ವಿಧಾನ ಪರಿಷತ್‌ ಸ್ಪರ್ಧೆಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್

Monday, November 22nd, 2021
Manjunath Bhandary

ಮಂಗಳೂರು :  ವಿಧಾನ ಪರಿಷತ್‌ ಸ್ಪರ್ಧೆಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯ ಒಪ್ಪಿಗೆಯೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್ ಸೋಮವಾರ ಅಭ್ಯರ್ಥಿಯಾಗಿ ಪ್ರಕಟಿಸಿದ್ದಾರೆ. ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೆಮ್ಮಾಜೆಯ ಬಂಟ-ಕೃಷಿ ಕುಟುಂಬದಲ್ಲಿ ಜನಿಸಿದ ಮಂಜುನಾಥ್ ಭಂಡಾರಿ ‘ಪಂಚಾಯತ್ ರಾಜ್‌’ ವಿಷಯದಲ್ಲಿ ಎಂಪಿಎಲ್ ಮತ್ತು ಪಿಎಚ್‌ಡಿ ಮಾಡಿದ್ದಾರೆ. ರಾಜಕೀಯ […]

ಕೆಲಸದ ಒತ್ತಡ ಪಬ್ಲಿಕ್‌ ಸ್ಕೂಲ್ ನ ಟೀಚರ್ ಆತ್ಮಹತ್ಯೆ

Monday, November 22nd, 2021
Amrutha

ಉಡುಪಿ  :  ಖಾಸಗಿ ಶಾಖೆಯ ಶಿಕ್ಷಕಿಯೊಬ್ಬರು ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿ  ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಮೂಡು ಅಲೆವೂರು ಎಂಬಲ್ಲಿ ನಡೆದಿದೆ. ಮೃತರನ್ನು ವಿದ್ಯೋದಯ ಪಬ್ಲಿಕ್‌ ಸ್ಕೂಲ್ ನ ಶಿಕ್ಷಕಿ ಹಾಗೂ ಮೂಡು ಅಲೆವೂರಿನ ಬಾಲಗೋಪಾಲ ಎಂಬವರ ಪುತ್ರಿ ಅಮೃತಾ ಎಂದು ಗುರುತಿಸಲಾಗಿದೆ. ಅಮೃತಾ ವಿದ್ಯೋದಯ ಪಬ್ಲಿಕ್‌ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಇದೇ ಚಿಂತೆಯಲ್ಲಿ ಮನನೊಂದ ಇವರು ಮನೆಯ […]

ಬುಡೋಳಿ ನೇತಾಜಿ ಕಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Sunday, November 21st, 2021
Badoli Netaji School

ಬಂಟ್ವಾಳ: ಸಮಾಜದಲ್ಲಿ ದೇವಾಲಯ ಮತ್ತು ಶಾಲೆಗಳನ್ನು ನೋಡಿದಾಗ ಅಲ್ಲಿನ ಅಭಿವೃದ್ಧಿ ಗೋಚರಕ್ಕೆ ಬರುತ್ತದೆ. ಅದೇ ರೀತಿ ನಾವು ಹಣವಂತರಿಗೆ ಬದಲಾಗಿ ಗುಣವಂತಿಕೆ ಹೊಂದಿರುವ ಶಿಕ್ಷಣವಂತರಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಇಲ್ಲಿನ ಪಂಜಿಕಲ್ಲು ಗ್ರಾಮ ಪುಂಚೋಡಿ ಸಮೀಪದ ಬುಡೋಳಿ ನೇತಾಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ನೂತನ ಕಟ್ಟಡಕ್ಕೆ ಶಿಲಾನ್ಯಾಸ ಇದರ ಸಭಾ ಕಾರ್ಯಕ್ರಮವನ್ನು ಗಣೇಶಪುರ ಕ್ಷೇತ್ರದ ವೇದಮೂರ್ತಿ […]

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಎಂ.ಪಿ.ಶ್ರೀನಾಥ್ ಆಯ್ಕೆ

Sunday, November 21st, 2021
srinath

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಉಪನ್ಯಾಸಕ, ಲೇಖಕ ಎಂ.ಪಿ.ಶ್ರೀನಾಥ್ ಆಯ್ಕೆಯಾದರು.  ಶ್ರೀನಾಥ್ ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ 26 ವರ್ಷಗಳಿಂದ ಕನ್ನಡ ಉಪನ್ಯಾಸಕರಾಗಿದ್ದಾರೆ. ಭಾನುವಾರ ಏಕಕಾಲಕ್ಕೆ ರಾಜ್ಯಾದ್ಯಂತ ಕಸಾಪ ರಾಜ್ಯ ಘಟಕ ಹಾಗೂ ಎಲ್ಲಾ ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯಿತು. ದ.ಕ ಜಿಲ್ಲೆಯಲ್ಲಿ ಮಂಗಳೂರು ಅಲ್ಲದೆ ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕು ಕಚೇರಿ, ಮೂಲ್ಕಿ ನಗರ ಪಂಚಾಯಿತಿ, ವಿಟ್ಲ ಪಟ್ಟಣ ಪಂಚಾಯಿತಿ, ಕೊಕ್ಕಡ ನಾಡ ಕಚೇರಿಯಲ್ಲಿ ಮತದಾನ […]

ಡೊಂಗರಕೇರಿಯಲ್ಲಿರುವ ಸ್ಮಾರಕದಲ್ಲಿ ಕೆನರಾ ಬ್ಯಾಂಕ್ ಸ್ಥಾಪಕರ ದಿನಾಚರಣೆ

Sunday, November 21st, 2021
Canara-Bank

ಮಂಗಳೂರು  :  ಕೆನರಾ ಬ್ಯಾಂಕಿನ 116ನೇ ಸಂಸ್ಥಾಪಕರ ದಿನಾಚರಣೆಯನ್ನು ನಗರದ ಡೊಂಗರಕೇರಿಯಲ್ಲಿರುವ ಸ್ಮಾರಕದಲ್ಲಿ ಆಚರಿಸಲಾಯಿತು. ಯೆನೆಪೋಯ ವಿವಿ ಕುಲಪತಿ ಯೆನಪೋಯ ಅಬ್ದುಲ್ಲ ಕುಂಞಿ, ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಅವರನ್ನು ಸನ್ಮಾನಿಸಲಾಯಿತು. ಯುವ ತಬಲ ವಾದಕ ಸಾಧನ್ ನಾಯಕ್ ಅವರನ್ನು ಕೂಡ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಮ್ಮೆಂಬಳ ಸುಬ್ಬರಾವ್ ಪೈ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಹಾಗೆ ಈ ಸುದಿನದಂದು ಅವರ ಕನಸಿನಂತೆ ನಗರದ ಸರಕಾರಿ ಶಾಲೆಯ ೬ […]

ಎಲ್ಲ ಕಡೆಗಳಲ್ಲಿ ಭಗವಂತನ ಅಸ್ತಿತ್ವದ ಅನುಭವ ಮಾಡುವ ಕನಕದಾಸರು !

Sunday, November 21st, 2021
Kanakadasa

ಮಂಗಳೂರು :  ಬೀರಪ್ಪನಾಯಕನು ೧೬ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಬಂಕಾಪುರ ಪ್ರಾಂತ್ಯದ ಬಾಡ ಪಟ್ಟಣದ ದಳಪತಿಯಾಗಿದ್ದನು. ಬಚ್ಚಮ್ಮ ಬೀರಪ್ಪನ ಹೆಂಡತಿ. ಇವರು ತಿರುಪತಿ ವೆಂಕಟೇಶ್ವರಸ್ವಾಮಿಯ ಭಕ್ತರು. ತಿರುಪತಿ ತಿಮ್ಮಪ್ಪನ ಕೃಪೆಯಿಂದ ಈ ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು. ಅದಕ್ಕೆ ‘ತಿಮ್ಮಪ್ಪ’ ಎಂದೇ ಹೆಸರಿಟ್ಟರು. ತಿಮ್ಮಪ್ಪ ನಾಯಕ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತನು. ತಂದೆಯ ಕಾಲಾನಂತರ ಬಂಕಾಪುರ ಪ್ರಾಂತ್ಯಕ್ಕೆ ದಳಪತಿಯಾದನು. ತಿಮ್ಮಪ್ಪನು ಹೊಸ ಮನೆ ಕಟ್ಟಿಸುವಾಗ ಆ ಸ್ಥಳದಲ್ಲಿ ಆತನಿಗೆ ಚಿನ್ನ, ವಜ್ರ, […]

ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಯುವತಿಯರಿಗೆ ದಂಡ ಹಾಕಿದ ಪುರಸಭೆ

Sunday, November 21st, 2021
ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದ ಯುವತಿಯರಿಗೆ ದಂಡ ಹಾಕಿದ ಪುರಸಭೆ

ಮಂಗಳೂರು :  ಬೀಚ್ ಗೆ ಪ್ರವಾಸಕ್ಕೆ ಬಂದ  ಯುವತಿಯರಿಬ್ಬರು  ಸೋಮೇಶ್ವರ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಎಸೆದಕ್ಕೆ ರೂ. 500 ದಂಡ ವಿಧಿಸಿದ ಘಟನೆ ಭಾನುವಾರ ನಡೆದಿದೆ. ಪ್ರವಾಸಿಗರು  ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸೋಮೇಶ್ವರ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿವಿದ ಸಂಘ ಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ 1 ಟನ್ ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಿದ್ದು, ಅಲ್ಲದೆ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಕದಂತೆ ಎಚ್ಚರಿಸಿ ನಾಮಫಲಕವನ್ನು ಹಾಕಿದೆ. ಭಾನುವಾರ ಕಾರ್ಯಾಚರಣೆ ನಡೆಸಿದ ಪುರಸಭೆ […]

ಬಿಟ್ ಕಾಯಿನ್ ಹಗರಣದ ಆರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಕೂಡ ಇದೆ : ರಮಾನಾಥ ರೈ

Saturday, November 20th, 2021
Ramanatha Rai

ಮಂಗಳೂರು : ಸಚಿನ್ ಮಾಮನಿ  ಬಿಟ್ ಕಾಯಿನ್ ಹಗರಣದ  ಬಗ್ಗೆ ಪ್ರಧಾನಮಂತ್ರಿಗೆ ಪತ್ರ ಬರೆದಿರುವ ಆರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು ಕೂಡ ಇದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಹೆಸರನ್ನು ಉಲ್ಲೇಖಿಸದೆ ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಮತ್ತು ಪ್ರಸಿದ್ಧ ಶೆಟ್ಟಿ ಮೊದಲಾದವರ ಹೆಸರನ್ನು ಸಹ ಸಚಿನ್ ಮಾಮನಿ ಅವರು ಪ್ರಧಾನಮಂತ್ರಿಗೆ ಬರೆದಿರುವ ಆರೋಪ […]

ಹಿಂದೂ ಯುವತಿ ಮತಾಂತರದ ಮದುವೆ, ಯುವತಿಯ ಮನೆಗೆ ಭೇಟಿ ನೀಡಿದ ಗುರುಪುರ ವಜ್ರದೇಹಿ ಶ್ರೀಗಳು

Saturday, November 20th, 2021
Mohan-Bekary

ಮಂಗಳೂರು : ಹಿಂದೂ ಯುವತಿಯೊಬ್ಬಳು ಮುಸ್ಲಿಂ ಹುಡುಗನನ್ನು ಮೂರು ವರ್ಷಗಳಿಂದ ಪ್ರ್ರೀತಿಸಿ ಬಳಿಕ ಮನೆಯವರನ್ನು ಒಪ್ಪಿಸಿ ನವೆಂಬರ್ 29 ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಸ್ಟೇಟ್ ಬ್ಯಾಂಕ್ ಸಿಟಿ ಬಸ್ ಸ್ಟ್ಯಾಂಡ್ ನ ಎದುರುಗಡೆ ಇರುವ ಮೋಹನ್ ಬೇಕರಿ ಮಾಲೀಕರ ಮಗಳು ಕೇರಳದ ಕಣ್ಣೂರಿನ ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದನ್ನು ಹಿಂದೂ ಸಂಘಟನೆಗಳು ವಿರೋಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಿದ್ದವು. ಈ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪ್ ವೆಲ್  […]

ಕಾಂಗ್ರೆಸ್ಸಿನಿಂದ ಪ್ರಭಲ ಸ್ಪರ್ಧಿ ಕಣಕ್ಕೆ , ವಿಧಾನ ಪರಿಷತ್ ಚುನಾವಣಾ ಸ್ಪರ್ಧಾಕಣದಿಂದ ಹಿಂದೆ ಸರಿದ ಡಾ ಎಂ. ಎನ್. ರಾಜೇಂದ್ರ ಕುಮಾರ್

Saturday, November 20th, 2021
mn Rajendra-Kumar

ಮಂಗಳೂರು  : ಅದ್ದೂರಿಯಾಗಿ ಚುನಾವಣಾ ಕಚೇರಿಯನ್ನು ತೆರೆದು ವಿಧಾನ ಪರಿಷತ್ ಚುನಾವಣೆ ಸ್ಪರ್ಧೆಗೆ ಇಳಿದಿದ್ದ ಎಸ್‍ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್ ಅವರು ಕೊನೆಯ ಕ್ಷಣದಲ್ಲಿ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದಾರೆ. ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತನಾಗಿ ಉಳಿಯುವ ಬಯಕೆ ನನ್ನದು, ಹೀಗಾಗಿ ರಾಜಕೀಯ ದಿಂದ ದೂರವಿದ್ದು, ಸಹಕಾರಿ ಕ್ಷೇತ್ರದ ಉನ್ನತಿಗೆ ಶ್ರಮಿಸುತ್ತೇನೆ ಎಂದರು. ಕಳೆದ 35 ವರ್ಷಗಳಿಂದ ಸಹಕಾರ ರಂಗದಲ್ಲಿದ್ದೇನೆ. ರಾಜಕೀಯ ಬೇಡ, ಸಹಕಾರಿ ಕ್ಷೇತ್ರಕ್ಕೂ ರಾಜಕೀಯ ತರುವುದಿಲ್ಲ […]