ಸಾಮಾನ್ಯ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು: ರಮೇಶ್ ಕುಮಾರ್

Saturday, December 10th, 2016
D C office

ಮಂಗಳೂರು: ಕೇಂದ್ರ ಸರ್ಕಾರ ನೋಟ್‌ ಬ್ಯಾನ್ ಮಾಡಿದ ಬಳಿಕ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಡಿಸ್ಚಾರ್ಜ್‌ ಮಾಡುವ ವೇಳೆ ಹಳೆಯ ನೋಟು ಸ್ವೀಕರಿಸದಿರುವ ಬಗ್ಗೆ ರಾಜ್ಯದೆಲ್ಲೆಡೆ ದೂರುಗಳು ಬಂದಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕಲು ಸಜ್ಜಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ಸರ್ವಾಧಿಕಾರಿ ಧೋರಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಪಿಎಂಡಿಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್) ಕಾಯ್ದೆಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ […]

ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಬಿಜೆಪಿಯವರು ವಿಧಾನಸಭೆ, ವಿಧಾನ ಪರಿಷತ್‌‌ನಲ್ಲಿ ನಿಲುವಳಿ ಮಂಡಿಸಲಿ: ರಮಾನಾಥ ರೈ

Saturday, December 10th, 2016
ramanatha-rai

ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ಕೈಬಿಡುವಂತೆ ಬಿಜೆಪಿಯವರು ವಿಧಾನಸಭೆ, ವಿಧಾನ ಪರಿಷತ್‌‌ನಲ್ಲಿ ನಿಲುವಳಿ ಮಂಡಿಸಲಿ. ಆ ಬಳಿಕವೂ ಯೋಜನೆ ಕೈಬಿಡಲು ಸಾಧ್ಯವಾಗದಿದ್ದಲ್ಲಿ ನಾನು ರಾಜಕೀಯದಿಂದಲೇ ಹೊರಬರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ವಿರುದ್ಧ ವಿಧಾನಸಭಾ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಕೈಬಿಡುವಂತೆ ನಿಲುವಳಿ ಮಂಡಿಸಲಿ. ಆ ಬಳಿಕ ಮುಖ್ಯಮಂತ್ರಿಯವರ ಕೈಕಾಲು ಹಿಡಿದಾದರೂ ಯೋಜನೆಯನ್ನು ನಿಲ್ಲಿಸುತ್ತೇನೆ. ಇಲ್ಲದಿದ್ದಲ್ಲಿ […]

ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ: ರಮೇಶ್ ಕುಮಾರ್

Saturday, December 10th, 2016
Wenlock Hospital

ಮಂಗಳೂರು: ಜೀವ ನೀಡುವ ಶಕ್ತಿ ಹೇಗೆ ನಮಗಿಲ್ಲವೋ ಅದೇ ರೀತಿ ಜೀವ ತೆಗೆಯುವ ಅಧಿಕಾರವೂ ನಮಗಿಲ್ಲ. ಕೊಡುವುದು ಇಲ್ಲವಾದರೆ ಪಡೆಯುವುದು ಅಸಾಧ್ಯ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ವೈದ್ಯರು, ದಾದಿಗಳ ಅಸಡ್ಡೆ, ಅಪ್ರಾಮಾಣಿಕತೆಯ ಸೇವೆಯಿಂದ ಜೀವ ಹೋದರೆ ಕೊಲೆಗಡುಕರಾಗುತ್ತಾರೆ. ರೋಗಿಗಳ ಜೀವ ನಿಮ್ಮ ಕೈಯಲ್ಲಿದೆ. ರೋಗಿಯ ಕುಟುಂಬ ನಿಮ್ಮ ಮೇಲೆ ನಂಬಿಕೆಯಿಟ್ಟಿರುತ್ತದೆ. ಶಕ್ತಿ ಮೀರಿ ಪ್ರಾಣ ಉಳಿಸುವ ಕಾರ್ಯ ನಿಮ್ಮದು. […]

ತ್ರಿಪುರ ವಾಸಿನಿ ಕಲ್ಯಾಣ ಮಂಟಪದಲ್ಲಿ ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರ ಅದ್ಧೂರಿ ಮದುವೆ

Friday, December 9th, 2016
Yash-Radhika-Marriage

ಬೆಂಗಳೂರು: ಖ್ಯಾತ ಚಿತ್ರನಟರಾದ ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರ ಮದುವೆ ಶುಕ್ರವಾರ ಅರಮನೆ ಮೈದಾನದ ತ್ರಿಪುರ ವಾಸಿನಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು. ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ನವ ದಂಪತಿಗಳನ್ನು ಹರಸಿದರು. ವಿವಾಹ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದ ಶ್ರೀಗಳು, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ,ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ, ಚಿತ್ರರಂಗದ ಗಣ್ಯರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ವಿವಿಧ ಕ್ಷೇತ್ರಗಳ […]

ಕಟೀಲು ದೇವಿಯ ಅವಹೇಳನ ಪೋಸ್ಟ್‌ ಪ್ರಕರಣ: ಮುಂಬೈನಲ್ಲಿರುವ ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿದ ಪೊಲೀಸರು

Friday, December 9th, 2016
Mumbai-facebook-office

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಅವಹೇಳನ ಪೋಸ್ಟ್‌ ಪ್ರಕರಣದ ತನಿಖೆಗೆ ಸಹಕರಿಸದ ಹಿನ್ನೆಲೆ ಮುಂಬೈನಲ್ಲಿರುವ ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿದ ಪೊಲೀಸರು, ಅಲ್ಲಿಯ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕುರಿತ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಫೇಸ್‍ಬುಕ್ ಅಸಹಕಾರ ತೋರಿದ ಹಿನ್ನೆಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಮಂಗಳೂರು ಪೊಲೀಸರು ಹಾಗೂ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಜಂಟಿಯಾಗಿ ಮುಂಬೈನಲ್ಲಿರುವ ಫೇಸ್‍ಬುಕ್ ಕಚೇರಿಗೆ […]

ಹೆಜ್ಜೇನು ದಾಳಿಯಿಂದ ವೃದ್ಧೆಯೊಬ್ಬರು ಮೃತಪಟ್ಟು, ಮೂವರಿಗೆ ಗಂಭೀರ ಗಾಯ

Friday, December 9th, 2016
bee-attack

ಮಂಗಳೂರು: ಹೆಜ್ಜೇನು ದಾಳಿಯಿಂದ ವೃದ್ಧೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಸೋಮೇಶ್ವರ ಪಂಚಾಯತ್‌ ವ್ಯಾಪ್ತಿಯ ಪಿಲಾರು ಲಕ್ಷ್ಮೀಗುಡ್ಡೆ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ಉಳಾಯಿಬೆಟ್ಟು ನಿವಾಸಿ ಕಮಲಾ (65) ಮೃತ ವೃದ್ಧೆ. ಅವರ ರಕ್ಷಣೆಗೆ ಬಂದ ಅಳಿಯ ಶ್ರೀಧರ್ (49), ಮಗಳು ಲೀಲಾವತಿ (45) ಮತ್ತು ಅಳಿಯನ ತಾಯಿ ಜಾನಕಿ (70) ಎಂಬುವರು ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮೀಗುಡ್ಡೆಯಲ್ಲಿರುವ ಅಳಿಯ ಶ್ರೀಧರ್ ಮನೆಗೆ ಕಮಲಾ ಎರಡು ದಿನಗಳ ಹಿಂದೆ ಬಂದಿದ್ದರು. ನಿನ್ನೆ ಮಧ್ಯಾಹ್ನ ಮನೆ […]

ಕರಾವಳಿಯ ಜನತೆಯ ಸಂಶಯವನ್ನು ನಿವಾರಣೆ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳು ವಹಿಸಬೇಕು: ಕ್ಯಾ.ಗಣೇಶ್‌‌ ಕಾರ್ಣಿಕ್

Friday, December 9th, 2016
Ganesh Karnik

ಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ, ಗೊಂದಲಗಳಿವೆ. ಮುಖ್ಯಮಂತ್ರಿಗಳು ಅಧಿಕಾರಿಗಳ ಸಹಿತ ಮಂಗಳೂರಿಗೆ ಆಗಮಿಸಿ ಈ ಭಾಗದ ಜನತೆ ಹಾಗೂ ಜನಪ್ರತಿನಿಗಳ ಸಂಶಯಗಳನ್ನು ದೂರ ಮಾಡುವುದಾಗಿ ಹೇಳಿದ್ದರು. ಆದರೆ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್‌‌ ಕಾರ್ಣಿಕ್ ಹೇಳಿದ್ದಾರೆ. ಮಾಧ್ಯಮರೊಂದಿಗೆ ಮಾತನಾಡಿದ ಅವರು, 9.5ಕೋಟಿ ರೂ. ವೆಚ್ಚದಲ್ಲಿ 32 ವಷಗಳ ಹಿಂದೆ ಕೈಗೆತ್ತಿಕೊಂಡಿರುವ ವಾರಾಹಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಗೆ ರೂ.689 ಕೋಟಿ ವೆಚ್ಚ ಮಾಡಲಾಗಿದೆ. 6,000 […]

ವಿಶ್ವಶಾಂತಿಗಾಗಿ ಅರಬ್ಬೀ ಸಮುದ್ರದಲ್ಲಿ ಈಜಿ `ಶತಮಾನದ ಈಜು’ ಗಿನ್ನೀಸ್ ದಾಖಲೆ ಬರೆದ ಸಾಹಸಿಗರು

Friday, December 9th, 2016
Arabbi sea

ಮಂಗಳೂರು: 2008, ನವೆಂಬರ್ 25 ರಂದು ಮುಂಬೈನ ಹೊಟೇಲ್ ತಾಜ್‌ನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಅಮಾಯಕರ ಬಲಿ ಮಾಸಲಾರದ ನೋವಾಗಿದ್ದು, ಮುಂಬೈ ದಾಳಿ ಹುತಾತ್ಮರ ಗೌರವಾರ್ಥ ಹಾಗೂ ವಿಶ್ವಶಾಂತಿಗಾಗಿ ವಿಂಗ್ ಕಮಾಂಡರ್ ಪರಮವೀರ್ ಸಿಂಗ್ ನೇತೃತ್ವದಲ್ಲಿ ಸಾಹಸಿಗಳು ಅರಬ್ಬೀ ಸಮುದ್ರದಲ್ಲಿ ಈಜಿ `ಶತಮಾನದ ಈಜು’ ಗಿನ್ನೀಸ್ ದಾಖಲೆ ಮಾಡಿದ್ದಾರೆ. ನವೆಂಬರ್ 26ರಂದು ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಹೊರಟಿದ್ದ ರಿಲೇ ಈಜುಗಾರರ ತಂಡ ಗೋವಾ ಮೂಲಕ ಮಂಗಳೂರು ತಲುಪುವ ಮೂಲಕ 1,031 ಕಿ.ಮೀ. (567 ನಾಟಿಕಲ್ಸ್) […]

ಇಸ್ಲಾಂನ ತ್ರಿವಳಿ ತಲಾಖ್ ಅಸಂವಿಧಾನಿಕ, ಇದು ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಿದೆ: ಅಲಹಾಬಾದ್ ಹೈಕೋರ್ಟ್

Thursday, December 8th, 2016
trevali talak

ಲಖ್ನೋ: ದೇಶಾದ್ಯಂತ ದೊಡ್ಡ ವಿವಾದಕ್ಕೆ ಹಾಗೂ ಚರ್ಚೆಗೆ ಕಾರಣವಾಗಿದ್ದ ಇಸ್ಲಾಂನ ತ್ರಿವಳಿ ತಲಾಖ್ ಪದ್ಧತಿ ಅಸಂವಿಧಾನಿಕ, ಇದು ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಪೀಠ ಮಹತ್ವದ ತೀರ್ಪನ್ನು ಗುರುವಾರ ನೀಡಿದೆ. ಮೂರು ಬಾರಿ ತಲಾಖ್ ಎಂದು ಹೇಳಿ ಮಹಿಳೆಗೆ ವಿಚ್ಛೇದನ ನೀಡುವ ಇಸ್ಲಾಂನ ಈ ಪದ್ಧತಿ ಸಂವಿಧಾನ ಬಾಹಿರವಾದದ್ದು ಎಂದು ಅಲಹಾಬಾದ್ ಹೈಕೋರ್ಟ್ ಪೀಠ ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ. ತ್ರಿವಳಿ ತಲಾಖ್ ಪದ್ಧತಿ ಮುಸ್ಲಿಂ ಮಹಿಳೆಯರ ಹಕ್ಕಿನ ಉಲ್ಲಂಘನೆಯ […]

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ಇದೊಂದು ಆಂತರಿಕ ವಿಚಾರ ಇದನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳುತ್ತೇವೆ: ಜಗದೀಶ್ ಶೆಟ್ಟರ್

Thursday, December 8th, 2016
Jagadeesh Shettar

ಮಂಗಳೂರು: ಬಿಜೆಪಿ ಮುಖಂಡ ಕೆ. ಎಸ್. ಈಶ್ವರಪ್ಪ ಆರಂಭಿಸಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತಂತೆ ಬಹಿರಂಗವಾಗಿ ಚರ್ಚಿಸುತ್ತಿಲ್ಲ ಎಂದು ರಾಜ್ಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟವಾಗಿ ಹೇಳಿದ್ದಾರೆ. ಮಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಆಂತರಿಕ ವಿಚಾರ. ಇದನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳುತ್ತೇವೆ ಎಂದರು. ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಯನ್ನು ರಕ್ಷಿಸಲು ಎಸಿಬಿಯನ್ನು ರಚಿಸಲಾಗಿದೆ. ಅವರನ್ನೇ ಬಳಸಿಕೊಂಡು ಭ್ರಷ್ಟಾಚಾರ ಮಾಡಲಾಗುತ್ತಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ, ಬೆಲೆ ಇಲ್ಲದಂತಾಗಿದೆ ಎಂದು ಭ್ರಷ್ಟಾಚಾರ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಬೆಂಗಳೂರಿನ […]