ಆಳ್ವಾಸ್‌ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ

Thursday, November 22nd, 2018
Alvas-Yoga

ಮೂಡುಬಿದಿರೆ: ಪ್ರಕೃತಿ ಚಿಕಿತ್ಸಾ ಸಪ್ತಾಹದ ಅಂಗವಾಗಿ ಸಾಮೂಹಿಕ ಯೋಗಾಭ್ಯಾಸವನ್ನು ಗುರುವಾರ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಯಿತು. ಆಳ್ವಾಸ್ ಆನಂದಮಯ ಆರೋಗ್ಯಧಾಮದ ಸುಂದರ ಪ್ರಕೃತಿಯ ನಡುವೆ ಶಿಸ್ತು ಬದ್ಧವಾಗಿ ಸುಮಾರು 400 ರಷ್ಟು ವಿದ್ಯಾರ್ಥಿಗಳು ಯೋಗದ ಅಭ್ಯಾಸವನ್ನು ಕೈಗೊಂಡರು. ಭಾರತ ಪರಿಸರ ಸಚಿವಾಲಯದ ಸಲಹೆಗಾರ ಡಾ. ಆನಂದಿ ಸುಬ್ರಮಣ್ಯನ್ ಮುಖ್ಯ ಅತಿಥಿ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ, ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಉಪಸ್ಥಿತರಿದ್ದರು. […]

ದೇಶದಲ್ಲೇ ಬೆಂಗಳೂರು ಅತಿ ಹೆಚ್ಚು ಸಂಬಳ ನೀಡುವ ಮಹಾನಗರ..!

Thursday, November 22nd, 2018
bengaluru

ಬೆಂಗಳೂರು: ಹಾರ್ಡ್ವೇರ್ ಆ್ಯಂಡ್ ನೆಟ್ವರ್ಕಿಂಗ್, ಸಾಫ್ಟ್ವೇರ್ ಆ್ಯಂಡ್ ಐಟಿ ಸೇವೆ ಹಾಗೂ ಗ್ರಾಹಕ ವಲಯದ ಉದ್ಯಮಗಳಲ್ಲಿ ಅತಿ ಹೆಚ್ಚಿನ ವೇತನ ಪಾವತಿಸುತ್ತಿರುವ ನಗರಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಲಿಂಕ್ಡ್ಇನ್ ಸಂಸ್ಥೆಯು ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಪ್ರಥಮ ಬಾರಿಗೆ ವೇತನ ಪಾವತಿ ಕುರಿತಂತೆ ಅಧ್ಯಯನ ನಡೆಸಿ ಈ ವರದಿ ಪ್ರಕಟಿಸಿದೆ. ತಂತ್ರಜ್ಞಾನ ಉದ್ಯಮದಲ್ಲಿ ಬೆಂಗಳೂರು ಅತಿ ಹೆಚ್ಚಿನ ಸಂಬಳ ಪಾವತಿಸುತ್ತಿದ್ದು, ಮುಂಬೈ ಮತ್ತು ದೆಹಲಿ ನಂತರದ ಸ್ಥಾನ ಪಡೆದಿವೆ. ನಗರದ ಹಾರ್ಡ್ವೇರ್ ಆ್ಯಂಡ್ ನೆಟ್ವರ್ಕಿಂಗ್ ಉದ್ಯೋಗಿಗಳು ವರ್ಷಕ್ಕೆ […]

ಸಾಲಬಾಧೆ ತಾಳಲಾರದೆ ಕೆರೆಗೆ ಹಾರಿದ ತಂದೆ..ರಕ್ಷಿಸಲು ಹೋದ ಮಗನೂ ಸಾವು!

Thursday, November 22nd, 2018
suicide

ಚಿಕ್ಕಮಗಳೂರು: ಸಾಲಬಾಧೆ ತಾಳಲಾರದೆ ತಂದೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ರಕ್ಷಿಸಲು ಹೋದ ಮಗ ಕೂಡಾ ತಂದೆ ಜೊತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎನ್.ಆರ್. ಪುರ ತಾಲೂಕಿನಲ್ಲಿ ನಡೆದಿದೆ. ತಂದೆ ತಿಮ್ಮಣ್ಣಗೌಡ (55) ಹಾಗೂ ಮಗ ಅಭಿಷೇಕ್ (24) ಸಾವನ್ನಪ್ಪಿದವರು ಎನ್ನಲಾಗಿದೆ. ಇವರಿಗೆ ಎನ್.ಆರ್.ಪುರದ ಹಂತುವಾನಿ ಗ್ರಾಮದಲ್ಲಿ 2 ಎಕರೆ ಜಾಗವಿದ್ದು, ಅಡಿಕೆ ಮತ್ತು ಭತ್ತ ಬೆಳೆಯುತ್ತಿದ್ದರು. ತಮ್ಮ ಜಮೀನಿನಲ್ಲಿ 10ಕ್ಕೂ ಹೆಚ್ಚು ಬೋರ್ವೆಲ್ ಕೊರೆಯಿಸಿದ್ದರು. ಆದರೆ ಬೋರ್ವೆಲ್ನಲ್ಲಿ ನೀರು ಬಂದಿರಲಿಲ್ಲ. ಅಲ್ಲದೇ ಬ್ಯಾಂಕ್ವೊಂದರಲ್ಲಿ ಮೂರು […]

ವಿದ್ವತ್ ಮೇಲೆ ಹಲ್ಲೆ ಪ್ರಕರಣ: 3ನೇ‌ ಆರೋಪಿ ಶ್ರೀಕೃಷ್ಣನಿಂದ ವಿದ್ವತ್​ಗೆ ನಿರಂತರ ಕರೆ?

Thursday, November 22nd, 2018
nalapad

ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಗ್ಯಾಂಗ್ ಯುಬಿ ಸಿಟಿಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಶ್ರೀಕೃಷ್ಣ ಪ್ರಕರಣದಲ್ಲಿ ರಾಜಿ ಮಾಡಿಕೋ ಎಂದು ಪದೇ ಪದೆ ವಿದ್ವತ್ಗೆ ಕರೆ ಮಾಡುತ್ತಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದರಿಂದ ವಿದ್ವತ್ ತನಗೆ ಜೀವ ಬೆದರಿಕೆ ಇದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಈ ಹಿನ್ನೆಲೆ ವಿದ್ವತ್ಗೆ ಭದ್ರತೆ ನೀಡುವಂತೆ ಸಂಜಯ್ ನಗರ ಪೊಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ ಆರೋಪಿ […]

ಬಹ್‌ರೈನ್‌ನಲ್ಲಿ ಪಟ್ಲ ಫೌಂಡೇಶನ್‌ ಘಟಕದ ಉದ್ಘಾಟನೆ

Thursday, November 22nd, 2018
sathish-patla

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ೩೨ನೇ ಘಟಕವಾಗಿ ಬಹರೈನ್ – ಸೌದಿ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿತ್ತು. ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲರವರ ಉಪಸ್ಥಿತಿಯಲ್ಲಿ ಸಮಿತಿ ರಚನೆಗೊಂಡಿತು. ಗೌರವಾಧ್ಯಕ್ಷರಾಗಿ ಮಾಧವ ಅಮೀನ್,ಸುಭಾಶ್ಚಂದ್ರ ಅಧ್ಯಕ್ಷರಾಗಿ ಬಿ. ರಾಜೇಶ್ ಶೆಟ್ಟಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಅರುಣ್ ಐರೋಡಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ರಾವ್ ಪೇಜಾವರ, ಕಾರ್ಯದರ್ಶಿಯಾಗಿ ನವೀನ್ ಚಂದ್ರ ಭಂಡಾರಿ, ಪ್ರಧಾನ ಸಂಚಾಲಕರಾಗಿ ರಾಮ್ ಪ್ರಸಾದ್ ಅಮ್ಮೆನಡ್ಕ , ಸಂಚಾಲಕರಾಗಿ ಮೋಹನ್ ಎಡನೀರು, […]

ಶಾಸಕ ವೇದವ್ಯಾಸ ಕಾಮತ್‌ರಿಂದ ಪ್ರಕೃತಿ ವಿಕೋಪ ಪರಿಹಾರನಿಧಿಯ ಚೆಕ್ ವಿತರಣೆ

Thursday, November 22nd, 2018
vedvyas-kamath

ಮಂಗಳೂರು: ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ತೀವ್ರ ನಷ್ಟ ಅನುಭವಿಸಿದ 32 ನೇ ಮರೋಳಿ ವಾರ್ಡಿನ ದೊಡ್ಡಮನೆ ನಿವಾಸಿ ಹರೀಶ್ ಚಂದ್ರ ಅವರಿಗೆ ಶಾಸಕ ವೇದವ್ಯಾಸ ಕಾಮತ್ ಪರಿಹಾರ ನಿಧಿಯ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಕಳೆದ ಬಾರಿ ಸುರಿದ ಭಾರಿ ಮಳೆಗೆ ಮಂಗಳೂರು ನಗರ ದಕ್ಷಿಣದಲ್ಲಿ ಅನೇಕ ಮನೆಗಳು ಭಾಗಶ: ಕುಸಿದು ಹೋಗಿದ್ದವು. ಅಲ್ಲಿ ತಾವು ಸ್ವತ: ಪರಿಶೀಲಿಸಿ ಸರಕಾರದಿಂದ ಪರಿಹಾರನಿಧಿಗೆ ಹೆಚ್ಚಿನ ಬೇಡಿಕೆ ಕೂಡ ಇಡಲಾಗಿತ್ತು. ಬಂದಿರುವ ಪರಿಹಾರನಿಧಿಯಲ್ಲಿ […]

ನವವಿವಾಹಿತೆ ಆತ್ಮಹತ್ಯೆಗೆ ಶರಣು: ಪತಿಯೇ ಕೊಲೆ ಮಾಡಿದ ಆರೋಪ

Thursday, November 22nd, 2018
murdered

ಬೆಂಗಳೂರು: ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ರೋಜಾ (18) ನೇಣು ಬಿಗಿದುಕೊಂಡವಳು. ಈಕೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ನಿವಾಸಿಯಾಗಿದ್ದು, 3 ತಿಂಗಳ ಹಿಂದೆ ರೋಜಾ ಮತ್ತು ಆಕೆಯ ಗಂಡ ಬಾಬಜಾನ್ ಬ್ಯಾಟರಯನಪುರ ಬಳಿ ವಾಸವಾಗಿದ್ದರು. ಬಾಗೇಪಲ್ಲಿ ನಿವಾಸಿಯಾದ ಬಾಬಜಾನ್ 1 ವರ್ಷದ ಹಿಂದೆ ರೋಜಾಳನ್ನ ಪ್ರೀತಿಸಿ ಜಾತಿ ವಿರೋಧದ ಮಧ್ಯೆಯು ಮದುವೆಯಾಗಿದ್ದು, ಬಳಿಕ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ರೋಜಾ ನೇಣಿಗೆ ಶರಣಾಗಿದ್ದಾಳೆ. ಇನ್ನು […]

ಬೆಳ್ತಂಗಡಿಯಲ್ಲಿ ಮಧ್ಯರಾತ್ರಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Thursday, November 22nd, 2018
attacked

ಬೆಳ್ತಂಗಡಿ: ಮಧ್ಯರಾತ್ರಿ ಯುವಕನೊಬ್ಬನ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಗುಳಿಗಕಟ್ಟೆ ಮುಂದೆ ನಡೆದಿದೆ. ಗದಗ ಜಿಲ್ಲೆಯ ಸುರೇಶ್ (27) ಹಲ್ಲೆಗೊಳಗಾದ ವ್ಯಕ್ತಿ. ಇವರು ಉಜಿರೆಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಇವರ ಕೈ ಕಾಲಿಗೆ ಗಂಭೀರ ಹಲ್ಲೆ ಮಾಡಲಾಗಿದ್ದು, ಗಾಯಗೊಂಡ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಕಾರಣ ಏನು ಮತ್ತು ಹಲ್ಲೆ ಮಾಡಿದವರು ಯಾರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ […]

ಶಬರಿಮಲೆ ನಿಯಂತ್ರಣಕ್ಕೆ 10 ಸಾವಿರ ಪೊಲೀಸರು

Wednesday, November 21st, 2018
Nalinkumar

ಮಂಗಳೂರು : ಪಿಣರಾಯಿ ವಿಜಯನ್ ಸರ್ಕಾರವು ಶಬರಿಮಲೆಯನ್ನು ನಿಯಂತ್ರಿಸಲು 10 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಮಲೆಯಲ್ಲಿ ಭಕ್ತರು ಆರು ಗಂಟೆ ಮಾತ್ರ ಇರಬೇಕೆಂದು ನಿರ್ಬಂಧ ವಿಧಿಸಲಾಗಿದೆ. ಘೋಷಣೆ ಕೂಗಿದರೆ ಬಂಧಿಸುತ್ತಾರೆ.  ಗುಂಪುಗೂಡಿದರೂ ಸೆರೆ ಹಿಡಿಯುತ್ತಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆರೋಪ ಮಾಡಿದರು. ಕೇರಳದ ಎಡಪಕ್ಷಗಳ ಸರ್ಕಾರ ಶಬರಿಮಲೆಯನ್ನು ಮತ್ತೊಂದು ಜಲಿಯನ್ ವಾಲಾಬಾಗ್ ಮಾಡಲು ಹೊರಟಿದೆ ಎಂದು  ಅವರು ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಣರಾಯಿ ವಿಜಯನ್  ಸರ್ಕಾರವು ಶಬರಿಮಲೆಯನ್ನು ಹಿಂದೂಗಳ ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಅವರು […]

ಸಿಎಂ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ: ಬಿ.ಎಸ್‌.ಯಡಿಯೂರಪ್ಪ

Wednesday, November 21st, 2018
b-s-yedyurappa

ಬೆಂಗಳೂರು: ರೈತ ವಿರೋಧಿ ನೀತಿ ಅನುಸರಿಸುತ್ತಿರುವ ನಿಮಗೆ ವಿಧಾನಸೌಧದಲ್ಲಿ ಅಧಿಕಾರ ನಡೆಸೋ ನೈತಿಕ ಹಕ್ಕಿಲ್ಲ. ಕೂಡಲೇ ರಾಜೀನಾಮೆ ಕೊಟ್ಟು ತೊಲಗಿ. ನೀವು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ರೈತ ಮಹಿಳೆ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಮತ್ತು ನೂರಾರು […]