ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯಿಂದ ಪೋರ್ಜರಿ, ಭಕ್ತಾದಿಗಳಿಂದ ಪ್ರತಿಭಟನೆ

Sunday, November 14th, 2021
Veeranarayana Temple

ಮಂಗಳೂರು : ಶ್ರೀ ವೀರನಾರಾಯಣ ದೇವಸ್ಥಾನ, ಪದವು ಗ್ರಾಮ, ಕುಲಶೇಖರದಲ್ಲಿ ಪ್ರಸ್ತುತ ಆಡಳಿತ ನಡೆಸುವ ಸಮಿತಿಯು ಪೋರ್ಜರಿ ದಾಖಲೆಗಳ ಮೂಲಕ ದೇವಳದ, ಸಮಸ್ತ ಆಸ್ತಿಯನ್ನು ಕಬಳಿಸಿರುವ ಮತ್ತು ಸಾರ್ವಜನಿಕ ದೇವಸ್ಥಾನವನ್ನು ಒಂದು ಸಮುದಾಯದ ಆಸ್ತಿ ಎಂದು ತಪ್ಪು ಸಂದೇಶವನ್ನು ನೀಡಿ ಭಕ್ತರನ್ನು ದಾರಿ ತಪ್ಪಿಸುತ್ತಿರುವ ಬಗ್ಗೆ ಪರಿಸರದ ಭಕ್ತಾಧಿಗಳು ಮತ್ತು ಸುಮಾರು 32 ಸಮಿತಿಗಳು ಸೇರಿ ದೇವಸ್ಥಾನದ ಸಮೀಪ ನವೆಂಬರ್ 14ರ ಭಾನುವಾರ ಪ್ರತಿಭಟನೆ ನಡೆಸಿತು. ಶ್ರೀ ವೀರನಾರಾಯಣ ಸದ್ಭಕ್ತ ಸಮಿತಿ ಕುಲಶೇಖರ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನು […]

ಪಿಲಿಕುಳ ಮೃಗಾಲಯಕ್ಕೆ ಬಂದ ಬರಿಂಕ, ದೊಡ್ಡ ಬೆಳ್ಳಕ್ಕಿ ಮತ್ತು ನೀರಕ್ಕಿ

Saturday, November 13th, 2021
Neerakki

ಗುರುಪುರ : ಪಿಲಿಕುಳ ಮೃಗಾಲಯಕ್ಕೆ ವಿನಿಮಯದ ಮೂಲಕ ಹೈದರಾಬಾದ್ ಮೃಗಾಲಯದಿಂದ 4 ಬರಿಂಕ(ಮೌಸ್ ಡೀರ್), 6 ದೊಡ್ಡ ಬೆಳ್ಳಕ್ಕಿ(ಲಾರ್ಜ್ ಇಗ್ರೆಟ್) ಮತ್ತು 2 ನೀರಕ್ಕಿ(ಗ್ರೇ ಪೆಲಿಕಾನ್)  ಗಳನ್ನು ತೋರಿಸಲಾಗಿದೆ. ವನ್ಯಜೀವಿ ವಿನಿಮಯ ಕಾರ್ಯಕ್ರಮದಡಿ ಇಲ್ಲಿಗೆ ಈ ಪ್ರಾಣಿ-ಪಕ್ಷಿ ಆಮದು ಮಾಡಿಕೊಳ್ಳಲಾಗಿದೆ.ಇದಕ್ಕೆ ಪ್ರತಿಯಾಗಿ ಇಲ್ಲಿಂದ ಹೈದರಾಬಾದ್ ಮೃಗಾಲಯಕ್ಕೆ 4 ಕಾಡು ನಾಯಿ(ದೋಳ್), ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವು ಮತ್ತು 4 ವಿಟೆಕರ್ಸ್ ಹಾವು ರಫ್ತು ಮಾಡಲಾಗಿದೆ. ಪ್ರವಾಸಿಗರು ಹೊಸ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಬಹುದು ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ […]

ಕೋಡಿಕಲ್ ನಾಗಬ್ರಹ್ಮ ದೇವಸ್ಥಾನದ ನಾಗನ ಕಲ್ಲನ್ನು ಹೊರಗೆ ಎಸೆದು ದುಷ್ಕೃತ್ಯ

Saturday, November 13th, 2021
Kodikal-Naga

ಮಂಗಳೂರು : ನಗರದ ಕೋಡಿಕಲ್ ನ ನಾಗಬ್ರಹ್ಮ ದೇವಸ್ಥಾನದ ನಾಗನ ಕಲ್ಲನ್ನು ದುಷ್ಕರ್ಮಿಗಳು ಹೊರಗಡೆ ಎಸೆದು ಧ್ವಂಸ ಮಾಡಿದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ಹಾಗು ಸ್ಥಳೀಯರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ. ಸುದ್ದಿ ತಿಳಿದ ಶಾಸಕ ಡಾ.ಭರತ್ ಶೆಟ್ಟಿ ವೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ವಿಶೇಷ ತಂಡ ರಚಿಸಿ ಪ್ರಕರಣ ಭೇದಿಸುವಂತೆ ಶಾಸಕರು ಪೊಲೀಸ್ ಅಧಿಕಾರಿಗಳಿಗೆ […]

ಭತ್ತದ ಕೃಷಿ ಗೆ ಪ್ರೋತ್ಸಾ ಹ ನೀಡುವ ಕಾರ್ಯ ಶ್ಲಾಘನೀಯ -ಡಾ.ರಾಜೇಂದ್ರ ಕೆ.ವಿ.

Saturday, November 13th, 2021
journalist

ಬಂಟ್ವಾಳ :ಜಿಲ್ಲೆಯಲ್ಲಿ ಬತ್ತದ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪತ್ರಕರ್ತರು ಬತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಅವರು ಇಂದು ವಿಟ್ಲ ಮಿತ್ತಳಿಕೆ ಯ ತಿಮಾರು ಗದ್ದೆಯಲ್ಲಿಂದು ಭತ್ತದ ಕೃಷಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯ ನಿರತ ಪತ್ರಕ ರ್ತರ ಸಂಘ ಹಾಗೂ ಮಿತ್ತಳಿಕೆ […]

ಬಾಂಬ್ ಇಡುವ ಭಯೋತ್ಪಾದನಾ ಕೃತ್ಯಗಳನ್ನು ಅಣಕು ಕಾರ್ಯಾಚರಣೆಯಲ್ಲಿ ವಿಫಲಗೊಳಿಸಿದ ಪೊಲೀಸರು

Saturday, November 13th, 2021
bomb

ಮಂಗಳೂರು : ಭಯೋತ್ಪಾದನಾ ಕೃತ್ಯಗಳಲ್ಲಿ ಪೊಲೀಸ್ ಅಲರ್ಟ್‌ನ್ನು ಪರೀಕ್ಷಿಸುವುದಕ್ಕಾಗಿ ನಡೆಯುವ ‘ಸಾಗರ್ ಕವಚ’ ಅಣಕು ರಕ್ಷಣಾ ಕಾರ್ಯಾಚರಣೆ ಶುಕ್ರವಾರ ನಗರದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ನಡೆಯಿತು. ಪಣಂಬೂರಿನ 2 ಪ್ರಮುಖ ಸ್ಥಳಗಳು ಮತ್ತು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಬಾಂಬ್ ಇಡುವ ಪ್ರಯತ್ನಗಳನ್ನು ಅಣಕು ಕಾರ್ಯಾಚರಣೆ ಮೂಲಕ ನಡೆಸಲಾಗಿದ್ದು ಕಟ್ಟೆಚ್ಚರದಲ್ಲಿದ್ದ ಮಂಗಳೂರು ಪೊಲೀಸರು ಮೂರು ಕಡೆಯೂ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಕರಾವಳಿಯಲ್ಲಿ ಭದ್ರತೆಯನ್ನು ಪುನರ್‌ಪರಿಶೀಲಿಸುವ ಉದ್ದೇಶದಿಂದ ವರ್ಷದಲ್ಲಿ ಕನಿಷ್ಠ 2 ಬಾರಿ ‘ಸಾಗರ್ […]

ದಿಯಾ ಸಿಸ್ಟಮ್ಸ್ ಮಂಗಳೂರು ಪ್ರೈ. ಲಿಮಿಟೆಡ್ ಸ್ಥಾಪಕ ಡಾ.ರವಿಚಂದ್ರನ್ ನಿಧನ

Friday, November 12th, 2021
Ravichandran

ಮಂಗಳೂರು: ಸಾಫ್ಟ್‌ವೇರ್ ಕಂಪನಿ ದಿಯಾ ಸಿಸ್ಟಮ್ಸ್ ಮಂಗಳೂರು ಪ್ರೈ. ಲಿಮಿಟೆಡ್ ಸ್ಥಾಪಕ ಡಾ.ರವಿಚಂದ್ರನ್ ಅವರು ನಿಧನರಾಗಿದ್ದಾರೆ. ಮಂಗಳೂರು ಮೂಲದ ಡಾ.ರವಿಚಂದ್ರನ್ ಅವರು ಎರಡು ವರ್ಷ ಹಿಂದೆ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಕೆಂಟಕಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಮೃತಪಟ್ಟರು. ಇವರ ಸಾಧನೆಗೆ ಭಾರತೀಯ ಉದ್ಯೋಗ ರತ್ನ ಅವಾರ್ಡ್‌, ಅಲೋಷಿಯನ್‌‌ ಅಲ್ಯುಮಿನಿ ಅವಾರ್ಡ್‌, ಎಂಎಂಎ-ಕೆವಿಕೆ ಅತ್ಯುತ್ತಮ ಮ್ಯಾನೇಜರ್‌‌ ಅವಾರ್ಡ್‌, 2016ರ ಸ್ಪಂದನ ಎಂಟರ್‌‌ಪ್ರಿನರ್‌‌ ಆಫ್‌ ದಿ ಇಯರ್‌ ಪ್ರಶಸ್ತಿಗಳು ಬಂದಿದ್ದವು. ಇವರಿಗೆ ಪತ್ನಿ ಇಂದಿರಾ, ಮಗಳು ವಿದ್ಯಾ, ಮಗ […]

ಸಂಗಬೆಟ್ಟು ಪೇಟೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಗೊಳಿಸುವ ಜಾಗೃತಿ ಕಾರ್ಯಕ್ರಮ

Friday, November 12th, 2021
Sangabettu

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಾಹಸ್ ಸಂಸ್ಥೆ ಬೆಂಗಳೂರು ಹಾಗೂ ಸಂಗಬೆಟ್ಟು ಗ್ರಾಮ‌ಪಂಚಾಯತ್ ವತಿಯಿಂದ ಕ್ಲೀನ್ ಇಂಡಿಯಾ ಹಾಗೂ ದಸ್ ಕಾ ದು ಸ್ವಚ್ಚ ಹರ್ ದಮ್ ಕಾರ್ಯಕ್ರಮ ಆಯೋಜಿಸಲಾಯಿತು. ಇದರ ಅಂಗವಾಗಿ ಶಾಲಾ ಮಕ್ಕಳಿಗೆ ಹಸಿ ಹಾಗೂ ಒಣ ಕಸ ಬೇರ್ಪಡಿಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಬಳಿಕ ಸಂಗಬೆಟ್ಟು ಪೇಟೆ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಗೊಳಿಸುವ ಮಾಹಿತಿ ನೀಡಲಾಯಿತು. ಶಾಲಾ‌ ಮಕ್ಕಳು  […]

ಕಾರಿನಲ್ಲಿ 44 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ಪತ್ತೆ

Friday, November 12th, 2021
dead Body

ಮಂಗಳೂರು : ಪಾರ್ಕ್ ಮಾಡಿದ್ದ ಕಾರಿನಲ್ಲಿ 44 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ನವೆಂಬರ್ 12ರ ಶುಕ್ರವಾರ ಪತ್ತೆಯಾಗಿದೆ.. ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ ಎಂದು ಗುರುತಿಸಲಾಗಿದೆ. ಮೃತರು ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಸಾವಿಗೆ ಕಾರಣ ಇನ್ನೂ ಖಚಿತವಾಗಿಲ್ಲ ಗುರುವಾರ ರಾತ್ರಿಯಿಂದಲೇ ಕಾರು ನಗರದ ಕಂಕನಾಡಿ ಬಳಿ ಪಾರ್ಕಿಂಗ್ ಮಾಡಲಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದು ,ಇಂದು ಮಧ್ಯಾಹ್ನದವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದು ಅನುಮಾನ ಬಂದು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ಬಿದ್ದಿರುವುದು […]

ಮೂಲರಪಟ್ಣ ನೂತನ ಸೇತುವೆ ವಾಹನ ಸಂಚಾರಕ್ಕೆ ಮುಕ್ತ

Friday, November 12th, 2021
mularapatna

ಬಂಟ್ವಾಳ: ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ಮೂಲರಪಟ್ಣ ನೂತನ ಸೇತುವೆಯನ್ನು ಊರಿನ ಹಿರಿಯರು ತೆಂಗಿನಕಾಯಿ ಒಡೆದು ಸಂಚಾರಕ್ಕೆ ಮುಕ್ತಗೊಳಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸೇತುವೆಯಲ್ಲಿ ಊರಿನ ಪ್ರಮುಖರ ಜತೆ ಸಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸೇತುವೆ ನಿರ್ಮಾಣ ಸಂಸ್ಥೆ ಕಾವೂರು ಮುಗ್ರೋಡಿ ಕನ್ ಸ್ಟ್ರಕ್ಷನ್ಸ್ ಮಾಲಕ ಸುಧಾಕರ ಶೆಟ್ಟಿ ಮುಗ್ರೋಡಿ, ದಾಮೋದರ್, ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮಾ, ಮುತ್ತೂರು […]

ಚೀನಾದ ನಿಷೇಧಿತ ಆ್ಯಪ್ ಬಳಸಿ ಹಣ ವರ್ಗಾವಣೆ ಮಾಡುತ್ತಿದ್ದ ಇಬ್ಬರು ಟಿಬೆಟಿಯನ್ನರ ಬಂಧನ

Thursday, November 11th, 2021
Tibetians

ಮಂಗಳೂರು : ಚೀನಾದ ನಿಷೇಧಿತ ಆ್ಯಪ್ ಬಳಸಿ ಹಲವಾರು ಮಂದಿಗೆ ಮೋಸ ಮಾಡಿರುವ ಇಬ್ಬರು ಟಿಬೆಟಿಯನ್ನರು ಪೊಲೀಸರು ಬಂಧಿಸಿದ್ದಾರೆ. ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ನಿವಾಸಿಗಳಾದ ಲೋಬಸಂಗ್ ಸಂಗ್ಯೆ (24), ದಪಕ ಪುಂದೇ (44) ಬಂಧಿತರು. ಮಂಗಳೂರು ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇವರು ಚೀನಾದ ನಿಷೇಧಿತ ಆ್ಯಪ್ ಬಳಸಿ ವಂಚನೆ ಮಾಡುತ್ತಿದ್ದರು. ಮೊಬಿವಿಕ್, ವಿಚಾಟ್, ರೆಡ್ಪ್ಯಾಕ್ ಮುಂತಾದ ಆ್ಯಪ್ ಬಳಸುತ್ತಿದ್ದರು ಎಂಬುದು ತಿಳಿದುಬಂದಿದೆ. ಕ್ರೆಡಿಟ್ ಕಾರ್ಡ್ ರದ್ದು ಮಾಡಿಸಲು ಮನವಿ ಮಾಡಿದವರಿಗೆ ಕರೆ ಮಾಡುತ್ತಿದ್ದ ಇವರು, […]