ಅಪಘಾತಕ್ಕೀಡಾಗಿದ್ದ ಮುಸ್ಲಿಂ ಕುಟುಂಬಕ್ಕೆ ನೇರವಾದ ಹಿಂದೂ ಯುವಕರು

Sunday, July 9th, 2017
Hindu-youths

ಮಂಗಳೂರು  : ಹಿಂದೂ ಜಾಗರಣ ವೇದಿಕೆಯ ಪುತ್ತೂರು ಘಟಕದ ಅದ್ಯಕ್ಷ ಸಚಿನ್ ಪಾಪೆಜಾಲ್ ಮತ್ತು ಸಂಘ ಪರಿವಾರದ ಸದಸ್ಯ ಹಾಗು ಅರಿಯಡ್ಕ ಗ್ರಾಮ ಪಂಚಾಯತ್ತು ಸದಸ್ಯ ಗಲಭೆಯ ನಡುವೆ ಅಪಘಾತಕ್ಕೆ ಒಳಗಾದ ಮುಸ್ಲಿಂ ಕುಟುಂಬಕ್ಕೆ ಮಂಗಳೂರು ಆಸ್ಪತ್ರೆ ತಲುಪಿಸಿದ ಮಾನವೀಯ ಘಟನೆ ಪ್ರಸಂಶೆಗೆ ಪಾತ್ರವಾಗಿದೆ . ವಿದೇಶ ಪ್ರಯಾಣಕ್ಕೆ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಹೊರಟಿದ್ದ ಮಡಿಕೇರಿ ಮೂಲದ ಮುಸ್ಲಿಂ ಸಮುದಾಯದವರಿದ್ದ ಅಲ್ಟೊ ಕಾರು ಕೌಡಿಚ್ಚಾರು ಬಳಿ ಜುಲೈ 5 ರಂದು ಅಪಘಾತಕ್ಕೀಡಾಗುತ್ತದೆ. ಕಾರು ಮತ್ತು ಬಸ್ ನಡುವೆ ನಡೆದ ಈ ಅಪಘಾತದಲ್ಲಿ ಕಾರಿನ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿ […]

ಕುತ್ತಾರಿನ ರಾಣಿಪುರದಲ್ಲಿ ಪಲ್ಸರ್ ಬೈಕಿನಲ್ಲಿ ಬಂದು ಯುವಕನ ಮೇಲೆ ತಲವಾರಿನಿಂದ ದಾಳಿ

Saturday, July 8th, 2017
Chiranjivi

ಮಂಗಳೂರು : ದಕ್ಷಿಣ ಕನ್ನಡದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದ್ದು ಯುವಕನ ಮೇಲೆ ಮೂವರು ಅಪರಿಚಿತರು ತಲವಾರಿನಿಂದ ದಾಳಿ ಮಾಡಿರುವ ಘಟನೆ ಕುತ್ತಾರಿನ ರಾಣಿಪುರದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಅಂಬ್ಲಮೊಗರು ಕೊಟ್ರಾಗುತ್ತು ನಿವಾಸಿ ಚಿರಂಜೀವಿ (24)ದುಷ್ಕರ್ಮಿಗಳಿಂದ ದಾಳಿಗೊಳಗಾದ ಯುವಕನೆಂದು ತಿಳಿದುಬಂದಿದೆ, ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಮೂವರು ಅಪರಿಚಿತರು ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದು ತಲವಾರಿನಿಂದ ದಾಳಿನಡೆಸಿ ಪರಾರಿಯಾಗಿದ್ದಾರೆ. ಚಿರಂಜೀವಿ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಮುಸ್ಲಿಂಸ್ ಅನ್ನುವ ಫೇಸ್‌ಬುಕ್‌ ಖಾತೆಯ ಹಿಂದೆ ಮತಾಂಧ ವ್ಯಕ್ತಿ

Saturday, July 8th, 2017
brijesh

ಮಂಗಳೂರು : ಮಂಗಳೂರು ಮುಸ್ಲಿಂಸ್ ಅನ್ನುವ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿರುವ ಸದಸ್ಯ ಎಸ್‌ಡಿಪಿಐ ಮುಖಂಡ ಅಶ್ರಫ್ ಕೊಲೆಯಾದ ನಂತರ ತನ್ನ ಖಾತೆಯಲ್ಲಿ ಬರೆದಂತೆ ಆರ್‌ಎಸ್‌ಎಸ್‌ನ ಮುಖಂಡ ಶರತ್‌ನ ಕೊಲೆಯಾಗಿದೆ. ಸದ್ರಿ ಖಾತೆಯಲ್ಲಿ ನಿನ್ನೆಯ ದಿನ ಕೂಡಾ ಕೋಮುದ್ವೇಷ ಹರಡುವ ಹಾಗೂ ಆರ್‌ಎಸ್‌ಎಸ್ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಕೊಲೆ ಮಾಡುವ ಬಗ್ಗೆ ಬರೆಯಲಾಗಿದೆ. ಹೀಗಾಗಿ ಸದ್ರಿ ಮತಾಂಧರ ಮುಂದಿನ ಗುರಿ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅನ್ನುವುದು ಸ್ಪಷ್ಟ. ಎಂದು ಬಿ.ಜೆ.ಪಿ. ಜಿಲ್ಲಾ ಜಿಲ್ಲಾ ಪ್ರಧಾನ […]

ದೇವಾಲಯಗಳು ಧಾರ್ಮಿಕ ಭಾವನೆ ಅಧಿಕಗೊಳಿಸುವ ತಾಣ -ಬಿ.ರಮಾನಾಥ ರೈ

Saturday, July 8th, 2017
Kukke Subhramanya

ಸುಬ್ರಹ್ಮಣ್ಯ: ಭಕ್ತಾಧಿಗಳು ತಮ್ಮ ಅಭೀಷ್ಠತೆಗಳನ್ನು ಪೂರೈಸಲು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಪ್ರಯೋಜನಕಾರಿಯಾಗಿದೆ. ದೇವಾಲಯಗಳು ಸಮಾಜಕ್ಕೆ ಸುeನವನ್ನು ಬೋಧಿಸುವ ಕೇಂದ್ರವಾಗಬೇಕು. ಸಮಾಜಕ್ಕೆ ಧಾರ್ಮಿಕ ಭಾವನೆಯ ಕಾಳಜಿಯನ್ನು ಅಧಿಕಗೊಳಿಸುವ ತಾಣವಾಗಬೇಕು. ದೇವಳದ ಆರ್ಥಿಕ ಸಂಪತ್ತನ್ನು ಕೇವಲ ವೈಧಿಕ ವಿದಿವಿಧಾನಗಳಿಗೆ ಸೀಮಿತಗೊಳಿಸದೆ ಇವುಗಳನ್ನು ಸಾಮಾಜಿಕ ಕೆಲಸಕಾರ್ಯಗಳಿಗೆ ವಿನಿಯೋಗಿಸಬೇಕು. ಇದರಿಂದ ಸಮಾಜದ ಅಭಿವೃದ್ಧಿಯು ಉಂಟಾಗುತ್ತದೆ. ರಾಜ್ಯದ ನಂಬರ್ ವನ್ ಆದಾಯ ತರುವ ದೇವಳದಲ್ಲಿ ನೆರವೇರುತ್ತಿರುವ ಮಾಸ್ಟರ್ ಪ್ಲಾನ್ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು […]

ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಶರತ್ ಮಡಿವಾಳ ಅಂತಿಮ ಸಂಸ್ಕಾರ

Saturday, July 8th, 2017
Sarath madivala

ಬಂಟ್ವಾಳ : ಬಿಸಿ ರೋಡ್ ನಲ್ಲಿ ಜುಲೈ 4 ಮಂಗಳವಾರ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಶುಕ್ರವಾರ ರಾತ್ರಿ ಮೃತಪಟ್ಟ ಶರತ್ ಮಡಿವಾಳರ ಮೃತದೇಹ ಆಸ್ಪತ್ರೆಯಿಂದ ಮೆರವಣಿಗೆಯ ಮೂಲಕ ಸಾಗಿ ಅವರ ಸ್ವಗ್ರಾಮವಾದ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರಿಗೆ ತಲುಪಿದ್ದು, ಮಧ್ಯಾಹ್ನ ವೇಳೆ ಶರತ್ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಇಂದು ಮಧ್ಯಾಹ್ನದ ವೇಳೆಗೆ ಶರತ್ ಸ್ವಗ್ರಾಮಕ್ಕೆ ತಲುಪಿದ ಮೃತದೇಹವನ್ನು ಧಾರ್ಮಿಕ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘಪರಿವಾರದ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು […]

ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ , ಜಾತ್ಯತೀತ ಮೌಲ್ಯಗಳು ಕುಸಿಯುತ್ತಿವೆ : ಮುನೀರ್

Friday, July 7th, 2017
muneer

ಮಂಗಳೂರು : ಸೌಹಾರ್ದತೆ, ಐಕ್ಯತೆ, ಜ್ಯಾತೀತತೆ ವ್ಯವಸ್ಥೆಯನ್ನು ದುರ್ಭಲಗೊಳಿಸುವ ಶಕ್ತಿಗಳ ವಿರುದ್ಧ  ಡಿವೈಎಫ್‌ಐ ವತಿಯಿಂದ ಹಮ್ಮಿಕೊಂಡಿರುವ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ  ದಲಿತರ, ಅಲ್ಪ ಸಂಖ್ಯಾತರ ಜನರ ಮೇಲೆ ಆಳುವ ಶಕ್ತಿಗಳ ಪ್ರಾಯೋಜಕತ್ವದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನವನುದ್ದೇಶಿಸಿ ಮಾತನಾಡಿ ದೇಶದೊಳಗೆ ದ್ವೇಷದ ವಾತವರಣ ಸೃಷ್ಟಿಯಾಗುತ್ತಿರುವ ಕಾರಣ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ , ಜಾತ್ಯತೀತ ಮೌಲ್ಯಗಳು ಕುಸಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜನ ಸಾಮನ್ಯರಲ್ಲಿ, ಅಲ್ಪಸಂಖ್ಯಾತರಲ್ಲಿ, […]

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಮೃತ್ಯು

Friday, July 7th, 2017
sharath

ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ (28)  ನಗರದ ಎ.ಜೆ. ಆಸ್ಪತ್ರೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಶರತ್ ಜುಲೈ 4 ರಂದು  ಬಿ.ಸಿ.ರೋಡ್‌ನಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದರು. ಶರತ್ ಬಿ.ಸಿ.ರೋಡ್‌ನ ತನ್ನ  ಲಾಂಡ್ರಿಯಲ್ಲಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಅಪರಿಚಿತರ ತಂಡವೊಂದು ಅಂಗಡಿಗೆ ನುಗ್ಗಿ ಶರತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಅಂತಿಮ […]

ಶರತ್ ಮೇಲಿನ ಕೊಲೆಯತ್ನ ಖಂಡಿಸಿ ಬಿಸಿ ರೋಡ್ ನಲ್ಲಿ ಹಿಂದೂ ಕಾರ್ಯಕರ್ತರಿಂದ ಬ್ರಹತ್ ಪ್ರತಿಭಟನೆ

Friday, July 7th, 2017
Hindu protest

ಬಂಟ್ವಾಳ : ನಿಷೇಧಾಜ್ಞೆ ಇದ್ದರೂ ಹಿಂದೂ ಯುವಕನಿಗೆ ಚೂರಿ ಹಾಕಿ ದುಷ್ಕರ್ಮಿಗಳು ಪರಾರಿಯಾದ ಪ್ರಕರಣವನ್ನು ಖಂಡಿಸಿ  ಹಿಂದೂ ಹಿತ ರಕ್ಷಣಾ ವೇದಿಕೆ ಹಾಗೂ ಹಲವು ಹಿಂದೂ ಸಂಘಟನೆಗಳು ಸಾವಿರಾರು ಸಂಖ್ಯೆಯಲ್ಲಿ ಬಿಸಿ ರೋಡ್ ಬಸ್ ನಿಲ್ದಾಣದ ಬಳಿ ಶುಕ್ರವಾರ  ಪ್ರತಿಭಟನೆ ನಡೆಸಿದರು. ಮಂಗಳವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಎಂಬವರ ಮೇಲೆ ಕೊಲೆಯತ್ನ ಮಾಡಿ ಸಾವು ಬದುಕಿನ ನಡುವೆ ಹೋರಾಟನಡೆಸುತ್ತಿದ್ದು, ಈ ಕೃತ್ಯವನ್ನು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಸಂಸದರಾದ ನಳಿನ್ ಕುಮಾರ್ ಕಟೀಲು ಹಾಗೂ ಶೋಭಾ ಕರಂದ್ಲಾಜೆ, ಕಾರ್ಕಳ […]

ಸಮಾಜಘಾತುಕ ಶಕ್ತಿಗಳ ವಿರುದ್ಧ ಬಿಗಿ ಕಾನೂನು ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ

Friday, July 7th, 2017
CM Siddaramaiah

ಮಂಗಳೂರು :  ಅಡ್ಯಾರ್ ನಲ್ಲಿ  ನಡೆಯುವ ಕಾಂಗ್ರೆಸ್ ಪಕ್ಷದ ಮೈಸೂರ್ ವಿಭಾಗದ  ಪ್ರತಿನಿಧಿಗಳ ಸಮಾವೇಶಕ್ಕೆ ಆಗಮಿಸಿದ ಕರ್ನಾಟಕ ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರೊಂದಿಗೆ ಮಾತನಾಡಿ ಕೆಲವು ಸಮಾಜ ಘಾತುಕ ಶಕ್ತಿಗಳು ಕಾನೂನು ಕೈಗೆತ್ತಿಕೊಳ್ಳುತ್ತಿ ಕೊಂಡು ಜಿಲ್ಲೆಯ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ನಮ್ಮ ಸರ್ಕಾರ ಇದಕ್ಕೆ ಖಂಡಿತ ಅವಕಾಶ ನೀಡುವುದಿಲ್ಲ ಎಂದು  ಹೇಳಿದರು. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುವ ಸಂಘಟನೆ ಸಫಲತೆ ಕಾಣುವುದಿಲ್ಲ, ಸಮಾಜಘಾತುಕ ಶಕ್ತಿಗಳ ವಿರುದ್ಧ ಬಿಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದವರು ಹೇಳಿದರು. ಈ ಸಂದರ್ಭ […]

ಸ್ಕಿಲ್ ಗೇಮ್ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಜೂಜು ಕೇಂದ್ರಕ್ಕೆ ಮಂಗಳೂರು ಮಹಾನಗರ ಪಾಲಿಕೆ ದಾಳಿ

Thursday, July 6th, 2017
silk Game

ಮಂಗಳೂರು : ಜೂಜು ಆಡುವ ಮೂಲಕ ಆಡುವವರು ಮತ್ತು ಆಡಿಸುವವರು ಸುಲಭದಲ್ಲಿ ದುಡ್ಡು ಮಾಡಬಹುದು. ಒಮ್ಮೆ ಜೂಜು ಆಡಲು ಸುರು ಮಾಡಿದರೆ ಮನೆ, ಅಸ್ತಿ ಎಲ್ಲವನ್ನು ಕಳಕೊಂಡೇ ಜನ ಆಟ ನಿಲ್ಲಿಸುವುದು. ಜನರನ್ನು ಸುಲಿಗೆ ಮಾಡುವ ಅಂತಹ ಆಟದ ಅಡ್ಡೆಗಳು ಮಂಗಳೂರಿನಲ್ಲಿ 80 ಕ್ಕೂ ಹೆಚ್ಛೇ ಇದೆ ಎಂದು ಹೇಳಲಾಗಿದೆ. ಅಂತಹ ಜೂಜು ಕೇಂದ್ರಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮಂಗಳೂರಿನ ಮೇಯರ್ ಕವಿತಾಸನಿಲ್  ಗುರುವಾರ ಸಂಜೆ ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಿದರು. ಸಂಜೆ 5 ಗಂಟೆ ಹೊತ್ತಿಗೆ […]