ದೀಪಾವಳಿ “ಬೆಳಕಿನ ಹಬ್ಬ” ದ ಮಹತ್ವ ತಿಳಿಯಿರಿ

Wednesday, November 3rd, 2021
Deepavali

ಮಂಗಳೂರು  : ದೀಪಾವಳಿಯನ್ನು  “ಬೆಳಕಿನ ಹಬ್ಬ” ಎಂದೂ ಕರೆಯುತ್ತಾರೆ. ಕುಟುಂಬದ ಸದಸ್ಯರು ಒಟ್ಟಿಗೆ ಸೇರಿ ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುತ್ತಾರೆ, ಈ ದಿನದಂದು ಅಷ್ಟೈಶ್ವರ್ಯ ಕ್ಕಾಗಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುವ ರೂಡಿ. ಭಾರತದ ಉತ್ತರ ರಾಜ್ಯಗಳು ಈ ಹಬ್ಬವನ್ನು ದೀವಾಲಿ ಎಂದು  ಉಲ್ಲೇಖಿಸಿದರೆ, ಇದನ್ನು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಮತ್ತು ಸಿಂಗಾಪುರ, ಮಲೇಷ್ಯಾ ಮುಂತಾದ ಏಷ್ಯಾದ ಇತರ ರಾಷ್ಟ್ರಗಳಲ್ಲಿ ದೀಪಾವಳಿ (‘ ದೀಪ್’ ಎಂದರೆ ಬೆಳಕು / ದೀಪ, ‘ವಳಿ’ ಎಂದರೆ ರಚನೆ) ಎಂದು ಕರೆಯಲಾಗುತ್ತದೆ. […]

ಉಡುಪಿ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾಗಿ ಕಾ.ವೀ.ಕೃಷ್ಣದಾಸ್ ನೇಮಕ

Tuesday, November 2nd, 2021
KaVi Krishnadas

ಮಂಗಳೂರು : ಕವಿ, ಸಂಘಟಕ ಕಾ.ವೀ.ಕೃಷ್ಣದಾಸ್ ಅವರನ್ನು ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಭಾರ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ರಾಜ್ಯಾಧ್ಯಕ್ಷರಾಗಿರುವ ಕರ್ನಾಟಕ ವಿಧಾನ ಪರಿಷತ್ ನ ಮಾಜಿ ಸದಸ್ಯ ತೋಂಟದಾರ್ಯ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಆಕ್ಟೊಬರ್ 20ರಂದು ಮೈಸೂರಿನಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಕೇಂದ್ರ ಸಮಿತಿ ಸಂಚಾಲಕರಾಗಿರುವ ಎಂ.ಜಿ.ಅರಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಅಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ […]

ಒಳಾಂಗಣ ಕ್ರೀಡಾಂಗಣ, ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಕ್ಕೆ ಶಿಲನ್ಯಾಸ

Tuesday, November 2nd, 2021
Smart city

ಮಂಗಳೂರು :  ಸ್ಮಾರ್ಟ್ ಸಿಟಿ ಲಿಮಿಟೆಡ್ ಯೋಜನೆಯಡಿ ಮಂಗಳೂರು ನಗರದಲ್ಲಿ ಅಭಿವೃದ್ಧಿ ಪರ್ವವೇ ಆರಂಭಗೊಂಡಿದ್ದು, ಮುಂಬರುವ ವರ್ಷದಲ್ಲಿ ಪಂಪ್‍ವೆಲ್‍ನಲ್ಲಿ ಬಹುದೊಡ್ಡ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ತಿಳಿಸಿದರು. ಅವರು ನ.2ರ ಮಂಗಳವಾರ ಮಂಗಳೂರು ನಗರದ ಉರ್ವ ಮಾರುಕಟ್ಟೆ ಬಳಿ 20.54 ಕೋಟಿ ರೂ.ಗಳಡಿ ಉದ್ದೇಶಿತ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕೋರ್ಟ್‍ಗಳನ್ನೊಳಗೊಂಡ ಒಳಾಂಗಣ ಕ್ರೀಡಾಂಗಣ ಹಾಗೂ 70 ಕೋಟಿ ರೂ.ಗಳ ವೆಚ್ಚದಲ್ಲಿ ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಬಳಿ ಪಿಪಿಪಿ […]

ಹೃದಯದ ಬಗ್ಗೆ ಆತಂಕ, ಭಯ ಬೇಡ- ಎಚ್ಚರಿಕೆ ಇರಲಿ : ಡಾ. ಮಂಜುನಾಥ್

Tuesday, November 2nd, 2021
DrManjunath

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಹೃದ್ರೋಗ ತಜ್ಞರ ಬಳಿ ಬರುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಕುರಿತು ಕೇಳಿ ಬರುತ್ತಿರುವ ಕೆಲವೊಂದು ಹೇಳಿಕೆ, ಸಲಹೆಗಳು ಜನಸಾಮಾನ್ಯರಲ್ಲಿ ಆತಂಕ, ಭಯಕ್ಕೆ ಕಾರಣವಾಗುತ್ತಿದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ಬೇಕಿರುವುದು ಆತಂಕವಲ್ಲ. ಬದಲಿಗೆ ಆರೋಗ್ಯದ ಕುರಿತಂತೆ ಎಚ್ಚರಿಕೆಯ ಹೆಜ್ಜೆ. ಇದು ಮಂಗಳೂರು ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಅವರ ಸಲಹೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಜತೆಗಿನ […]

ಮಂಗಳೂರು : 7 ಮಂದಿ ಸರಗಳ್ಳರ ಬಂಧನ

Tuesday, November 2nd, 2021
chain Snatchers

ಮಂಗಳೂರು :  ಸರಗಳ್ಳತನ, ಸುಲಿಗೆ, ದ್ವಿಚಕ್ರ ವಾಹನ  ಕಳವು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ 24 ಪ್ರಕರಣಗಳಲ್ಲಿ 7 ಮಂದಿ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾವೂರು ನಿವಾಸಿ ಅಬ್ದುಲ್ ಇಶಾಮ್ ಯಾನೆ ಇಶಾಮ್ (26), ಪಂಜಿಮೊಗರು ನಿವಾಸಿ ಸಫ್ವಾನ್ ಯಾನೆ ಸಪ್ಪು (29), ಕಾವೂರು ನಿವಾಸಿ ಮುಹಮ್ಮದ್ ತೌಸೀಫ್ ಯಾನೆ ಹಾರಿಸ್ ಯಾನೆ ಆಚಿ, ಶಾಂತಿನಗರ ನಿವಾಸಿ ಅಬ್ದುಲ್ ಖಾದರ್ ಸಿನಾನ್ (30), ಮಲ್ಲೂರು ಮುಹಮ್ಮದ್ ಪಜಲ್ ಯಾನೆ ಪಜ್ಜು (32), […]

ಜಿಲ್ಲಾ ಕಾರಾಗೃಹದಲ್ಲಿ ಕಲಿಕೆಯಿಂದ ಬದಲಾವಣೆ ಸಾಕ್ಷರ ಕಾರ್ಯಕ್ರಮಕ್ಕೆ ಚಾಲನೆ

Monday, November 1st, 2021
Jail Education

ಮಂಗಳೂರು :  ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ, ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿಯ ಸಹಭಾಗಿತ್ವದೊಂದಿಗೆ ಕಾರಾಗೃಹದಲ್ಲಿನ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂದಿಗಳಿಗೆ ‘ಕಲಿಕೆಯಿಂದ ಬದಲಾವಣೆ’ ಎಂಬ ಸಾಕ್ಷರತಾ ಕಾರ್ಯಕ್ರಮದ ಖಾಯಂ ಕಲಿಕಾ ಕೇಂದ್ರವನ್ನು ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನವೆಂಬರ್ 01ರ ಸೋಮವಾರ ಉದ್ಟಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ., ಜೈಲಿನಲ್ಲಿರುವ ಅನಕ್ಷರಸ್ಥ ಮತ್ತು ಆರೆ ಅಕ್ಷರಸ್ಥ ಬಂದಿಗಳು ಈ ಕಾರ್ಯಕ್ರಮದ […]

ಸಾಹಸಿ ಯುವತಿಯರಿಗೆ ಉಳ್ಳಾಲ ತೀರದಲ್ಲಿ ಅದ್ದೂರಿ ಸ್ವಾಗತ ಸಚಿವರು, ಶಾಸಕರು, ಗಣ್ಯರಿಂದ ಅಭಿನಂದನೆಗಳು

Monday, November 1st, 2021
adventurous- women

ಮಂಗಳೂರು  : ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೈಗೊಳ್ಳಲಾಗಿದ್ದ ಐತಿಹಾಸಿಕ ಯಾನ ಶಿಖರದಿಂದ ಸಾಗರ ಅಭಿಯಾನದಲ್ಲಿ ಭಾಗವಹಿಸಿದ್ದ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿ ನ.01ರ ಸೋಮವಾರ ಅದ್ದೂರಿ ಸ್ವಾಗತ ಕೋರಲಾಯಿತು. ಈ ಯುವತಿಯರು ಕಾಶ್ಮೀರದಲ್ಲಿನ ಕೊಲ್ಹೋಯಿ  (5425 ಮೀ) ಶಿಖರವನ್ನು ಏರಿ ತದನಂತರ ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್ ನ ಕರ್ ದೂಂಗ್ಲ ಪಾಸ್ ಮೂಲಕ 3350 ಕಿ.ಮೀ, ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿ, ಅಲ್ಲಿಂದ ರಾಜ್ಯದ ಕರಾವಳಿ ಸಮುದ್ರದಲ್ಲಿ 300 […]

ಅತೀ ಕಡಿಮೆ ಬೆಲೆಗೆ ಇಲ್ಲಿದೆ ಸಾಂಪ್ರದಾಯಿಕ ಗೂಡು ದೀಪಗಳು

Monday, November 1st, 2021
Lakshmi Fancy

ಮಂಗಳೂರು :  ಈ ಬಾರಿ ದೀಪಾವಳಿ ಕಳೆಗುಂದಿಲ್ಲ ಕೊರೋನಾದ  ಕಾಟ ಕಡಿಮೆಯಾಗಿದೆ. ಜನರು ದೀಪಾವಳಿ ಯನ್ನು ಆಚರಿಸಲು ಸಿದ್ದರಾಗಿದ್ದಾರೆ. ಮನೆ ಯನ್ನು ಬಣ್ಣದ ದೀಪಗಳಿಂದ ಅಲಂಕರಿಸಲು ಗೂಡು ದೀಪಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಈ ಬಾರಿ ಕೊರೋನಾದ ಪ್ರಭಾವ ಇದ್ದರೂ ದೀಪಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಸಜ್ಜಾಗಿದೆ. ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳಿಂದ ಮಾಡಿದ ಗೂಡುದೀಪಗಳು, ಬಿದಿರಿನ ಗೂಡುದೀಪಗಳು, ತೆಂಗಿನ ನಾರಿನಿಂದ ಮಾಡಿದ ಸಂಪ್ರದಾಯಿಕ ಗೂಡು ದೀಪಗಳು, ಕೈಯಿಂದ ಮಾಡಿದ ಸಾಂಪ್ರದಾಯಿಕ ಗೂಡು ದೀಪಗಳು ನಾನಾ […]

ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

Monday, November 1st, 2021
Kannada Rajyotsava

ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ನ.01ರ ಸೋಮವಾರ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು 66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದೇಶದ ತ್ರಿವರ್ಣ ಧ್ವಜಾರೋಹಣ ಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ರಾಜ್ಯ ಮತ್ತು ಜಿಲ್ಲೆಯಾದ್ಯಂತ ಸುಖಃ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಹಾಗೂ ಸಮಸ್ತ ನಾಗರಿಕರು ಶಾಂತಿಯುತ, ಸಹಬಾಳ್ವೆ […]

ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶ ಉಳಿಸಲು ಸಾಧ್ಯ – ಸುನಿಲ್ ಕುಮಾರ್ ಬಜಾಲ್

Sunday, October 31st, 2021
cpim

ಮಂಗಳೂರು  : ಒಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆದರೆ ಮತ್ತೊಂದು ಕಡೆ ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಆರ್ಥಿಕತೆಯನ್ನೇ ನಾಶ ಮಾಡಲಾಗುತ್ತಿದೆ.ಇದರಿಂದಾಗಿ ಹಿಂದುತ್ವ ಸರ್ವಾದಿಕಾರಶಾಹಿ ಹಾಗೂ ಕಾರ್ಪೊರೇಟ್ ನವ ಉದಾರವಾದದ ಒಂದು ವಿಷಕಾರಿ ಮಿಶ್ರಣದಿಂದ ದೇಶ ಗಂಬೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶವನ್ನು ಹಾಗೂ ಜನತೆಯ ಬದುಕನ್ನು ಉಳಿಸಲು ಸಾಧ್ಯ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ […]