ಕರೊನಾ ದಿಂದಾಗಿ ಬ್ರಿಟನ್ ವಿಶ್ವವಿದ್ಯಾಲಯಗಳಿಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ

Tuesday, July 7th, 2020
london Education

ಲಂಡನ್: ಬ್ರಿಟನ್ ವಿಶ್ವವಿದ್ಯಾಲಯಗಳೀಗ ಕರೊನಾ ದಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕುವ ಆತಂಕಕ್ಕೀ ಡಾಗಿವೆ. ಕರೊನಾ ಸೋಂಕು ಜಾಗತಿಕವಾಗಿ ಹಬ್ಬಿದ ಬಳಿಕ ವಿದ್ಯಾಭ್ಯಾಸಕ್ಕಾಗಿ ಬ್ರಿಟನ್ಗೆ ಆಗಮಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಇದಂದಾಗಿ ಸುಮಾರು 13 ವಿಶ್ವವಿದ್ಯಾಲಯಗಳು -13 ಸಾವಿರ ಕೋಟಿಯಿಂದ 40 ಸಾವಿರ ಕೋಟಿ ರೂ. ವರೆಗೆ ನಷ್ಟಕ್ಕೆ ಗುರಿಯಾಗುವ ಅಂದಾಜಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ಸಂಕಷ್ಟದಿಂದ ಪಾರಾಗಲು ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಿರೀಕ್ಷಿಸುತ್ತಿವೆ. ಸೆಪ್ಟೆಂಬರ್ನಲ್ಲಿ ಕಾಲೇಜಿಗೆ ನೋಂದಣಿ ಶುರುವಾಗುವ ವೇಳೆಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ […]

‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆ ನವೆಂಬರ್ ವರೆಗೆ ವಿಸ್ತರಣೆ

Tuesday, June 30th, 2020
Narendra modi

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯನ್ನು ದೀಪಾವಳಿಯಿಂದ ಆಯುಧಪೂಜೆಯವರೆಗೆ ಅಂದರೆ, ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಮೋದಿ ಪ್ರಕಟಿಸಿದರು. ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು […]

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ದಿ. ಜಾರ್ಜ್ ಫೆರ್ನಾಂಡಿಸ್ ರ 91 ನೇ ಹುಟ್ಟು ಹಬ್ಬದ ಸಂಸ್ಮರಣೆ

Thursday, June 25th, 2020
george-fernandes

ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ ಕರಾವಳಿಯ ಮೂರು ಜಿಲ್ಲೆಗಳಾದ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು. ಮಹಾನಗರದ ವಿವಿಧ ಜಾತೀಯ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಈ […]

ತಲ್ಚೇರ್‌ ರಸಗೊಬ್ಬರ ಕಾರ್ಖಾನೆ ಪುನಶ್ಚೇತನ ಯೋಜನೆ ಅವಧಿಯಲ್ಲಿ ಪೂರ್ಣಗೊಳಿಸಲು ಸದಾನಂದ ಗೌಡ ಸೂಚನೆ

Tuesday, June 23rd, 2020
DVS-TFL

ನವದೆಹಲಿ : ಒರಿಸ್ಸಾದ ತಲ್ಚೇರನಲ್ಲಿರುವ ರಸಗೊಬ್ಬರ ಕಾರ್ಖಾನೆಯ (ಟಿಎಎಲ್‌) ಪುನಶ್ಚೇತನ ಕಾಮಗಾರಿಗಳನ್ನು ತ್ವರಿತಗೊಳಿಸಲು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಕಾರ್ಖಾನೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಟಿಎಫೆಲ್‌ ವ್ಯವಸ್ಥಾಪಕ ನಿರ್ದೇಶಕ  ಎಸ್.‌ ಎನ. ಯಾದವ್‌, ನಿರ್ದೇಶಕ (ಆಪರೇಷನ್ಸ್)‌  ಎಸ್‌ ಗಾವಡೆ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ದೆಹಲಿಯಲ್ಲಿ ಇಂದು ಯೋಜನೆಯ ಪ್ರಗತಿ ಪರಿಶೀಲಿಸಿದರು. ಯೋಜನೆಯ ಪ್ರಗತಿ ಬಗ್ಗೆ ವಿವರ ನೀಡಿದ ಯಾದವ್‌ ಅವರು – ಕೊರೊನಾ ರೋಗ ಹಾಗೂ ಲಾಕ್ಡೌನ್‌ನಿಂದಾಗಿ ಮಾನವ […]

ಮಂಗಳೂರಿಗೆ 180 ಜನರು ಹಾಗೂ 5 ಶಿಶುಗಳ ಜೊತೆ ಮೃತದೇಹ ಕರೆತಂದ ವಂದೇ ಭಾರತ್ ಮಿಷನ್ ವಿಮಾನ

Saturday, June 20th, 2020
dohaquatar

ಕತಾರ್  : ಸತತವಾಗಿ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳಿಗೆ ಅಲ್ಲಿನ ಕನ್ನಡ ಸಂಘಟನೆಗಳೂ ಸೇರಿದಂತೆ ಹಲವಾರು ಜನ ಪ್ರಯತ್ನಿಸಿದ್ದರ ಫಲವಾಗಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ದೋಹಾದಿಂದ ಮಂಗಳೂರಿಗೆ ಮೊದಲ ವಿಮಾನ ಶುಕ್ರವಾರ ಮಧ್ಯಾಹ್ನ 12:00 ಕ್ಕೆ ಹಾರಿಸಲಾಯಿತು. ವಿಮಾನ ಸಂಜೆ 06:35 ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಲಿದೆ, ಇದು ದಕ್ಷಿಣ ಕೆನರಾ ಜನರಿಗೆ ಬಹಳ ದೊಡ್ಡ ಪರಿಹಾರವಾಗಿದೆ, ಕತಾರ್ನಲ್ಲಿ ಕನ್ನಡಿಗ ಜನಸಂಖ್ಯೆಯ ದಕ್ಷಿಣ ಕೆನರಾದಿಂದ ಬಂದವರು ಕತಾರ್‌ನಲ್ಲಿ ನಮ್ಮ ಕನ್ನಡಿಗರು ಅನುಭವಿಸುತ್ತಿರುವ […]

ಕತಾರಿನ ಸಂಕಷ್ಠದಿಂದ ಹಾರಿದ 2ನೇ ಆಪತ್ಭಾಂಧವ ವಿಮಾನ

Monday, June 15th, 2020
qutar

ಕತಾರ್  : ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋನಾ ಮಹಾಮಾರಿಯು ವಿದ್ಯುತ್ ವೇಗದಲ್ಲಿ ಹರಡುತ್ತಿರುವುದು ಪ್ರಚಲಿತ ವಿದ್ಯಮಾನವಾಗಿದೆ. ಇದರ ಕಾರಣದಿಂದಾಗಿ ಭಾರತ ಮೂಲದ ಸಾವಿರಾರು ಜನರು ಕೊಲ್ಲಿ ದೇಶಗಳಲ್ಲೊಂದಾದ ಕತಾರಿನಲ್ಲಿ ವಿವಿಧ ಕಾರಣಗಳಿಂದ ಸಲುಕಿ ಸಂಕಷ್ಠದಲ್ಲಿರುವರು. ಕೆಲವರು ಕೆಲಸ ಕಳೆದುಕೊಂಡಿರುವರು, ಇನ್ನೂ ಕೆಲವರು ಅತೀವ ಅನಾರೋಗ್ಯದಿಂದ ನರಳುತ್ತಿರುವರು, ಮತ್ತೂ ಕೆಲವರು ಅನ್ನಾಹಾರಗಳಿಗೂ ಪರದಾಡುತ್ತಿರುವರು. ಇಂತಹವರಲ್ಲಿ 177 ಜನರಿಗೆ ಫ್ರಥಮ ಆದ್ಯತೆ ನೀಡಿ, ದಿನಾಂಕ 22 ಮೇ 2020 ರಂದು ’ವಂದೇ ಭಾರತ ನಿಯೋಗ’ದ ಸೇವೆಯಲ್ಲಿ ಬಂದ ವಿಮಾನದ ಮೂಲಕ ಮಾತೃಭೂಮಿಗೆ ಕಳುಹಿಸಿಕೊಡಲಾಗಿತ್ತು. ಇನ್ನೂ […]

ಮಾಜಿ ಪ್ರೇಯಸಿ ಅಂಕಿತಾ ಎಂಗೇಜ್‌ಮೆಂಟ್ ಫೋಟೋ ನೋಡಿ ಆತ್ಮಹತ್ಯೆ ಮಾಡಿಕೊಂಡರೇ ಸುಶಾಂತ್ ?

Sunday, June 14th, 2020
shushanth

ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್  ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆಗೆ ಕೆಲ ದಿನಗಳ ಹಿಂದಷ್ಟೇ ಎಂಗೇಜ್‌ಮೆಂಟ್ ಆಗಿದೆ ಎಂಬ ಮಾಹಿತಿ ಹರಡಿದ ನಂತರ  ಕೆಲ ದಿನಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆಯಾದರೂ, ಆ ಖಿನ್ನತೆಗೆ ನಿಜ ಕಾರಣವೇನು ಎಂಬುದು ಗೊತ್ತಾಗಿಲ್ಲ,  ಅಷ್ಟರಲ್ಲೇ ಸುಶಾಂತ್ ಅವರ ಅಂತ್ಯವಾಗಿದೆ. ‘ಪವಿತ್ರ ರಿಷ್ತಾ’ದಲ್ಲಿ ಸುಶಾಂತ್ ಮತ್ತು ಅಂಕಿತಾ ಒಟ್ಟಿಗೆ ನಟಿಸಿದ್ದರು. ಆನಂತರ ಇಬ್ಬರ ನಡುವೆ ಉತ್ತಮ ಒಡನಾಟ ಬೆಳೆದಿತ್ತು. ಆರಂಭದಲ್ಲಿದ್ದ ಸ್ನೇಹ ಆ ಬಳಿಕ ಪ್ರೀತಿಗೆ ತಿರುಗಿತು. ಅನೇಕ ವರ್ಷಗಳ […]

ಕೊರೊನಾ ಗುಣ ಪಡಿಸುತ್ತೇನೆಂದು ಕಿಸ್ ಕೊಟ್ಟ ಬಾಬಾ ಮೃತ್ಯು, ಕಿಸ್ ಕೊಡಿಸಿಕೊಂಡ ನಾಲ್ವರು ಬಲಿ

Friday, June 12th, 2020
aslam-baba

ಮಧ್ಯಪ್ರದೇಶ :  ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲೊಬ್ಬ ಕೈಗೆ ಮುತ್ತು ಕೊಡುವ ಮೂಲಕ ಕರೊನಾ ಓಡಿಸುತ್ತೇನೆಂದು ನಂಬಿಸಿ, ಅನೇಕ ಮಂದಿಗೆ ಮುತ್ತುಕೊಟ್ಟಿದ್ದ. ಇದೀಗ ಅದೇ ಬಾಬಾ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಈತನಿಂದ ಮುತ್ತು ಪಡೆದಿರುವ 85ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 19 ಮಂದಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ. ಈ ಪೈಕಿ ನಾಲ್ವರು ಇದಾಗಲೇ ಮೃತಪಟ್ಟಿದ್ದಾರೆ! ಈ ಸ್ವಯಂ ಘೋಷಿತ ಮುಸ್ಲಿಂ ದೇವಮಾನವ ಬಾಬಾನ ಹೆಸರು ಅಸ್ಲಾಂ ಎಂದು […]

ಮಲಾಡ್ ಶೇಖರ್ ಪೂಜಾರಿ ಬ್ರಹ್ಮಾವರ ನಿಧನ

Tuesday, June 9th, 2020
Sjekar-poojary

ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಲೇಜಿನ ಕ್ಯಾಂಟೀನ್ ಮಾಲಕ ಶೇಖರ್ ಪೂಜಾರಿ ಬ್ರಹ್ಮಾವರ (58) ಜೂನ್ 7ರಂದು ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಶೇಖರ್ ಪೂಜಾರಿಯವರು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸ್ಥಾಪಕ ಸದಸ್ಯರು. ಬಿಲ್ಲವರ ಅಸೋಸಿಯೇಷನ್ ಮಲಾಡ್ ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಾ, ಸಮಾಜಪರ ಸೇವೆ ಮಾಡುತ್ತಿದ್ದರು.ಯಕ್ಷಗಾನದ ಅಭಿಮಾನಿ ಆಗಿದ್ದ ಇವರು, ವರಮಹಾಲಕ್ಷ್ಮಿ ಪೂಜಾ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಸಮಿತಿಯ ಸದಸ್ಯರಿಂದಲೇ ಯಕ್ಷಗಾನ ಮಾಡುವಂತೆ […]

ಸದಸ್ಯರಿಗೆ ಆಸರೆಯಾದ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ

Monday, June 8th, 2020
soorya s

ಮುಂಬಯಿ : ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿಯು ಶ್ರೀ ನಾರಾಯಣ ಗುರುಗಳ ತತ್ವ – ಉಪದೇಶಗಳನ್ನು ಅಳವಡಿಸಿಕೊಂಡು ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಪ್ರತಿವರ್ಷ ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡುವುದಲ್ಲದೆ ಅಸಹಾಯಕ ಸಮಾಜ ಬಾಂಧವರಿಗೆ ವೈದ್ಯಕೀಯ ನೆರವು ನೀಡುತ್ತಾ, ವಧು-ವರರ ಅನ್ವೇಷಣೆಗೆ ಸಹಾಯ ಮಾಡುತ್ತಾ ಬಂದಿರುವ ಸಂಘವು ಸದಸ್ಯ ಬಾಂಧವರ ಸುಖ-ದುಃಖಗಳಿಗೆ ಸದಾ ಸ್ಪಂದಿಸಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು ಇದೀಗ […]