Blog Archive

ಉಳ್ಳಾಲ: ದುಷ್ಕರ್ಮಿಗಳಿಂದ ಬ್ಬರ ಮೇಲೆ ಮಾರಣಾಂತಿಕ ಹಲ್ಲೆ

Thursday, October 5th, 2017
death

ಮಂಗಳೂರು: ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ದುಷ್ಕರ್ಮಿಗಳು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಸುಕುಧಾರಿಗಳ ಗುಂಪೊಂದು ಮಚ್ಚು-ಲಾಂಗುಗಳಿಂದ ಇಬ್ಬರ ಮೇಲೆ ಮಾರಣಾಂತಿಕ ದಾಳಿ ಮುಕ್ಕಚ್ಚೇರಿಯಲ್ಲಿ ಬುಧವಾರ ನಡೆಸಿತ್ತು. ಈ ಘಟನೆಯಲ್ಲಿ ಝಬೈರ್ ಮತ್ತು ಇಲ್ಯಾಸ್ ಎಂಬುವವರು ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವಾಗ ಜುಬೈರ್‌ ಮಾರ್ಗ ಮಧ್ಯೆ ಅಸುನೀಗಿದ್ದಾನೆ. ಇದೀಗ ದುಷ್ಕರ್ಮಿಗಳ ದಾಳಿ ದೃಶ್ಯ ಸ್ಥಳೀಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದ್ದು ಅದು ಲಭ್ಯವಾಗಿವೆ.

ಉಳ್ಳಾಲ ಅಳಿವೆಯಲ್ಲಿ ಮೀನುಗಾರಿಕ ಬೋಟ್ ಮುಳುಗಿ ಮೀನುಗಾರ ನಾಪತ್ತೆ

Wednesday, September 21st, 2016
fish-boat

ಮಂಗಳೂರು: ಉಳ್ಳಾಲ ಅಳಿವೆಯಲ್ಲಿ ಮೀನುಗಾರಿಕ ಬೋಟ್ ಮುಳುಗಿ ಮೀನುಗಾರ ನಾಪತ್ತೆಯಾದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗರ್ ಗ್ರಾಮದ ನಿವಾಸಿ ಹಮೀದ್ ನಾಪತ್ತೆಯಾಗಿರುವ ಮೀನುಗಾರ. ದೋಣಿಯಲ್ಲಿದ್ದ ಕುಮಟಾದ ಕಾಗಲ್‌ನ ನಿವಾಸಿಗಳಾದ ಸಮೀರ್ ಇಸ್ಮಾಯಿಲ್ (30), ರಹೀಂ ಇಸಾಕ್ ವಡೇಕರ್ (30), ಬಗರ್‌ ಗ್ರಾಮದ ಅಬ್ದುಲ್ಲ ಇಸ್ಮಾಲ್ (42), ಪರದ್ ಬಾಹರ್ ಗ್ರಾಮದ ಭುವನ ಕುಮಾರ್ (26) ಮತ್ತು ರಿಶಿಕುಮಾರ್ (30) ಈಜಿ ದಡ ಸೇರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಸಬಾ ಬೆಂಗ್ರೆಯ ಅಬೂಬಕ್ಕರ್ ಅಶ್ರಫ್ […]

ಉಳ್ಳಾಲದಲ್ಲಿ ಮಸಣದಲ್ಲಿ ಸತ್ತ ಹಸುಗೂಸು ಅಳಲು ಆರಂಭಿಸಿದ ವಿಸ್ಮಯಕಾರಿ ಘಟನೆ

Saturday, August 23rd, 2014
infant

ಮಂಗಳೂರು: ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಹಸುಗೂಸೊಂದರ ಅಂತ್ಯಸಂಸ್ಕಾರವನ್ನು ಮಾಡಲು ತಯಾರು ನಡೆಸಲಾಗುತ್ತಿತ್ತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ದಫನ ಮಾಡಲು ಮುಂದಾಗ ಮಗು ಆಳಲು ಆರಂಭಿಸಿದ ವಿಸ್ಮಯಕಾರಿ ಘಟನೆ ಉಳ್ಳಾಲದಲ್ಲಿ ಶನಿವಾರ ನಡೆದಿದೆ. ದೇರಳಕಟ್ಟೆಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಕುಮುಟದ ಗೌರಿ ಎಂಬವರು ಕಳೆದ 15 ದಿನಗಳ ಹಿಂದೆ ದಾಖಲಾಗಿದ್ದರು. ಇವರಿಗೆ ಸೀಸೆರಿಯನ್ ಮಾಡಿದ ವೈದ್ಯರು ಮಗುವನ್ನು ಹೊರ ತೆಗೆದಿದ್ದರಲ್ಲದೆ ಹಸುಗೂಸಿನ ಚೇತರಿಕೆಗಾಗಿ ವಿಷೇಶ ಕೋಣೆಯಲ್ಲಿ ಇರಿಸಲಾಗಿತ್ತು. ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೌರಿಯ ಗಂಡ ಪುಷ್ಪರಾಜ್‌ಗೆ ಕರೆ […]

ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿರ್ಸಿ ಮೂಲದ ಯುವಕ ನಾಪತ್ತೆ

Sunday, July 21st, 2013
Vinay Vaz

ಮಂಗಳೂರು:  ಶುಕ್ರವಾರ ರಾತ್ರಿ ಕೇರಳದ ಎರ್ನಾಕುಳಂನಿಂದ ಮಂಗಳೂರು ಕಡೆಗೆ ಬರುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಸಿರ್ಸಿ ಮೂಲದ ವಿನಯ್‌ ವಾಜ್‌ (24) ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದಾರೆ. ನೇತ್ರಾವತಿ ಸೇತುವೆ ಬಳಿ ತಲುಪಿದಾಗ ರೈಲು ನಿಧಾನವಾಗಿ ಚಲಿಸಲಾರಂಭಿಸಿದ್ದು, ಇದು ನಿಲ್ದಾಣವಾಗಿರಬೇಕು ಎಂದು ಭಾವಿಸಿ ಕತ್ತಲೆಯಲ್ಲಿ ವಿನಯ್‌ರಾಜ್‌ ಇಳಿದು ನೇತ್ರಾವತಿ ನದಿಗೆ ಬಿದ್ದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ವಿನಯರಾಜ್‌ ಸಹಿತ 47 ಮಂದಿಯ ತಂಡ  ಕೇರಳದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿತ್ತು.  173 ಸೆ.ಮೀ. […]

ಎರಡು ದಿನಗಳ ಕಾಲ ನಡೆದ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ ಸಮಾರಂಭದ ಸಮಾರೋಪ

Monday, February 11th, 2013
Veerarani Abbakka Dashamanotsav

ಮಂಗಳೂರು : ಉಳ್ಳಾಲ ಭಾರತ್ ಶಾಲೆಯ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ವೀರ ರಾಣಿ ಅಬ್ಬಕ್ಕ ದಶಮಾನೋತ್ಸವ-2013 ಭಾನುವಾರ ಸಂಪನ್ನಗೊಂಡಿತು. ಸಮಾರೋಪದಲ್ಲಿ ಸಾಹಿತಿ, ಪತ್ರಕರ್ತೆ ಜಯಂತಿ ಎಸ್. ಬಂಗೇರ ಹಾಗೂ ಜಾನಪದ ಕಲಾವಿದೆ ಮತ್ತು ನಾಟಿವೆದ್ಯೆ ಕರ್ಗಿ ಶೆಡ್ತಿ ಅವರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ಪ್ರಧಾನ ಮಾಡಲಾಯಿತು. ಮಂಗಳೂರು ಶಾಸಕ, ಉತ್ಸವ ಸಮಿತಿ ಗೌರವಾಧ್ಯಕ್ಷ ಯು.ಟಿ. ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ […]

ಸಾಗರೋತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದ ಕಂಪನಿಗೆ ವಂಚನೆ, ಆರೋಪಿಯ ಬಂಧನ

Wednesday, February 6th, 2013
Shameer Bashyar

ಮಂಗಳೂರು : ಸಾಗರೋತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದ ನಗರದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಳ್ಳಾಲ ನಿವಾಸಿ ಶಮೀರ್ ಬಶಾರ್ ಎಂಬಾತನು ಕಂಪನಿಗೆ 3.3 ಕೋಟಿ ರೂಪಾಯಿಗಳ ಮೋಸವನ್ನು ಮಾಡಿದ್ದಾನೆ ಎಂದು ಕಂಪನಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ನಿಟ್ಟಿನಲ್ಲಿ  ಪಾಂಡೇಶ್ವರ ಪೊಲೀಸರು ಉಳ್ಳಾಲ ನಿವಾಸಿ ಶಮೀರ್ ಬಶಾರ್ ನನ್ನು ಬಂಧಿಸಿದ್ದು ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಂಪನಿಯು ದೂರಿನಲ್ಲಿ ಶಮೀರ್ ತನ್ನ ಕಂಪನಿಗೆ ಬರಬೇಕಾಗಿದ್ದ ಕೋಟ್ಯಾಂತರ ರೂಪಾಯಿಗಳನ್ನು ತನ್ನ ಖಾತೆಗೆ ಬರುವಂತೆ ಮಾಡಿ ಹಲವು ವರ್ಷಗಳಿಂದ […]

ಉಳ್ಳಾಲ : ವೈಯಕ್ತಿಕ ದ್ವೇಷ ಯುವಕನ ಕೊಲೆಯತ್ನ

Thursday, January 10th, 2013
Ullal group clash

ಉಳ್ಳಾಲ : ಉಳ್ಳಾಲ ಕೋಡಿ ನಿವಾಸಿ ಇಬ್ರಾಹಿಂ ಎಂಬವರ ಮಗ ವಾಕರ್ ಯೂನುಸ್ (೨೧) ಎಂಬಾತನ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಾಕರ್ ಯೂನುಸ್ ನಿನ್ನೆ ರಾತ್ರಿ ದರ್ಗಾ ಸಂದರ್ಶನ ಮುಗಿಸಿ ಕೋಡಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕೊಲೆಯತ್ನ ನಡೆಸಲಾಗಿದೆ. ವಕಾರ್ ಯೂನಸ್ ತನ್ನ ಸ್ನೇಹಿತರೊಂದಿಗೆ ಕಾರಿನಿಂದ ಇಳಿದು ಪಕ್ಕದಲ್ಲಿದ್ದ ಗೂಡಂಗಡಿ ಬಳಿ ತೆರಳುತ್ತಿದ್ದಾಗ ಹಠಾತನೆ ದಾಳಿ ನಡೆಸಿದ ಇಲಿಯಾಸ್ […]

ಕಾಂಗ್ರೆಸ್ ವತಿಯಿಂದ ಫೆ.3ರಂದು ಬೃಹತ್ ಯುವ ಜಾಗೃತಿ ಸಮಾವೇಶ

Friday, January 28th, 2011
ಬೃಹತ್ ಯುವ ಜಾಗೃತಿ ಸಮಾವೇಶ

ಮಂಗಳೂರು; ದೇಶಾದ್ಯಂತ ಯುವ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳನ್ನು ಪ್ರಜಾತಂತ್ರ ವ್ಯವಸ್ಥೆಯ ಮೂಲಕ ಆರಿಸಿ ಪಕ್ಷವನ್ನು ಬಲಿಷ್ಠಗೊಳಿಸುವ ಹಾಗೂ ಪಾರದರ್ಶಕ ವ್ಯವಸ್ಥೆ ಸ್ಥಾಪಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಸಮಿತಿಗೆ ಚುನಾವಣೆಯನ್ನು ಶ್ರೀಯುತ ರಾಹುಲ್ ಗಾಂಧಿಯವರು ಚಾಲನೆ ನೀಡಿದ್ದು ಈ ಪ್ರಕ್ರಿಯೆಯನ್ನು ಈಗಾಗಲೇ ಸುಮಾರು 16 ರಾಜ್ಯಗಳಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೆಸ್ ಸಮಿತಿಗೆ   ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾದ ಪ್ರಯುಕ್ತ ಮೊದಲನೆಯದಾಗಿ ಯುವ ಜನರನ್ನು ಯುವ ಕಾಂಗ್ರೆಸ್ಗೆ ಸದಸ್ಯರನ್ನಾಗಿ ನೋಂದಾಯಿಸುವ ಪ್ರಕ್ರಿಯೆ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ […]