ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಕಚೇರಿ, 3 ವಲಯ ಕಚೇರಿ ರಚನೆ ನಿರ್ಣಯ

Tuesday, September 27th, 2016
MCC

ಮಂಗಳೂರು: ಮಹಾನಗರ ಪಾಲಿಕೆಗೆ ಕೊನೆಗೂ ಕೇಂದ್ರ ಕಚೇರಿ ಹಾಗೂ ಮೂರು ವಲಯ ಕಚೇರಿಗಳನ್ನು ರಚನೆ ಮಾಡಲಾಗಿದೆ. ವಲಯ 1ರ ಕಚೇರಿಯನ್ನು ಸುರತ್ಕಲ್‌ನಲ್ಲಿ ಆರಂಭಿಸಿ, ವಲಯ-2 ಮತ್ತು 3ನ್ನು ಪಾಲಿಕೆಯ ಕೇಂದ್ರ ಕಚೇರಿಯಲ್ಲೇ ಉಳಿಸುವ ಮಹತ್ವದ ನಿರ್ಣಯವನ್ನು ವಿಶೇಷ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅ.15ರಿಂದ ಈ ವಲಯ ಕಚೇರಿಗಳು ಕಾರ್ಯಾರಂಭಿಸಲಿವೆ ಎಂದು ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ. ಸುರತ್ಕಲ್ ವಲಯಕ್ಕೆ ಸೇರುವ 12 ವಾರ್ಡ್‌ಗಳ ನಾಗರಿಕರು ಇನ್ನು ಮುಂದೆ ನಿಗದಿತ ಸೇವೆಗಳನ್ನು ಪಡೆಯಲು ಪಾಲಿಕೆಯ ಕೇಂದ್ರ ಕಚೇರಿಗೆ ಬರಬೇಕೆಂದಿಲ್ಲ. ಅಲ್ಲಿಯೇ […]

ಕಾರು ಅಪಘಾತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ 5 ಮಂದಿಗೆ ಗಾಯ

Tuesday, September 27th, 2016
car-

ಕಾಸರಗೋಡು: ಕಾರು ನಿಯಂತ್ರಣ ತಪ್ಪಿ ಮಗುಚಿ ಸಂಭವಿಸಿದ ಅಪಘಾತದಲ್ಲಿ ಬಿಜೆಪಿ ನೇತಾರರು ಗಾಯಗೊಂಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಉದುಮ ಮಂಡಲ ಕಾರ್ಯದರ್ಶಿ ದಿಲೀಪ್ ಕುಮಾರ್, ಕಾಸರಗೋಡು ಮಂಡಲ ಅಧಕ್ಷ ಸುಧಾಮ ಗೋಸಾಡ, ಅಡೂರಿನ ಪ್ರದೀಪ್, ಚಾಲಕ ಕುಂಬಳೆಯ ಗುರುಪ್ರಸಾದ್ ಎಂಬವರು ಗಾಯಗೊಂಡಿದ್ದಾರೆ. ಇವರನ್ನು ವಿದ್ಯಾನಗರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೋಮವಾರ ಮುಂಜಾನೆ 4 ಗಂಟೆ ವೇಳೆ ಪಳ್ಳಿಕೆರೆ ಚೇಟುಕುಂಡ್ ಎಂಬಲ್ಲಿ ಅಪಘಾತ ಸಂಭವಿಸಿದೆ. ಕಲ್ಲಿಕೋಟೆಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪರಿಷತ್ ಸಮಾವೇಶದಲ್ಲಿ ಭಾಗವಹಿಸಿ ಶ್ರೀಕಾಂತ್ ಹಾಗೂ ಮತ್ತಿತರರು […]

ಸೆ.27ರಂದು ಮರಳು ಸಾಗಾಟ ಲಾರಿಗಳೊಂದಿಗೆ ಪ್ರತಿಭಟನೆ: ಅನಿಲ್ ದಾಸ್

Monday, September 26th, 2016
sand-mafia

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದ ಕಾರಣಕ್ಕೆ ಅಕ್ರಮ ಮರಳುಗಾರಿಕೆ ಮಿತಿ ಮೀರುತ್ತಿದೆ. ಮರಳು ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಸೆ.27ರಂದು 12ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮರಳು ಸಾಗಾಟ ಲಾರಿಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ದಾಸ್ ತಿಳಿಸಿದ್ದಾರೆ. ಕಟ್ಟಡ ನಿರ್ಮಿಸಲು ಜನರಿಗೆ ಮರಳು ಸಿಗುತ್ತಿಲ್ಲ. ಇದರಿಂದ ಬಡವರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅತ್ತ ಮರಳು ಮಾಫಿಯಾದ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ […]

ನವರಾತ್ರಿ ಸಂದರ್ಭ 4 ದಿನಗಳ ಕಾಲ ಅರಮನೆ ಪ್ರವೇಶಕ್ಕೆ ನಿರ್ಬಂಧ

Monday, September 26th, 2016
mysore-aramane

ಮೈಸೂರು: ನವರಾತ್ರಿಯಲ್ಲಿ ರಾಜವಂಶಸ್ಥರಿಂದ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ. ಅ. 1ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಖಾಸಗಿ ದರ್ಬಾರ್ ಹಾಗೂ ಇತರ ಪೂಜಾ ಕೈಂಕರ್ಯಗಳು ನಡೆಯಲಿವೆ. ಹಾಗಾಗಿ ಅರಮನೆ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, 2.30ರ ನಂತರ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಪ್ರವೇಶವಿರುತ್ತದೆ. ಅಕ್ಟೋಬರ್ 10ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಅರಮನೆಯಲ್ಲಿ ಆಯುಧ ಪೂಜೆ ನಡೆಯಲಿದ್ದು, 1.30ರ […]

ಬುದ್ಧಿಮಾಂದ್ಯ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ: ಸಚಿವೆ ಉಮಾಶ್ರೀ

Monday, September 26th, 2016
mythri-mahotsava

ಮೈಸೂರು: ಬುದ್ಧಿಮಾಂದ್ಯ ಮಕ್ಕಳಿಗೆ ಅನುಕಂಪಕ್ಕಿಂತ ಸಮಾಜದಲ್ಲಿ ಹೇಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದರ ಮಹತ್ವವನ್ನು ತಿಳಿಸಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದರು. ಮಾನಸ ಗಂಗೋತ್ರಿಯಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈತ್ರಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ವತಿಯಿಂದ ಏರ್ಪಡಿಸಲಾಗಿದ್ದ ಮೈತ್ರಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧಿಮಾಂದ್ಯ ಮಕ್ಕಳು ಇತರೆ ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಬುದ್ಧಿಮಾಂದ್ಯ ಮಕ್ಕಳು ಹಲವು ಕ್ಷೇತ್ರಗಳಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಅನೇಕ ನಿದರ್ಶನಗಳಿವೆ. ಆದರೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ […]

ಗೋವಿನ ಮಹತ್ವವನ್ನು ಮನೆಮನೆಗೆ ತಲುಪಿಸಿ ಜನಜಾಗೃತಿ ಮೂಡಿಸುವುದರಿಂದ ಗೋರಕ್ಷಣೆ ಸಾಧ್ಯ: ಸಿದ್ಧಾರ್ಥ ಗೋಯೆಂಕಾ

Monday, September 26th, 2016
siddartha-goyenka

ಉಡುಪಿ: ಗೋವಿನೊಂದಿಗಿರುವ ಭಾವನಾತ್ಮಕ ಸಂಬಂಧದ ಜೊತೆಗೆ ಗೋವಿನಿಂದ ಸಿಗುವ ವಾಣಿಜ್ಯ ಉಪಯೋಗ ಹಾಗೂ ಔಷಧಿಯುಕ್ತ ವಸ್ತುಗಳ ಮಹತ್ವವನ್ನು ಮನೆಮನೆಗೆ ತಲುಪಿಸಿ ಜನಜಾಗೃತಿ ಮೂಡಿಸುವುದರಿಂದ ಗೋರಕ್ಷಣೆ ಸಾಧ್ಯ ಎಂದು ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ಹೇಳಿದರು. ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜರುಗಿದ ಗೋಸಂರಕ್ಷಣಾ ಪ್ರಕೋಷ್ಠದ ಸಭೆ ಉದ್ದೇಶಿಸಿ ಮಾತನಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿಯಂತ್ರಿಸಬೇಕು ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ […]

ಭಜನೆ ಮೂಲಕ ಆಂತರಿಕ ಹಾಗೂ ಬಾಹ್ಯ ಉನ್ನತಿ ಮಾಡಿ ಆತ್ಮೋನ್ನತಿ ಸಾಧಿಸಬಹುದು: ಪ್ರಮೋದ್‌ ಮಧ್ವರಾಜ್‌

Monday, September 26th, 2016
pramod-madhwaraj

ಬೆಳ್ತಂಗಡಿ: ರಕ್ತವನ್ನು ಬೆವರಾಗಿಸಿ ಕುಣಿದು ಭಜಿಸುವ ಸೇವೆಗೆ ಭಜನೆಯಲ್ಲಿ ಮಾತ್ರ ಅವಕಾಶ ಇರುವುದು. ಭಜನೆ ಮೂಲಕ ಆಂತರಿಕ ಹಾಗೂ ಬಾಹ್ಯ ಉನ್ನತಿ ಮಾಡಿ ಆತ್ಮೋನ್ನತಿ ಸಾಧಿಸಬಹುದು ಎಂದು ಯುವಜನ, ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಅವರು ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ವತಿಯಿಂದ ನಡೆದ 18ನೇ ವರ್ಷದ ಭಜನ ತರಬೇತಿ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವದಲ್ಲಿ ಮಾತನಾಡಿದರು. ಅನನ್ಯ ಭಕ್ತಿಯಿಂದ ಮಾತ್ರ ಮನದ ಪರಿವರ್ತನೆ ಸಾಧ್ಯ. ದೇವರ ಓಲೈಕೆಗೆ […]

“ಮುಂಗಾರು ಮಳೆ 2′ ಚಿತ್ರದ ನಾಯಕಿ ನೇಹಾ ಶೆಟ್ಟಿ ಮಂಗಳೂರಿನಲ್ಲಿ

Monday, September 26th, 2016
nehashetty

ಮಂಗಳೂರು:  “ಮುಂಗಾರು ಮಳೆ 2′ ಚಿತ್ರದ ನಾಯಕಿ ಕರಾವಳಿಯ 19ರ ಹರೆಯದ ನೇಹಾ ಶೆಟ್ಟಿ. ಶನಿವಾರ ನಗರದ ಸಿನೆಪೊಲಿಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರವಿಚಂದ್ರನ್‌ ಅವರ ಎದುರುನಟಿಸಲು ನಿಜಕ್ಕೂ ನನಗೆ ನರ್ವಸ್‌ ಆಗಿತ್ತು. ಆದರೆ ಅವರು ನನ್ನ ಜತೆ ಅತ್ಯಂತ ವಿನಯ ಹಾಗೂ ಆತ್ಮೀಯತೆಯಿಂದ ಧೈರ್ಯ ತುಂಬುವ ಮೂಲಕ ಸ್ಫೂರ್ತಿ ನೀಡಿದರು. ಅವರ ಜತೆಗಿನ ನಟನೆ ಅದ್ಭುತ ಅನುಭವ ಎಂದರು. ಗಣೇಶ್‌ ಅಭಿನಯದ ಮುಂಗಾರು ಮಳೆ ಚಿತ್ರ ಬಿಡುಗಡೆಯಾದ ಸಂದರ್ಭ ನಾನು ಶಾಲೆಗೆ ಹೋಗುತ್ತಿದ್ದ ನೆನಪು. ಅದರ ಮೊಲ ನನಗೆ ತುಂಬಾ […]

ಸಾಧಕರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2015ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ

Monday, September 26th, 2016
tulu academy award

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 2015ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಶನಿವಾರ  ತುಳು ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಡಾ.ಇಂದಿರಾ ಹೆಗ್ಡೆ (ತುಳು ಸಾಹಿತ್ಯ ಮತ್ತು ಸಂಶೋಧನೆ), ಕೋಟಿ ಪರವ (ತುಳು ಜಾನಪದ) ಹಾಗೂ ಬೇತ ಕುಂಞ ಕುಲಾಲ್ (ತುಳು ಯಕ್ಷಗಾನ) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ 2015ನೇ ಸಾಲಿನ ಗೌರವ ಪ್ರಶಸ್ತಿ ಸ್ವೀಕರಿಸಿದರು. 2015ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯಡಿ ತುಳು ಕಥಾ ವಿಭಾಗದಲ್ಲಿ `ಗುತ್ತುದಿಲ್ಲದ […]

ಚಿಲ್ಲರೆ ವಿವಾದ ನದಿಗೆ ಹಾರಿದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ

Monday, September 26th, 2016
devadas

ಸುಬ್ರಹ್ಮಣ್ಯ: ಬಸ್‌ನಲ್ಲಿ ಪ್ರಯಾಣಿಸುತಿದ್ದ ಯುವತಿಯೊಬ್ಬಳು ಚಿಲ್ಲರೆ ಹಣ ವಿಚಾರವಾಗಿ ಬಸ್ ಕಂಡಕ್ಟರ್ ಜತೆ ನಡೆಸಿದ ವಿವಾದಕ್ಕೆ ಸಂಬಂದಿಸಿ ಮನನೊಂದ ಬಸ್ ಕಂಡಕ್ಟರ್ ಚಲಿಸುತಿದ್ದ ಬಸ್‌ನಿಂದ ನದಿಗೆ ಹಾರಿದ ಘಟನೆ ರವಿವಾರ ಸುಬ್ರಹ್ಮಣ್ಯದ ಕುಮಾರಧಾರದಲ್ಲಿ ಸಂಭವಿಸಿದೆ. ಕುಮಾರಧಾರ ನದಿನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಮಂಗಳೂರಿನ ಗುರುಪುರ ಕೈಕಂಬ ದೇವದಾಸ್(41) ಆಗಿದ್ದಾರೆ. ಮಂಗಳೂರು ಸಾರಿಗೆ ಸಂಸ್ಥೆಯ ಒಂದನೆ ಘಟಕಕ್ಕೆ ಸೇರಿದ ಬಸ್‌ನಲ್ಲಿ ದೇವದಾಸ್ ನಿರ್ವಾಹಕ ಕರ್ತವ್ಯದಲ್ಲಿದ್ದ. ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 6.30 ಕ್ಕೆ ಹೊರಟು ಉಪ್ಪಿನಂಗಡಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ […]