ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ : ಜಪಾನ್​ ಪ್ರಧಾನಿ ಭಾರತದ ಪ್ರವಾಸ ರದ್ದು

Friday, December 13th, 2019
modi

ನವದೆಹಲಿ : ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಜಪಾನ್ ಪ್ರಧಾನಿ ಭಾರತದ ಪ್ರವಾಸ ರದ್ದುಗೊಳಿಸಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಈ ಭಾನುವಾರ ಸಭೆ ನಿರ್ಧಾರವಾಗಿತ್ತು. ಈ ಸಭೆ ಅಸ್ಸಾಂನ ಗೌವಹತಿಯಲ್ಲಿ ಆಯೋಜಿಸಲಾಗಿತ್ತು. ಆದರೆ, ಈಶಾನ್ಯ ರಾಜ್ಯದಲ್ಲಿ ಪ್ರತಿಭಟನೆ ಉಲ್ಭಣಗೊಂಡ ಹಿನ್ನೆಲೆ ಈ ಪ್ರವಾಸವನ್ನು ರದ್ದು ಗೊಳಿಸಲಾಗಿದೆ ಎಂದು ರಾಯಿಟರ್ ವರದಿ ಮಾಡಿದೆ. ಇನ್ನು ಗುರುವಾರ ಬಾಂಗ್ಲಾದೇಶ ವಿದೇಶಾಂಗ ಸಚಿವ ಎಕೆ ಅಬ್ದುಲ್ […]

ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

Thursday, December 12th, 2019
SC

ನವದೆಹಲಿ : ದೇಶದಾದ್ಯಂತ ವಿವಾದಕ್ಕೆ ಈಡಾಗಿರುವ ನೂತನ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಇಂದು ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಮುಂದಾಗಿದೆ. ಈ ಮೂಲಕ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಬಹುಮತದಿಂದ ಒಪ್ಪಿಗೆ ಪಡೆದ ಮಸೂದೆ ತನ್ನ ಮೊದಲ ಕಾನೂನಾತ್ಮಕ ಸವಾಲನ್ನು ಎದುರಿಸುವಂತಾಗಿದೆ. ಧರ್ಮ ಆಧಾರಿತ ಪೌರತ್ವವನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ 14ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಹೀಗಾಗಿ ಸಂಸತ್ನಲ್ಲಿ ಅಂಗೀಕಾರವಾಗಿರುವ […]

ಪೌರತ್ವ ತಿದ್ದುಪಡಿ ಕಾಯ್ದೆ : ಈಶಾನ್ಯ ಭಾರತದಲ್ಲೆಡೆ ಕೇಂದ್ರದ ವಿರುದ್ಧ ಪ್ರತಿಭಟನೆ

Wednesday, December 11th, 2019
Assam

ಅಸ್ಸಾಂ : ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲೆ ಇಂದು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯುತ್ತಿರುವ ಬೆನ್ನಿಗೆ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕೇಂದ್ರ ಸರ್ಕಾರ 2016ರ ರಿಂದಲೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ತುದಿಗಾಲಲ್ಲಿ ನಿಂತಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ “ರಾಷ್ಟ್ರೀಯ ಪೌರತ್ವ ನೋಂದಣಿ” (ಎನ್ಆರ್ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಬಿ)ಯನ್ನು ಈಶಾನ್ಯ ರಾಜ್ಯಗಳು ಕಟುವಾಗಿ ವಿರೋಧಿಸುತ್ತಲೇ […]

ಮುಸ್ಲಿಂ ಯುವಕನ ಜೊತೆ ಮದ್ವೆಗೆ ವಿರೋಧ : ತಂದೆಯಿಂದಲೇ ಮಗಳ ಕೊಲೆ

Tuesday, December 10th, 2019
ಮುಸ್ಲಿಂ ಯುವಕನ ಜೊತೆ ಮದ್ವೆಗೆ ವಿರೋಧ : ತಂದೆಯಿಂದಲೇ ಮಗಳ ಕೊಲೆ

ಮುಂಬೈ : ಇತ್ತೀಚೆಗಷ್ಟೇ ಪಾಪಿ ಮಗಳೊಬ್ಬಳು ತನ್ನ ತಂದೆಯನ್ನು ಕೊಲೆಗೈದು ಸೂಟ್ ಕೇಸ್‍ನಲ್ಲಿ ತುಂಬಿ ನದಿಗೆ ಎಸೆದ ಪ್ರಕರಣದ ಬೆನ್ನಲ್ಲೇ ಇದೀಗ ತಂದೆಯೇ ಮಗಳನ್ನು ಕೊಂದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. 22 ವರ್ಷದ ಮಗಳನ್ನು ಕೊಲೆಗೈದ 47 ವರ್ಷದ ಪಾಪಿ ತಂದೆಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಯುವಕನೊಂದಿಗಿನ ಪ್ರೇಮವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅರವಿಂದ್ ತಿವಾರಿ ತನ್ನ ಮಗಳಾದ ಫ್ರಿನ್ಸಿಯನ್ನು ಹೊಡೆದು ಕೊಂದು ಬಳಿಕ ಆಕೆಯ ಶವವನ್ನು ಸೂಟ್ ಕೇಸಿನಲ್ಲಿ […]

ಆಕ್ಷೇಪಾರ್ಹ ಪ್ರಸಂಗವನ್ನು ತೆಗೆಯದಿದ್ದರೆ ದಬಂಗ್ 3 ಅನ್ನು ಬಹಿಷ್ಕರಿಸಿ !

Tuesday, December 10th, 2019
Mumbai

ಮುಂಬೈ : ಡಿಸೆಂಬರ್ 3೦ ರಂದು ಪ್ರದರ್ಶನಗೊಳ್ಳಲಿರುವ ದಬಂಗ್ 3 ಈ ಹಿಂದಿ ಚಲನಚಿತ್ರದಲ್ಲಿ ಸಾಧುಗಳನ್ನು ಗಾಗಲ್ ಹಾಕಿಕೊಂಡು ಕೈಯಲ್ಲಿ ಗಿಟಾರನ್ನು ಹಿಡಿದು ಅಶ್ಲೀಲವಾಗಿ ಹಾಗೂ ಆಕ್ಷೇಪಾರ್ಹವಾಗಿ ಕುಣಿಯುತ್ತಿರುವಂತೆ ತೋರಿಸಲಾಗಿದೆ. ದೇವತೆಗಳ ಅವಮಾನವನ್ನೂ ಮಾಡಎಲಾಗಿದೆ. ಇದನ್ನು ತಿಳಿಸಿದರೂ ಕುಣಿಯುತ್ತಿರುವ ಸಾಧುಗಳು ನಕಲಿಯಾಗಿದ್ದಾರೆಂದು ಹೇಳುತ್ತ ಸಲ್ಮಾನ ಖಾನ್ ಚಲನಚಿತ್ರದ ಆ ದೃಶ್ಯವನ್ನು ಸಮರ್ಥಿಸಿದ್ದಾರೆ. ಹೀಗಿದ್ದರೆ ಸಲ್ಮಾನ ಖಾನ್ ನಕಲಿ ಮುಲ್ಲಾ-ಮೌಲ್ವಿ ಹಾಗೂ ಫಾದರ್-ಬಿಶಪ್ ಇವರನ್ನು ಗಿಟಾರ್ ಹಿಡಿದು ಆಕ್ಷೇಪಾರ್ಹ ಪದ್ದತಿಯಿಂದ ಕುಣಿಯುತ್ತಿರುವಂತೆ ತೋರಿಸಲಿ ! ಇದನ್ನು ಅವರು ಮಾಡಲು […]

ಸ್ತ್ರೀಯರ ಉಡುಪುಗಳು ಅವಳ ಸಾತ್ತ್ವಿಕತೆ ಮೇಲೆ ಪ್ರಭಾವ ಬೀರುತ್ತದೆ !

Tuesday, December 10th, 2019
Nava-dehali

ನವದೆಹಲಿ : ಸ್ತ್ರೀಯರ ಉಡುಪುಗಳ ಬಗ್ಗೆ ಕಲಾತ್ಮಕ ರಚನೆ ಮಾಡುವ ಕಲಾವಿದರು (ಡ್ರೆಸ್ ಡಿಸೈನರ್ಸ್) ಮತ್ತು ಅವುಗಳ ನಿರ್ಮಿತಿಯನ್ನು ಮಾಡುವವರು (ಫ್ಯಾಶನ್ ಹೌಸಸ್) ಇವರಿಗೆ ಉಡುಪುಗಳ ಸಾತ್ತ್ವಿಕತೆಯನ್ನು ಹೆಚ್ಚಿಸುವ ಆಧ್ಯಾತ್ಮಿಕ ಘಟಕಗಳ ಅರಿವಿದ್ದರೆ ಮತ್ತು ಅದನ್ನು ಗಮನದಲ್ಲಿರಿ ಅದಕ್ಕನುಸಾರ ಉಡುಪುಗಳ ನಿರ್ಮಿತಿಯನ್ನು ಮಾಡಿದರೆ ಸ್ತ್ರೀಯರ ಉಡುಪುಗಳ ಮೇಲೆ ಒಂದು ಮಹತ್ವದ ಸಕಾರಾತ್ಮಕ ಪ್ರಭಾವ ಬೀಳುವುದು. ಇದರಿಂದ ಜಗತ್ತಿನಾದ್ಯಂತ ಸ್ತ್ರೀಯರ ಆಧ್ಯಾತ್ಮಿಕ ಸೌಂದರ್ಯದ ಹಾಗೂ ಉಡುಪಿನಿಂದ ಅವರ ಸಾತ್ತ್ವಿಕತೆ ಮೇಲೆ ಪ್ರಭಾವ ಬೀರುವಲ್ಲಿಯೂ ಸಹಕಾರಿಯಾಗಿದೆ ಎಂದು ಮಹರ್ಷಿ ಅಧ್ಯಾತ್ಮ […]

ಅತ್ಯಾಚಾರಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು : ರಾಮನಾಥ್​​ ಕೋವಿಂದ್​​

Friday, December 6th, 2019
Ramnath

ನವದೆಹಲಿ : ಶಿಶು ಅತ್ಯಾಚಾರಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎನ್ನುವ ಮೂಲಕ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂದು ರಾಜಸ್ಥಾನದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ರಾಷ್ಟ್ರಪತಿ ಕೋವಿಂದ್, ಫೋಕ್ಸೋ ಕಾಯ್ದೆ ಅಡಿಯಲ್ಲಿ ಶಿಕ್ಷೆಗೆ ಗುರಿಯಾದ ಅತ್ಯಾಚಾರಿಗಳಿಗೆ ಕ್ಷಮಾದಾನಕ್ಕೆ ಅವಕಾಶವೇ ಕೊಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರ ರಕ್ಷಣೆ ಅತ್ಯಂತ ಗಂಭೀರ ವಿಚಾರ. ಹಾಗಾಗಿ ಫೋಕ್ಸೋ ಕಾಯ್ದೆಯಡಿ ಶಿಕ್ಷೆಗೊಳಗಾದ ಅತ್ಯಾಚಾರಿಳಿಗೆ ಕ್ಷಮೆ ಕೋರಿಕೆ ಅರ್ಜಿ ಸಲ್ಲಿಸುವ ಅವಕಾಶ ನೀಡಬಾರದು. ಅತ್ಯಾಚಾರಿಗಳಿಗೆ ಇಂತಹ […]

ಪಶುವೈದ್ಯೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ : ಕನ್ನಡಿಗ ವಿಶ್ವನಾಥ್ ಸಜ್ಜನರಿಂದ ಆರೋಪಿಗಳ ಎನ್ ಕೌಂಟರ್

Friday, December 6th, 2019
Vishwanth

ಹೈದರಾಬಾದ್ : ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ದಿಶಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಲ್ಲಾ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.ಈ ಕಾರ್ಯಾಚರಣೆ ಹಿಂದಿರುವ ವ್ಯಕ್ತಿ ಕರ್ನಾಟಕದ ಹುಬ್ಬಳ್ಳಿಯವರಾದ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಎಂದು ತಿಳಿದುಬಂದಿದೆ. ಅತ್ಯಾಚಾರ, ಕೊಲೆ ಪ್ರಕರಣ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಮಾತ್ರವಲ್ಲದೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ತೀವ್ರ ಒತ್ತಡ ತರಲಾಗಿತ್ತು. ಇಂದು ಮುಂಜಾನೆ ಪೊಲೀಸರು ಎಲ್ಲಾ ಆರೋಪಿಗಳನ್ನು ಅತ್ಯಾಚಾರ, ಕೊಲೆ ನಡೆದ ಪ್ರದೇಶಕ್ಕೆ ಸ್ಥಳ ಪರಿಶೀಲನೆಗೆ ಕರೆದೊಯ್ಯುವ […]

ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ : ನಾಲ್ವರು ಆರೋಪಿಗಳ ಎನ್ ಕೌಂಟರ್

Friday, December 6th, 2019
Hydarbad

ಹೈದರಾಬಾದ್ : ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹತ್ಯೆಗೈದಿದ್ದಾರೆ. ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. […]

ವಿದ್ಯಾರ್ಥಿನಿ ತರಗತಿಯಲ್ಲಿ ಕುಸಿದು ಬಿದ್ದು ಮೃತ್ಯು : ಪೋಷಕರಿಂದ ಅಂಗಾಂಗ ದಾನ

Thursday, December 5th, 2019
Rimple

ಗಾಂಧಿನಗರ : ತರಗತಿಯಲ್ಲಿ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದ್ದು, ಪೋಷಕರು ಆಕೆಯ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಿಂಪಲ್(12) ಮೃತಪಟ್ಟ ಬಾಲಕಿ. ಭಾವೇಶ್‍ಬಾಯಿ ಸಂಗಾಣಿ ಮಗಳಾಗಿರುವ ರಿಂಪಲ್ ಪಿಪಿ ಸವಾಣಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಮಂಗಳವಾರ ರಿಂಪಲ್ ತರಗತಿಯಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು. ಮಂಗಳವಾರ ಬೆಳಗ್ಗೆ ರಿಂಪಲ್ ತರಗತಿಯಲ್ಲಿ ಭಾಷಣ ಮಾಡಿದ […]