ಕೊಳವೆ ಬಾವಿ ನಿಷೇಧ ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆದ ಜಿಲ್ಲಾಧಿಕಾರಿ

Thursday, January 19th, 2017
dc-borewell

ಮಂಗಳೂರು:  ಕೊಳವೆ ಬಾವಿ ಕೊರೆಯಲು ಇರುವ ನಿಷೇಧ  ಹಿಂಪಡೆಯಬೇಕು ಎಂದು ವಿನಂತಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ತಿಳಿಸಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿರುವ ವಿಷಯವನ್ನು ಬಹಿರಂಗಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಇಲ್ಲ. ಈ ಭಾಗದಲ್ಲಿ ಕೃಷಿಗಾಗಿ ಯಾವುದೇ ನೀರಾವರಿ ಯೋಜನೆಗಳಿಲ್ಲ. ಅದೇ ರೀತಿ ಕೆಲವೊಂದು ಭಾಗಗಳಿಗೆ ಕೊಳವೆ ಮೂಲಕ ನೀರು ಒದಗಿಸುವ ಯೋಜನೆಗಳೂ ಇಲ್ಲ. ಆದುದರಿಂದ ದಕ್ಷಿಣ ಕನ್ನಡದಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶ ಕಲ್ಪಿಸಬೇಕು ಎಂಬ ಆಗ್ರಹಗಳು ಬಂದಿದ್ದವು ಎಂದು ಅವರು […]

ದಲಿತರು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು : ಆಂಜನೇಯ

Tuesday, January 17th, 2017
Ambedkar Bhavana

ಮಂಗಳೂರು:  ಉರ್ವದಲ್ಲಿ  12 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಅಂಬೇಡ್ಕರ್ ಭವನ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ  ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಮಂಗಳವಾರ ಶಿಲಾನ್ಯಾಸವನ್ನು ನೆರವೇರಿಸಿದರು.’ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ  ಅವರು ಪ್ರಸಕ್ತ ರಾಜ್ಯದಲ್ಲಿ 560 ವಸತಿ ಶಾಲೆಗಳಿವೆ. ಆದರೂ ದಲಿತರು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನೆಲೆಯಲ್ಲಿ ವಸತಿ ಶಾಲೆಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ’ ಎಂದು’ಸಚಿವ ಆಂಜನೇಯ ತಿಳಿಸಿದರು. ಬಡ ಹಾಗೂ […]

ಧರ್ಮಸ್ಥಳದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Tuesday, January 17th, 2017
mass marriage

ಉಜಿರೆ  : ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 4 ರಂದು ಗುರುವಾರ ಸಾಯಂಕಾಲ 6.50ಕ್ಕೆ ಗೋಧೂಳಿ ಲಗ್ನ ಸುಮೂರ್ತದಲ್ಲಿ 46ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ದಿನಾಂಕ 15-01-2017ರಂದು ಬೆಳಿಗ್ಗೆ ಉಚಿತ ಸಾಮೂಹಿಕ ವಿವಾಹಕ್ಕಾಗಿ ಪ್ರತ್ಯೇಕ ಕಚೇರಿಯನ್ನು ವಸಂತ ಮಹಲ್ನ (ಮಂಜಯ್ಯ ಹೆಗ್ಗಡೆ ಕಲಾಭವನ) ಬಲ ಭಾಗದ ಕೊಠಡಿಯಲ್ಲಿ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ 08256-277144 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕಾಗಿ ಅಪೇಕ್ಷೆ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಲ […]

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ : ಡಿ.ವಿ. ಸದಾನಂದ ಗೌಡ

Tuesday, January 17th, 2017
dv sadananda Gowda

ಮಂಗಳೂರು: ಕರ್ನಾಟಕದಲ್ಲಿ ಪಕ್ಷದೊಳಗೆ ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಕೆಲವೊಂದು ಮಂದಿ ಅದನ್ನು ದೊಡ್ಡದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷದ ವರಿಷ್ಠರು ಈ ಸಮಸ್ಯೆಯನ್ನು ಅರ್ಧ ಗಂಟೆಯೊಳಗೆ ಬಗೆಹರಿಸುತ್ತಾರೆ. ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ. ಶೀಘ್ರವೇ ಬಗೆಹರಿಯಲಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು. ಪಂಜಾಬ್‌, ಗುಜರಾತ್‌, ಉತ್ತರಪ್ರದೇಶ, ಗೋವಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ […]

ಮಂಗಳೂರು ಜನತೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಹೊಸ ನಿರ್ಧಾರ

Monday, January 16th, 2017
arabian sea

ಮಂಗಳೂರು: ಸಮರ್ಪಕ ಮಳೆ ಇಲ್ಲದೆ ಈ ಬಾರಿ ಕರಾವಳಿ ಕಂಗೆಟ್ಟಿದೆ. ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ ಕುಡಿಯುವ ನೀರನ್ನು ನಗರದ ಜನತೆಗೆ ನೀಡಲು ಮಂಗಳೂರು ಮಹಾನಗರ ಪಾಲಿಕೆ ಹರಸಾಹಸ ಪಡುತ್ತಿದೆ. ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ನೀರನ್ನು ವರ್ಷಪೂರ್ತಿ ಯಥೇಚ್ಛವಾಗಿ ಬಳಸಲು ಸಾಧ್ಯವಿಲ್ಲ. ಸದ್ಯಕ್ಕೆ ನಗರಕ್ಕೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸನಿಹದಲ್ಲಿಯೇ ಇರುವ ಅಗಾಧ […]

ಬೋರುಕಟ್ಟೆ-ನಾಯರ್‌ಕೋಡಿ ರಸ್ತೆ ಧ್ವಂಸ: ನಾಗರಿಕರಿಂದ ಪ್ರತಿಭಟನೆ

Monday, January 16th, 2017
Protest

ಮಂಗಳೂರು: ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ – ನಾಯರ್ ಕೋಡಿ – ಬಾಜಾವು ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಭೂಮಿಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ನಾಶಪಡಿಸಿ ಪರಿಸರದ ಸುಮಾರು ಎಂಭತ್ತರಿಂದ ನೂರು ಮನೆಯವರಿಗೆ ತೊಂದರೆ ಉಂಟುಮಾಡಿರುವುದನ್ನು ವಿರೋಧಿಸಿ ಇಂದು ಕುತ್ತೆತ್ತೂರಿನ ನಾಯರ್‌ಕೋಡಿ ಬಳಿ ಪ್ರತಿಭಟನೆ ನಡೆಯಿತು. ಈ ರಸ್ತೆಯಲ್ಲಿ ಹೋಗುವ ಹೆಂಗಸರು, ಹಿರಿಯನಾಗರಿಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಕನಿಷ್ಠ ಗೌರವ ಕೊಡುವ ಕೆಲಸವನ್ನೂ ಇಲ್ಲಿ ಕೆಲಸ ಮಾಡುತ್ತಿರುವವರು ಮಾಡುತ್ತಿಲ್ಲ. ಎಲ್ಲಾ ಅಧಿಕಾರಿಗಳು ಯಾವುದೋ […]

ಪಿಎಫ್‌ಐ ವತಿಯಿಂದ 180 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

Monday, January 16th, 2017
PFI

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವತಿಯಿಂದ 180 ಮಂದಿ ವಿದ್ಯಾರ್ಥಿಗಳಿಗೆ 12.93 ಲಕ್ಷ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವೇತನವನ್ನು ಶಾಸಕ ಜೆ.ಆರ್ ಲೋಬೋ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜ್ಞಾನ ಮತ್ತು ವ್ಯಕ್ತಿತ್ವ ವಿಕಸನ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಲಿದ್ದು, ಈ ಎರಡೂ ಅಂಶಗಳಿಂದ ಸಾಮಾಜಿಕ ಸಮಸ್ಯೆಯನ್ನು ಎದರಿಸುವುದರೊಂದಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್‌ಐ ರಾಜ್ಯಾಧ್ಯಕ್ಷ ಶಾಫಿ ಬೆಳ್ಳಾರೆ ವಹಿಸಿದ್ದರು. ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ […]

ಐದು ಮಕ್ಕಳ ತಂದೆಯಿಂದ ನೂರಕ್ಕೂ ಹೆಚ್ಚು ಶಾಲಾ ಬಾಲಕಿಯರ ರೇಪ್

Monday, January 16th, 2017
delhi rapist sunil rasthogi

ಹೊಸದಿಲ್ಲಿ : ಐದು ಮಕ್ಕಳ ತಂದೆಯಾಗಿದ್ದು ವೃತ್ತಿಯಲ್ಲಿ ಟೈಲರ್‌ ಆಗಿರುವ ದಿಲ್ಲಿಯ 38 ವರ್ಷ ಪ್ರಾಯದ ಸುನೀಲ್‌ ರಸ್ತೋಗಿ ಎಂಬಾತ ತಾನು ಕಳೆದ 14 ವರ್ಷಗಳಲ್ಲಿ ನೂರಾರು ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ ಆನಂದಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಆತ ನಡೆಸಿರುವ ಮೂರು ಲೈಂಗಿಕ ಕಿರುಕುಳ ಕೃತ್ಯಕ್ಕೆ ಸಂಬಂಧಿಸಿದಂತೆ ಆತನನ್ನು ಪೊಲಿಸರು ಸೆರೆ ಹಿಡಿದಿದ್ದು ತನಿಖೆಯ ವೇಳೆ ಆತ ತನ್ನ ಕಾಮುಕ ಚರಿತ್ರೆಯನ್ನು ಬಿಚ್ಚಿಟ್ಟಿದ್ದಾನೆ. ಆರೋಪಿ ರಸ್ತೋಗಿಯು ಕಳೆದ ಹಲವಾರು ವರ್ಷಗಳಲ್ಲಿ ಶಾಲಾ […]

ಕಲಾ ಪೋಷಕರಿಂದ ಕಲೆ ವಿಸ್ತಾರಗೊಂಡು ಬಹುಮುಖಿ ವ್ಯಾಪ್ತಿ ಪಡೆದಿದೆ : ಚಂಬಲ್ತಿಮಾರ್

Monday, January 16th, 2017
chambaltimar

ಬದಿಯಡ್ಕ: ರಂಗ ಪ್ರಸ್ತುತಿಯ ಪ್ರತಿಭೆಯನ್ನು ಗುರುತಿಸಿ ಕಲಾವಿದನನ್ನು ಅಳೆಯಬೇಕೇ ಹೊರತು ಬೇರೊಂದು ದೃಷ್ಟಿಯಿರಬಾರದು. ಅಂತಹ ವ್ಯಕ್ತಿತ್ವಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದಾರತೆ ಕಲಾಪೋಷಕರಿಗಿರಬೇಕು. ಕಲಾ ಪೋಷಕರಿಂದ ಕಲೆ ವಿಸ್ತಾರಗೊಂಡು ಬಹುಮುಖಿ ವ್ಯಾಪ್ತಿ ಪಡೆಯುತ್ತದೆಯೆಂದು ಕಣಿಪುರ ಯಕ್ಷಗಾನ ಮಾಸಿಕದ ಸಂಪಾದಕ ಎಂ.ನಾ ಚಂಬಲ್ತಿಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ನೀರ್ಚಾಲಿನ ದಿ.ಪರಮೇಶ್ವರ ಆಚಾರ್ಯ ಸ್ಮಾರಕ ಕಲಾ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ಅಪರಾಹ್ನ ನೀರ್ಚಾಲು ಶ್ರೀ ಕುಮಾರ ಸ್ವಾಮಿ ಸಭಾಂಗಣದಲ್ಲಿ ನಡೆದ ಪರಮೇಶ್ವರ ಆಚಾರ್ಯರ 14ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ, ಅಭಿನಂದನಾ ಕಾರ್ಯಕ್ರಮದಲ್ಲಿ […]

ಕತ್ತಲ್‌ಸಾರ್‌ ಬಳಿ ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು

Monday, January 16th, 2017
Cow-calf

ಮಂಗಳೂರು: ಮಂಗಳೂರಿನ ಬಜ್ಪೆ ಸಮೀಪದ ಕತ್ತಲ್‌ಸಾರ್‌ನ ಗುರುಂಪೆ ನಿವಾಸಿ ಹೇಮನಾಥ ಶೆಟ್ಟಿ ಎಂಬುವರ ಮನೆಯಲ್ಲಿ ಹಸುವೊಂದು ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರುವೊಂದಕ್ಕೆ ಜನ್ಮ ನೀಡಿದೆ. 8 ವರ್ಷಗಳ ಹಿಂದೆ ತಂದ ದನವೊಂದು ಎರಡು ಬಾರಿ ಕರು ಹಾಕಿದ್ದು, ಇದೀಗ ಶುಕ್ರವಾರದಂದು ಮೂರನೇ ಕರುವಿಗೆ ಜನ್ಮ ನೀಡಿದೆ. ಆದರೆ ಈ ಕರುವಿಗೆ ಎರಡು ತಲೆ, ನಾಲ್ಕು ಕಣ್ಣು, ಮೂರು ಕಿವಿಗಳಿದ್ದು, ಒಂದೇ ದೇಹವಿದೆ. ಎರಡೂ ತಲೆಯ ಭಾಗ ಕೂಡಿಕೊಂಡಿದೆ. ಕರುವಿಗೆ ಬಾಟಲ್ ಮೂಲಕ ಮನೆಯವರು ಹಾಲುಣಿಸುತ್ತಿದ್ದಾರೆ. […]