ಐದು ಸಾವಿರ ವರ್ಷಗಳ ಭವ್ಯ ಪರಂಪರೆಯ ಆಯುಧಪೂಜೆ ಆಚರಣೆ .

Saturday, October 16th, 2010
ಆಯುಧಪೂಜೆ.

ಮಂಗಳೂರು: ನಾಗರೀಕ ಸಂಸ್ಕೃತಿ ಆರಂಭವಾದಂದಿನಿಂದ ಜನರು ತಾವು ಉಪಯೋಗಿಸುತ್ತಿದ್ದ ಆಯುಧಗಳಿಗೆ ಪೂಜೆ ಮಾಡುತ್ತಿದ್ದರು ಎಂದು ಅನೇಕ ಮೂಲಗಳಿಂದ ನಾವು ಈಗ ತಿಳಿಯಬಹುದಾಗಿದೆ. ಸುಮಾರು 5000 ವರ್ಷಗಳ ಹಿಂದೆ ಪಾಂಡವರು 12 ವರ್ಷಗಳ ವನವಾಸವನ್ನು ಮುಗಿಸಿ, ಅಜ್ಞಾತವಾಸದ ಕೊನೆಯ ದಿನದಲ್ಲಿ ಉತ್ತರ ಗೋಗ್ರಹಣದ ಕದನದಲ್ಲಿ ಆಯುಧಗಳನ್ನು ಪೂಜಿಸಿ ಕೌರವರೊಂದಿಗೆ ಯುದ್ಧ ನಡೆಸಿದರು ಎನ್ನುವ ದಾಖಲೆಗಳು ಮಹಾಭಾರತದ ಪುಟಗಳಲ್ಲಿ ಕಾಣಸಿಗುತ್ತದೆ. ಬ್ರಹನ್ನಳೆಯಾದ ಅರ್ಜುನ ವಿರಾಟ ನಗರದ ರಾಜಕುಮಾರ ಉತ್ತರ ಕುಮಾರನೊಂದಿಗೆ ಬನ್ನಿ ಮಂಟಪದಿಂದ ಆಯುಧಗಳನ್ನು ಪೂಜಿಸಿ ಯುದ್ಧಕ್ಕೆ ಹೊರಟು ಕೌರವರನ್ನು […]

ಜೆಡಿಎಸ್ ಶಾಸಕ ಎಂ.ಸಿ.ಅಶ್ವತ್ಥ ರಾಜೀನಾಮೆ

Friday, October 15th, 2010
ಎಂ.ಸಿ.ಅಶ್ವತ್ಥ

ಬೆಂಗಳೂರು : ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಅಶ್ವತ್ಥ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಚನ್ನಪಟ್ಟಣ ಶಾಸಕ ಎಂ.ಸಿ.ಅಶ್ವತ್ಥ ಗುರುವಾರ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ತಮಿಳುನಾಡು ಪ್ರವಾಸದಲ್ಲಿದ್ದೆ. ಹಾಗಾಗಿ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಪಕ್ಷದ ನಾಯಕರಿಂದ ತನಗೆ ಯಾವುದೇ ತೊಂದರೆ ಇಲ್ಲ. ಇದೀಗ ನನ್ನ ವೈಯಕ್ತಿಕ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಅ.11ರಂದು ನಡೆದ ವಿಶ್ವಾಸಮತ ಯಾಚನೆಗಾಗಲಿ, ಅ.14ರಂದು ನಡೆದು […]

ಎರಡನೇ ಬಾರಿಗೆ ಬಹುಮತ ಗೆದ್ದ ಯಡಿಯೂರಪ್ಪ ಸರಕಾರ

Thursday, October 14th, 2010
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : ದೇಶದ ಇತಿಹಾಸದಲ್ಲೇ ಒಂದೇ ವಾರದಲ್ಲಿ ಎರಡೆರಡು ಬಾರಿ ವಿಶ್ವಾಸ ಮತ ಚಲಾಯಿಸಿ ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಅಧಿಕಾರ ಹಿಡಿದ ಬಿ.ಎಸ್.ಯಡಿಯೂರಪ್ಪ ಸರಕಾರ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ. ವಿಧಾನ ಸಭಾ ಸ್ಪೀಕರ್ ದ್ವನಿ ಮತದ ಮೂಲಕ ವಿಶ್ವಾಸ ಮತ ಚಲಾಯಿಸಲು ಸೂಚಿಸಿದರಾದರೂ ವಿರೋಧ ಪಕ್ಷದ ಪ್ರತಿರೋದದಿಂದಾಗಿ ತಲೆ ಎಣಿಕೆಗೆ ಸೂಚನೆ ನೀಡಿದರು. ಪರ ಹಾಗೂ ವಿರೋಧ ಪಕ್ಷಗಳ ಶಾಸಕರ ಪ್ರತಿ ಸಾಲಿನ ಮತ ಎಣಿಕೆ ಬಳಿಕ ಯಡಿಯೂರಪ್ಪ ಪರವಾಗಿ 106 ಹಾಗೂ ವಿರೋಧವಾಗಿ […]

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳಿಂದ ಜಯ

Wednesday, October 13th, 2010
ಆಸ್ಟ್ರೇಲಿಯಾ ಭಾರತ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ,ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈದಿದೆ. ಆ ಮೂಲಕ ಟೆಸ್ಟ್‌ನ ಅಗ್ರಸ್ಥಾನಕ್ಕೆ ನಾವೇ ಅರ್ಹ ತಂಡ ಎಂಬುದನ್ನು ಮಹೇಂದ್ರ ಧೋನಿ ಬಳಗ ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ. ಇದರೊಂದಿಗೆ ಭಾರತದಲ್ಲಿ ಟೆಸ್ಟ್ ಜಯ ದಾಖಲಿಸುವ ಆಸೀಸ್ ನಾಯಕ ರಿಕಿ ಪಾಂಟಿಂಗ್ ಕನಸು ಕನಸಾಗಿಯೇ ಉಳಿಯುವಂತಾಗಿದೆ. ನಾಲ್ಕನೇ […]

ದಂಡುಪಾಳ್ಯ ಗ್ಯಾಂಗ್ ನ 11 ಮಂದಿಗೆ ಮರಣದಂಡನೆ

Friday, October 1st, 2010
ದಂಡುಪಾಳ್ಯ ಗ್ಯಾಂಗ್

ಬೆಂಗಳೂರು : ವಿಚಿತ್ರ ರೀತಿಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ವನ್ನು ನಡೆಸುತ್ತಿದ್ದ ದಂಡುಪಾಳ್ಯ ಗುಂಪಿನ 11 ಮಂದಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್  ರವರು ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ. ಕೃಷ್ಣ, ಹನುಮ ಅಲಿಯಾಸ್ ದೊಡ್ಡಹನುಮ, ಮುನಿಕೃಷ್ಣ, ವೆಂಕಟರಮಣ, ತಿಮ್ಮ ಅಲಿಯಾಸ್ ಕೋತಿ ತಿಮ್ಮ, ವೆಂಕಟೇಶ್ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲ ತಿಮ್ಮ ಅಲಿಯಾಸ್ ತಿಮ್ಮ, ಚಿಕ್ಕಮುನಿಯಪ್ಪ ಅಲಿಯಾಸ್ ಮುನಿಯಪ್ಪ, ಕ್ರಿಸಂದು, ಲಕ್ಷ್ಮಿ ಮರಣದಂಡನೆಗೆ ಒಳಗಾದವರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 34ನೇ ವಿಶೇಷ ನ್ಯಾಯಾಲಯದ […]

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

Friday, October 1st, 2010
ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸದಸ್ಯ

ಬೆಂಗಳೂರು :  ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ, ಬಿಬಿಎಂಪಿ ಸದಸ್ಯ ಜಗದೀಶ್ ನಾಯ್ಡು ಕೆಐಎಡಿಬಿ ಪ್ರಕರಣದ ಸಾಕ್ಷಿದಾರೊಬ್ಬರಿಗೆ ಗಾಂಧಿನಗರದ ಕಚೇರಿಯಲ್ಲಿ ಒಂದು ಲಕ್ಷ ರೂಪಾಯಿ ಲಂಚ ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಲೋಕಾಯುಕ್ತ ಪೊಲೀಸರು ದಿಢೀರನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಟ್ಟಾ ಜಗದೀಶ್ ನಾಯ್ಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಬುಧವಾರ ಬಿಬಿಎಂಪಿ ಸಭೆಯಲ್ಲಿ  ಜಗದೀಶ್ ನಾಯ್ಡುವನ್ನು […]

ವೈಶಾಲಿ ಕಾಸರವಳ್ಳಿ ಅಂತಿಮ ಯಾತ್ರೆ

Tuesday, September 28th, 2010
ವೈಶಾಲಿ ಕಾಸರವಳ್ಳಿ

ಬೆಂಗಳೂರು  : ಕನ್ನಡ ಚಿತ್ರರಂಗದಲ್ಲಿ ಬೆಳ್ಳಿ ಪರದೆ ಮತ್ತು  ಕಿರುತೆರೆ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ ಹಿರಿಯ ನಟಿ  ವೈಶಾಲಿ ಕಾಸರವಳ್ಳಿ ಅವರ ಅಂತ್ಯಸಂಸ್ಕಾರ ಇಂದು ಸಂಜೆ ನಾಲ್ಕು ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ. ವೈಶಾಲಿ ಕಾಸರವಳ್ಳಿ ದೀರ್ಘ ಕಾಲದ ಅನಾರೋಗ್ಯದಿಂದ ಚೇತರಿಸದೆ ಸೋಮವಾರ ನಿಧನರಾಗಿದ್ದಾರೆ. ರಂಗಭೂಮಿಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ವೈಶಾಲಿ ಕಾಸರವಳ್ಳಿ ನಿರ್ದೇಶಕಿ, ವಸ್ತ್ರವಿನ್ಯಾಸಕಿ ನಟಿಯೂ ಆಗಿದ್ದರು, ಪತಿ, ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ, ಪುತ್ರಿ ಅನನ್ಯ ಹಾಗೂ ಪುತ್ರ ಅಪೂರ್ವ ಅವರನ್ನು ಅಗಲಿದ್ದಾರೆ. […]

ಮಂಗಳೂರಿನ ಬೀದಿಗಳಲ್ಲಿ ಮೈಸೂರು ದಸರಾ ಪ್ರಚಾರ

Monday, September 27th, 2010
ಮೈಸೂರು ದಸರಾ ಪ್ರಚಾರ

ಮಂಗಳೂರು: ಅಕ್ಟೋಬರ್ 8 ರಿಂದ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿಖ್ಯಾತ ಐತಿಹಾಸಿಕ ಹಿನ್ನೆಲೆಯುಳ್ಳ ಮೈಸೂರು ದಸರಾದ ಪ್ರಚಾರ ಜಾಥಾವನ್ನು ಮಂಗಳೂರು  ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ ಚೆಂಡೆ ಬಡಿಯುವ ಮೂಲಕ ಉದ್ಘಾಟಿಸಿದರು. ಮೈಸೂರು ವಾರ್ತಾ ಇಲಾಖೆ ಹಾಗೂ ದಸರಾ ಮಹೋತ್ಸವದ ವಿಶೇಷ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 1 ರವರೆಗೆ ಪ್ರಚಾರ ಜಾಥಾ ನಡೆಸಲಿದ್ದಾರೆ. ನಾಲ್ಕು ತಂಡಗಳಾದ ಚೈತನ್ಯ ಕಲಾತಂಡ, ಸ್ಪಂದನ ಮಹಿಳಾ ತಂಡ, ವಿವೇಕ ಕಲಾ ತಂಡ […]

ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವೈದ್ಯರ ಸಾಧನೆ : ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. ಗುಲ್ಮಕ್ಕೆ ಶಸ್ತ್ರಚಿಕಿತ್ಸೆ

Friday, September 24th, 2010
ಮಹಿಳೆಯ ಹೊಟ್ಟೆಯಲ್ಲಿದ 4 ಕೆ.ಜಿ. ಗುಲ್ಮ

ಬೆಂಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿ 4 ಕೆ.ಜಿ. ಗಾತ್ರಕ್ಕೆ ಬೆಳೆದಿದ್ದ ಗುಲ್ಮವನ್ನು (ಸ್ಪ್ಲೀನ್) ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸಫಲರಾಗಿದ್ದಾರೆ. 40 ವರ್ಷ ಪ್ರಾಯದ ಈ ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಹಸಿವೆಯೇ ಇಲ್ಲದಿರುವಿಕೆಯ ಸ್ಥಿತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮೊದಲಿಗೆ ವೈದ್ಯರು ಇದು ತೀವ್ರ ಮಲೇರಿಯಾ ಪ್ರಕರಣ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಗುಲ್ಮದ ಹಾನಿಕರ ಗೆಡ್ಡೆ ಎಂಬುದು ಗೊತ್ತಾಯಿತು. ಇದೊಂದು ಅಪರೂಪದ ಪ್ರಕರಣವಾಗಿದ್ದು, ನಾನ್-ಹೊಡ್ಜ್ಕಿಮ್ಸ್ ಲಿಂಫೋಮಾ […]

ವಳಾಲು ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥ.

Thursday, September 23rd, 2010
ವಳಾಲು ಶಾಲೆ

ಪುತ್ತೂರು: ಮಧ್ಯಾಹ್ನ ಬಿಸಿಯೂಟ ಮಾಡಿದ 45 ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಪುತ್ತೂರು ತಾಲೂಕಿನ ವಳಾಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಅಸ್ವಸ್ಥ ಮಕ್ಕಳನ್ನು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿದೆ. ಕೆಲವು ಮಕ್ಕಳನ್ನು ಖಾಸಗಿ ಆಸ್ವತ್ರೆಗೆ ಸೇರಿಸಲಾಗಿದೆ. ಸಹಾಯಕ ಕಮಿಷನರ್ ಡಾ| ಹರೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಮತ್ತು ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟದ ಸ್ಯಾಂಪಲ್ನ್ನು ಆರೋಗ್ಯ ಇಲಾಖೆಯ ಮೂಲಕ ಪ್ರಯೋಗಾಲಯಕ್ಕೆ […]