ದ.ಕ. ಜಿಲ್ಲಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ವಿಶೇಷ ಸನ್ಮಾನ

Saturday, January 16th, 2021
jds GP

ಮಂಗಳೂರು  : ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಬಿ.ಎಮ್. ಫಾರೂಕ್ ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜನತಾದಳ ವತಿಯಿಂದ ದ.ಕ. ಜಿಲ್ಲಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ ಕುಪ್ಪೆಪದವು ಮತ್ತು  ಬೆಳ್ತಂಗಡಿ ತಾಲೂಕಿನ  ಹೊಸ0ಗಡಿ ಗ್ರಾಮದಿಂದ ಸ್ಪರ್ಧಿಸಿ ವಿಜಯಪತಾಕೆ ಹಾರಿಸಿದ ಸದಸ್ಯರುಗಳು ಹಾಗೂ ಕುಪ್ಪೆ ಪದವು ಗ್ರಾಮದ ಜೇಡಿಎಸ್ ಪಕ್ಷದ ಗೆಲುವಿನ ನಾಯಕತ್ವ ವಹಿಸಿದ ಡಿ.ಪಿ. ಹಮ್ಮಬ್ಬರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಕ್ಷದ […]

ಸಾಮಾಜಿಕ ಜಾಲತಾಣಗಳಲ್ಲಿ ಶರಣ್ ಪಂಪವೆಲ್ ವಿರುದ್ಧ ಅಪಪ್ರಚಾರ, ಆರೋಪಿಗಳ ಬಂಧನಕ್ಕೆ ವಿಶ್ವ ಹಿಂದು ಪರಿಷತ್ ಆಗ್ರಹ

Saturday, January 16th, 2021
Sharan Pumpwell

ಮಂಗಳೂರು  : ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮೇಲೆ ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳ ಬಂಧನಕ್ಕೆ  ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಾಗ ಅದನ್ನು ಚಿತ್ರೀಕರಿಸಿ ಆಧುನಿಕ ಅಂತರ್ಜಾಲದ ಮೂಲಕ ಅನಗತ್ಯ ಸುಳ್ಳು ವಿಷಯಗಳನ್ನು ಸೇರಿಸಿ ವಿಶ್ವ ಹಿಂದು ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮೇಲೆ ನಿರಾಧಾರ ಆರೋಪಗಳನ್ನು ಮಾಡುತ್ತಿರುವುದನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಪಪ್ರಚಾರ ಹಬ್ಬುತ್ತಿರುವ ವಿಷಯ ಬಹಳ ಖೇಧಕಾರಿಯಾಗಿದ್ದು ಇದರ […]

ಗೋಣಿ ಚೀಲದಲ್ಲಿ ತುಂಬಿಸಿ ಬಾಲಕನ ಅಪಹರಣ ಯತ್ನ, ಪ್ರಾಂಕ್ ಮಾಡಿದ ಮೂವರ ಬಂಧನ

Saturday, January 16th, 2021
Kidnap

ಮಂಗಳೂರು : ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದಿಂದ ವಾಪಸ್ಸಾಗುತ್ತಿದ್ದ ಬಾಲಕರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರಿನ ರಕ್ಷಕ್ ಶೆಟ್ಟಿ (22), ಬೊಂದೆಲ್‌ನ ಅಲಿಸ್ಟರ್ ತಾವ್ರೋ (21), ಕಾವೂರು ಕೈಒಸಿಎಲ್ ಕ್ವಾರ್ಟರ್ಸ್‌ನ ರಾಹುಲ್ ಸಿನ್ಹಾ (21) ಬಂಧಿತ ಆರೋಪಿಗಳು. ಈ ಬಗ್ಗೆ ಮಾಹಿತಿ ನೀಡಿದ  ನಗರದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಜ.13ರಂದು ಸಂಜೆ 7 ಗಂಟೆ ಸುಮಾರಿಗೆ ನಾಲ್ವರು ಬಾಲಕರು ಕೊಂಚಾಡಿ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಯತ್ತ ತೆರಳುತ್ತಿದ್ದರು. ಮೂವರು ಬಾಲಕರು ದೇವಳ […]

ಹಲವು ಬಾರಿ ಅದೇ ಅಂಗಡಿಯಿಂದ ಮಾಂಸ ಖರೀದಿಸಿದ ವ್ಯಕ್ತಿಯೇ ತೊಕ್ಕೊಟ್ಟು ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ್ದ !

Saturday, January 16th, 2021
N.ShashiKumar

ಮಂಗಳೂರು :  ತೊಕ್ಕೊಟ್ಟುವಿನಲ್ಲಿ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಪೊಲೀಸರು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತೊಕ್ಕೊಟ್ಟು ಒಳಪೇಟೆಯಲ್ಲಿ ತಾಯಿ ಜೊತೆ ವಾಸವಿದ್ದ ನಿವಾಸಿ ನಾಗರಾಜ (37) ಎಂದು ಗುರುತಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಆರೋಪಿ ನಾಗರಾಜ ತೊಕ್ಕೊಟ್ಟಿನ ಇದೇ ಬೀಫ್ ಸ್ಟಾಲ್‌ನಿಂದ ಹಲವು ಬಾರಿ ಮಾಂಸ ಖರೀದಿಸಿ ತನ್ನ ಸ್ನೇಹಿತನ ಮನೆಯಲ್ಲಿ ಅಡುಗೆ ಮಾಡಿ ಸೇವಿಸಿದ್ದ ಎಂದು ತಿಳಿಸಿದ್ದಾರೆ. ಆತ  ಈ ಹಿಂದೆ ಬೀಫ್ ಸ್ಟಾಲ್‌ ಮಾಲಕ […]

ಗೋ ಹತ್ಯೆ ಎಂದರೆ ಅದು ಮಾತೃ ಹತ್ಯೆಗೆ ಸಮಾನ : ಶ್ರೀ ನಿರ್ಮಲನಾಥಜೀ ಮಹಾರಾಜ್

Friday, January 15th, 2021
nirmalnathji

ಮಂಗಳೂರು: ರಾಜ್ಯ ಸರಕಾರ ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ್ದು ಸ್ವಾಗತಾರ್ಹ. ಗೋವು ಕೇವಲ ಪಶುವಲ್ಲ, ಇದರಲ್ಲಿ ದೇವಾನುದೇವತೆಗಳು ಐಕ್ಯವಾಗಿದ್ದಾರೆ. ಇಂತಹ ಗೋವಿನ ಹತ್ಯೆಯನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಿ ರಾಜ್ಯ ಸರಕಾರ ಅತ್ಯುತ್ತಮ ಕಾರ್ಯ ಮಾಡಿದೆ ಎಂದು ಕದ್ರಿ ಜೋಗಿ ಮಠದ ಶ್ರೀ ನಿರ್ಮಲನಾಥಜೀ ಮಹಾರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ಕದ್ರಿ ಜೋಗಿ ಮಠದಲ್ಲಿ ಮಾತನಾಡಿದ ಅವರು, ಗೋ ಹತ್ಯೆ ಎಂದರೆ ಅದು ಮಾತೃ ಹತ್ಯೆಗೆ ಸಮಾನ. ಆದ್ದರಿಂದ ತಾಯಿಯನ್ನು ಹೊಡೆದು ಕೊಂದ ಪಾಪ ಗೋ ಹತ್ಯೆ ಮಾಡಿದವನಿಗೂ […]

ಕದ್ರಿ ಶ್ರೀ ಮಂಜುನಾಥ ದೇವರ ವಾರ್ಷಿಕ ಮಹೋತ್ಸವ ಆರಂಭ, ಜನವರಿ 21ರಂದು ಶ್ರೀಮನ್ಮಹಾರಥೋತ್ಸವ

Friday, January 15th, 2021
Kadri jatre

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ  14 ಗುರುವಾರ ಸಂಜೆ ಧ್ವಜಾರೋಹಣದೊಂದಿಗೆ ಆರಂಭವಾಗಿದ್ದು, ಜನವರಿ  24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ದೇವಳದ ಕೆರೆಗಳಲ್ಲಿ ಗುರುವಾರ ಬೆಳಗ್ಗೆ 5ಗಂಟೆಯಿಂದ ತೀರ್ಥಸ್ನಾನ ನಡೆದಿದ್ದು, ಸಹಸ್ರಾರು ಭಕ್ತಾರು ಭಾಗವಹಿಸಿದ್ದರು. ಸಂಜೆ 6.30ರ ವೇಳೆಗೆ ಏಳುಪಟ್ಟಣ ಮೊಗವೀರ ಮಹಾಸಭಾದವರಿಂದ ಧ್ವಜಸ್ತಂಭ ಆರೋಹಣ ನೆರವೇರಿದ್ದು, ಮಹಾಪೂಜೆ ನಡೆಯಿತು. ಬಳಿಕ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ ಧ್ವಜಬಲಿ, ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚುದೀಪ […]

ಪಾದಾಚಾರಿ‌ ಮಹಿಳೆಯರಿಗೆ ಕಿರುಕುಳ, ಅಪ್ರಾಪ್ತನ ಬಂಧನ

Friday, January 15th, 2021
ullal Minor

ಮಂಗಳೂರು : ಕಳೆದ 15 ದಿನಗಳಿಂದ ಉಳ್ಳಾಲ ಬಂಡಿಕೊಟ್ಯ, ಗೊಳಿಯಡಿ ಎಂಬಲ್ಲಿ ಪಾದಾಚಾರಿ‌ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ. ಆರೋಪಿಯ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದರು. ಉಳ್ಳಾಲ ಉಳಿಯಕ್ಕೆ ಸಂಪರ್ಕಿಸುವ ಉಳ್ಳಾಲ ಬಂಡಿಕೊಟ್ಯ, ಗೊಳಿಯಡಿ ರಸ್ತೆಯಾಗಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯ ಓಣಿಯಲ್ಲಿ ಬೈಕ್ ನಲ್ಲಿ ಬರುವ ಆಗಂತುಕರು ಮಹಿಳೆಯರ ಮೈ ಸವರಿಕಂಡು ಹೋಗುತ್ತಿದ್ದು, ಕಳೆದ […]

ಮಂಗಳೂರು: ಗೋಣಿ ಚೀಲದಲ್ಲಿ ತುಂಬಿಸಿ ಬಾಲಕನ ಅಪಹರಣ ಯತ್ನ

Friday, January 15th, 2021
Konchadi

ಮಂಗಳೂರು: ಗೋಣಿ ಚೀಲ ಮುಸುಕು ಹಾಕಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಕೃತ್ಯ ಬೆಳಕಿಗೆ ಬಂದಿದೆ ನಗರದ ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದ ಸಮೀಪದ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂವರು  ಮಕ್ಕಳ ಕಳ್ಳರು ಎನ್ನಲಾದ ಆಗಂತುಕರು ಸಂಜೆ 7ರ ಹೊತ್ತಿಗೆ ಮನೆಗೆ ಹೋಗುತ್ತಿದ್ದ ಬಾಲಕನ  ಬಳಿ ಬೈಕ್ ನಿಲ್ಲಿಸಿ ಗೋಣಿ ಮುಸುಕು ಹಾಕಿ ಬಾಲಕರನ್ನು ಹಿಡಿಯಲು ಯತ್ನಿಸಿದ್ದಾರೆ  ಅದನ್ನು ಗಮನಿಸಿದ ಜೊತೆಗಿದ್ದ ಇನ್ನೋರ್ವ ಬಾಲಕ ಧೈರ್ಯದಿಂದ ಅವರ ಮೇಲೆ ಕಲ್ಲು, ಮಣ್ಣಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಜೊತೆಗೆ ಹಿಂದಿನಿಂದ ಬಾಲಕರ ಮನೆಯವರು ಬರುತ್ತಿರುವುದನ್ನು ನೋಡಿ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ. […]

ಮಂಗಳೂರು – ಮಂತ್ರಾಲಯ ಸ್ಲೀಪರ್ ಕ್ಲಾಸ್ ಬಸ್ ಸೇವೆಗೆ ಶಾಸಕ ಡಿ.ವೇದವ್ಯಾಸ ಕಾಮತ್‌ ಚಾಲನೆ

Thursday, January 14th, 2021
Mantralaya Bus

ಮಂಗಳೂರು: ಮಂಗಳೂರಿನಿಂದ ವಿವಿಧ ಮಾರ್ಗಗಳಿಗೆ ನೂತನವಾಗಿ ಬಸ್‌ ಕಾರ್ಯಾಚರಣೆ ಆರಂಭಗೊಂಡಿದ್ದು, ಮಂಗಳೂರಿನಿಂದ ರಾತ್ರಿ 8.50ಕ್ಕೆ ಹೊರಟು ಹಾಸನ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 9 ಗಂಟೆಗೆ ದೇರಳಕಟ್ಟೆ, ಕಾಸರಗೋಡು, ಕೋಜಿಕೋಡ್‌ ಮಾರ್ಗವಾಗಿ ಎರ್ನಾಕುಲಂಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 8.01ಕ್ಕೆ ಕುಂದಾಪುರ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರು ಬಸ್‌ ನಿಲ್ದಾಣದಿಂದ ರಾತ್ರಿ 8.01ಕ್ಕೆ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗವಾಗಿ ರಾಯಚೂರಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರಿನಿಂದ […]

ರಾಜ್ಯ ಸರಕಾರಕ್ಕೆ ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಪಡಿಸುವ ಅಧಿಕಾರವಿಲ್ಲ : ಯು.ಟಿ ಖಾದರ್

Thursday, January 14th, 2021
ut Khader

ಮಂಗಳೂರು : ಸುಳ್ಯ ಶಾಸಕ ಎಸ್. ಅಂಗಾರ ಸಚಿವರಾಗಿರುವುದು ಸಂತೋಷದ ವಿಷಯ. ಕೋಟ ಶ್ರೀನಿವಾಸ ಪೂಜಾರಿ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಅವರನ್ನು ಉಡುಪಿಯ ಬದಲು ದ.ಕ. ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮಾಡಿರುವುದರ ಉದ್ದೇಶವೇನು ಎಂಬುದನ್ನು ಸರಕಾರ ಸ್ಪಷ್ಟಪಡಿಸಲಿ ಎಂದು ಶಾಸಕ ಯು.ಟಿ  ಖಾದರ್  ಪ್ರಶ್ನಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ ಸುನೀಲ್ ಕುಮಾರ್ ಕೂಡಾ ‘ನನಗೆ ಪಕ್ಷ ನಿಷ್ಠೆ ಗೊತ್ತು, ಬ್ಲಾಕ್ ಮೇಲ್ ಗೊತ್ತಿಲ್ಲ’ […]