ ಸಂಪಾದಕ, ಹಿರಿಯ ಪತ್ರಕರ್ತ ಫೆಲಿಕ್ಸ್ ಎ. ಡಿ’ಸೋಜಾ ಬೆಂದೂರು ನಿಧನ

Wednesday, July 9th, 2014
Felix A Dsouza

ಮುಂಬಯಿ : ಮುಂಬಯಿ ಕೇಂದ್ರವಾಗಿರಿಸಿ ಸುಮಾರು ಸುವರ್ಣಯುಗ ಪೂರೈಸಿದ್ದ ಪಯ್ಣಾರಿ ಕೊಂಕಣಿ ವಾರಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕೊಂಕಣಿ ಪತ್ರಕರ್ತ ಸೇವಕ ಫೆಲಿಕ್ಸ್ ಅಂತೋನಿ ಡಿ’ಸೋಜಾ ಅವರು ಅನಾರೋಗ್ಯದಿಂದಾಗಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಕೆನಡಾದಲ್ಲಿನ ಸುಪುತ್ರನ ನಿವಾಸದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಂದೂರು ಮೂಲದವರಾಗಿದ್ದ ಮೃತರು ಪತ್ನಿ ಶ್ರೀಮತಿ ಸೆಲಿನ್, ಡಿ’ಸೋಜಾ ಒಂದು ಹೆಣ್ಣು ಡಿ’ಸೋಜಾ (ಲಿನೇಟ್ ಆಶಾ ಡಿ’ಸೋಜಾ), ಒಂದು ಗಂಡು (ಅರುಣ್ ಡಿ’ ಸೋಜಾ) ಸೇರಿದಂತೆ ಬಂಧು ಬಳಗವನ್ನು […]

ಪ್ರಶ್ನೆಗಳಲೇ ಪತ್ರಕರ್ತರ ಅಸ್ತ್ರವಾಗಿದೆ: ದಿನೇಶ್ ಅಮೀನ್ ಮಟ್ಟು

Sunday, June 1st, 2014
Mattu Dinesh

ಮುಂಬಯಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದ ವಕೋಲ ಉತ್ಕರ್ಷ್ ನಗರ್ ಇಲ್ಲಿನ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕಛೇರಿಗೆ ಭೇಟಿ ನೀಡಿದರು. ಕನ್ನಡಿಗರ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದ ಸಭೆಯಲ್ಲಿ ಹಿರಿಯ ಪತ್ರಕರ್ತ, ಅಂಕಣಕಾರ-ಚಿಂತಕ, ರವಿ.ರಾ.ಅಂಚನ್, ಸಂಘದ ಸಲಹಾಗಾರ ಗ್ರೇಗರಿ ಎಲ್.ಡಿ’ಅಲ್ಮೇಡಾ ಮತ್ತು ಉದ್ಯಮಿ ಸುಧಾಕರ್ ಉಚ್ಚಿಲ್ ಅವರು ವೇದಿಕೆಯಲ್ಲಿ ಆಸೀನರಿದ್ದು, ದಿನೇಶ್ ಮಟ್ಟು […]

ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

Thursday, September 16th, 2010
ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು. ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ […]