ಪ್ರಧಾನ ಮಂತ್ರಿ ಮೋದಿ ಹುಟ್ಟು ಹಬ್ಬದ ದಿನ ಪೊಕೋಡಾ ತಯಾರಿಸಿ ಮಾರಾಟ ಮಾಡಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು

Friday, September 17th, 2021
Youth Congress

ಮಂಗಳೂರು  :   ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ವತಿಯಿಂದ  ಮಂಗಳೂರಿನ ಕ್ಲಾಕ್ ಟವರ್ ವೃತ್ತದಲ್ಲಿ ಪ್ರಧಾನ ಮಂತ್ರಿ ಮೋದಿ ಹುಟ್ಟು ಹಬ್ಬವನ್ನು ಪೊಕೋಡಾ ತಯಾರಿಸಿ ಮಾರಾಟ ಮಾಡಿ ಪ್ರತಿಭಟಿಸಿಸುವ ಮೂಲಕ ಆಚರಿಸಿದರು. ವಿದ್ಯಾವಂತರೆಲ್ಲ ರಸ್ತೆ ಬದಿಯಲ್ಲಿ ಪಕೋಡ ಮಾರಿ ನಿರುದ್ಯೋಗ ನಿವಾರಣೆ ಆಗಲಿ ಎಂದು ಪ್ರತಿಭಟನೆ ನಡೆಸಿದ್ದಾರೆ. ನರೇಂದ್ರ ಮೋದಿ ಸರಕಾರದ ಕಾಲದಲ್ಲಿ ಹೆಚ್ಚಿದ ನಿರುದ್ಯೋಗ ಮತ್ತು ಬೆಲೆಯೇರಿಕೆಯಾಗಿದೆ  ಎಂದು ಅವರು ಧಿಕ್ಕಾರ ಘೋಷಣೆ ಕೂಗಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, […]

ಬಾಕಿ ಉಳಿದಿರುವವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಡಿಸಿ

Friday, September 17th, 2021
Press Club Vaccination

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಶೇ.80ರಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿದೆ. ಆದರೆ ಬಾಕಿ ಉಳಿದವರಿಗೆ ಲಸಿಕೆ ಹಾಕಿಸುವುದು ತುಂಬಾ ಸವಾಲಿನ ಕೆಲಸ ಆಗಲಿದೆ. ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಇಂದಿನ ಲಸಿಕಾ ಅಭಿಯಾನವನ್ನು ಮಾಡುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಲಾದ ಕೋವಿಡ್ 19 ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವಾರ ಲಕ್ಷ ಮಂದಿಗೆ […]

ಖಾಸಗಿ ಶಾಲೆಗಳಲ್ಲಿ 30% ಶುಲ್ಕ ಕಡಿತ ಮಾಡಬೇಕೆಂಬ ಸರಕಾರದ ಆದೇಶವನ್ನು ರದ್ದು ಪಡಿಸಿದ ಹೈಕೋರ್ಟ್ : ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದಿಂದ ಸ್ವಾಗತ

Friday, September 17th, 2021
Ravindra Shetty

ಮಂಗಳೂರು  : ಸರಕಾರ ನಿಗದಿಮಾಡಿದ್ದ ಶೇ 30 ಶುಲ್ಕ ಕಡಿತವನ್ನು 15% ಕ್ಕೆ ಇಳಿಸಿದ ಹೈಕೋರ್ಟ್ ಆದೇಶವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟ ಸ್ವಾಗತ ಮಾಡಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ. ನಮ್ಮಲ್ಲಿ ಹಲವಾರು ಖಾಸಗಿ ಶಾಲೆಗಳು ಪೋಷಕರಿಗೆ ಶಾಲಾ ಶುಲ್ಕದಲ್ಲಿ ಬಹಳಷ್ಟು ರಿಯಾಯಿತಿ ನೀಡಿವೆ, ಆದರೂ ಕೆಲವು ಪೋಷಕರು ಶುಲ್ಕವನ್ನೇ ಪಾವತಿಸದೆ ಖಾಸಗಿ […]

ಕಾಸರಗೋಡು ಮೂಲದ ಮಹಿಳೆ ಪೋಲೆಂಡ್‌ನಲ್ಲಿ ಭಾರತೀಯ ರಾಯಭಾರಿ

Friday, September 17th, 2021
Nagma Mohammed

ಮಂಗಳೂರು : ಪ್ರಧಾನಿಗಳಾದ ಐ.ಕೆ. ಗುಜ್ರಾಲ್‌ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ  ಅಧಿಕಾರಿಯಾಗಿದ್ದ. ವಿದೇಶಾಂಗ ಇಲಾಖೆಯ ಶಿಷ್ಟಾಚಾರ ವಿಭಾಗದ ಉಪ ಮುಖ್ಯಸ್ಥೆಯಾಗಿದ್ದ ದೇಶದ ಪ್ರಪ್ರಥಮ ಮಹಿಳಾ ಅಧಿಕಾರಿ ಈಗ ಪೋಲೆಂಡ್‌ನ ಭಾರತೀಯ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಕಾಸರಗೋಡಿನ ಮುಹಮ್ಮದ್ ಹಬೀಬುಲ್ಲಾ ಅವರ ಪುತ್ರಿ ನಗ್ಮಾ ಮುಹಮ್ಮದ್ ಮಲಿಕ್ ಪೋಲೆಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿ ನಿಯುಕ್ತಿಗೊಂಡಿದ್ದಾರೆ. ನಗ್ಮಾ ಮುಹಮ್ಮದ್ ಮಲಿಕ್, ಕಾಸರಗೋಡಿನ ಫೋರ್ಟ್ ರೋಡ್‌ನಲ್ಲಿ ವಾಸವಾಗಿದ್ದರು. ತಂದೆ ಹಬೀಬುಲ್ಲಾ ಅವರು ಕೇಂದ್ರ ಸರಕಾರದ ಸಾಗರೋತ್ತರ ಸಂವಹನ ಇಲಾಖೆಯಲ್ಲಿ ಕೆಲಸಕ್ಕೆ ನಿಯುಕ್ತಿಗೊಂಡ ಬಳಿಕ ಕುಟುಂಬ ಸಮೇತ ಕಾಸರಗೋಡಿ ನಿಂದ […]

ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Friday, September 17th, 2021
Shobha Karandlaje

ಉಡುಪಿ : ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ, ದೇವಸ್ಥಾನ, ಮಸೀದಿ, ಚರ್ಚುಗಳು ನಮ್ಮ ಶ್ರದ್ಧಾ ಕೇಂದ್ರಗಳಾಗಿವೆ ಅವುಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿಯಲ್ಲಿಂ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು ಅಕ್ರಮ ಸ್ಥಳದಲ್ಲಿ ಶೃದ್ಧಾ ಕೇಂದ್ರಗಳಿದ್ದರೆ ಪೂರ್ವ ಸೂಚನೆ ನೀಡಿ, ಸ್ಥಳೀಯ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡುವ ಬಗ್ಗೆ ಸರಕಾರ ಯೋಚಿಸಬೇಕು ಎಂದು ಅವರು ಮನವಿ ಮಾಡಿದರು. ಜನರ ನಂಬಿಕೆ, ಭಕ್ತಿ  ಭಾವನೆಗೆ ನೋವಾದಾಗ […]

ನರಿಂಗಾನ ಗ್ರಾಮದ ಮರೀಕಳದ ಕಸಾಯಿಖಾನೆಗೆ ಅಕ್ರಮ ದನ ಸಾಗಾಟ, ಒಬ್ಬ ಆರೋಪಿಯನ್ನು ಬಿಟ್ಟ ಪೊಲೀಸರು – ಬಜರಂಗದಳ ಖಂಡನೆ

Friday, September 17th, 2021
Marikkala

ಮಂಗಳೂರು :  ಮುಡಿಪು ಸಮೀಪದ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರೀ ಶಾಲೆ ಸಮೀಪ ದ ಮರೀಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನು ಹಾಗು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು ಕಾಣದ ಕೈಗಳ ಪ್ರಭಾವದಿಂದ ಒಬ್ಬ ಆರೋಪಿಯನ್ನು ಕೇಸು ದಾಖಲಿಸದೆ ಬಿಟ್ಟಿರುವ ಪೊಲೀಸ್ ಇಲಾಖೆಯ ಈ ಕೃತ್ಯ ಖಂಡನೀಯ ಎಂದು ಬಜರಂಗದಳ  ಹೇಳಿದೆ. ನರಿಂಗಾನ ಗ್ರಾಮದ ಮರೀಕಳದಲ್ಲಿ ನಿರಂತರವಾಗಿ ದನಗಳನ್ನು ವಧೆಗೋಸ್ಕರ ಪಿಕ್ ಅಪ್ ವಾಹನ ಸಂಖ್ಯೆ KA 18 8539 ದಲ್ಲಿ ಕಾನೂನು ಬಾಹಿರವಾಗಿ ಸಾಗಿಸುತ್ತಿರುವ ಮಾಹಿತಿ ಪ್ರಕಾರ ಈ ವಾಹನದಲ್ಲಿ […]

ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಆರೋಪ ರಾಜಕೀಯ ಪ್ರೇರಿತ ಪ್ರಕರಣ : ಕೆ.ಸುರೇಂದ್ರನ್

Friday, September 17th, 2021
Surendran

ಕಾಸರಗೋಡು : ನಾಮಪತ್ರ ಹಿಂಪಡೆಯಲು ಬಿಎಸ್ಪಿ ಅಭ್ಯರ್ಥಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರನ್ನು ಕ್ರೈಂ ಬ್ರಾಂಚ್ ಗುರುವಾರ ವಿಚಾರಣೆ ಗೊಳಪಡಿಸಿದೆ. ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ ಯಾರೆಂದು ತನಗೆ ಗೊತ್ತಿಲ್ಲ. ತನ್ನ ಮೇಲೆ ರಾಜಕೀಯ ಪ್ರೇರಿತ ಪ್ರಕರಣವನ್ನು ಹೂಡಲಾಗಿದೆ. ನಾಮಪತ್ರ ಹಿಂತೆಗೆಯಲು ಅರ್ಜಿಗೆ ಸಹಿ ಹಾಕಲಾಗಿದೆ ಎಂಬ ಸುಂದರ ತಿಳಿಸಿರುವ ತಾಲಿಪಡ್ಪುವಿನ ಹೋಟೆಲ್ ನಲ್ಲಿ ತಾನು ವಾಸ್ತವ್ಯ ಹೂಡಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಸುರೇಂದ್ರನ್ ಹೇಳಿಕೆ ನೀಡಿದ್ದಾರೆ. ಗುರುವಾರ ಬೆಳಿಗ್ಗೆ ಕ್ರೈಂ […]

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 16.13ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ವಶ

Friday, September 17th, 2021
gold

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು  ಎರಡು ಪ್ರತ್ಯೇಕ ಪ್ರಕರಣದಲ್ಲಿ  16.13ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ ಮಾಡಿ ಕಾಸರಗೋಡಿನ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಾಸರಗೋಡಿನ ಹುಸೈನ್‌ ರಾಝಿ ಮೊಯ್ದೀನ್‌ ಅಬೂಬಕ್ಕರ್‌ (26) ಮತ್ತು ಸಲೀಂ ಅಬ್ದುಲ್ಲ ಬಂಧಿತ ಆರೋಪಿಗಳು. ಕಾಸರಗೋಡಿನ ಹುಸೈನ್‌ ರಾಝಿ ಮೊಯ್ದೀನ್‌ ಅಬೂಬಕ್ಕರ್‌ (26) ಎಂಬಾತ ಅಕ್ರಮ ಚಿನ್ನವನ್ನು ಟೋಯ್‌ ಸೆಟ್‌ನ ಒಳಗಿಟ್ಟು ಪ್ಯಾಕ್‌ ಮಾಡಿ ಸಾಗಾಟ ಮಾಡಲು ಯತ್ನಿಸಿದ್ದ. ದುಬೈಯಿಂದ ಆಗಮಿಸಿದ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಈತನನ್ನು ಕಸ್ಟಮ್ಸ್‌ ಅಧಿಕಾರಿಗಳು […]

ಮಡಿಕೇರಿ ಗ್ರಾಪಂ ಸದಸ್ಯೆ ಮತ್ತು ಆಕೆಯ ಸಂಬಂಧಿಯ ಮೃತದೇಹ ಪತ್ತೆ

Thursday, September 16th, 2021
kamala

ಮಡಿಕೇರಿ : ಮಡಿಕೇರಿ ತಾಲೂಕಿನ ಗ್ರಾಪಂ ಸದಸ್ಯೆ ಮತ್ತು ಆಕೆಯ ಸಂಬಂಧಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಅದೇ ಗ್ರಾಮದ  ಗುಡ್ಡದ ಮರವೊಂದರಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಚೆಂಬು ಗ್ರಾಪಂ ಸದಸ್ಯೆ ಕಮಲಾ(35) ಹಾಗೂ ಆಕೆಯ ಸಂಬಂಧಿಕ ಮುತ್ತು (50) ಎಂದು ಗುರುತಿಸಲಾಗಿದೆ. ಸೆ.15ರ ಸಂಜೆಯಿಂದ ಇವರಬ್ಬರು ದಬ್ಬಡ್ಕ ಗ್ರಾಮದಿಂದ ನಾಪತ್ತೆಯಾಗಿದ್ದು, ಗ್ರಾಮಸ್ಥರು ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಮರದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಗ್ರಾಪಂ ಸದಸ್ಯೆ ಕಮಲಾ ವಿವಾಹಿತೆಯಾಗಿದ್ದು, ಒಂದು ಮಗುವಿದೆ. ಮೃತ ಮುತ್ತು ಕಮಲಾ ಅವರ […]

ಕೃಷಿ ಅಧ್ಯಯನಕ್ಕೆಂದು ಬಂದ ಯುವತಿ ನೀರಿನಲ್ಲಿ ಮುಳುಗಿ ದುರಂತ ಅಂತ್ಯ

Thursday, September 16th, 2021
Maiji

ಮಂಗಳೂರು: ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ಗೆ ಹೋಗಿದ್ದ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದಲ್ಲಿ ನಡೆದಿದೆ. ಡಾ.ಮೈಜೀ ಕರೋಲ್ ಫರ್ನಾಂಡೀಸ್ (31) ಮೃತ ಯುವತಿ. ಆಕೆ ಫಾರ್ಮ್ ಹೌಸ್ನ ಹೊಂಡದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಕೃಷಿ ಅಧ್ಯಯನಕ್ಕೆಂದು ಕೇಪು ಗ್ರಾಮದ ವಾರಾಣಸಿ ಫಾರ್ಮ್ ಹೌಸ್ಗೆ ಮೈಜಿ ಆಗಮಿಸಿದ್ದರು. ಈ ವೇಳೆ ಫಾರ್ಮ್ ಹೌಸ್ನಲ್ಲಿ ನೀರಿನ ಹೊಂಡ ನೋಡಿದ ಮೈಜೀಗೆ ಈಜಲು ಮನಸಾಗಿದೆ. ತಕ್ಷಣ ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಆಸೆಯಿಂದ ನೀರಿಗೆ ಇಳಿದಿದ್ದಾಳೆ. […]