ಯೋಧರು ಹುತಾತ್ಮರಾಗದ ದೇಶವೇ ಇಲ್ಲ: ಬಿಜೆಪಿ ಸಂಸದ ನೇಪಾಳ್ ಸಿಂಗ್ ವಿವಾದಾಸ್ಪದ ಹೇಳಿಕೆ

Wednesday, January 3rd, 2018
Nepal-singh

ನವದೆಹಲಿ: ಸೇನೆಯಲ್ಲಿ ಯೋಧರು ಪ್ರತೀದಿನ ಹುತಾತ್ಮರಾಗುತ್ತಿರುತ್ತಾರೆ, ಯೋಧರು ಹುತಾತ್ಮರಾಗದ ದೇಶ ಯಾವುದಾದರೂ ಇದೆಯೇ ಎಂದು ಉತ್ತರಪ್ರದೇಶದ ಬಿಜೆಪಿ ಸಂಸದ ನೇಪಾಳ್ ಸಿಂಗ್ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಪುಲ್ವಾಮದಲ್ಲಿ ಸಿಆರ್’ಪಿಎಫ್ ತರಬೇತಿ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವ ವೇಳೆ ನೇಪಾಳ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಸೇನೆಯಲ್ಲಿ ಯೋಧರು ಪ್ರತೀನಿತ್ಯ ಹುತಾತ್ಮರಾಗುತ್ತಿರುತ್ತಾರೆ. ಯೋಧರು ಹುತಾತ್ಮರಾಗದೇ ಇರುವ ದೇಶ ಯಾವುದಾದರೂ ಇದೆಯೇ? ಗ್ರಾಮದಲ್ಲಿ ಮಾರಮಾರಿಯಾದಾಗ ಒಬ್ಬರಲ್ಲ ಒಬ್ಬರು ಗಾಯಗೊಳ್ಳುತ್ತಾರೆ. […]

ಆನೆಮರಿಯನ್ನು ಪಾರುಮಾಡಿದ ‘ಬಾಹುಬಲಿ’ ಪಳನಿಚಾಮಿ

Friday, December 29th, 2017
Elephant

ಚೆನ್ನೈ, : ನೂರು ಕೆಜಿಗಿಂತ ಭಾರವಾಗಿದ್ದ ಆ ಪುಟ್ಟ ಮರಿಆನೆಯನ್ನು ಆ ಅರಣ್ಯ ಸಂರಕ್ಷಕ ಹೇಗೆ ಎತ್ತಿದನೋ, ಎತ್ತಿಯೇಬಿಟ್ಟ! ಆ ಕ್ಷಣದಲ್ಲಿ ಅವರ ಮನದಲ್ಲಿ ಏನೂ ಓಡುತ್ತಿರಲಿಲ್ಲ. ಆಗಬೇಕಾಗಿದ್ದುದು ಒಂದೇ, ಆನೆಮರಿಯನ್ನು ಉಳಿಸಬೇಕಾಗಿತ್ತು. ಸಿದ್ದನ ನೆನಪಿನಲ್ಲಿ ‘ವರ್ಲ್ಡ್ ವೈಲ್ಡ್‌ಲೈಫ್ ಮೂಮೆಂಟ್’ ಆರಂಭ ಇವರೇ ಇಲ್ಲವೇ ನಿಜವಾದ ಹೀರೋ, ನಿಜವಾದ ‘ಬಾಹುಬಲಿ’? 28 ವರ್ಷದ ತಮಿಳುನಾಡಿನ ಪಳನಿಚಾಮಿ ಶರತ್ ಕುಮಾರ್ ಅವರು ಸಂಕಷ್ಟದಲ್ಲಿ ಸಿಲುಕಿದ್ದ ಆನೆಮರಿಯನ್ನು ಪಾರುಮಾಡಿದ ಮತ್ತು ಅದರ ತಾಯಿಯೊಂದಿಗೆ ಕೂಡಿಸಿದ ಹೃದಯಂಗಮ ಕಥೆ ಇಲ್ಲಿದೆ. ಆನೆಮರಿಯನ್ನು […]

ನ್ಯೂಜಿಲೆಂಡ್’ನಲ್ಲಿ ಭಾರತೀಯ ವ್ಯಕ್ತಿ ಸಾವು: ನೆರವು ನೀಡುವಂತೆ ಸುಷ್ಮಾ ಸ್ವರಾಜ್ ಬಳಿ ಕುಟುಂಬಸ್ಥರ ಮನವಿ

Monday, December 25th, 2017
sushma-swaraj

ಹೈದರಾಬಾದ್: ನ್ಯೂಜಿಲೆಂಡ್’ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹೈದರಾಬಾದ್ ಮೂಲಕ ವ್ಯಕ್ತಿಯೊಬ್ಬರುಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ಕರೆತರಲು ನೆರವು ನೀಡುವಂತೆ ಕುಟುಂಬಸ್ಥರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಆಕ್ಲೆಂಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 29 ವರ್ಷದ ಸಯ್ಯದ್ ಅಬ್ದುಲ್ ರಹೀಮ್ ಫಹದ್ ಅವರು ಅರೆಕಾಲಿಕ ವಾಹನ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಚಾಲನೆ ವೇಳೆ ಅಫಘಾತ ಸಂಭವಿಸಿದ ಪರಿಣಾಮ ಅಬ್ದುಲ್ ಅವರು ಸಾವನ್ನಪ್ಪಿದ್ದರು. ಅಬ್ದುಲ್ ಅವರ ಸಂಬಂಧಿ ಫೈಜಲ್ ಅವರು ಮಾತನಾಡಿ, ಆಸ್ಟ್ರೇಲಿಯಾದಲ್ಲಿರುವ ನಮ್ಮ […]

ವಾಜಪೇಯಿ ಜನ್ಮದಿನಕ್ಕೆ ಗಣ್ಯರ ಶುಭಾಶಯ: ಹಿರಿಯ ನಾಯಕನ ನಿವಾಸಕ್ಕೆ ಪ್ರಧಾನಿ ಭೇಟಿ

Monday, December 25th, 2017
vajpayee

ನವದೆಹಲಿ: ಇಂದು ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ವರಿಷ್ಠ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ವಾಜಪೇಯಿ ಅವರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ. ವಾಜಪೇಯಿ ಇಂದು 93ನೇ ವಸಂತಕ್ಕೆ ಕಾಲಿಟ್ಟಿದ್ದು, ‘ನಮ್ಮೆಲ್ಲರ ಪ್ರೀತಿಪಾತ್ರರಾಗಿರುವ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ರಾಷ್ಟ್ರಪತಿ ರಾಮನಾಥ್‌ ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ಮೋದಿ ಕೂಡ ಟ್ವೀಟ್‌ ಮೂಲಕ ವಾಜಪೇಯಿ ಅವರಿಗೆ ಶುಭಕೋರಿದ್ದು, ‘ನಮ್ಮ ಅಟಲ್‌ಜೀ ಅವರಿಗೆ ಜನ್ಮದಿನದ […]

ಡಿಸೆಂಬರ್ 25ರಂದು ಮತ್ತೆ ಸಿಎಂ ಆಗಿ ವಿಜಯ್ ರೂಪಾನಿ ಪ್ರಮಾಣ ವಚನ ಸ್ವೀಕಾರ

Wednesday, December 20th, 2017
vijay-rupani

ಅಹ್ಮದಾಬಾದ್: ಇದೇ ಡಿಸೆಂಬರ್ 25ರಂದು ಗುಜರಾತ್ ನಲ್ಲಿ ಮತ್ತೆ ಬಿಜೆಪಿ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಹಾಲಿ ಸಿಎಂ ವಿಜಯ್ ರೂಪಾನಿ ಅವರೇ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಸಿಎಂ ವಿಜಯ್ ರೂಪಾನಿ ಅವರ ಚುನಾವಣಾ ಪ್ರಯಾಸದ ಜಯಕ್ಕೆ ಸಂಬಂಧಿದಂತೆ ರೂಪಾನಿ ಅವರನ್ನು ಮುಂದಿನ ಸಿಎಂ ಆಗಿ ಮುಂದುವರೆಸಬಾರದು ಎಂದು ಕೆಲ ಬಿಜೆಪಿ ನಾಯಕರ ಬಣ ವಾದಿಸಿತ್ತು. ಆದರೆ ಮತ್ತೊಂದು ಬಣ ರೂಪಾನಿ ಅವರ ನೇತೃತ್ವದಲ್ಲೇ ಬಿಜೆಪಿ […]

ರಾಹುಲ್ ಗಾಂಧಿ ಕರ್ನಾಟಕಕ್ಕೆ ಬರುತ್ತಿದ್ದಾರೆ….!

Tuesday, December 19th, 2017
rahul-gandhi

ಹೊಸದಿಲ್ಲಿ: ಗುಜರಾತ್ ವಿಧಾನಸಭೆಯ  ಚುನಾವಣೆಯಲ್ಲಿ ಏಕಾಂಗಿ ಹೋರಾಟದ ಮೂಲಕ ಬಿಜೆಪಿಗೆ ನಡುಕವನ್ನುಂಟು ಮಾಡಿದ್ದ ಕಾಂಗ್ರೆಸ್ ನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದಿನ ಟಾರ್ಗೆಟ್ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ. ಗುಜರಾತ್ ಬಳಿಕ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಅವರು ಕರ್ನಾಟದ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಯನ್ನು ಕರ್ನಾಟದಲ್ಲಿ ಅಧಿಕಾರಕ್ಕೆ ತರುವುದು ಇವರ ಗುರಿ. ಆದರೆ ಯುವ ನಾಯಕ ರಾಹುಲ್ ಗಾಂಧಿ ಅವರು ಮೋದಿ-ಶಾ ಜೋಡಿಗೆ ಸವಾಲಾಗಿ ಚುನಾವಣಾ […]

ಅಭಿವೃದ್ಧಿಗೆ ಜನರು ನೀಡಿದ ಉಡುಗೊರೆ… ಕರ್ನಾಟಕ ಚುನಾವಣೆ ಗೆಲ್ಲುವುದೇ ನಮ್ಮ ಗುರಿ: ಶಾ

Monday, December 18th, 2017
amit-shah

ನವದೆಹಲಿ: ಬಹು ನಿರೀಕ್ಷಿತ ಗುಜರಾತ್‌‌-ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ದಾಖಲಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌ ಶಾ ಎರಡೂ ರಾಜ್ಯದ ಜನರಿಗೆ ಧನ್ಯವಾದ ಹೇಳಿದ್ದಾರೆ. ನವದೆಹಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಇದು ವಂಶವಾದ, ಜಾತೀವಾದದ ವಿರುದ್ಧದ ಗೆಲುವು. ದೇಶದ ಜನರು ಅಭಿವೃದ್ಧಿಗೆ ಮಣೆ ಹಾಕಿದ್ದಾರೆ. ಬಿಜೆಪಿ ಗೆಲುವು ಪ್ರಜಾಸತ್ತಾತ್ಮಕ ಗೆಲುವು. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಗುಜರಾತ್ ಚುನಾವಣಾ ಫಲಿತಾಂಶ ನನಗೆ ನಿರಾಸೆ ತಂದಿಲ್ಲ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

Monday, December 18th, 2017
rahul-gandhi

ಹೊಸದಿಲ್ಲಿ: ” ಗುಜರಾತ್ ಚುನಾವಣಾ ಫಲಿತಾಂಶ ನನಗೆ ನಿರಾಸೆ ತಂದಿಲ್ಲ. ಫಲಿತಾಂಶ ತೃಪ್ತಿ ತಂದಿದೆ” ಎಂದು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. ಎಐಸಿಸಿ ಕಚೇರಿಯಲ್ಲಿ ಗುಜರಾತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮೊದಲ ಚುನಾವಣಾ ಫಲಿತಾಂಶ ಹೊರಬಂದಿದೆ. ಚುನಾವಣೆ ನಡೆಯುವ ಹೊತ್ತಿಗೆ ಅವರು ಎಐಸಿಸಿ ಉಪಾಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ […]

ಕಾಂಗ್ರೆಸ್ ಹಿಂದೆಹಿಂದೆ, ಬಿಜೆಪಿ ಮುಂದೆಮುಂದೆ

Monday, December 18th, 2017
himachala

ಅಹ್ಮದಾಬಾದ್: ಈ ವರ್ಷದ ಕಟ್ಟಕಡೆಯ ಚುನಾವಣೆ ರಿಯಾಲಿಟಿ ಶೋಗೆ ಗುಜರಾತ್ ಅಣಿಯಾಗಿದೆ. ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ತಿಳಿಯಲು ಕ್ಷಣಗಣನೆ ಆರಂಭವಾಗಿದೆ. 22 ವರ್ಷಗಳ ಕಾಲ ಆಡಳಿತ ನಡೆಸಿರುವ ಭಾರತೀಯ ಜನತಾ ಪಕ್ಷ ಪ್ರಥಮ ಬಾರಿಗೆ ಕಾಂಗ್ರೆಸ್ಸಿನಿಂದ ಭಾರೀ ತುರುಸಿನ ಸ್ಪರ್ಧೆಯನ್ನು ಈ ಬಾರಿ ಎದುರಿಸಿದೆ. ತಕ್ಕಡಿ ಯಾವುದೇ ಬದಿಗೂ ತೂಗಬಹುದು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. LIVE : ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ 9.56 : ಬಿಜೆಪಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ರಾಜಕೋಟ್ ಪಶ್ಚಿಮ […]

ಗುಜರಾತ್‌ ಚುನಾವಣೆ: ತಮ್ಮ ಹಕ್ಕು ಚಲಾಯಿಸಿದ ತಾಯಿ-ಮಗ

Thursday, December 14th, 2017
narendra-modi

ಅಹಮದಾಬಾದ್: ಗುಜರಾತ್‌ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತವರ ತಾಯಿ ಹೀರಾಬೆನ್‌ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಜರಾತ್‌ ವಿಧಾನಸಭಾ 182 ಸದಸ್ಯ ಬಲವನ್ನು ಹೊಂದಿದೆ. ಮೊದಲ ಹಂತದ ಚುನಾವಣೆ ಡಿ.9 ರಂದು ಮುಗಿದಿದ್ದು, ಇಂದು 2ನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ. 2ನೇ ಹಂತದಲ್ಲಿ ರಾಜಧಾನಿ ಅಹಮದಾಬಾದ್ ಸೇರಿ ಒಟ್ಟು 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿದ್ದು, 2.22 […]