ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು: ಮನಮೋಹನ್ ಸಿಂಗ್ ವಿರುದ್ಧ ಆರೋಪಕ್ಕೆ ಶರದ್ ಪವಾರ್ ಕಿಡಿ

Wednesday, December 13th, 2017
shard-power

ನಾಗ್ಪುರ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗುಜರಾತ್ ನಲ್ಲಿ ಬಿಜೆಪಿಯನ್ನು ಸೋಲಿಸಲು ಪಾಕಿಸ್ತಾನದ ಜತೆಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು ಎಂದು ಎನ್ಸಿಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಹೇಳಿದ್ದಾರೆ. ಮನಮೋಹನ್ ಸಿಂಗ್ ಬೆಂಬಲಕ್ಕೆ ನಿಂತಿರುವ ಪವಾರ್, ವಿಶ್ವದಲ್ಲಿ ಯಾರು ಕೂಡಾ ಮನಮೋಹನ್ ಸಿಂಗ್ ಅವರ ಕಡೆ ಬೊಟ್ಟು ಮಾಡಲಾಗದಂತ ವ್ಯಕ್ತಿತ್ವ ಅವರದ್ದು ಅಂತಹವರ ವಿರುದ್ಧ ನರೇಂದ್ರ ಮೋದಿ ಅವರು ಕೀಳುಮಟ್ಟದ ಆರೋಪ […]

ಆರೋಪ-ಪ್ರತ್ಯಾರೋಪಗಳ ನಂತ್ರ ಕೈಕುಲುಕಿದ ಹಾಲಿ-ಮಾಜಿ ಪ್ರಧಾನಿಗಳು!

Wednesday, December 13th, 2017
Narendra-modi

ನವದೆಹಲಿ: ಗುಜರಾತ್ ಚುನಾವಣಾ ಪ್ರಚಾರದ ವೇಳೆ ಆರೋಪ-ಪ್ರತ್ಯಾರೋಪಗಳನ್ನು ನಡೆಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿಯಾಗಿ ಕೈಕುಲುಕಿ ಮಾತನಾಡಿದರು. 2001ರ ಸಂಸತ್ ದಾಳಿಯ ವರ್ಷಾಚರಣೆ ಹಿನ್ನೆಲೆಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಲು ಆಗಮಿಸಿದ್ದ ವೇಳೆ ಹಾಲಿ ಹಾಗೂ ಮಾಜಿ ಪ್ರಧಾನಿಗಳ ಸಮಾಗಮ ಆಗಿದೆ. ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಲು ಸಂಸತ್‌ ಕಟ್ಟಡ ಪ್ರವೇಶಿಸುವ ಮುನ್ನ ಉಭಯ ನಾಯಕರು ಪರಸ್ಪರ ಭೇಟಿಯಾಗಿ ಕೈಕುಲುಕಿ ಕುಶಲೋಪರಿ ವಿಚಾರಿಸಿದರು. ಗುಜರಾತ್ ಚುನಾವಣಾ […]

ಹೆಚ್ಚಿನ ಬೆಲೆಗೆ ಮಿನರಲ್‌‌ ವಾಟರ್‌‌ ಮಾರಿದ್ರೆ ಜೈಲೂಟ ಗ್ಯಾರಂಟಿ!

Tuesday, December 12th, 2017
minaral-water

ನವದೆಹಲಿ: ಮಿನರಲ್‌‌ ವಾಟರ್‌‌ ಬಾಟಲ್‌ಗಳ ಎಂಆರ್‌‌ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರೇ ಎಚ್ಚರ. ಯಾಕಂದರೆ, ಎಂಆರ್‌‌ಪಿಗಿಂತ ಮಿನರಲ್‌‌ ವಾಟರ್‌‌ ಬಾಟಲ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಿದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತಿದೆ. ಹೌದು, ಮಿನರಲ್‌‌ ವಾಟರ್‌‌ ಬಾಟಲ್‌ಗಳನ್ನು ಎಂಆರ್‌‌ಪಿಗಿಂತ ಹೆಚ್ಚಿನ ಬೆಲೆಗೆ ಮಾರುವ ಹೋಟೆಲ್‌‌, ರೆಸ್ಟೋರೆಂಟ್‌ ಹಾಗೂ ಮಲ್ಟಿಪ್ಲೆಕ್ಸ್‌‌ನವರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಮಿನರಲ್‌‌ ವಾಟರ್‌‌ ಬಾಟಲ್‌ಗಳ ಸಂಬಂಧ ಎಫ್‌‌ಹೆಚ್‌‌ಆರ್‌ಐ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಹೋಟೆಲ್‌‌, […]

ಬಂಟ್ಸ್ ಸಂಘ ಮುಂಬಯಿ 2017-20 ಸಮಿತಿಗೆ ನೂತನ ಸಾರಥಿಗಳ ಆಯ್ಕೆ

Wednesday, November 1st, 2017
bunts sanga

ಮುಂಬಯಿ: ಬಂಟ ಸಮುದಾಯದ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಯೆಂದೆಣಿಸಿದ ಬಂಟ್ಸ್ ಸಂಘ ಮುಂಬಯಿ ಇದರ ವಾರ್ಷಿಕ 89 ನೇ ಮಹಾಸಭೆಯು ಇಂದಿಲ್ಲಿ ಸೋಮವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ್ದು ಸಭೆಯಲ್ಲಿ ಸಂಘದ 2017-20 ನೇ ಸಾಲಿಗೆ ನೂತನ ಸಾರಥಿಗಳ ಆಯ್ಕೆ ನಡೆಸಲ್ಪಟ್ಟಿತು. ಸಂಘದ 29 ನೇ ಅಧ್ಯಕ್ಷರಾಗಿ ಪದ್ಮನಾಭ ಎಸ್.ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ರಂಜನಿ ಸುಧಾಕರ ಹೆಗ್ಡೆ ಮತ್ತು ಯುವ […]

ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ :ಸುಪ್ರೀಂ ಕೋರ್ಟ್

Friday, October 13th, 2017
rohingya muslims

ನವದೆಹಲಿ: ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಕಾಲವಕಾಶ ನೀಡಿರುವ ಸುಪ್ರೀಂ ಕೋರ್ಟ್, ನವೆಂಬರ್ 21ರ ಮುಂದಿನ ವಿಚಾರಣೆವರೆಗೂ ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಗಡಿಪಾರು ಮಾಡದಂತೆ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನಿರಾಶ್ರಿತ ರೋಹಿಂಗ್ಯಾ ಮುಸ್ಲಿಮರ ಗಡಿಪಾರು ವಿಷಯಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದ್ದು, ಮಾನವೀಯ ಮೌಲ್ಯಗಳು ನಮ್ಮ ಸಂವಿಧಾನದ ಆಧಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಮುಗ್ಧ ಮಕ್ಕಳು ಮತ್ತು ಮಹಿಳೆಯರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ […]

ಆರುಷಿ-ಹೇಮರಾಜ್ ಜೋಡಿ ಕೊಲೆ ಪ್ರಕರಣ, ಪೋಷಕರು ನಿರ್ದೋಷಿಗಳು : ಹೈ ಕೋರ್ಟ್

Thursday, October 12th, 2017
arushi murder

ಅಲಹಾಬಾದ್: ಆರುಷಿ-ಹೇಮರಾಜ್ ಜೋಡಿ ಕೊಲೆ ಪ್ರಕರಣದಲ್ಲಿ ದಂತ ವೈದ್ಯ ದಂಪತಿ ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಅವರನ್ನು ಅಲಹಾಬಾದ್ ಹೈ ಕೋರ್ಟ್ ನಿರ್ದೋಷಿಗಳೆಂದು ಪರಿಗಣಿಸಿ, ತೀರ್ಪು ನೀಡಿದೆ. 2008 ಮೇನಲ್ಲಿ ನಡೆದ ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ವಿಚಾರಣಾ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿ, ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ತಲ್ವಾರ್ ದಂಪತಿ ವಿರುದ್ಧದ ಸಾಕ್ಷಿಗಳು ದುರ್ಬಲವಾಗಿದೆ ಎಂದಿರುವ ಹೈ ಕೋರ್ಟ್, ನಿರ್ದೋಷಿಗಳೆಂದು ಘೋಷಿಸಿದೆ. ಇದೊಂದು ಕ್ರೂರ ಕೊಲೆ. ದೋಷಿಗಳಿಗೆ ಮರಣ ದಂಡನೆ […]

ಪವಿತ್ರ ನದಿ ಗಂಗಾನದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ, ಯುವಕ ಜೈಲುಪಾಲು

Wednesday, October 11th, 2017
Ganga river

ನವದೆಹಲಿ: ಹಿಂದೂಗಳ ಪವಿತ್ರ ನದಿ ಗಂಗಾನದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಿದ್ದ ಯುವಕನೋರ್ವ ಭರ್ತಿ 42 ದಿನಗಳ ಕಾಲ ಜೈಲುಪಾಲದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಜಾಕಿರ್ ಅಲಿ ತ್ಯಾಗಿ ಎಂಬ ಯುವಕ ಗಂಗಾನದಿ ಕುರಿತಂತೆ ಅಪಹಾಸ್ಯ ಮಾಡಿದ್ದ. ಗಂಗೆಯನ್ನು ‘ಜೀವಂತ ಧಾರ್ಮಿಕ ಅಸ್ತಿತ್ವ’ ಎನ್ನುವ ಕೇಂದ್ರ ಸರ್ಕಾರ ರಾಮಮಂದಿರನ್ನು ಕಟ್ಟಿ ತೀರುತ್ತೇವೆ ಎಂದು ಹೇಳುತ್ತದೆ. ಆದರೆ ಇಲ್ಲಿಯವರೆಗೂ ಏರ್ ಇಂಡಿಯಾದ ಹಜ್ ಸಬ್ಸಿಡಿಯನ್ನು ಮಾತ್ರ ಏಕೆ ಹಿಂಪಡೆದಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು […]

ದೆಹಲಿ ಕರ್ನಾಟಕ ಸಂಘದಲ್ಲಿ ಜನಕಪುರಿ ಮಹಿಳಾ ಮಂಡಳಿಯ ಸಂಭ್ರಮದ ಬೆಳ್ಳಿ ಹಬ್ಬದ ಆಚರಣೆ

Tuesday, October 10th, 2017
new delhi

ನವ ದೆಹಲಿ: ನಮ್ಮ ಮಹಿಳೆಯರ, ಮಹಿಳೆಯರಿಗೋಸ್ಕರ ಮಹಿಳೆಯರ ಕಾರ್ಯಕ್ರಮ, ಮೊದಲುಅವರಿಗೆ ಅಭಿನಂದನೆಗಳು. ಕರ್ನಾಟಕ ಸಂಘ ನನಗೆ ತವರು ಮನೆಯ ಹಾಗೆ ಏಕೆಂದರೆ ನಾನು ಮೊದಲು ಐ.ಎ.ಎಸ್.  ಮಾಡುತ್ತಿರುವಾಗ ನಾನು ಇಲ್ಲಿಯೇ ಉಳಿದುಕೊಂಡು ಐ.ಎ.ಎಸ್. ಉತ್ತೀರ್ಣಳಾಗಿದ್ದು. ಆದ್ದರಿಂದ ದೆಹಲಿ ಕರ್ನಾಟಕ ಸಂಘದಿಂದ ಯಾವಾಗ ಕರೆ ಬಂದರೂ ನಾನು ಎಷ್ಟೇ ಕಾರ್ಯನಿರತಳಾಗಿದ್ದರೂ ಕೂಡ ಬಂದೇ ಬರುತ್ತೇನೆ ಎಂದು ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಕನ್ನಡದವರೇ ಆದ ಶ್ರೀಮತಿ ಧನಕ್ಷ್ಮೀ, ಐ.ಎ.ಎಸ್. ನಿವಾಸೀ ಆಯುಕ್ತರು, ಉತ್ತರ ಪ್ರದೇಶ ಭವನ, ನವದೆಹಲಿ, ಅವರು ದೆಹಲಿ […]

ಭಾರತ ಭಯೋತ್ಪಾದನೆ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಪಾಕ್

Saturday, October 7th, 2017
KPEC

ಇಸ್ಲಾಮಾಬಾದ್: ಭಯೋತ್ಪಾದನೆಯನ್ನು ತಡೆಗಟ್ಟಲು ಸಾಧ್ಯವಾಗದ ಪಾಕಿಸ್ತಾನ ಭಾರತದ ವಿರುದ್ಧ ಮತ್ತೊಮ್ಮೆ ಆರೋಪ ಮಾಡಿದ್ದು, ಪಾಕಿಸ್ತಾನದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಭಾರತ ಭಯೋತ್ಪಾದನೆ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದೆ. ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ನಫೀಜ್ ಝಕಾರಿಯಾ, ಭಾರತದ ವಿರುದ್ಧ ಆರೋಪ ಮಾಡಿದ್ದು, ತೆಹ್ರೀಕ್-ಇ-ತಾಲೀಬಾನ್ ಪಾಕಿಸ್ತಾನ್(ಟಿಟಿಪಿ) ಹಾಗೂ ಜಮಾತ್-ಉಲ್- ಅಹ್ರಾರ್(ಜೆಯುಎ) ಉಗ್ರ ಸಂಘಟನೆಗಳನ್ನು ಪಾಕಿಸ್ತಾನದ ವಿರುದ್ಧ ಪ್ರಯೋಗಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಆಸೀಫ್ ಘಫೂರ್ ಸಹ ಭಾರತದ ವಿರುದ್ಧ ಆರೋಪ ಮಾಡಿದ್ದು, […]

ಜಿಎಸ್‌ಟಿ ಬದಲಾವಣೆಯಿಂದಾಗಿ ದೀಪಾವಳಿ ಬೇಗನೆ ಬಂದಿದೆ :ಮೋದಿ

Saturday, October 7th, 2017
modi

ದ್ವಾರಕಾ: ಈ ಬಾರಿಯ ಸರಕು ಮತ್ತು ಸೇವಾ ತೆರಿಗೆ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಉತ್ತಮ ನಿರ್ಧಾರಗಳಿಂದ ಈ ಬಾರಿಯ ದೀಪಾವಳಿ ಹಬ್ಬ ಅತ್ಯಂತ ಮುಂಚಿತವಾಗಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಈ ವೇಳೆ ಮಾತನಾಡಿರುವ ಅವರು, 27 ಸರಕು, ಸೇವೆಗಳ ತೆರಿಗೆ ದರ ಇಳಿಸಲು ಶುಕ್ರವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ. ಇದೇ ವೇಳೆ ಮಾತನಾಡಿದ […]