ಧರ್ಮಸ್ಥಳದ ಆನೆಗಳಿಗೆ ಉಪಾಹಾರದ ಯೋಗ ಭಾಗ್ಯ!

Saturday, January 1st, 2022
Dharmasthala-Elephant

ಉಜಿರೆ: ಶನಿವಾರ ಚತುರ್ದಶಿಯ ಪರ್ವ ದಿನ. ಹೊಸ ವರ್ಷದ ಶುಭಾರಂಭ. ಆನೆಗಳಾದ ಲತಾ, ಲಕ್ಷ್ಮಿ ಮತ್ತು ಶಿವಾನಿ ಅಮೃತವರ್ಷಿಣಿ ಸಭಾ ಭವನದಲ್ಲಿ ಸೂರ್ಯಾಸ್ತದ ಮೊದಲೆ ಶುದ್ಧ ಸಸ್ಯಾಹಾರವಾದ ಉಪಾಹಾರ ಸ್ವೀಕರಿಸಿದವು. ಸೇಬು, ಮುಸುಂಬಿ, ದಾಳಿಂಬೆ, ಸೌತೆ, ಮುಳ್ಳು ಸೌತೆ, ಕಬ್ಬು, ಬಾಳೆಹಣ್ಣು, ಜೋಳ, ಸಿಹಿಕುಂಬಳಕಾಯಿ, ಬಾಳೆಗಿಡ ಹೀಗೆ ಆನೆಗಳಿಗೆ ಇಷ್ವಾದ ಹಾಗೂ ಹಿತವಾದ ವಸ್ತುಗಳನ್ನು ಜೋಡಿಸಿ ಇಡಲಾಗಿತ್ತು. ಅವರವರಿಗೆ ಬೇಕಾದ, ಆಯ್ಕೆಯಾದ ಹಣ್ಣುಗಳನ್ನು ತರಕಾರಿಗಳನ್ನು ಆನೆಗಳು ತಿಂದು ಆನಂದಿಸಿದವು. ಧರ್ಮಾಧಿಕಾರಿಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ […]

600ಕ್ಕೂ ಹೆಚ್ಚು ಕುಟುಂಬಗಳಿಗೆ 1.5 ಕೋಟಿ ರೂ. ನೆರವು ವಿತರಿಸಿದ ಕೆ. ಪ್ರಕಾಶ್ ಶೆಟ್ಟಿ

Saturday, January 1st, 2022
Prakash Shetty

ಮಂಗಳೂರು  : “ನಿಮ್ಮೊಂದಿಗೆ ಎಂ.ಆರ್. ಜಿ. ಗ್ರೂಪ್” ಕಾರ್ಯಕ್ರಮದ ಅಂಗವಾಗಿ ಕೆ.ಪ್ರಕಾಶ್ ಶೆಟ್ಟಿ ಅವರು ಒಂದೂವರೆ ಕೋಟಿ ರೂ. ಮೊತ್ತದ ಆರ್ಥಿಕ ನೆರವು ವಿತರಿಸುವ ಕಾರ್ಯಕ್ರಮ ಗುರುವಾರ ನಗರದ ಹೊರವಲಯದ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿತು. ಅರೋಗ್ಯ ಸಮಸ್ಯೆ ಇರುವವರು ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಒಟ್ಟು 635ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು ವಿತರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಕೆ. ಪ್ರಕಾಶ್ ಶೆಟ್ಟಿ ಅವರು, “ನನಗೆ ಪ್ರಕಾಶಾಭಿನಂದನ ಹೆಸರಿನ ಕಾರ್ಯಕ್ರಮ […]

ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರು ಪ್ರಯಾಣಿಕರಲ್ಲಿ ಒಮೈಕ್ರಾನ್‌ ಪತ್ತೆ

Friday, December 31st, 2021
omicron-test

ಮಂಗಳೂರು : ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ ಮಂಗಳೂರಿನ ಇಬ್ಬರು ಪ್ರಯಾಣಿಕರಲ್ಲಿ ಕೊರೋನ ಜೊತೆ ಒಮೈಕ್ರಾನ್‌ ಪತ್ತೆಯಾಗಿದೆ. ಅವರ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಡಲಾದ ಸಂದರ್ಭ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅಲ್ಲಿಯೇ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗೊಳಪಡಿಸಲಾಗಿದೆ. ಅವರ ಗಂಟಲ ದ್ರವದ ಮಾದರಿಯನ್ನು ಜಿನೋಮಿಕ್ ತಪಾಸಣೆಗೊಳಪಡಿಸಿದಾಗ ಒಮೈಕ್ರಾನ್‌ ಸೋಂಕು ಪತ್ತೆಯಾಗಿದೆ. ಅವರಿಬ್ಬರ ಪ್ರಾಥಮಿಕ ಸಂಪರ್ಕಿತರನ್ನು ಕೂಡಾ ಅಲ್ಲಿಯೇ ಪತ್ತೆ ಹಚ್ಚಿ ತಪಾಸಣೆಗೊಳಪಡಿಸಲಾಗಿದೆ. ಸೋಂಕಿತರು ಬೆಂಗಳೂರಿನ ಸರಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೊರಗ ಸಮುದಾಯದ ಮೆಹಂದಿಯಲ್ಲಿ ಡಿ.ಜೆ ವಿವಾದ, ಮಂಜುನಾಥ್ ಭಂಡಾರಿ ಭೇಟಿ

Friday, December 31st, 2021
Manjunath Bhandary

ಉಡುಪಿ : ಕುಂದಾಪುರ ತಾಲೂಕಿನ ಕೋಟ ಎನ್ನುವ ಗ್ರಾಮದಲ್ಲಿ ಕೊರಗ(ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದ ರಾಜೇಶ್ ಎನ್ನುವ ಯುವಕನ ಮದುವೆ (ಮೆಹಂದಿ) ಸಂಭ್ರಮದಲ್ಲಿ ಡಿ.ಜೆ ಹಾಕಿದ್ದರು ಎನ್ನುವ ಕಾರಣಕ್ಕೆ ನಡೆದ ಕೃತ್ಯ ಖಂಡನೀಯ . ಈ ಘಟನೆಯಿಂದ ನೊಂದ ಕೊರಗ ಪರಿವಾರದ ಮನೆಗೆ ವಿಧಾನ ಪರಿಷತ್ತಿ ಗೆ ನೂತನ ಸದಸ್ಯರಾಗಿ ಆಯ್ಕೆಯಾದ  ಮಂಜುನಾಥ್ ಭಂಡಾರಿಯವರು ಭೇಟಿ ನೀಡಿ ಸಾಂತ್ವಾನದ ಮಾತುಗಳನ್ನಾಡಿ ಘಟನೆಯಿಂದ ನೊಂದ ಪರಿವಾರಕ್ಕೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ನಂತರ ಉಡುಪಿ ಜಿಲ್ಲಾ ಪೋಲಿಸ್ […]

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಮುಖ್ಯ ಮಂತ್ರಿಯವರಿಗೆ ಆಹ್ವಾನ

Friday, December 31st, 2021
Kalikamba CM invite

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶಿಲಾಮಯ ಸುತ್ತು ಪೌಳಿಯ ಜೀರ್ಣೋದ್ದಾರ ಕಾಮಗಾರಿಗೆ ವಿಶೇಷ ಅನುದಾನ ಕೋರಿ ಮನವಿಯನ್ನು ಮಾನ್ಯ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರ ಶಿಫಾರಿಸಿನ ಮೇಲೆ ಮಂಗಳೂರು ದಕ್ಷಿಣ ವಿಭಾಗ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ್ ಕಾಮತ್ ನೇತ್ರತ್ವದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಎಸ್ ಆರ್ ಬೊಮ್ಮಯಿ ಯವರಿಗೆ ಕ್ಷೇತ್ರದ ಮೊಕ್ತೇಸರ್ ಕೆ ಕೇಶವ ಆಚಾರ್ಯರು ಡಿಸೆಂಬರ್ 31 ರಂದು ಬೆಂಗಳೂರಿನಲ್ಲಿ ವಿಧಾನ ಸೌಧದಲ್ಲಿ ನೀಡಿದರು. ಜನವರಿ 17 […]

ಸಾಲದ ಭಯ : ಡೆತ್ ನೋಟ್ ಬರೆದಿಟ್ಟು ಯುವಕ ನೇಣು ಬಿಗಿದು ಆತ್ಮಹತ್ಯೆ

Thursday, December 30th, 2021
Vignesh

ಕುಂದಾಪುರ : ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಕುಂದಾಪುರದ ಹೆಮ್ಮಾಡಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ. ಎಂಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಘ್ನೇಶ್ ಸ್ನೇಹಿತರೊಂದಿಗೆ ಬಿಸಿನೆಸ್ ಆರಂಭಿಸಲು ಮೊಬೈಲ್ ಆಪ್ ಮೂಲಕ ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡಲಾಗದೇ ಮನೆಯ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ತಾನು ಸಾಲ ಮಾಡಿಕೊಂಡಿದ್ದಾಗಿ ಬರೆದಿರುವ ವಿಘ್ನೇಷ್ […]

ವಿಟ್ಲ ಪಟ್ಟಣ ಪಂಚಾಯತ್ 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ‌ ಬಿಜೆಪಿಗೆ ಅಧಿಕಾರ

Thursday, December 30th, 2021
Vitla Town Panchayath

ಬಂಟ್ವಾಳ : ವಿಟ್ಲ ಪಟ್ಟಣ ಪಂಚಾಯತ್ ನ 18 ಸ್ಥಾನಗಳಿಗೆ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ಬಿ.ಸಿ.ರೋಡು ಮೊಡಂಕಾಪು ವಿನ ದೀಪಿಕಾ ಪ್ರೌಢಶಾಲೆಯಲ್ಲಿ ನಡೆದಿದ್ದು, 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ‌ ಬಿಜೆಪಿ ಅಧಿಕಾರ ಪಡೆದಿದೆ. ಉಳಿದಂತೆ ಕಾಂಗ್ರೆಸ್ 5 ಸ್ಥಾನಗಳಲ್ಲಿ ಜಯಗಳಿಸಿದರೆ, ಎಸ್ ಡಿ ಪಿ ಐ ಒಂದು ಸ್ಥಾನ ಗೆಲ್ಲುವುದರ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಖಾತೆ ತೆರೆದಿದೆ. 1ನೇ ವಾರ್ಡ್‌ನಲ್ಲಿ 828 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ವಿ. ಕೆ. ಮಹಮ್ಮದ್ ಅಶ್ರಫ್ […]

ಕೋಟೆಕಾರು ಪಟ್ಟಣ ಪಂಚಾಯತ್‍ನ 17 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ

Thursday, December 30th, 2021
Kotekar panchayath

  ಉಳ್ಳಾಲ :  ಡಿ.27ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ಮಂಗಳೂರು ತಾಲೂಕು ಪಂಚಾ ಯತ್ ಸಭಾಂಗಣದಲ್ಲಿ ನಡೆಯಿತು. ಕೋಟೆಕಾರು ಪಟ್ಟಣ ಪಂಚಾಯತ್‍ನ 17 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಪಟ್ಟಣ ಪಂಚಾಯತ್ ಅಧಿಕಾರ ಮತ್ತೆ ಅಧಿಕಾರ ಪಡೆದಿದೆ. ಬಿಜೆಪಿ ಈ ಬಾರಿ 11 ಸ್ಥಾನಗಳನ್ನು ಪಡೆದರೆ ಕಳೆದ ಬಾರಿ 4 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ 4 ಸ್ಥಾನಗಳನ್ನು ಉಳಿಸಿದೆ, ಒಂದು ಸ್ಥಾನ ಪಡೆದಿದ್ದ ಎಸ್‍ಡಿಪಿಐ ಒಂದೇ ಸ್ಥಾನವನ್ನು ಉಳಿಸಿಕೊಂಡಿದೆ. ಪ […]

ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Wednesday, December 29th, 2021
Kalikamba

ಮಂಗಳೂರು : ವಿಶ್ವಬ್ರಾಹ್ಮಣ ಸಮಾಜದ ಕರಾವಳಿ ಕರ್ನಾಟಕದ ಪವಿತ್ರ ಕ್ಷೇತ್ರ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 14.01.2022 ರಿಂದ 26.01.2022 ರ ವರೆಗೆ ನೂತನ ಶಿಲಾಮಯ ಸುತ್ತು ಪೌಳಿ ಸಮರ್ಪಣೆ, ಶ್ರೀ ಶಿವ, ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ, ಶ್ರೀ ಕಾಳಿಕಾಂಬಾ ವಿನಾಯಕ ದೇವರಿಗೆ ಅಷ್ಟಬಂಧ ಬ್ರಹ್ಮಕಲಶ,  ಶತಚಂಡಿಕಾಯಾಗವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮ, ಸಾಲಿಗ್ರಾಮ ಇವರ ಆಚಾರ್ಯತ್ವದಲ್ಲಿ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ ಕೇಶವ ಆಚಾರ್ಯ ಹೇಳಿದರು. ಕ್ಷೇತ್ರದ ಹಿನ್ನೆಲೆ […]

ಧರ್ಮಪ್ರಚಾರಕ್ಕಾಗಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಇಟ್ಟು, ಧಾರ್ಮಿಕ ಸ್ಥಳಗಳನ್ನು ಕಾಂಡೋಮ್ ಹಾಕಿ ಅಪವಿತ್ರ ಗೊಳಿಸುತ್ತಿದ್ದ ಆರೋಪಿ

Wednesday, December 29th, 2021
candom-desai

ಮಂಗಳೂರು : ಬೈಬಲ್ ನಲ್ಲಿರುವ ವಾಕ್ಯದಂತೆ ದೇಶದಲ್ಲಿರುವ ಎಲ್ಲಾ ಸ್ತ್ರೀ ಪುರುಷರ ರಕ್ಷಣೆ ಮತ್ತು ಧರ್ಮಪ್ರಚಾರಕ್ಕಾಗಿ ದೈವಸ್ಥಾನ ಗಳಲ್ಲಿ ಏಸುವಿನ ಕುರಿತ ಲೇಖನ, ಭಿತ್ತಿಪತ್ರ ಹಾಕಿರುವುದಾಗಿ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ ನ ಕಟ್ಟೆಯಲ್ಲಿ ಕಾಂಡೋಮ್ ಹಾಕಿ ಅಪವಿತ್ರ ಗೊಳಿಸಿದ ಆರೋಪಿ ಪೋಲೀಸರ ಬಳಿ ಬಾಯಿ ಬಿಟ್ಟಿದ್ದಾನೆ. ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಯನ್ನು ದೇವದಾಸ್ ದೇಸಾಯಿ, ಪ್ರಾಯ(62), ತಂದೆ: ಜಾನ್ ದೇಸಾಯಿ, ವಾಸ: ಡೋರ್ ನಂಬ್ರ: 4-311/2, ಮಿತ್ರ ನಗರ, ಕೊಂಡಾಣ, ಕೋಟೇಕಾರು, ಮಂಗಳೂರು ಎಂದು ಗುರುತಿಸಲಾಗಿದೆ. ಮೂಲತ: ಹುಬ್ಬಳ್ಳಿಯ […]