ಬೈಯಪ್ಪನ ಹಳ್ಳಿಯಲ್ಲಿ ಗಿರೀಶ್ ಕಾರ್ನಾಡ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ

Monday, June 10th, 2019
Girish karnad

ಬೆಂಗಳೂರು : ಬೆಂಗಳೂರು, ಜೂನ್ 10: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ,ಕನ್ನಡದ ಮೇರು ನಾಟಕಕಾರ, ಹಿರಿಯ ಸಾಹಿತಿ, ಗಿರೀಶ್ ಕಾರ್ನಾಡ್(81) ವಿಧಿವಶರಾಗಿದ್ದಾರೆ. ಬೆಂಗಳೂರಿನ ಲ್ಯಾವಲ್ಲೆರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕೆಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಗಿರೀಶ್ ಕಾರ್ನಾಡ್‌ ಅವರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ […]

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ

Monday, June 10th, 2019
Kamath

ಮಂಗಳೂರು :  ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಎದುರು ಸೋಮವಾರ ಬೆಳಿಗ್ಗೆ ಪ್ರತಿಭಟನಾ ಪ್ರದರ್ಶನ ನೆಡೆಯಿತು. ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ಸರಿಪಡಿಸದಿದ್ದರೆ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟೂ ತೀವ್ರಗೊಳಿಸುವುದಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಎಚ್ಚರಿಸಿದ್ದಾರೆ. ಪ್ರಾಪರ್ಟಿ ಕಾರ್ಡ್ ಸಮಸ್ಯೆಯ ವಿರುದ್ಧ ಶಾಸಕರಾದ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆಯಿಂದ ಜನ ಸಾಮಾನ್ಯರು ಅನುಭವಿಸುವ […]

ಅಂಜನಾಳಿಗೆ ಮನೆಯವರು ಬೇರೆ ಹುಡುಗನನ್ನು ನಿಶ್ಚಯಿಸಿದ್ದು ಕೊಲೆಗೆ ಕಾರಣ

Monday, June 10th, 2019
Sandeep Rathod

ಮಂಗಳೂರು:  2018 ಜುಲೈ ತಿಂಗಳಲ್ಲಿ ಫೇಸ್‌ಬುಕ್‌ ಮೂಲಕ ಪರಿಚಯವಾದ ಅಂಜನಾ ಮತ್ತು ಸಂದೀಪ್‌  ಗೆಳೆತನ ದಿನ ಕಳೆದಂತೆ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆತ ಹೇಳಿದಂತೆ ಮಂಗಳೂರಿನಲ್ಲಿ ಆಗಾಗ ಬಂದು ಭೇಟಿಯಾಗುತ್ತಿದ್ದೆವು. ಮದುವೆಯಾಗಲು ಇಚ್ಛಿಸಿದ್ದೆವು. ಆದರೆ ಆಕೆ ಮನೆಯಲ್ಲಿ ಬೇರೆ ಮದುವೆ ಮಾಡಲು ಗಂಡು ಹುಡುಕಿದ್ದಾರೆ. ನನ್ನನ್ನು ಮರೆತು ಬಿಡು ಎಂದು ಆಕೆ ಹೇಳಿದ್ದಾಳೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಟವಾಗಿದೆ. ಸಿಟ್ಟಿನ ಭರದಲ್ಲಿ ಆಕಸ್ಮಿಕವಾಗಿ ಆಕೆಯ ಕೊಲೆ ನಡೆದು ಹೋಗಿದೆ ಎಂದು ಸ್ಥಳ ಮಹಜರು ನಡೆಸಿದಾಗ ಆತ […]

ವಿಧಾನಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ಗೆ ಸಚಿವ ಸ್ಥಾನ

Monday, June 10th, 2019
BM Farooq

ಮಂಗಳೂರು: ಜೂ. 12ರಂದು ನಡೆಯುವ  ರಾಜ್ಯ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್‌ ಕೋಟಾದಲ್ಲಿ ವಿಧಾನಪರಿಷತ್‌ ಸದಸ್ಯ ಹಾಗೂ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್‌ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಕರಾವಳಿಗೆ ಇನ್ನೊಂದು ಸಚಿವ ಸ್ಥಾನ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್‌ನಿಂದ ಮಂಗಳೂರು ಶಾಸಕ ಯು.ಟಿ. ಖಾದರ್‌ ಅವರು ಈಗಾಗಲೇ ಸಚಿವರಾಗಿದ್ದಾರೆ. ಜೆಡಿಎಸ್‌ ಕೋಟಾದಲ್ಲಿ ಎರಡು ಸಚಿವರ ಸೇರ್ಪಡೆಗೆ ಅವಕಾಶವಿರುವುದರಿಂದ ಒಂದು ಸ್ಥಾನ ಪಕ್ಷೇತರರಿಗೆ ನೀಡಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದು ಇನ್ನೊಂದು ಸ್ಥಾನವನ್ನು ಅಲ್ಪಸಂಖ್ಯಾಕ ಸಮುದಾಯಕ್ಕೆ […]

ಮಳೆಗಾಗಿ ಉಡುಪಿಯಲ್ಲಿ ಕಪ್ಪೆಗಳ ಮದುವೆ

Saturday, June 8th, 2019
frog marriage

ಉಡುಪಿ:  ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ ಮತ್ತು ಪಂಚರತ್ನಾ ಸೇವಾ ಟ್ರಸ್ಟ್‌ ಮಳೆಗಾಗಿ  ಕಪ್ಪೆ ಮದುವೆ ಆಯೋಜನೆ ಮಾಡಿತ್ತು. ಶನಿವಾರ ಮಧ್ಯಾಹ್ನ ಉಡುಪಿ ಕಿದಿಯೂರು ಹೊಟೆಲ್ ಪ್ರಾಂಗಣದಲ್ಲಿ ಗಂಡು ಕಪ್ಪೆ ಹಾಗೂ ಹೆಣ್ಣು ಕಪ್ಪೆಗೆ ಸಕಲ ಶಾಸ್ತ್ರಗಳೊಂದಿಗೆ ವಿವಾಹ ನಡೆಸಿ ಮಂಡೂಕ ಕಲ್ಯಾಣೋತ್ಸವದ ಮೂಲಕ ಮಳೆಗಾಗಿ ವಿಶೇಶ ಪ್ರಾರ್ಥನೆ ಮಾಡಲಾಯಿತು. ವರನ ಹೆಸರು ವರುಣ, ವಧುವಿನ ಹೆಸರು ವರ್ಷಾ. ಗಂಡು ಹಾಗೂ ಹೆಣ್ಣು ಕಪ್ಪೆಯನ್ನು ಮೂರು ಚಕ್ರದ ಸೈಕಲ್’ನಲ್ಲಿ ಕೂರಿಸಿ ಮಾರುತಿ ವಿಥಿಕಾ ಸರ್ಕಲ್ ನಾಗರಿಕ ಸಮಿತಿಯ […]

ಕುಖ್ಯಾತ ಭೂಗತ ರೌಡಿ ರವಿ ಪೂಜಾರಿ ದಕ್ಷಿಣ ಆಫ್ರಿಕಾದಿಂದ ಪರಾರಿ ?

Saturday, June 8th, 2019
Ravi-Poojary

ಮಂಗಳೂರು : ಕುಖ್ಯಾತ ಭೂಗತ ರೌಡಿ ರವಿ ಪೂಜಾರಿ ದಕ್ಷಿಣ ಆಫ್ರಿಕಾದ ಸೆನೆಗಲ್‌ನಿಂದ ಪರಾರಿಯಾಗಿರುವ ಬಗ್ಗೆ  ವದಂತಿ ಹರಡಿದೆ. ಸೆನೆಗಲ್ ಪೊಲೀಸರ ವಶದಲ್ಲಿದ್ದ ರವಿ ಪೂಜಾರಿ, ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಬೇಲ್ ಪಡೆದು ಬಿಡುಗಡೆಹೊಂದಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭವನ್ನೇ ಬಳಸಿಕೊಂಡು ಆತ ಸೆನೆಗಲ್ ನಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ವದಂತಿಯ ಸತ್ಯಾಸತ್ಯತೆ ತಿಳಿಯಲು ಕೇಂದ್ರ […]

ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ, ಜೂನ್ 10 ಕ್ಕೆ ಮತ್ತೆ ಸಭೆ

Saturday, June 8th, 2019
Kukke-Math

ಮಂಗಳೂರು : ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೂನ್ 7ರ ಸಂಜೆ ಭೇಟಿ ನೀಡಿ ಎರಡೂ ಕಡೆಯಿಂದ ಅಭಿಪ್ರಾಯ ಸಂಗ್ರಹಿಸಿದರೂ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿದೆ. ಹಾಗಾಗಿ ಜೂನ್ 10ರ ಒಳಗೆ ಮತ್ತೊಮ್ಮೆ ಸಭೆ ಕರೆಯಲು ಸ್ವಾಮೀಜಿ ನಿರ್ಧರಿಸಿದ್ದಾರೆ. ದಕ್ಷಿಣ ಭಾರತದ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನದ ನಡುವಿನ ತಿಕ್ಕಾಟ ಮುಂದುವರಿದಿದೆ. ಸರ್ಪ ಸಂಸ್ಕಾರ ವಿಚಾರದಲ್ಲಿ ಹಲವಾರು ವರ್ಷಗಳ ಕಾಲದ ಸಂಘರ್ಷಕ್ಕೆ ಮಂಗಳ ಹಾಡಲು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಹಿರಿಯ ಯತಿ ಪೇಜಾವರ […]

ಅತ್ತಾವರ ಪಿಜಿಯಲ್ಲಿ ಯುವತಿಯ ಕೊಲೆ, ಪ್ರಿಯಕರನ ಮೇಲೆ ಶಂಕೆ

Saturday, June 8th, 2019
Anjana-Vasist

ಮಂಗಳೂರು : 22 ವರ್ಷದ ವಿದ್ಯಾರ್ಥಿನಿಯೋರ್ವಳ ಮೃತದೇಹವು ಮಂಗಳೂರಿನ ಅತ್ತಾವರದ ಪೆಯೀಂಗ್ ಗೆಸ್ಟ್ ಯೊಂದರಲ್ಲಿ ಶುಕ್ರವಾರದಂದು ಸಂಜೆ ಪತ್ತೆಯಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆಯಿಂದ ವಿದ್ಯಾರ್ಥಿನಿ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು ಚಿಕ್ಕಮಗಳೂರು ಜಿಲ್ಲೆಯ ಮಂಜುನಾಥ ವೈ.ಎನ್ ಎಂಬವರ ಪುತ್ರಿ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಅಂಜನಾ ವಶಿಷ್ಠ (22) ಎಂದು ಹೇಳಲಾಗಿದೆ. ಅತ್ತಾವರದಲ್ಲಿರುವ ಮೆಡಿಕಲ್ ಕಾಲೇಜು ಬಳಿಯ ಪೆಯೀಂಗ್ ಗೆಸ್ಟ್ನ ರೂಂನಲ್ಲಿ ಮೃತ ದೇಹ ಪತ್ತೆಯಾಗಿದೆ. ಕೊಲೆಯಾದ ಅಂಜನಾ ವಶಿಷ್ಠರ ತಲೆ ಮಂಚದ ಸರಳಿನ ನಡುವೆ ಸಿಲಿಕಿದ್ದು, […]

ಆಳ್ವಾಸ್ ’ವಿಕಿ ಕ್ಯಾಂಪ್’ ಉದ್ಘಾಟನೆ

Saturday, June 8th, 2019
wiki

ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು ವಿದ್ಯಾರ್ಥಿಗಳಲ್ಲಿರಬೇಕು ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ವಿಕಿಪೀಡಿಯಾ ಅಸೋಸಿಯೇಷನ್ ವತಿಯಿಂದ ನಡೆಯಲಿರುವ 7 ದಿನಗಳ ’ವಿಕಿ ಕ್ಯಾಂಪ್ ಹಾಗೂ ಇಂಟರ್ನಶಿಫ್’ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ 8 ಜನ ವಿಕಿ ಸಾಧಕರಿಗೆ ಬಹುಮಾನ ರೂಪದಲ್ಲಿ ಪುಸ್ತಕವನ್ನು ನೀಡಲಾಯಿತು. ಉದ್ಘಾಟನಾ ಕಾರ‍್ಯಕ್ರಮದ ಬಳಿಕ ಪದವಿ […]

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ನಟನೆಗೆ ಪ್ರೋತ್ಸಾಹಿಸಬೇಕು : ಡಾ.ಸದಾನಂದ ಪೆರ್ಲ

Saturday, June 8th, 2019
Usha Bhandary

ಮಂಗಳೂರು : ರಂಗಭೂಮಿ ಹಾಗೂ ಹಿರಿ-ಕಿರುತೆರೆಯ ಖ್ಯಾತ ನಟಿ ಉಷಾ ಭಂಡಾರಿಯವರ ನೇತೃತ್ವದಲ್ಲಿ ಬೆಂಗಳೂರಿನ ಆಪ್ – ಆಕ್ಟಿಂಗ್ ಎಂಡ್ ಪರ್‌ಫಾರ್ಮಿಂಗ್ ಸಂಸ್ಥೆ ಮಂಗಳೂರಿನಲ್ಲಿ ನಡೆಸಿದ ಒಂದು ತಿಂಗಳ ಅಭಿನಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಗರದ ಡಾನ್‌ಬೋಸ್ಕೋ ಹಾಲ್‌ನಲ್ಲಿ ನಡೆಯಿತು. ಇಂದು ಹೆತ್ತವರು ಮಕ್ಕಳನ್ನು ಡಾಕ್ಟರ್, ಇಂಜಿನಿಯರ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಒಬ್ಬ ಒಳ್ಳೆ ನಟ, ನಿರ್ದೇಶಕ ಆಗಬೇಕೆಂದು ಯಾರೂ ಚಿಂತನೆ ಮಾಡುವುದಿಲ್ಲ. ಅವರಲ್ಲಿರುವ ಕಲೆಯನ್ನು ಗುರುತಿಸಿ ಉತ್ತಮ ನಟ, ನಟಿಯರನ್ನಾಗಿ ಮಾಡಿದರೆ ಚಿತ್ರರಂಗ ಹಾಗೂ […]