ಭರವಸೆ ಮುರಿದ ಶಾಸಕ ಮೊಯ್ದಿನ್ ಬಾವಾ ಮನೆಗೆ ಡಿವೈಎಫ್‌ಐ ವತಿಯಿಂದ “ಶಾಸಕರ ಮನೆಗೆ ಚಲೋ”

Monday, July 3rd, 2017
dyfi

ಮಂಗಳೂರು : ದ.ಕ. ಜಿಲ್ಲಾ ಡಿವೈಎಫ್‌ಐ  ವತಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ಎದುರಲ್ಲಿ  ಪಂಜಿಮೊಗರು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನೇಮಿಸಲ್ಪಟ್ಟ ‘ಸಿಐಡಿ’ ಬದಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿತು. ಪಂಜಿಮೊಗರು ಬಳಿ ತಾಯಿ ರಝಿಯಾ ಮತ್ತು ಮಗಳು ಫಾತಿಮಾ ಝುವಾ ಎಂಬವರನ್ನು 2011ರ ಜೂ.28ರಂದು ಈ ಕೊಲೆ ಮಾಡಲಾಗಿತ್ತು. ಪ್ರಕರಣ ನಡೆದು  5 ವರ್ಷವಾದರೂ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು. ಐದು ವರ್ಷದಿಂದ  ಡಿವೈಎಫ್‌ಐ ಸಾಕಷ್ಟು ಹೋರಾಟ […]

ಮಂಗಳೂರು ಪ್ರೆಸ್‌‌ ಕ್ಲಬ್‌‌ನಲ್ಲಿ ಪತ್ರಿಕಾ ದಿನಾಚರಣೆ

Saturday, July 1st, 2017
patrika dinacharane

ಮಂಗಳೂರು : ಮಂಗಳೂರಿನ ವರದಿಗಾರರು ರಾಜಧಾನಿಯ ವರದಿಗಾರರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಇಲ್ಲಿನವರು ವಿಭಿನ್ನವಾಗಿ ಯೋಚಿಸುವ ಕೌಶಲ್ಯ ಹೊಂದಿದ್ದಾರೆ ಎಂದು ಬೆಂಗಳೂರು ಪ್ರೆಸ್‌‌ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳೂರು ಪ್ರೆಸ್‌‌ ಕ್ಲಬ್‌‌ನಲ್ಲಿ ಇಂದು ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವರದಿಗಾರರ ಬರಹ ಜನರ ಬದುಕಲ್ಲಿ ಪರಾರಿಣಾಮ ಬೀರುವಂತಿರಬೇಕು. ಸುದ್ದಿಯ ಸತ್ಯಾಸತ್ಯತೆಯನ್ನು ಅರಿತು ಜನರಿಗೆ ಅರ್ಥೈಸುವ ಕೆಲಸವವನ್ನು ವರದಿಗಾರರು ಮಾಡಬೇಕು ಎಂದು ಸಲಹೆ ನೀಡಿದರು. ಮಾಧ್ಯಮಗಳ ಹೊಸ ಆಯಾಮಗಳ ಬಗ್ಗೆ […]

ಅಶ್ರಫ್ ಕಲಾಯಿ ಕೊಲೆ‌ ಪ್ರಕರಣದ ಪ್ರಮುಖ ಆರೋಪಿ ಬಂಧನ

Saturday, July 1st, 2017
Bharath Kumdel

ಮಂಗಳೂರು:  ಬೆಂಜನಪದವು ಎಂಬಲ್ಲಿ  ಎಸ್‌‌‌ಡಿಪಿಐ ಮುಖಂಡ‌ ಅಶ್ರಫ್ ಕಲಾಯಿ ಕೊಲೆ‌ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಭರತ್ ಕುಮ್ಡೇಲ್ನನ್ನು  ಪೊಲೀಸರು ಬಂಧಿಸಿದ್ದಾರೆ. ಭಜರಂಗದಳ ಪುತ್ತೂರು ವಿಭಾಗದ ಸಹಸಂಚಾಲಕ ಭರತ್ ಕುಮ್ಡೇಲ್ ಕಲಾಯಿ ಕೊಲೆ‌ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾಗಿದ್ದು ಇದುವರೆಗೆ ಬಂಧನ ವಾಗಿರಲಿಲ್ಲ. ಈ ಪ್ರಕರಣದಲ್ಲಿ ಒಟ್ಟು  ಆರು ಜನ ಆರೋಪಿಗಳನ್ನು ಬಂಧನವಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ಭರತ್ ಕುಮ್ಡೇಲ್‌ನ ಬಂಧನವಾಗಿದೆ. ಜೂನ್ 21ರಂದು ದ.ಕ ಜಿಲ್ಲೆಯ ಬೆಂಜನಪದವುನಲ್ಲಿ ಅಶ್ರಫ್ ಕೊಲೆ ನಡೆದಿತ್ತು.

ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಬಿ .ಸಿ .ರೋಡ್ ಸರ್ವಿಸ್ ರಸ್ತೆ ದುರಸ್ತಿಗೆ ಆಗ್ರಹ

Saturday, July 1st, 2017
Bantwal Rikshwa

ಬಂಟ್ವಾಳ : ಹೊಂಡ-ಗುಂಡಿಗಳಿಂದ ಆವೃತವಾಗಿ, ಸಂಪೂರ್ಣ ಹದಗೆಟ್ಟಿರುವ ಬಿ .ಸಿ . ರೋಡ್ ಸರ್ವಿಸ್ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಬಿ .ಸಿ . ರೋಡ್ ರಿಕ್ಷಾ ಚಾಲಕ-ಮಾಲಕರು ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ ವಿನೂತನ ರೀತಿಯಲ್ಲಿ ಧರಣಿ ನಡೆಸಿದರು. 8 ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದು,ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಸಂಸದರು, ಜಿಲ್ಲಾ ಡಳಿತ, ರಾಷ್ಟ್ರೀಯ ಹೆzರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸುವ ಮೂಲಕ […]

ಕ್ರೈ ಸ್ತ ಅಭಿವೃದ್ಧಿ ಪರಿಷತ್ ವತಿಯಿಂದ ಟ್ಯಾಕ್ಸಿ ,ಗೂಡ್ಸ್ ವಾಹನ ಖರೀದಿಗೆ ಸಾಲ

Friday, June 30th, 2017
Ivan

ಮಂಗಳೂರು :  ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ನಿಗಮವಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ ಹಾಲಿ ಇರುವ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ ಅಥವಾ ಮಂಡಳಿಯಾಗಿ ಪರಿವರ್ತಿಸುವ ಅಗತ್ಯವಿದೆ. ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿಯ ಜೊತೆ ಸಮಾಲೋಚಿಸಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ. ಈ ಬಾರಿ ಕ್ರೈ ಸ್ತ ಅಭಿವೃದ್ಧಿ ಪರಿಷತ್ ವತಿಯಿಂದ ಟ್ಯಾಕ್ಸಿ ,ಗೂಡ್ಸ್ ವಾಹನ ಖರೀದಿ ಯೋಜನೆ ಸಹಾಯ ಧನದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಈ ಯೋಜನೆಯ ಪ್ರಕಾರ ರೂ. 4ಲಕ್ಷದಿಂದ 7.50ಲಕ್ಷದವರೆಗೆ […]

ಗೋಭಕ್ಷಣೆ ಮಾಡುವವರು ಹಿಂದುಗಳಲ್ಲ : ಮೋಹನ್ ಭಟ್

Friday, June 30th, 2017
Mohan Bhat

ಉಡುಪಿ :  ಗೋಭಕ್ಷಣೆ ಮಾಡುವವರು ಹಿಂದುಗಳಲ್ಲ,  ಹಿಂದೂಗಳು ಗೋಭಕ್ಷಣೆ ಮಾಡುತ್ತಾರೆ ಎಂಬ ಪೇಜಾವರ ಸ್ವಾಮೀಜಿಯ ಹೇಳಿಕೆಯನ್ನು ನಾವು ಒಪ್ಪುದಿಲ್ಲ ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗದ ಕಾರ್ಯದರ್ಶಿ ಮೋಹನ್ ಭಟ್ ತಿಳಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆವರಣದಲ್ಲಿ ನಮಾಝ್ ಮಾಡಲು ಅವಕಾಶ ನೀಡಿರುವುದನ್ನು ವಿರೋಧಿಸಿ ಜು.2ರಂದು ಉಡುಪಿ ಕ್ಲಾಕ್ ಟವರ್‌ಎದುರು ಶ್ರೀಕೃಷ್ಣ ದೇವರಿಗೆ ಪ್ರಾರ್ಥಿಸಿ ಭಜನೆ ಮಾಡುವ ಮೂಲಕ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು. ಮುಸ್ಲಿಮರು ಮಠದ ಆವರಣದಲ್ಲಿ ನಮಾಝ್ ಮಾಡುವ ಮೂಲಕ ಅಶುದ್ಧಿಯಾಗಿರುವ ಶ್ರೀಕೃಷ್ಣ ಮಠದ […]

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ಜುಲೈನಲ್ಲಿ ವಿಶೇಷ ಆಂದೋಲನ, ದ.ಕ. ಜಿಲ್ಲೆಯಲ್ಲಿ 16.37 ಲಕ್ಷ ಮತದಾರರು

Friday, June 30th, 2017
Jagadeesha

ಮ೦ಗಳೂರು : ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗಳಲ್ಲಿ ಹೆಸರು ಬಿಟ್ಟು ಹೋಗಿರುವವರ ಹಾಗೂ 18-21 ವರ್ಷ ಪ್ರಾಯ ತುಂಬಿರುವ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಗಳಲ್ಲಿ ನೋಂದಾಯಿಸುವ ಬಗ್ಗೆ ವಿಶೇಷ ಆಂದೋಲನವನ್ನು ಜುಲೈ 1ರಿಂದ 31ರವರೆಗೆ ಹಮ್ಮಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಪಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 01.01.17 ರ ಅರ್ಹತಾ ದಿನಾಂಕದಂತೆ ಈಗಾಗಲೇ ತಯಾರಿಸಿ ಪ್ರಕಟ ಪಡಿಸಿರುವ ಮತದಾರರ […]

ಶೃಂಗೇರಿ ಭಾರತೀತೀರ್ಥ ಸ್ವಾಮೀಜಿ ಮೂಡುಬಿದಿರೆ ಪುರಪ್ರವೇಶ, ಮೊಕ್ಕಾಂ

Friday, June 30th, 2017
SRINGERI

ಮೂಡುಬಿದಿರೆ: ಶೃಂಗೇರಿ ಶಾರದಾ ಪೀಠಾಧೀಶ ಜಗದ್ಗುರು ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮೀಜಿ, ಅವರ ಶಿಷ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಕೇರಳದಲ್ಲಿ ವಿಜಯಯಾತ್ರೆಯನ್ನು ಮುಗಿಸಿ ಶೃಂಗೇರಿಗೆ ತೆರಳುವ ಸಂದರ್ಭ ಗುರುವಾರ ಮೂಡುಬಿದಿರೆಗೆ ಸಂಜೆ ಮುಡುಬಿದಿರೆ ಪುರಪ್ರವೇಶ ಮಾಡಿದರು. ಯತಿ ಧ್ವಯರನ್ನು ಶಾಸ್ತ್ರೋಕ್ತವಾಗಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸಿನಲ್ಲಿ ಬರಮಾಡಿಕೊಳ್ಳಲಾಯಿತು. ಡಾ.ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಪೌರಸನ್ಮಾನ ಸ್ವೀಖರಿಸಲಿರುವ ಜಗದ್ಗುರು ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮೀಜಿ ಧಾರ್ಮಿಕ ಸಂದೇಶ ನೀಡಿ, ಹಣ ಸಂಪಾದನೆಗಿಂತ ಜ್ಞಾನ ಸಂಪಾದನೆಯೇ […]

ಪುರಭವನದ ಬಾಡಿಗೆ ಶೇ. 50ರಷ್ಟು ಕಡಿತ, ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ

Thursday, June 29th, 2017
MCC

ಮಂಗಳೂರು : ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುರಭವನದ ಬಾಡಿಗೆಯನ್ನು ಪರಿಷ್ಕರಿಸಬೇಕೆಂಬ ಕಲಾವಿದರ ಬೇಡಿಕೆಗೆ ಮಣಿದ ಮೇಯರ್  ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪುರಭವನದ ಮುಂಗಡ ಹಾಗೂ ಬಾಡಿಗೆ ದರವನ್ನು ಭಾರೀ ಕಡಿತಗೊಳಿಸುವ ಮೂಲಕ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದರು. ಆದರೆ ಮೇಯರ್ ಅವರ ಈ ನಿರ್ಧಾರದಿಂದ ಆಡಳಿತ ಪಕ್ಷದ ಸದಸ್ಯರ ಗದ್ದಲ ಹಾಗೂ ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಸಭಾ ತ್ಯಾಗ ಮಾಡಿದರು. ‘ಪುರಭವನದ ದರವನ್ನು ಕಡಿಮೆ ಮಾಡುವಂತೆ ಜೂನ್ 17ರಂದು […]

ಯುವತಿಯ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್‌ ಮಾಡಿ, ಕಣ್ಣ್ ಸನ್ನೆ ಮಾಡಿದ್ದ

Thursday, June 29th, 2017
Rashmi Shetty

ಮಂಗಳೂರು :  ಅಲೋಶಿಯಸ್ ಕಾಲೇಜಿನ ಬಳಿಯಿಂದ ಬಲ್ಮಠವರೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್‌ ಮಾಡಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ, ಕಣ್ಣ್ ಸನ್ನೆ ಮಾಡಿದ್ದ . ಆತ ಆಕೆಯನ್ನೇ ಹಿಂಬಾಲಿಸಿದಾಗ  ಆಕೆ ಆತನ ಸ್ಕೂಟರ್‌ನ ಫೊಟೋ ತೆಗೆದಿದ್ದಳು. ಬಳಿಕ ಅದರಲ್ಲಿದ್ದ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಕೂಟರ್‌ನ ಮಾಲೀಕತ್ವದ ವಿವರಗಳನ್ನು ಶೋಧಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದಳು. ರಶ್ಮಿ ಶೆಟ್ಟಿ ಬೌದ್ಧ ಧರ್ಮದ ಬಗ್ಗೆ ಎಂ.ಎ ಮಾಡುತ್ತಿದ್ದಾಳೆ . ಈಕೆಯ ಪೋಸ್ಟನ್ನು ಲೈಕ್ ಮಾಡಿದ ಮಿತ್ರರು , ಮಂಗಳೂರು ಪೊಲೀಸ್ ಕಮಿಷನರ್ ವಿಳಾಸವನ್ನೂ ಟ್ಯಾಗ್ ಮಾಡಿದ್ದಾರೆ. […]