ಅತ್ಯಾಚಾರಿಗಳನ್ನು ಬಂಧಿಸದೆ ನಿರ್ಲಕ್ಷ್ಯ : ಪೊಲೀಸ್ ಠಾಣೆಯೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

Tuesday, December 24th, 2019
Lacknow

ಲಕ್ನೋ : ತನ್ನ ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಅಪ್ರಾಪ್ತ ಯುವತಿ ತನ್ನ ತಂದೆ-ತಾಯಿಯೊಂದಿಗೆ ವಾರಾಣಸಿಯ ಪೊಲೀಸ್ ಅಧಿಕಾರಿಯಕಚೇರಿಯ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಮೂವರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ವಾರಾಣಸಿಯ ಪೊಲೀಸ್ ಅಧಿಕಾರಿಯ ಆಫೀಸ್ ಎದುರು ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವತಿ ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಹಲವು ಬಾರಿ ಪೊಲೀಸ್ ಠಾಣೆಗೆ […]

ದೆಹಲಿ ಕಿರಾರಕಿ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ : 9 ಮಂದಿ ಸಾವು; 10 ಮಂದಿಗೆ ತೀವ್ರ ಗಾಯ

Monday, December 23rd, 2019
benki

ನವದೆಹಲಿ : ಭಾರತದ ರಾಜಧಾನಿ ದೆಹಲಿಯ ಕಿರಾರಿ ಎಂಬ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಂದು ಸೋಮವಾರ ತಡರಾತ್ರಿ 12.30 ಗಂಟೆಗೆ ಸಂಭವಿಸಿದ ಈ ಬೆಂಕಿ ಅನಾಹುತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 10ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಲ್ಲಿನ ಬಟ್ಟೆಯ ಗೋದಾಮಿ ಅಂದರೆ ವೇರ್ ಹೌಸ್ನಲ್ಲಿ ಮಧ್ಯರಾತ್ರಿ 12.30ಕ್ಕೆ ದಿಢೀರ್ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಮೂರು ಅಂತಸ್ತಿನ ಕಟ್ಟಡದಲ್ಲಿ ವೇರ್ ಹೌಸ್ ಇತ್ತು ಎನ್ನಲಾಗಿದೆ. ಈ […]

ಶ್ರೀಕೃಷ್ಣ ವಿಠ್ಹಲ ಪ್ರತಿಷ್ಠಾನ ಮುಂಬಯಿ ಇದರ 22 ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಉತ್ಸವ

Monday, December 23rd, 2019
Mumbai

ಮುಂಬಯಿ : ಆರಂಭದಲ್ಲಿ ಪ್ರತಿಷ್ಠಾನ ಸ್ಥಾಪನೆಯಾದಾಗ ಜನರಿಗೆ ಪ್ರಯೋಜನಕಾರಿಯಾಗಲು ನಾಲ್ಕು ವಿವಿಧ ಯೋಜನೆಗಳನ್ನು ನಾವು ಹಮ್ಮಿಕೊಂಡಿದ್ದೆವು. ಶಾಲಾ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಧಾರ್ಮಿಕ ಪ್ರಜ್ನೆ ಮೂಡಿಸಲು ಹರಿಕಥಾ ಸಪ್ತಾಹ, ಧರ್ಮ ಜಾಗೃತಿಗೊಳಿಸಲು ಯಾಗ ಮುಂತಾದವುಗಳು ಕಳೆದ 22 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಇದು ನಮ್ಮ ಸಂಸ್ಥೆಯ ಪದಾ ಧಿಕಾರಿಗಳ ಪರಿಶ್ರಮ ಹಾಗೂ ದಾನಿಗಳ ಸಹಕಾರದಿಂದ ಸಾಧ್ಯ ಎಂದು ಶ್ರೀಕೃಷ್ಣ ವಿಠ್ಹಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರು ತಿಳಿಸಿದರು. ಶ್ರೀಕೃಷ್ಣ […]

ಪಿಜಿ ಮಾಲೀಕನ ಕಾಟಕ್ಕೆ ಬೇಸತ್ತ ಗಗನಸಖಿ ನೇಣಿಗೆ ಶರಣು

Thursday, December 19th, 2019
PG

ನವದೆಹಲಿ : ಖಾಸಗಿ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಕೆ ಗೆಸ್ಟ್ ಹೌಸ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಗುರುಗ್ರಾಮ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಪೈಸ್ ಜೆಟ್ ವಿಮಾನದಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಿಸ್ಥು ಸರ್ಕಾರ್ ಗುರುಗ್ರಾಮ್ ನಲ್ಲಿರುವ ಗೆಸ್ಟ್ ಹೌಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆ ಪಶ್ಚಿಮಬಂಗಾಳದ ಸಿಲಿಗುರಿ ನಿವಾಸಿ ಎಂದು ವರದಿ ತಿಳಿಸಿದೆ. ಪಿಜಿ ಮಾಲೀಕ ಈಕೆ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಗಗನಸಖಿ ತಂದೆ ಆರೋಪಿಸಿದ್ದಾರೆ. ಅಲ್ಲದೇ ಪದೇ, ಪದೇ […]

ದೆಹಲಿಯಲ್ಲಿ ಇನ್ನೂ ಆರದ ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚು : ಮೆಟ್ರೋ ನಿಲ್ದಾಣ ಸ್ಥಗಿತ, ಟ್ರಾಫಿಕ್​ ಜಾಮ್

Thursday, December 19th, 2019
dehli

ನವ ದೆಹಲಿ : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾಗಿರುವ ಪ್ರತಿಭಟನೆಯ ಕಾವು ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಂದೂ ಸಹ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು ದೆಹಲಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ 13 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಅಧಿಕ ವಾಹನ ಸಂದಣಿ ಹೊಂದಿರುವ ದೆಹಲಿಯಲ್ಲಿ ಮೆಟ್ರೋ ಸಂಚಾರ ಪ್ರಯಾಣಿಕರ ಜೀವನಾಡಿ. ಪ್ರತಿದಿನ ಲಕ್ಷಾಂತರ ಜನ ಮೆಟ್ರೋ ಸೇವೆಯನ್ನು ಅವಲಂಭಿಸಿದ್ದಾರೆ. ಆದರೆ, ಪೌರತ್ವ […]

ಧೋನಿ ಸಿಕ್ಸರ್ ದಾಖಲೆ ಮುರಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ

Wednesday, December 18th, 2019
dhoni-and-rohith-sharma

ವಿಶಾಖಪಟ್ಟಣಂ : ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಭಾರತದ ನೆಲದಲ್ಲಿ ಸಿಡಿಸಿದ್ದ ಸಿಕ್ಸರ್ ದಾಖಲೆಯನ್ನು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಮುರಿದಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಭಾರತದ ನೆಲದಲ್ಲಿ 186 ಸಿಕ್ಸರ್ ಸಿಡಿಸಿದರೆ, ಹಿಟ್‍ಮ್ಯಾನ್ ರೋಹಿತ್ 187 ಸಿಕ್ಸರ್ ದಾಖಲೆ ಬರೆದಿದ್ದಾರೆ. ಧೋನಿ 186 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ 116 ಇನ್ನಿಂಗ್ಸ್ ಗಳಲ್ಲಿ […]

ಪೌರತ್ವ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಧಕ್ಕೆ ಇಲ್ಲ, ದಯವಿಟ್ಟು ಶಾಂತಿ ಪಾಲಿಸಿ; ಶಾಹಿ ಇಮಾಮ್

Wednesday, December 18th, 2019
shahi

ನವದೆಹಲಿ : ದೇಶದ ಹಲವೆಡೆ ಉಗ್ರ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಮಾ ಮಸೀದಿಯ ಶಾಹಿ ಇಮಾಮರು ಪ್ರತಿಕ್ರಿಯಿಸಿದ್ಧಾರೆ. ಪೌರತ್ವ ಕಾಯ್ದೆಯಲ್ಲಿ ಭಾರತೀಯ ಮುಸ್ಲಿಮರಿಗೆ ಧಕ್ಕೆ ಆಗುವಂಥದ್ದೇನಿಲ್ಲ. ಇಂಥ ಸಂದರ್ಭದಲ್ಲಿ ಜನರು ಭಾವಾವೇಶಕ್ಕೆ ಒಳಗಾಗದೇ ಸಂಯಮ ಕಾಯ್ದುಕೊಳ್ಳಬೇಕೆಂದು ಪ್ರತಿಭಟನಾನಿರತ ಮುಸ್ಲಿಮ್ ಬಾಂಧವರಿಗೆ ಶಾಹಿ ಇಮಾಮ್ ಸಯದ್ ಅಹ್ಮದ್ ಬುಖಾರಿ ಕರೆ ನೀಡಿದ್ದಾರೆ. “ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಾಡುಗಳಿಂದ ಬರುವ ಮುಸ್ಲಿಮ್ ವಲಸಿಗರಿಗೆ ಭಾರತೀಯ ಪೌರತ್ವ ಸಿಗುವುದಿಲ್ಲ. ಆದರೆ, […]

ತುಂಬಿ ತುಳುಕುತ್ತಿದ್ದ ರೈಲಿನಿಂದ ಬಿದ್ದು ಯುವತಿ ಮೃತ್ಯು

Tuesday, December 17th, 2019
charmi

ಮುಂಬೈ : ಬೆಳ್ಳಂಬೆಳಗ್ಗೆ ಕೆಲಸದ ಅವಸರದಲ್ಲಿ ತುಂಬು ತುಳುಕುತ್ತಿದ್ದ ರೈಲು ಹತ್ತಿದ್ದ ಯುವತಿಯೋರ್ವಳು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಮುಂಬೈನ ದೊಂಬಿವಿಲಿಯಲ್ಲಿ ನಡೆದಿದೆ. ದೊಂಬಿವಿಲಿ ನಿವಾಸಿ 22ರ ಹರೆಯದ ಚಾರ್ಮಿ ಪ್ರಸಾದ್ ಮೃತಪಟ್ಟ ಯುವತಿ. ದೊಂಬಿವಿಲಿ ಮತ್ತು ಕೋಪರ್ ರೈಲ್ವೇ ನಿಲ್ದಾಣಗಳಲ್ಲಿ ನಡುವೆ ಸೋಮವಾರ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಪ್ರಸಕ್ತ ವರ್ಷದಲ್ಲಿ ನಡೆದ ನಾಲ್ಕನೇ ದುರ್ಘಟನೆಯಾಗಿದೆ. ಚಾರ್ಮಿ ಪ್ರಸಾದ್ ಅವರು ರೈಲಿನಲ್ಲಿ ಜನಜನಂಗುಳಿ ಇದ್ದ ಕಾರಣ ಫೂಟ್ ಬೋರ್ಡ್ ನಲ್ಲಿ ನಿಂತಿದ್ದರು. ಕೆಳಗೆ ಬಿದ್ದ […]

ಪಾಕ್‌ ಮಾಜಿ ಸಂಸದ ಈಗ ಕಡಲೆಕಾಯಿ ಮಾರಾಟಗಾರ

Saturday, December 14th, 2019
Hariyana

ಫತೇಬಾದ್‌ (ಹರಿಯಾಣ) : ಫತೇಬಾದ್‌ನ ರಟ್ಟನ್‌ಗರ್‌ ಗ್ರಾಮದ ರಸ್ತೆಬದಿಯಲ್ಲಿರುವ ಅಂಗಡಿಗಳ ಸಾಲುಗಳ ಅಂಗಡಿಯೊಂದರಲ್ಲಿ 74 ವರ್ಷದ ದಿವ್ಯಾರಾಮ್ ನೆಲದ ಮೇಲೆ ಕುಳಿತು ಕಡಲೆಕಾಯಿ ಮಾರುತ್ತಿದ್ದಾರೆ. ಅದರಲ್ಲೇನು ವಿಶೇಷ ಎಂದಿರಾ ? ದಿವ್ಯಾರಾಮ್‌ ಅವರು ಪಾಕಿಸ್ಥಾನದ ಒರ್ವ ಮಾಜಿ ಸಂಸದರಾಗಿದ್ದರು ಎಂದರೆ ನಂಬಲೇಬೇಕು !. ಅದು 1994 ನೇ ಇಸವಿ . ಪಾಕಿಸ್ಥಾನದ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದ ಬೆನಜೀರ್‌ ಭುಟ್ಟೋ ಅವರ ಸರ್ಕಾರ ಅಲ್ಪ ಸಂಖ್ಯಾತ ಕೋಟಾದಡಿಯಲ್ಲಿ ಪಂಜಾಬ್‌ ಪ್ರಾಂತ್ಯದ ಲೋಹಿಯಾ ಜಿಲ್ಲೆಯಲ್ಲಿ ರೈತರಾಗಿದ್ದ ದಿವ್ಯಾರಾಮ್‌ ಅವರನ್ನು […]

ಪೌರತ್ವ ತಿದ್ದುಪಡಿ ವಿರೋಧಿ ಹೋರಾಟ : ಪೊಲೀಸರ ಗುಂಡಿಗೆ ಬಲಿಯಾದ 17 ವರ್ಷದ ಬಾಲಕ

Saturday, December 14th, 2019
assam

ಗುವಾಹಟಿ : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈಶಾನ್ಯ ಭಾರತದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಗುರುವಾರ ನಡೆದ ಗೋಲಿಬಾರ್ನಲ್ಲಿ 17 ವರ್ಷದ ಯುವಕ ಮೃತಪಟ್ಟಿದ್ದ. ಈತನ ಸಾವು ಇಡೀ ಅಸ್ಸಾಂ ಜನ ಸಮೂಹದ ಭಾವನೆಯನ್ನು ಕೆರಳಿಸಿದ್ದು ಶುಕ್ರವಾರ ಈತನ ಅಂತ್ಯಕ್ರಿಯೆಯಲ್ಲಿ ಬಹುತೇಕ ಹೋರಾಟಗಾರರು ಪಾಲ್ಗೊಂಡಿದ್ದು “ಹುತಾತ್ಮ” ಎಂದು ಘೋಷಣೆ ಕೂಗಿ ಪ್ರಶಂಸಿಸಿದ್ದಾರೆ. ಕೇಂದ್ರ ಸರ್ಕಾರದ ನೂತನ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂ ರಾಜ್ಯದ ಪ್ರಸಿದ್ಧ ಗಾಯಕ ಜುಬೀನ್ ಗರ್ಗ್ ಇಲ್ಲಿನ ಲತಾಸಿಲ್ ಆಟದ ಮೈದಾನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. […]