ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣಕ್ಕೆ ಸಿಗದೆ ಉರುಳಿ ಬಿದ್ದ ಲಾರಿ

Wednesday, August 24th, 2016
LOry

ಮಂಗಳೂರು: ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣಕ್ಕೆ ಸಿಗದ ಲಾರಿಯೊಂದು ಉರುಳಿ ಬಿದ್ದ ಘಟನೆ ಬಂಟ್ವಾಳದ ಎಸ್‌ವಿಎಸ್ ಕಾಲೇಜು ಬಳಿ ಸಂಜೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಅಭಿಲಾಷ್ (40) ಗಂಭೀರ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಲೀನರ್ ಮನ್ಸೂರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಲೊರೆಟ್ಟೋ ಕಡೆಯಿಂದ ಕೋಳಿ ಗೊಬ್ಬರ ಹೇರಿಕೊಂಡು ಬರುತ್ತಿದ್ದ ಲಾರಿ ಎಸ್‌‌ವಿಎಸ್ ಕಾಲೇಜು ಬಳಿಯ ಇಳಿಜಾರು ರಸ್ತೆಯಲ್ಲಿ ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿದೆ. ಇದೇ ವೇಳೆ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಬಸ್ಸಿಗಾಗಿ ರಸ್ತೆ ಬದಿ […]

ಸಾಲ ಹಿಂದಿರುಗಿಸದ್ದಕ್ಕೆ ಕೋಪಗೊಂಡ ಯುವಕನೊಬ್ಬ ಸ್ನೇಹಿತನ ತಲೆ ಕಡಿದು ಪೊಲೀಸ್‌ ಠಾಣೆಗೆ ಶರಣು

Wednesday, August 24th, 2016
Anjaneya

ದೇವನಹಳ್ಳಿ: 27 ಸಾವಿರ ರೂಪಾಯಿ ಸಾಲ ಹಿಂದಿರುಗಿಸದ್ದಕ್ಕೆ ಕೋಪಗೊಂಡ ಯುವಕನೊಬ್ಬ, ಸ್ನೇಹಿತನ ತಲೆ ಕಡಿದು ರುಂಡ ಸಮೇತ ಪೊಲೀಸ್‌ ಠಾಣೆಗೆ ಬಂದು ಶರಣಾಗಿರುವ ಘಟನೆ ತಾಲೂಕಿನ ವಿಶ್ವನಾಥಪುರ ಠಾಣೆಯಲ್ಲಿ ನಡೆದಿದೆ. ತಾಲೂಕಿನ ಕೆಂಪತಿಮ್ಮನಹಳ್ಳಿಯ ಮಂಜುನಾಥ್‌ (26) ಬರ್ಬರವಾಗಿ ಕೊಲೆಯಾದ ದುರ್ದೈವಿ. ಉಗನವಾಡಿ ಶಶಿಕುಮಾರ್‌ ಕೊಲೆ ಮಾಡಿ ಪೊಲೀಸರಿಗೆ ಶರಣಾದವ. ಈತ ಕನ್ನಮಂಗಲ ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ ಅವರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಶಶಿಕುಮಾರ್‌ ಮತ್ತು ಮಂಜುನಾಥ್‌ ಸ್ನೇಹಿತರಾಗಿದ್ದು ಶಶಿಕುಮಾರ್‌, ಮಂಜುನಾಥಗೆ 27 ಸಾವಿರ ರೂ. […]

ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಆನೆ ನೀಡುವುದಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿಕೆ

Tuesday, August 23rd, 2016
Udupi-Shree-krishna-mata

ಉಡುಪಿ: ಶ್ರೀಕೃಷ್ಣಾಷ್ಟಮಿ ಉತ್ಸವಕ್ಕೆ ಆನೆ ನೀಡುವುದಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು. ರಾಜಾಂಗಣದಲ್ಲಿ ರವಿವಾರ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣಮಠಕ್ಕೆ ಹಿಂದೆ ವೀರಪ್ಪ ಮೊಯಿಲಿ ಆನೆ ನೀಡಿದ್ದರು. ಆನೆ ಸುಭದ್ರೆಯನ್ನು ಅರಣ್ಯ ಇಲಾಖೆಗೆ ಚಿಕಿತ್ಸೆಗೆ ನೀಡಿದ್ದು ತಿಳಿದಿದೆ. ಅಷ್ಟಮಿ ಉತ್ಸವಕ್ಕೆ ಅಧಿಕಾರಿಧಿಗಳಲ್ಲಿ ಮಾತನಾಡಿ ಆನೆ ನೀಡುತ್ತೇನೆ ಎಂದರು. ಉಭಯ ಜಿಲ್ಲೆಗಳಲ್ಲಿ ಕೃಷ್ಣಾಷ್ಟಮಿ ಉತ್ಸವ, ಮೊಸರುಕುಡಿಕೆ ಸಂಭ್ರಮ ಜರುಗುತ್ತಿದೆ. ನಾನು ಚಿಕ್ಕವನಿದ್ದಾಗ ಅಷ್ಟಮಿ, ಚೌತಿಯ ಮರ್ಯಾದೆಧಿಗೆಂದು ಜನರು ಬರುತ್ತಿದ್ದರು. ಇದು […]

ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಸಹಕಾರದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀ ಕೃಷ್ಣಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ

Tuesday, August 23rd, 2016
Udupi

ಉಡುಪಿ: ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ಯತಿದ್ವಯರ ಆಶೀರ್ವಾದದೊಂದಿಗೆ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಸಹಕಾರದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆ. 24ರಿಂದ 26ರ ವರೆಗೆ ಶ್ರೀ ಕೃಷ್ಣಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವ ಕಾರ್ಯಕ್ರಮಗಳು ಜರಗಲಿವೆ. ಆ. 24ರಂದು ಬೆಳಗ್ಗೆ 10ಕ್ಕೆ ಶ್ರೀ ಪೇಜಾವರ ಮಠದ ಯತಿದ್ವಯರಿಂದ ಭಜನ ಕಾರ್ಯ ಕ್ರಮ ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ಪ್ರಸಿದ್ಧ ಭಜನ ತಂಡ ಗಳಾದ ಹಂಗಾರಕಟ್ಟೆಯ ನೀಲ ಕಂಠೇಶ್ವರ, ಕೋಡಿಬೆಂಗ್ರೆಯ ವಿಠಲರುಖುಮಾಯಿ, ಮೂಲ್ಕಿಯ ವೆಂಕಟರಮಣ ಭಜನಾ ತಂಡಗಳಿಂದ ಭಜನೆ, […]

ಪಿಯು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

Tuesday, August 23rd, 2016
Shifan

ಮಂಗಳೂರು: ಪಿಯು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ತೊಕ್ಕೊಟ್ಟುವಿನ ಲಚ್ಚಿಲ್‌‌ನ ಮನೆಯೊಂದರಲ್ಲಿ ನಡೆದಿದೆ. ಶಿಫಾನ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ತೊಕ್ಕೊಟ್ಟು ಸಂತ ಸೆಬೆಸ್ಟಿಯನ್ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ. ವಿದ್ಯಾರ್ಥಿ ಶಿಫಾನ್ ಲಚ್ಚಿಲ್‌‌ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಚಾರ್ಮಾಡಿ ಘಾಟಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Tuesday, August 23rd, 2016
Charmady

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 11ನೇ ತಿರುವಿನಲ್ಲಿ ರವಿವಾರ ಕೊಲೆಯಾದ ಸ್ಥಿತಿಯಲ್ಲಿ ದೊರೆತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಚಾರ್ಮಾಡಿ ಘಾಟಿಯ ಕಣಿವೆಯಲ್ಲಿ 30ರಿಂದ 35 ವಯಸ್ಸಿನ ಮಹಿಳೆಯ ಶವ ದೊರೆತಿತ್ತು. ಎಡಗೈಯಲ್ಲಿ ಪ್ರಿಯ ಎಂಬ ಹಚ್ಚೆ ಇದ್ದು ಬಲಗೈಯ ಮೇಲೆ ಸುಟ್ಟ ಗಾಯದ ಹಳೆಯ ಗುರುತುಗಳಿವೆ ಎಂದು ಪ್ರಕರಣದ ತನಿಖಾಧಿಕಾರಿ ಮೂಡಿಗೆರೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಜಗದೀಶ್‌ ತಿಳಿಸಿದ್ದಾರೆ. ಯಾವುದೋ ಊರಿನಲ್ಲಿ ಕೊಲೆ ಮಾಡಿ ಇಲ್ಲಿ ತಂದು ಬಿಸಾಡಿರಬಹುದು ಎನ್ನುವುದಕ್ಕೆ ಪೂರಕವಾಗಿ ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿದ […]

ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಲಾಗುವುದು: ಡಿ.ವಿ.ಎಸ್

Tuesday, August 23rd, 2016
Sadananda-gouda

ಮಂಗಳೂರು: ಭಾರತೀಯ ಜನತಾ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಮಂಗಳವಾರ ದಿಲ್ಲಿಯಲ್ಲಿ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ಅವರು ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ನಾಯಕರು ಒಟ್ಟಾಗಿ ಶ್ರಮಿಸಲಿದ್ದಾರೆ ಎಂದರು. ಪಕ್ಷದೊಳಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ನಿಜ. ಆಗಸ್ಟ್‌ 23ರಂದು ದಿಲ್ಲಿಯಲ್ಲಿ ನಡೆಯುವ ಪಕ್ಷದ ಕೋರ್‌ ಕಮಿಟಿ […]

ವೃತ್ತಿ ಬದುಕಿನ ತುರ್ತಿನ ನಡುವೆಯೂ ಅವಕಾಶ ಕಂಡುಕೊಂಡು ಯಶಸ್ವಿಯಾಗುವುದು ನೈಜ ಅರ್ಥದ ಪುರುಷ ಪ್ರಯತ್ನ: ಕುಂಬಳೆ ಸುಂದರ ರಾವ್

Tuesday, August 23rd, 2016
Bellihabba

ಮಂಜೇಶ್ವರ: ವೃತ್ತಿ ಬದುಕಿನ ತುರ್ತಿನ ನಡುವೆಯೂ ಪ್ರವೃತ್ತಿಯ ವಿಸ್ತಾರತೆಗೆ ಅವಕಾಶ ಕಂಡುಕೊಂಡು ಯಶಸ್ವಿಯಾಗುವುದು ನೈಜ ಅರ್ಥದ ಪುರುಷ ಪ್ರಯತ್ನ. ಯಕ್ಷಗಾನ ಕಲಾ ಪ್ರಕಾರ ಅತ್ಯಂತ ಕ್ಲಷ್ಟ ಸನಿವೇಶಗಳನ್ನು ಎದುರಿಸುತ್ತಿದ್ದಾಗ ಹೊಸ ವ್ಯಾಖ್ಯೆಗಳೊಡನೆ ಪೌರಾಣಿಕ ಕಥಾನಕಗಳನ್ನು ಮರು ಸೃಷ್ಟಿಸಿ ಜನಪ್ರೀಯತೆಗೊಳಿಸುವಲ್ಲಿ ಮುಂಚೂಣಿಯ ಸಾಧನೆಗೈದ ಮಾಸ್ಟರ್ ವಿಷ್ಣು ಭಟ್ ಕಾಸರಗೋಡಿನ ಅನನ್ಯ ಸಾಧಕರಾಗಿದ್ದು ಅವರ ಪರಂಪರೆಯನ್ನು ಮುಂದುವರಿಸುವಲ್ಲಿ ಅವರ ಪುತ್ರ ಡಾ.ಬನಾರಿಯವರು ಶ್ರಮಿಸಿದ್ದಾರೆಯೆಂದು ಹಿರಿಯ ಯಕ್ಷಗಾನ ಅರ್ಥದಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬಳೆ ಸುಂದರ ರಾವ್ ಅಭಿಪ್ರಯ […]

ಶಬರಿಮಲೆ ಸೇವಾ ಮತ್ತು ಪ್ರಸಾದಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುಧ್ದ ಪ್ರತಿಭಟನೆ

Tuesday, August 23rd, 2016
Shabarimale protest

ಪೆರ್ಲ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಪೆರ್ಲ ಇದರ ನೇತೃತ್ವದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ವಠಾರದಲ್ಲಿ ಶಬರಿಮಲೆ ಸೇವಾ ಮತ್ತು ಪ್ರಸಾದಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಸರಕಾರದ ವಿರುಧ್ದ ಪ್ರತಿಭಟನಾ ಸಭೆ ಭಾನುವಾರ ನಡೆಯಿತು. ಶಬರಿಮಲೆ ದೇಶವ್ಯಾಪಿ ಪ್ರಸಿಧ್ಧಿ ಪಡೆದ ಕ್ಷೇತ್ರವಾಗಿದ್ದು ಸರಕಾರದ ಖಜಾನೆಗೆ ಕೋಟಿ ಆದಾಯ ಬರುತ್ತಿದೆ. ಹಾಗಿದ್ದರೂ ಮತ್ತೂ ಬೆಲೆ ಏರಿಕೆ ನಡೆಸಿದ್ದು ರಾಜ್ಯಸರಕಾರದ ನಿಲುವು ಖಂಡನೀಯ. ಈ ಬಗ್ಗೆ ಹಿಂದೂ ಸಂಘಟನೆಗಳು, ಅಯ್ಯಪ್ಪ ಭಕ್ತವೃಂದಗಳು ರಾಜಕೀಯ ಬೇಧ ಮರೆತು ಪ್ರತಿಭಟಿಸಬೇಕಾದ […]

ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಅಂತೆಯೇ ಬದುಕುವುದು ಅತ್ಯಂತ ದೊಡ್ಡ ಸಾರ್ಥ್ಯಕ್ಯ: ರುದ್ರಪ್ಪ ಮಾನಪ್ಪ ಲಮಾಣಿ

Tuesday, August 23rd, 2016
Rudrappa

ಬದಿಯಡ್ಕ: ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಅಂತೆಯೇ ಬದುಕುವುದು ಅತ್ಯಂತ ದೊಡ್ಡ ಸಾರ್ಥ್ಯಕ್ಯವಾಗಿದ್ದು,ಇಂದಿನ ಕಾಲಘಟ್ಟದಲ್ಲಿ ಮೌಲಿಕ ಜೀವನ ಮರೆಯಾಗುತ್ತಿರುವುದು ಆತಂಕಕಾರಿ.ಈ ಹಿನ್ನೆಲೆಯಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಬದುಕು ಆದರ್ಶಯುತವಾಗಿದ್ದು ಅವರು ಸದಾ ವಿಶ್ವವಂದ್ಯರೆಂದು ಕರ್ನಾಟಕ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಗಾಂಧೀವಾದಿ,ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ನಿರ್ಗತಿಕರಿಗೆ ಉಚಿತವಾಗಿ ಕೊಡಮಾಡುವ 240ನೇ ಮನೆಯ ಕೀಲಿಕೈಯನ್ನು ಸುಮತಿ ಮೊಳೆಯಾರರವರಿಗೆ ಹಸ್ತಾಂತರಿಸಿ ಶನಿವಾರ ಸಂಜೆ ಕಿಳಿಂಗಾರಿನಲ್ಲಿ ಅವರು ಮಾತನಾಡುತ್ತಿದ್ದರು. ಫ್ಯಾಶನೇಟ್ ಆಗಿ […]