ಕುಮಾರಸ್ವಾಮಿ ಮೇ 24ರ ವರೆಗೆ ಮಾತ್ರ ಮುಖ್ಯಮಂತ್ರಿ

Thursday, May 23rd, 2019
kumara swamy

ಬೆಂಗಳೂರು: ಲೋಕಸಭೆ ಚುನಾವಣೆ 2019ರ ಫಲಿತಾಂಶ ಮೇ 23 ರಂದು ಪ್ರಕಟಗೊಳ್ಳಲಿದ್ದು, ಮೇ 24ರ ವರೆಗೆ ಮಾತ್ರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಭವಿಷ್ಯ ನುಡಿದಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರು ಮೇ 24, ಶುಕ್ರವಾರ ಬೆಳಗ್ಗಿನ ವರೆಗೆ ಮಾತ್ರ ಸಿಎಂ ಆ ನಂತರ ಮೈತ್ರಿ ಸರ್ಕಾರ ಮುರಿದು ಬೀಳಲಿದೆ. ಹೊಸ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ ಎಂದು ಸದಾನಂದ ಗೌಡ ಹೇಳಿದ್ದಾರೆ. ನಾಳೆ ಸಂಜೆ ಅಥವಾ ನಾಡಿದ್ದು ಬೆಳಗ್ಗೆ ವರೆಗೆ ಮಾತ್ರ. ನಾಳೆ […]

ನಳಿನ್ ಕುಮಾರ್ ಕಟೀಲ್ ಗೆ ಮಿಥುನ್ ರೈ ಗಿಂತ1,16,000 ಮತಗಳ ಅಂತರದಿಂದ ಮುನ್ನಡೆಯಲ್ಲಿ

Thursday, May 23rd, 2019
KateelRai

ಮಂಗಳೂರು : ಬೆಳಗ್ಗೆ 11.00  ಕ್ಕೆ ಮೂರನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರಿಗೆ 3,20,627  ಮತಗಳು ಲಭಿಸಿದೆ. ಎರಡು ಭಾರಿ ಜಯಗಳಿಸಿದ ನಳಿನ್ ಕುಮಾರ್ ಕಟೀಲ್ ಗೆ ಮಿಥುನ್ ರೈ  ಗಿಂತ 1,16.700 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರೆ. ಮಿಥುನ್ ರೈ  1,85,832 ಮತಗಳು ಲಭಿಸಿದೆ.  

ಯೋಗಾಭ್ಯಾಸದ ಮೂಲಕ ಉತ್ತಮ ಆರೋಗ್ಯ : ಉಮಾ ಪ್ರಶಾಂತ್

Wednesday, May 22nd, 2019
yoga press

ಮಂಗಳೂರು  : ಒತ್ತಡದ ಜೀವನದಲ್ಲಿ ಯೋಗಾಭ್ಯಾಸದ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ಭ್ರಷ್ಟಾಚಾರ ನಿಗ್ರಹದಳದ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಐಸಿರಿ ಹೆಲ್ದಿ ಇಂಡಿಯಾ ಮಿಷನ್ ಸಹಭಾಗಿತ್ವದಲ್ಲಿ ಪತ್ರಕರ್ತರಿಗೆ ಒಂದು ತಿಂಗಳ ಕಾಲ ನಡೆಯಲಿರುವ ಯೋಗ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಆರೋಗ್ಯದ ಕಡೆಗೆ ದಿನದಲ್ಲಿ 10-15 ನಿಮಿಷ ಮೀಸಲಿಡಬೇಕು. ಆರೋಗ್ಯವಿದ್ದರೆ ಮಾತ್ರ […]

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳ ಬಂಧನ

Tuesday, May 21st, 2019
Sridhar bhandary

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ಮ್ಯಾನೇಜರ್ ಶ್ರೀಧರ್ ಭಂಡಾರಿ ಮತ್ತು ಸಿಬ್ಬಂದಿ ರಾಹಿಲ್,  ಇಬ್ಬರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಸಬ್ಸಿಡಿ ಹಣ ಬಿಡುಗಡೆ ಮಾಡಬೇಕಾದರೆ 10,000 ರೂಪಾಯಿ ಲಂಚ ನೀಡಬೇಕು ಎಂದು  ಬೇಡಿಕೆ ಇಟ್ಟಿದ್ದರು . ಉದ್ಯಮಿಯೊಬ್ಬರು ಡೈರಿ ವ್ಯವಹಾರ ಮಾಡಲೆಂದು ಸಬ್ಸಿಡಿ ಪಡೆದುಕೊಂಡಿದ್ದರು. ಇವರಿಗೆ ಇಲಾಖೆಯಿಂದ 1 ಲಕ್ಷ ರೂಪಾಯಿ ನಗದು ಹಣ ಬರಬೇಕಾಗಿತ್ತು. ಆದರೆ ನಗದು ಹಣದ ದಾಖಲೆಗಳಿಗೆ ಸಹಿ ಮಾಡಲು 10,000 […]

ಯಶಸ್ಸಿನ ಮೂಲ ಮಂತ್ರವೇ ಕಠಿಣ ಪರಿಶ್ರಮ – ಶ್ರಮ ಏವ ಜಯತೇ- ಡಾ. ಉಷಾಪ್ರಭಾಎನ್. ನಾಯಕ್

Tuesday, May 21st, 2019
expert

ಮಂಗಳೂರು  : ವಿದ್ಯಾರ್ಥಿಗಳು ಆಸಕ್ತಿಯಿಂದ ಹಾಗೂ ಕಠಿಣ ಪರಿಶ್ರಮದೊಂದಿಗೆದುಡಿದರೆಖಂಡಿತಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ.’ಯಶಸ್ಸಿನ ಮೂಲಮಂತ್ರಕಠಿಣ ಶ್ರಮ- ಶ್ರಮ ಏವ ಜಯತೇ’ ಯಶಸ್ಸಿಗೆ ಯಾವುದೇ ಅಡ್ಡ ದಾರಿಗಳಿಲ್ಲ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಶೆ ಡಾ.ಉಷಾಪ್ರಭಾ ಎನ್. ನಾಯಕ್‌ರವರು ತಿಳಿಸಿದರು. ಅವರು ಮಂಗಳೂರಿನ ಭಗವತಿ ಕ್ಷೇತ್ರದ ಕೂಟಕ್ಕಳ ಸಭಾಂಗಣದಲ್ಲಿ ನಡೆದ ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮತ್ತುಅವರ ಪೋಷಕರಿಗೆ ಆಯೋಜಿಸಿದ ಓರಿಯಂಟೇಶನ್ 2019ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪದವಿಪೂರ್ವ ಹಂತವು ವಿದ್ಯಾರ್ಥಿಗಳ ಪಾಲಿಗೆ ಅತೀ ಸಂತೋಷಕರ ಸಮಯ.ಈ ಸಮಯ ವ್ಯರ್ಥ […]

ಕನಿಷ್ಠ ಕೂಲಿಯನ್ನು ಜಾರಿಗೊಳಿಸಲು ಸಿಐಟಿಯು ಧರಣಿ

Tuesday, May 21st, 2019
citu

ಮಂಗಳೂರು : ರಾಜ್ಯ ಹೈಕೋರ್ಟ್‌ನ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ದ.ಕ. ಜಿಲ್ಲಾ ಸಮಿತಿಯು ಮಂಗಳವಾರ ಕದ್ರಿಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಧರಣಿ ನಡೆಸಿತು. ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು, ಸ್ಕೀಮ್ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು, ತಂದೆ ತಾಯಿಗಳನ್ನೊಳಗೊಂಡು 5 ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ ರೂ.18,000/- ನಿಗದಿಗೊಳಿಸಬೇಕು, ಬೆಲೆಯೇರಿಕೆ ಸೂಚ್ಯಾಂಕ ನಿಗದಿಯಲ್ಲಿನ ಮೋಸ ನಿಲ್ಲಿಸಬೇಕು,10 ರೂ.ಇದ್ದ ಕಾರ್ಮಿಕ ಸಂಘದ […]

ಡಾ.ಜಯಂತ ಆಠವಲೆಯವರ 77ನೇ ಜನ್ಮೋತ್ಸವದ ನಿಮಿತ್ತ ಮಂಗಳೂರಿನಲ್ಲಿ ಹಿಂದೂ ಏಕತಾ ಮೆರವಣಿಗೆ

Tuesday, May 21st, 2019
Hindu janan jagruti

ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ 77 ನೇ ಜನ್ಮೋತ್ಸವ ನಿಮಿತ್ತ ಹಿಂದೂ ಐಕ್ಯತೆ ಮೆರವಣಿಗೆಯು ಸೋಮವಾರ  ಜ್ಯೋತಿ ವೃತ್ತದಿಂದ ಧರ್ಮ ಧ್ವಜದ ಪೂಜೆಯೊಂದಿಗೆ ಪ್ರಾರಂಭವಾಗಿ ಮೆರವಣಿಗೆಯ ಮೂಲಕ ಪುರಭವನದಲ್ಲಿ ಸಮಾರೂಪ ಕಾರ್ಯಕ್ರಮದಿಂದ ಮುಕ್ತಾಯವಾಯಿತು. ಮೆರವಣೆಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಮೆರವಣಿಗೆಯಲ್ಲಿ ಇಸ್ಕಾನ್ ಸಂಸ್ಥೆ, ಶ್ರೀರಾಮ ಸೇನೆ, ನವಜೀವನ ವ್ಯಾಯಾಮ ಶಾಲೆ ಮಾರ್ನಬೈಲ್ , ಖಾವಂತಾಯ ಗೆಳೆಯರು ಮಾರ್ನಬೈಲು, ಚಿರಂಜೀವಿ ಯುವಕ ಮಂಡಳಿಯ ಕಾರ್ಯಕರ್ತರು […]

ಕದ್ರಿಯಲ್ಲಿ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ

Saturday, May 18th, 2019
vipra

ಮಂಗಳೂರು :  ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲ ತೀವ್ರತರವಾದ ಜಲಕ್ಷಾಮ ತಲೆದೋರಿದ್ದುಇದರ ಪರಿಹಾರಾರ್ಥ ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವಳದ ಕೆರೆಯ ಪ್ರಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ 7.30 ರ ವರೆಗೆ ವರುಣ ದೇವರ ಪ್ರೀತ್ಯರ್ಥ, ಪರ್ಜನ್ಯ ಜಪ, ರುದ್ರ ಪಾರಾಯಣ ವಿಷ್ಣು ಸಹಸ್ರ ನಾಮ ಪಠಣ ನಡೆಸಲಾಯಿತು. ಕದ್ರಿ ದೇವಳದ ಅರ್ಚಕರಾದ ರಾಘವೇಂದ್ರ ಅಡಿಗ, ಡಾ. ಪ್ರಭಾಕರ ಅಡಿಗ ದೀಪ ಪ್ರಜ್ವಲನಗೊಳಿಸಿದರು ಮತ್ತುಇತರ ವೈದಿಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮಜರಗಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. […]

ನಳಿನ್‌ರನ್ನು ದ.ಕ.ಜಿಲ್ಲೆಯ ಸಂಸದ ಎನ್ನಲು ನಾಚಿಕೆಯಾಗುತ್ತದೆ : ರಮಾನಾಥ ರೈ

Saturday, May 18th, 2019
Nalin-Hatavo

ಮಂಗಳೂರು : ಇತ್ತೀಚೆಗೆ ಟ್ವಿಟ್ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ತಕ್ಷಣ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಹಾತ್ಮಾ ಗಾಂಧೀಜಿಯನ್ನು ಅವಮಾನಿಸಿದ್ದನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಶನಿವಾರ ಪಕ್ಷದ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯನ್ನು […]

ಅಟೋ ರಿಕ್ಷಾಗಳಲ್ಲಿ ಮಿತಿ ಮೀರಿ ಮಕ್ಕಳ ಸಾಗಾಟ ಕ್ರಮ

Friday, May 17th, 2019
lobour

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಾರ್ಖಾನೆಗಳಿದ್ದು, ಬಹಳ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ವ್ಯವಸ್ಥಾಪಕರು ವಾಹನ ವ್ಯವಸ್ಥೆ ಮಾಡಿದ್ದಾರೆಯೇ? ಅಥವಾ ಇವರಿಗೆ ಸಮರ್ಪಕ ಬಸ್ ವ್ಯವಸ್ಥೆ ಇದೆಯೇ, ಇಲ್ಲದಿದ್ದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಿಯೋಜಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವು ಜಿಲ್ಲೆಗಳಲ್ಲಿ ಕಾರ್ಮಿಕರನ್ನು ಲಾರಿ, ಟ್ಯಾಕ್ಟರ್ ಗಳಲ್ಲಿ ತುಂಬಿಸಿಕೊಂಡು ಸಾಗಾಣಿಕೆ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು. ಈ ಬಗ್ಗೆ ಕಾರ್ಮಿಕ ಇಲಾಖೆ ಜನ ಜಾಗೃತಿ ಕಾರ್ಯಕ್ರಮಗಳನ್ನು, ಶಿಕ್ಷಣ ಇಲಾಖೆ, ಪ್ರಾಧೇಶಿಕ […]