ದೆಹಲಿ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ : ರಕ್ಷಣಾ ಕಾರ್ಯಾಚರಣೆ ವೇಳೆ ಕುಸಿದ ಕಟ್ಟಡ

Thursday, January 2nd, 2020
dehli

ನವದೆಹಲಿ : ಬೆಂಕಿ ಅವಘಡ ಸಂಭವಿಸಿದ್ದ ಪೀರಗರ್ಹಿಯ ಫ್ಯಾಕ್ಟರಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕಟ್ಟಡ ಕುಸಿದು ಬಿದ್ದಿದೆ. ಪರಿಣಾಮ ಹಲವು ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ಪ್ರಾಥಮಿಕ ಮೂಲಗಳ ಪ್ರಕಾರ, ಪೀರಗರ್ಹಿಯ ಫ್ಯಾಕ್ಟರಿಯೊಂದಲ್ಲಿ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿತ್ತು. ಕೂಡಲೇ ಸ್ಥಳಕ್ಕೆ 7 ಅಗ್ನಿಶಾಮಕ ವಾಹನಗಳು ಧಾವಿಸಿದ್ದವು. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾಗ ಇದ್ದಕ್ಕಿದ್ದಂತೆ ಕಟ್ಟಡ ಕುಸಿದು ಬಿದ್ದಿದೆ. ಪರಿಣಾಮ […]

ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪಶ್ಚಿಮಬಂಗಾಳದ ಸ್ತಬ್ದಚಿತ್ರ ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ

Thursday, January 2nd, 2020
mamatha

ಕೋಲ್ಕತಾ : ಜನವರಿ 26 ರಂದು ರಾಷ್ಟ್ರರಾಜಧಾನಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪಶ್ಚಿಮಬಂಗಾಳದ ಟ್ಯಾಬ್ಲೋ(ಸ್ತಬ್ದಚಿತ್ರ) ಪ್ರದರ್ಶಿಸುವ ಪ್ರಸ್ತಾಪವನ್ನು ಕೇಂದ್ರ ರಕ್ಷಣಾ ಸಚಿವಾಲಯ ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಂತಾಗಿದೆ. ಪಶ್ಚಿಮಬಂಗಾಳ ಸರ್ಕಾರದ ಟ್ಯಾಬ್ಲೋ ಪ್ರಸ್ತಾಪವನ್ನು ತಜ್ಞರ ಸಮಿತಿ ಎರಡು ಬಾರಿ ಸಭೆ ನಡೆಸಿ ಪರಿಶೀಲನೆ ನಡೆಸಿತ್ತು. ಪಶ್ಚಿಮಬಂಗಾಳದ ಟ್ಯಾಬ್ಲೋ ಪ್ರದರ್ಶನದ ಪ್ರಸ್ತಾಪವನ್ನು ಪರಿಗಣಿಸದಿರಲು ಸಮಿತಿ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಗಣರಾಜ್ಯೋತ್ಸವ […]

ಎಲ್​ಪಿಜಿ ಬಳಕೆದಾರರಿಗೆ ಹೊಸ ವರ್ಷದ ಆರಂಭದಲ್ಲೇ ದರ ಏರಿಕೆ

Wednesday, January 1st, 2020
LPG

ನವದೆಹಲಿ : ಜನವರಿ 1ರಿಂದಲೇ ಜಾರಿಗೆ ಬರುವಂತೆ ದೇಶಾದ್ಯಂತ ಸಬ್ಸಿಡಿ ರಹಿತ ಎಲ್ಪಿಜಿ ಅಥವಾ ಅಡುಗೆ ಅನಿಲ ದರ ಏರಿಕೆಯಾಗಿದ್ದು, ಒಂದೇ ತಿಂಗಳ ಅಂತರದಲ್ಲಿ ಐದನೇ ಬಾರಿಗೆ ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಸಿಲಿಂಡರ್ಗೆ 19 ಮತ್ತು 19.5 ರೂ. ಏರಿಕೆ ಕಂಡಿದ್ದು, ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗೆ ದೆಹಲಿಯಲ್ಲಿ 714 ರೂ. ಮತ್ತು ಮುಂಬೈನಲ್ಲಿ 684.50 ರೂ. ಇರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ. ಆದರೆ, […]

ಹೊಸ ವರ್ಷದ ದಿನದಂದೇ ರೈಲ್ವೆ ಪ್ರಯಾಣ ದರದಲ್ಲಿ ಹೆಚ್ಚಳ

Wednesday, January 1st, 2020
Railway

ನವದೆಹಲಿ : ಹೊಸ ವರ್ಷದ ದಿನದಂದೇ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಜೇಬಿಗೆ ಬರೆ ಎಳೆದಿದೆ. ರೈಲು ಪ್ರಯಾಣದ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಉಪನಗರ ರೈಲು ಪ್ರಯಾಣ ದರದಲ್ಲಿ ಬದಲಾವಣೆ ಇಲ್ಲ. ಆರ್ಡಿನರಿ ನಾನ್ ಎಸಿ, ಎಸಿ, ಶತಾಬ್ದಿ, ರಾಜಧಾನಿ, ತುರಂತ್ ರೈಲುಗಳಿಗೆ ದರ ಹೆಚ್ಚಳ ಅನ್ವಯವಾಗಲಿದೆ. ಟಿಕೆಟ್ ಕಾಯ್ದಿರಿಸುವಿಕೆ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಕಾಯ್ದಿರಿಸಿರುವ ಟಿಕೆಟ್ಗಳಿಗೆ ದರ ಹೆಚ್ಚಳ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ […]

ಕೇಸರಿ ಬಟ್ಟೆ ಬಗ್ಗೆ ಟೀಕಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾಗೆ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ

Tuesday, December 31st, 2019
yogi-adhithyanath

ಲಕ್ನೋ : ಕೇಸರಿ ಬಟ್ಟೆ ಯೋಗಿ ಆದಿತ್ಯನಾಥ್ ಅವರ ಸ್ವತ್ತಲ್ಲ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ‘ನಾನು ಎಲ್ಲವನ್ನೂ ತ್ಯಾಗ ಮಾಡಿಯೇ ಸಾರ್ವಜನಿಕ ಸೇವೆಗೆ ಬಂದವನು’ ಎಂದು ಹೇಳಿದ್ದಾರೆ. ಸಿಎಎ ವಿರುದ್ಧದ ಹೋರಾಟವನ್ನು ಬೆಂಬಲಿಸಿ ಲಕ್ನೋ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವಾಗ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದರು. ಸಿಎಂ ಯೋಗಿ […]

ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ನೇಮಕ

Tuesday, December 31st, 2019
bipin

ನವದೆಹಲಿ : ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ದೇಶದ ಮೊದಲು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೆಮಕಗೊಂಡಿದ್ದಾರೆ. 62 ವರ್ಷದ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿ ನಿವೃತ್ತಿ ಹೊಂದಲು ಒಂದು ದಿನ ಇರುವಂತೆಯೇ ಅಚ್ಚರಿಯ ಬೆಳವಣಿಗೆಯಲ್ಲಿ ಸಿಎಎಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಬಿಪಿನ್ ರಾವತ್ ಅವರಿಗೆ ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಸೇನಾ ಮುಖ್ಯಸ್ಥರ ವಯೋಮಿತಿಯನ್ನು 62ರಿಂದ 65 ವರ್ಷಕ್ಕೆ ನಿನ್ನೆ ಏರಿಸಿತ್ತು. ಕೆಲ ದಿನಗಳ ಹಿಂದಷ್ಟೇ ರಕ್ಷಣಾ […]

ಇತಿಹಾಸದ ಪುಟ ಸೇರಿದ ಕಾರ್ಗಿಲ್ ಯುದ್ಧವಿಮಾನ ಮಿಗ್​ 27

Friday, December 27th, 2019
mig-27

ನವದೆಹಲಿ : 1999ರ ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ ಮಿಗ್ 27 ಯುದ್ಧ ವಿಮಾನ ಇತಿಹಾಸ ಪುಟ ಸೇರಲು ಸಜ್ಜಾಗಿದೆ. ಕಳೆದ ಮೂರು ದಶಕಗಳಿಂದ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಈ ಯುದ್ಧವಿಮಾನ ಇಂದು ಕೊನೆಯ ಹಾರಾಟ ನಡೆಸಿತು. ಭಾರತೀಯ ವಾಯು ಸೇನೆಯ ಬೆನ್ನೆಲುಬಾಗಿದ್ದ ಈ ಯುದ್ಧ ವಿಮಾನ ಕಡೆಯದಾಗಿ ಜೋಧ್ಪುರ್ ಏರ್ಬೇಸ್ನಲ್ಲಿ ಹಾರಾಟ ನಡೆಸಿತು. ದೇಶದ ಯುದ್ಧ ಮತ್ತು ಶಾಂತಿ ಸಮಯದಲ್ಲಿ ಅಪಾರ ಸೇವೆ ಸಲ್ಲಿಸಿರುವ ಈ ಯುದ್ಧವಿಮಾನ ಕಾರ್ಗಿಲ್ ಸಮಯದಲ್ಲಿ ಶತ್ರು ದೇಶದ […]

‘ಭಾರತದ ಪ್ರತಿಯೊಬ್ಬ ನಾಗರಿಕನೂ ಹಿಂದುವೇ’ : ಮೋಹನ್​ ಭಾಗವತ್​​

Thursday, December 26th, 2019
RSS

ಹೈದರಾಬಾದ್ : ಭಾರತದ ಪ್ರತಿಯೊಬ್ಬ ನಾಗರೀಕನೂ ಹಿಂದುವೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ಧಾರೆ. ಇಂದು ಹೈದರಾಬಾದ್‍ನಲ್ಲಿ ಆರ್ಎಸ್ಎಸ್ನ ಕಾರ್ಯಾಗಾರದಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಭಾರತದ ಎಲ್ಲಾ 130 ಕೋಟಿ ಜನರೂ ಹಿಂದೂಗಳೇ. ಯಾವುದೇ ಭಾಷೆ ಮಾತಾಡಲಿ; ಯಾವುದೇ ದೇವರನ್ನಾದರೂ ನಂಬಲಿ; ಭಾರತದಲ್ಲಿ ಯಾವುದೇ ಮೂಲೆಯಲ್ಲಾದರೂ ನೆಲೆಸಿರಲಿ ಎಲ್ಲರೂ ಹಿಂದುಗಳೇ ಎಂಬ ಸಂದೇಶ ಸಾರಿದ್ದಾರೆ. ಭಾರತದ ಜಲ, ಕಾಡು, ಪ್ರಾಣಿ, ಮಣ್ಣನ್ನು ಹಿಂದೂ ಪ್ರೀತಿಸುತ್ತಾನೆ. ನಿಜವಾದ […]

ಕೇರಳದಲ್ಲಿ ಸಿಎಂ ಯಡಿಯೂರಪ್ಪಗೆ ಕಪ್ಪು ಬಾವುಟ ಪ್ರದರ್ಶನ : ಎಸ್​​​ಎಫ್​​ಐ ಮತ್ತು ಕಾಂಗ್ರೆಸ್​​ನ ಐವರು ಬಂಧನ​​

Thursday, December 26th, 2019
BSY

ತಿರುವನಂತಪುರಂ : ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಕಾರು ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ ಆರೋಪದ ಮೇಲೆ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಾಂಗ್ರೆಸ್ನ ಐವರು ಕಾರ್ಯಕರ್ತರ ಬಂಧನವಾಗಿದೆ. ಸಿಪಿಐನ ಭಾರತೀಯ ವಿದ್ಯಾರ್ಥಿ ಫೆಡರೇಶನ್‌(ಎಸ್‌ಎಫ್‌ಐ)ನ ಮೂವರು ಮತ್ತು ಯುವ ಕಾಂಗ್ರೆಸ್ನ ಇಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ. ಕಳೆದ ಎರಡು ದಿನಗಳ ಹಿಂದೆ ಸೋಮವಾರ(ಡಿ.23) ರಾತ್ರಿ ಕೇರಳದ ತಿರುವನಂತಪುರಂ ಪ್ರವೇಶಿಸುತ್ತಿದ್ದಂತೆ ಸಿಎಂ ಯಡಿಯೂರಪ್ಪನವರ ಕಾರಿಗೆ ಅಡ್ಡ […]

ಎನ್​ಪಿಆರ್​ಗೂ ಎನ್ಆರ್​ಸಿಗೂ ಸಂಬಂಧವಿಲ್ಲ : ಯಾರೂ ಪೌರತ್ವ ಕಳೆದುಕೊಳ್ಳುವುದಿಲ್ಲ; ಅಮಿತ್ ಶಾ ಸ್ಪಷ್ಟನೆ

Wednesday, December 25th, 2019
Amit

ನವದೆಹಲಿ : ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಯೋಜನೆಗೆ ಕೇಂದ್ರ ಸಂಪುಟ ಇವತ್ತು ಅನುಮೋದನೆ ನೀಡಿದ ಬೆನ್ನಲ್ಲೇ ಎನ್ಆರ್ಸಿ, ಪೌರತ್ವ ಕಾಯ್ದೆ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಲು ಪ್ರಾರಂಭಿಸಿದ್ಧಾರೆ. ಎನ್ಪಿಆರ್ ಬಗ್ಗೆಯೂ ಅನುಮಾನದ ದೃಷ್ಟಿ ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು ಎನ್ಪಿಆರ್, ಎನ್ಆರ್ಸಿ ಕುರಿತು ಉದ್ಭವಿಸಿರುವ ಅನುಮಾನಗಳಿಗೆ ತೆರೆ ಎಳೆಯಲು ಯತ್ನಿಸಿದ್ಧಾರೆ. ಎನ್ಆರ್ಸಿಗೂ ಎನ್ಪಿಆರ್ಗೂ ಯಾವುದೇ ಸಂಬಂಧವಿಲ್ಲ. ಭಾರತಾದ್ಯಂತ ಎನ್ಆರ್ಸಿ ಜಾರಿಗೊಳಿಸುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ ಎಂದೂ […]