ಅಹಿಂಸೆ, ಶಾಂತಿ ಸಂದೇಶ ಸಾರಲು ರಾಜ್ಯಪಾಲರ ಕರೆ

Monday, March 14th, 2022
Governer Gehlot

ಮಂಗಳೂರು : ವಿಶ್ವಕ್ಕೆ ಶಾಂತಿ ಹಾಗೂ ಅಹಿಂಸೆಯ ಸಂದೇಶ ಸಾರಿದ ಭಾರತದ ಕೀರ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದ 18 ಜೈನ ದೇವಾಲಯಗಳಲ್ಲಿ ಪ್ರಮುಖವಾದ ಸಾವಿರ ಕಂಬಗಳ ಬಸದಿಯಾದ ತ್ರಿಭುವನ ತಿಲಕ ಚೂಡಾಮಣಿ ದೇವಾಲಯಕ್ಕೆ ಮಾ.14ರ ಸೋಮವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ನಮ್ಮ ದೇಶ ಮಾನವೀಯ ಮೌಲ್ಯಗಳು, ಶಾಂತಿ, ಅಹಿಂಸೆಯ ಮಹತ್ವ […]

ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನ : ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

Friday, March 11th, 2022
Sutarpete

ಮಂಗಳೂರು : ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಾರ್ಚ್-5ರಿಂದ 8ರವರೆಗೆ ನಡೆದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ವೈಭವದ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿದೆ. ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು . ನೇಮೋತ್ಸವದ ಮೊದಲು ಮಾರ್ಚ್ -4ರಂದು ಧರ್ಮದರ್ಶಿ ಶ್ರೀ […]

ವಿವಿ ಕಾಲೇಜು: ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವಿನ್ಯಾಸ್ ವಿ ಆಯ್ಕೆ

Friday, March 11th, 2022
vinyas

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ 2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ವಿಜ್ಞಾನ ಪದವಿಯ ವಿನ್ಯಾಸ್ ವಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಧೀರಜ್, ಸಹಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಅಂಕಿತಾ ಎಸ್, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ತೃತೀಯ ವಿಜ್ಞಾನ ಪದವಿಯ ಅಪರ್ಣಾ ಶೆಟ್ಟಿ ಹಾಗೂ ಲಲಿತಾ ಕಲಾ ಸಂಘದ ಸಹಕಾರ್ಯದರ್ಶಿಯಾಗಿ ತೃತಿಯ ಕಲಾ ಪದವಿಯ ಕಾವ್ಯ ಎನ್ ಕೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ ಎಂ […]

ಸ್ವರ್ಗ ಚೆಕ್‌ಪೋಸ್ಟ್‌ಗೆ ಕರ್ತವ್ಯಕ್ಕೆ ತೆರಳುತಿದ್ದಾಗ ಪೊಲೀಸ್‌ ಸಿಬ್ಬಂದಿ ಸಾವು

Wednesday, March 9th, 2022
Ganesh Naika

ಮಂಗಳೂರು : ಪುತ್ತೂರು ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸ್‌ ಸಿಬ್ಬಂದಿ ಬುಧವಾರ ಸ್ವರ್ಗ ಚೆಕ್‌ಪೋಸ್ಟ್‌ಗೆ ಕರ್ತವ್ಯಕ್ಕೆ ತೆರಳುತಿದ್ದಾಗ ಹಠಾತ್ ಸಾವನ್ನಪ್ಪಿದ್ದಾರೆ. ಮೃತರನ್ನು ಎಣ್ಮಕಜೆ ಗ್ರಾಮದ ಸಾರಡ್ಕ ನಿವಾಸಿ ಗಣೇಶ್‌ ನಾಯ್ಕ (44) ಎಂದು ಗುರುತಿಸಲಾಗಿದೆ.  ಗಣೇಶ್ ನಾಯ್ಕ್ ಅವರು ಸುರತ್ಕಲ್, ಬೆಳ್ತಂಗಡಿ, ಹಾಗೂ ವಿಟ್ಲ ದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸುಮಾರು ಎರಡು ವರ್ಷದ ಹಿಂದೆ ವಿಟ್ಲದಿಂದ ಪುತ್ತೂರು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಮೃತರು ತಾಯಿ, ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಟ್ಟಿದ್ದು […]

ಕಾರ್ಕಳ ಉತ್ಸವವು ಉತ್ತಮ ರೀತಿಯಲ್ಲಿ ಆಗುವಂತೆ ಸಚಿವರಿಂದ ಶ್ರೀ ವೆಂಕಟರಮಣ ದೇವರ ದರ್ಶನ

Wednesday, March 9th, 2022
Sunil Kumar

ಕಾರ್ಕಳ : ಕರ್ನಾಟಕದ ಇತಿಹಾಸದಲ್ಲೇ ಅತ್ಯಧ್ಬುತವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರೂ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಯುವ ಕಾರ್ಕಳ ಉತ್ಸವವು ಉತ್ತಮ ರೀತಿಯಲ್ಲಿ ಆಗುವಂತೆ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಒಂದನೇ ಮೊಕ್ತೇಸರರಾದ ಜಯರಾಮ ಪ್ರಭು, ಅರ್ಚಕರಾದ ಅನಿಲ್ ಜ್ಯೋಷಿ, ರವೀಂದ್ರ ಪುರಾಣಿಕ, ಪರ್ಯಾಯ ಅರ್ಚಕರಾದ ಗೋಪಾಲಕೃಷ್ಣ ಜ್ಯೋಶಿ, ಹಿತೈಷಿಗಳಾದ ಪಾಲಡ್ಕ ನರಸಿಂಹ ಪ್ರಭು, ಕೆ. ಸುರೇಂದ್ರ […]

ವಿವಿ ಕಾಲೇಜು: ಮಹಿಳಾ ದಿನಾಚರಣೆಯಂದೇ ಮಹಿಳಾ ವೇದಿಕೆಗೆ ಚಾಲನೆ

Tuesday, March 8th, 2022
Womens Day

ಮಂಗಳೂರು: ನಗರದ ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಪೂರ್ವತನ ಪ್ರಾಂಶುಪಾಲ ಡಾ. ಹರೀಶ್ ಎ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಆಂಗ್ಲ ವಿಭಾಗ ಮುಖ್ಯಸ್ಥೆ ಡಾ. ಎನ್ ಕೆ ರಾಜಲಕ್ಷ್ಮೀ, ಮಹಿಳೆ ಅಥವಾ ಪುರುಷನನ್ನು ಒಂದು ಚೌಕಟ್ಟಿನೊಳಗಿಡುವುದು ಸರಿಯಲ್ಲ. ಮಹಿಳೆ ಸಂತೋಷದ ಸೆಲೆ, ಪ್ರೀತಿಯೇ ಅವಳ ಶಕ್ತಿ ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್, ತಮ್ಮನ್ನು ಯಾವುದೇ […]

ಭಾರತದಲ್ಲಿ ಮಹಿಳೆಗೆ ದೇವತೆಯ ಸ್ಥಾನ: ನಳಿನ್ ಕುಮಾರ್ ಕಟೀಲ್

Tuesday, March 8th, 2022
Women's Day

ಮಂಗಳೂರು : ಮಹಿಳೆಗೆ ದೇವತೆಯ ಸ್ಥಾನ ನೀಡಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ, ಹೆಣ್ಣನ್ನು ಮಾತೃ ಸ್ವರೂಪಿಯಾಗಿ ಕಾಣುವ ಈ ದೇಶದಲ್ಲಿ ಅವಳಿಗೆ ಸ್ವಾತಂತ್ರ್ಯದೊಂದಿಗೆ ಸಮಾನತೆಗೂ ಹೆಚ್ಚಿನ ಗೌರವವನ್ನು ನೀಡಲಾಗಿದೆ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಭಿಪ್ರಾಯಪಟ್ಟರು. ಅವರು ಮಾ.8ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣಕ್ಕೆ ದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ, ಆ ಮೂಲಕ ಉತ್ತಮ ಸಮಾಜ […]

ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಸಲು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಆಗ್ರಹ

Tuesday, March 8th, 2022
Manjunatha Bhandary

ಮಂಗಳೂರು  : ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು ಇಂದು ನಡೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ನಿಯಮ 330ರ ಅಡಿಯಲ್ಲಿ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿರು. ಅಧಿವೇಶನದಲ್ಲಿ ಮಾತನಾಡಿದ ಅವರು ‘ಪ್ರಜಾ ಪ್ರಭುತ್ವದಲ್ಲಿ ಗ್ರಾಮ ಪಂಚಾಯತಿಯೇ ತಳಹದಿ. ಆ ತಳಹದಿಯನ್ನು ನಾವು ಬಲಿಷ್ಠವಾಗಿಸಿದರೆ ಮಾತ್ರ ಮಾಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು. ಆದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇಕಡ 50 ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ […]

ಸವ೯ಸ್ಪಶಿ೯ ಸವ೯ವ್ಯಾಪಿ ಅಭಿವೃದ್ಧಿಪರ ಬಜೆಟ್ – ಕೆ ಪ್ರತಾಪಸಿಂಹ ನಾಯಕ್

Friday, March 4th, 2022
prathapa-simha

ಮಂಗಳೂರು : ಕನಾ೯ಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಯವರು ಸಮಗ್ರ ಕನಾ೯ಟಕ ಮತ್ತು ಸಮಾಜದ ಎಲ್ಲಾ ವಗ೯ಗಳನ್ನು ಗಮನದಲ್ಲಿ ಇಟ್ಟುಕೊಂಡು ಒಳ್ಳೆಯ ಪ್ರಗತಿಪರ ಬಜೆಟ್ ಮಂಡಿಸಿದ್ದಾರೆ. ತಮ್ಮ ಚೊಚ್ಚಲ ಬಜೆಟ್ನಲ್ಲಿ ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಒತ್ತು ನೀಡಿದ್ದಾರೆ. ಕೋರೊನಾ ಸಂಕಷ್ಟದಿಂದ ಹೊರಬರಲು ಪ್ರಯತ್ನಿಸುತ್ತಿರುವ ಆಥಿ೯ಕತೆಯ ಇತಿಮಿತಿಯಲ್ಲಿ ಇದು ಅತ್ಯುತ್ತಮ ಬಜೆಟ್. ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ದೀರ್ಘಕಾಲಿಕ ಮತ್ತು ಜನೋಪಯೋಗಿ ಯೋಜನೆ ಒಳಗೊಂಡಿದೆ ಎಂದು ವಿಧಾನ […]

ತುಳುವಿನ ರಕ್ಷಣೆ, ಸಂಸ್ಕೃತಿ, ದೇಶದ ರಕ್ಷಣೆ: ಪ್ರೊ. ಪಿ ಎಲ್ ಧರ್ಮ

Friday, March 4th, 2022
dharma

ಮಂಗಳೂರು: ತುಳು ಭಾಷೆಯ ಸೊಗಡು ಅರಿಯಬೇಕಾದರೆ ಇತರ ಭಾಷೆಗಳನ್ನೂ ತಿಳಿದುಕೊಳ್ಳಬೇಕು. ಯುವ ಜನತೆ ತುಳು ಮಾತನಾಡದಿದ್ದರೆ ಭಾಷೆಯ ಉಳಿವಿನ ಮಾತು ಭಾಷಣಗಳಿಗೆ ಸೀಮಿತವಾಗುತ್ತದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾಕೋತ್ತರ ಅಧ್ಯಯನ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ʼಕೆಡ್ಡಸ ಮಿನದನʼ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ […]