ಹರಿಕೃಷ್ಣ ಬಂಟ್ವಾಳ್ ರನ್ನು ಕಡೆಗಣಿಸಿದ ಕಾಂಗ್ರೆಸ್ ಗೆ ತಕ್ಕ ಪಾಠ

Saturday, December 26th, 2015
Harikrishna Bantwal

ಮಂಗಳೂರು : ಒಬ್ಬ ಸ್ವಾಭಿಮಾನಿ ನಾಯಕ ತನ್ನ ಬದುಕಿನ ಬಹಳ ಪ್ರಮುಖ ಕಾಲಘಟ್ಟದ 43 ವರ್ಷಗಳನ್ನು ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಶ್ರಮಿಸಿದ ಬಳಿಕವೂ ಆ ಪಕ್ಷ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಸುವರ್ಣಯುಗದಲ್ಲಿ ಇರುವಾಗಲೂ ಯಾವ ಅಧಿಕಾರ, ಸ್ಥಾನಮಾನ ಪಡೆದಿಲ್ಲ ಎಂದರೆ ಅದಕ್ಕಿಂತ ಆಶ್ಚರ್ಯ ಬೇರೆ ಇಲ್ಲ. ಅಂತಹ ವ್ಯಕ್ತಿಗಳು ಪಕ್ಷದಲ್ಲಿ ಇರ‍್ತಾರಾ ಎನ್ನುವುದು ಒಂದು ಕಡೆಯಾದರೆ ಅಂತಹ ಒಬ್ಬ ಸಕ್ರಿಯ ಕಾರ್ಯಕರ್ತನನ್ನು ಆ ಪರಿ ದುಡಿಸಿದ ಬಳಿಕವೂ ಆತನ ರಾಜಕೀಯ ಬದುಕಿನಲ್ಲಿ ಆತನಿಗೆ ಏನೂ ಮಾಡದ ಪಕ್ಷವೊಂದಿದೆ […]

ಜೆಡಿಎಸ್ ಅಭ್ಯರ್ಥಿ ಪ್ರವೀಣಚಂದ್ರ ಜೈನ್ ಗೆಲ್ಲಲು ಸರ್ವಪ್ರಯತ್ನ

Saturday, December 26th, 2015
Praveenchandra jain

ಮಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ಕಪ್ಪುಕುದುರೆ ಎಂದೇ ಪರಿಗಣಿತವಾಗಿರುವ ಹೆಸರೇ ಪ್ರವೀಣ್ ಚಂದ್ರ ಜೈನ್. ಸ್ವತ: ಕೃಷಿಕರೂ ಆಗಿರುವ ಉದ್ಯಮಿ ಜೈನ್ ಅವರಿಗೆ ತಾನು ಗೆಲ್ಲುವ ವಿಶ್ವಾಸ ಚುನಾವಣೆ ಹತ್ತಿರಬರುತ್ತಿದ್ದಂತೆ ದಟ್ಟವಾಗಿದೆ. ದ್ವೀತಿಯ ಪ್ರಾಶಸ್ತ್ಯದ ಮತಗಳನ್ನು ಯಾರಿಗೂ ಹಾಕಬೇಡಿ ಎನ್ನುವುದನ್ನು ಒತ್ತಿ ಹೇಳುವ ರಾಜಕೀಯ ಪಕ್ಷಗಳ ಧೋರಣೆಯನ್ನು ಖಂಡಿಸಿರುವ ಪ್ರವೀಣ್ ಚಂದ್ರ ಜೈನ್ ಅವರಿಗೆ ಎಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳು ಸಿಗುವುದಿಲ್ಲವೋ ಅಲ್ಲಿ ದ್ವೀತಿಯ ಪ್ರಾಶಸ್ತ್ಯದ ಮತಗಳ ಮೇಲೆ ಕಣ್ಣು ಇದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಕೆಲವು […]

ಊರಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬೇಕಾದರೆ ಅಲ್ಲಿನ ದೇವಸ್ಥಾನ ಅಭಿವೃದ್ಧಿಯಾಗಬೇಕು : ಲಕ್ಷ್ಮೀನಾರಾಯಣ ಆಸ್ರಣ್ಣ

Saturday, December 26th, 2015
Thoudugoli Temple Foundation stone laying ceremony

ಮಂಗಳೂರು : ಒಂದು ಊರು ಒಳ್ಳೆಯದಾಗಬೇಕಾದರೆ, ಸುಖ ಶಾಂತಿ, ನೆಮ್ಮದಿ ಕಾಣಬೇಕಾದರೆ ಆ ಊರಿನ ದೇವಸ್ಥಾನ ಅಭಿವೃದ್ಧಿಯಾಗಬೇಕು. ಒಂದು ಊರಿನ ಶ್ರೀಮಂತಿಕೆಯನ್ನು ಅಳೆಯಲು ಅಲ್ಲಿನ ದೇವಸ್ಥಾನವೊಂದೇ ಸಾಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಅಭಿಪ್ರಾಯಪಟ್ಟರು. ಅವರು ಡಿಸೆಂಬರ್ 24, ಗುರುವಾರದಂದು ತೌಡುಗೋಳಿಯ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರಗಳ ಪುನರ್ ನವೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ದುಡ್ಡಿದ್ದರೆ […]

ರೈಲು ಯಾನದಲ್ಲಿ ಅನಾಗರಿಕ ವರ್ತನೆ ಬೇಡ:ಶಿಮಂತೂರು ಉದಯ ಶೆಟ್ಟಿ

Saturday, December 26th, 2015
Konkan-Rail

ಮುಂಬಯಿ : ರತ್ನಗಿರಿಯಲ್ಲಿ ಮತ್ಸ ಗಂಧ ರೈಲ್ವೇ ಘಟನೆ ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಮತ್ತು ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ತೀವ್ರವಾಗಿ ಖಂಡಿಸಿದೆ. ಕಳೆದ ಬುಧವಾರ ತಡರಾತ್ರಿ ಕುರ್ಲಾ ಸಿಎಸ್‌ಟಿಯಿಂದ ಮಂಗಳೂರುಗೆ ಮತ್ಸ ಗಂಧ ರೈಲಿನ ಬೋಗಿ ಸಂಖ್ಯೆ ಎಸ್9ರಲ್ಲಿ ಪ್ರಯಾಣಿಸುತ್ತಿದ್ದ ಅಜಿತ್‌ಕುಮಾರ್ ಶೆಟ್ಟಿ ಕುಟುಂಬದ ಮೇಲೆ ಕಿಡಿಗೇಡಿಗಳು ನಡೆಸಿದ ಪುಂಡಾಟಿಕೆ, ಹಲ್ಲೆ ಮತ್ತು ಕಳವು ಯತ್ನವನ್ನು ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ, […]

ಸಾಂಸ್ಕೃತಿಕ ಉತ್ಸವಗಳಿಂದ ಕನ್ನಡ ಭಾಷೆ ಬಗ್ಗೆ ಅಭಿಮಾನ, ಕಾಸರಗೋಡು-ಕರ್ನಾಟಕ ಉತ್ಸವದಲ್ಲಿ ಆರ್ ಕೆ.ಉಳಿಯತ್ತಡ್ಕ

Saturday, December 26th, 2015
kannada Utsava

ಕಾಸರಗೋಡು: ಗಡಿ ಪ್ರದೇಶ ಕಾಸರಗೋಡಿನಲ್ಲಿ ಸಾಂಸ್ಕೃತಿಕ ಉತ್ಸವಗಳ ಮೂಲಕ ಕನ್ನಡ ಭಾಷೆಯ ಬಗೆಗಿನ ಅಭಿಮಾನ ಮೂಡುವ ಜೊತೆಗೆ ಭಾಷೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಪತ್ತು ಕಾಸರಗೋಡಿನಲ್ಲಿ ಅನಾವರಣಗೊಳಿಸುವ ಮೂಲಕ ಇಲ್ಲಿನ ಕನ್ನಡಿಗರಿಗೆ ಹೊಸ ಅನುಭವ ನೀಡುತ್ತದೆ. ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುತ್ತದೆ ಎಂದು ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ 25 ನೇ ವರ್ಷಾಚರಣೆಯ ಅಂಗವಾಗಿ ವಿ.ಕೆ.ಎಂ. ಕಲಾವಿದರು ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ […]

ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಸಾಮಾಜಿಕ ಬದ್ಧತೆ ಇರಬೇಕು: ಶಾಸಕ ಕೆ.ಕುಂಞಿರಾಮನ್

Saturday, December 26th, 2015
Bovikana

ಕಾಸರಗೋಡು: ಶಿಕ್ಷಣ ಕೇವಲ ಉದ್ಯೋಗಕಕ್ಕಾಗಿ ಮಾತ್ರವಲ್ಲ ಸಮಾಜದ ಉನ್ನತಿಗೆ, ಕುಟುಂಬದ ಒಳತಿಗೆ ಸಾಮಾಜಿಕ ಬದ್ದತೆ ಇರಬೇಕು ಎಂದು ಉದುಮ ಶಾಸಕ ಕೆ.ಕುಂಞಿರಾಮನ್ ಹೇಳಿದರು. ಅವರು ಬೋವಿಕ್ಕಾನ ಸೌರ್ಪಾಣಿಕ ಸಭಾಂಗಣದಲ್ಲಿ ನಡೆದ ಅಖಿಲ ಕೇರಳ ಯಾದವ ಸಭಾದ ಆಶ್ರಯದಲ್ಲಿ ಸಾರಥಿ ಯುಎಇ ಶೈಕ್ಷಣಿಕ ನಗದು ಪುರಸ್ಕಾರ ವಿತರಣೆ ಕಾಸರಗೋಡು ತಾಲೂಕಿನ ತ್ರಿಸ್ತರ ಪಂಚಾಯಿತಿಗಳಿಗೆ ಆಯ್ಕೆಯಾದ ಸಮುದಾಯದ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಯಾದವ ಸಭಾದ ವೆಬ್‌ಸೈಟ್ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ತಲೆಮಾರು ಜಾತಿ ಸಂಪ್ರದಾಯವನ್ನು ತೊಡೆದು […]

ಕುತ್ಯಾಳ ಸಂತಾನ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಪುತ್ರಕಾಮೇಷ್ಠಿ ಯಾಗ, ಧನ್ವಂತರಿ ಹವನ

Saturday, December 26th, 2015
Kutyala

ಕಾಸರಗೋಡು: ಭಾರತೀಯ ಸಂಸ್ಕೃತಿ,ಪರಂಪರೆಯ ಆಚರಣೆ ಹಾಗೂ ನಂಬಿಕೆಗಳು ತಾತ್ವಿಕವಾಗಿ ವೈಜ್ಞಾನಿಕ ಹಿನ್ನೆಲೆಯ ಮಹತ್ವ ಹೊಂದಿರುವುದರಿಂದ ಪ್ರಕೃತಿಗೆ ಹತ್ತಿರವಾಗಿದೆ.ಆದರೆ ಇಂದಿನ ಪರಿಸ್ಥಿತಿಯಲ್ಲಿ ಕ್ಷಣಿಕ ವಿಷಯಾಸಕ್ತತೆಯ ಮೋಹಕ್ಕೊಳಗಾಗಿ ನಮ್ಮ ಪರಂಪರೆಯ ತತ್ವ,ನಿಷ್ಠೆ,ನಂಬಿಕೆಗಳಿಗೆದುರಾಗಿ ವರ್ತಿಸುವ ಕಾರಣ ಅಸಮತೋಲನಗಳು,ದುಖಃ ನಮ್ಮನ್ನು ಹಿಂಬಾಲಿಸುತ್ತಿರುವುದರ ಬಗ್ಗೆ ಜಾಗೃತರಾಗಬೇಕಾಗ ಅಗತ್ಯವಿದೆಯೆಂದು ಹಿಂದೂ ಐಕ್ಯವೇದಿಯ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೂಡ್ಲು ಕುತ್ಯಾಳ ಸಂತಾನ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ನಡೆದ ಅತ್ಯಪೂರ್ವ ಪುತ್ರಕಾಮೇಷ್ಠಿ ಯಾಗ ಹಾಗೂ ಧನ್ವಂತರಿ ಹವನದ ಸಮಾರೋಪ ಕಾರ್ಯಕ್ರಮದಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ […]

ಮಾತು ಪಾಲಿಸದ ಕೇರಳ ಸರ್ಕಾರ : ಅನಿಶ್ಚಿತತೆಯಲ್ಲಿ ಎಂಡೋ ಸಂತ್ರಸ್ತೆಯ ವೈದ್ಯಕೀಯ ಶಿಕ್ಷಣ

Saturday, December 26th, 2015
Endow

ಕಾಸರಗೋಡು: ಎಂಡೋ ದುಷ್ಪರಿಣಾಮದ ವಿರುದ್ಧ ಹೋರಾಟ ನಡೆಸಿ, ಇದೀಗ ಉನ್ನತ ಶಿಕ್ಷಣದ ಕನಸುಹೊತ್ತಿರುವ ಶ್ರುತಿಗೆ ಸರ್ಕಾರ ನೀಡಿರುವ ಭರವಸೆ ಇನ್ನೂ ಈಡೇರಿಲ್ಲ. ಬಡತನದಲ್ಲೇ ಬೆಳೆದು, ವೈದ್ಯೆಯಾಗಬೇಕೆಂಬ ದೀರ್ಘ ಕಾಲದ ಕನಸಿಗೆ ಕೇರಳ ಸರ್ಕಾರ ಎಳ್ಳುನೀರು ಬಿಡುವ ಸನ್ನಾಹದಲ್ಲಿದೆ. ಹೋಮಿಯೋಪತಿ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡಿರುವ ಶ್ರುತಿ ಅವರಿಗೆ ಕೇರಳ ಮುಖ್ಯಮಂತ್ರಿ ನಾಲ್ಕು ತಿಂಗಳ ಹಿಂದೆ ವೈದ್ಯಕೀಯ ಶಿಕ್ಷಣದ ಖರ್ಚುವೆಚ್ಚ ಭರಿಸುವ ಭರವಸೆ ನೀಡಿದ್ದು, ಆಶಾಭಾವನೆಯಿಂದ ಶ್ರುರಿಂದಿಗೂ ಇದಿರುನೋಡುತ್ತಿದ್ದಾರೆ. ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ಪಡ್ರೆ ವಾಣೀನಗರದ ಕುಗ್ರಾಮವೊಂದರಲ್ಲಿ ಎಂಡೋ ದುಷ್ಪರಿಣಾಮಕ್ಕೆ […]

ಉಚಿತ ವೈದ್ಯಕೀಯ ಶಿಬಿರ, ಕುಟುಂಬಕ್ಕೆ ಧನ ಸಹಾಯ

Friday, December 25th, 2015
Hosangady Medical camp

ಮಂಜೇಶ್ವರ: ಚಕ್ರವರ್ತಿ ಆರ್ಟ್ಸ್ ಮತ್ತು ಸ್ಪೋರ್ಟ್ ಕ್ಲಬ್ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವು ಹೊಸಂಗಡಿ ಎಲ್.ಪಿ. ಶಾಲೆಯಲ್ಲಿ ನಡೆಯಿತು. ಕೆ.ಎಂ.ಸಿ. ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಶಿಬಿರವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರ ಠಾಣಾಧಿಕಾರಿ ಪಿ.ಪ್ರಮೋದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹರೀಶ್ ಮಜಲ್ ಅಧ್ಯಕ್ಷತೆ ವಹಿಸಿದರು. ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಆಶಾಲತಾ, ಕೆ.ಆರ್.ಜಯಾನಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರೈಲು ಅಪಘಾತದಲ್ಲಿ ಸಾವಿಗೀಡಾದ ಚಕ್ರವರ್ತಿ ಕ್ಲಬ್‌ನ ಸದಸ್ಯರಾಗಿದ್ದ ಮೋಹನ್‌ದಾಸ್ ಕುಟುಂಬಕ್ಕೆ ಐವತ್ತು ಸಾವಿರ ರೂ. ಧನಸಹಾಯವನ್ನು […]

ಬೇಳ ಶೋಕಮಾತ ಪುಣ್ಯಕ್ಷೇತ್ರದಲ್ಲಿ ಸಂಭ್ರಮದ ಕ್ರಿಸ್‌ಮಸ್ ದಿನಾಚರಣೆ

Friday, December 25th, 2015
Bela church

ಬದಿಯಡ್ಕ: ಕಾಸರಗೋಡು ಜಿಲ್ಲೆಯಲ್ಲಿ ಅತೀ ಪುರಾತನ ಹಾಗೂ ಕೇರಳ ಪ್ರವಾಸ್ಯೋದ್ಯಮ ಇಲಾಖೆಯಲ್ಲಿ ನೊಂದವಣೆಗೊಂಡ ಬೇಳ ಶೋಕಮಾತ ಪುಣ್ಯಕ್ಷೇತ್ರದಲ್ಲಿ ಕ್ರಿಸ್‌ಮಸ್ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಸಂಭ್ರಮದ ಬಲಿಪೂಜೆಯಲ್ಲಿ ವಂದನೀಯ ಸ್ವಾಮಿ ಡೆನಿಯಲ್ ಪ್ರಕಾಶ್ ಡಿ’ಸೋಜಾ ನೇತೃತ್ವ ನೀಡಿದರು. ಬಲಿಪೂಜೆಯಲ್ಲಿ ಕಾಸರಗೋಡು ವಲಯದ ಪ್ರಧಾನ ಧರ್ಮಗುರು ಹಾಗೂ ಬೇಳ ಶೋಕಮಾತ ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರುಗಾದ ಅತೀ ವಂದನೀಯ ಸ್ವಾಮಿ ವಿನ್ಸೆಂಟ್ ಡಿ’ಸೋಜಾ ಮಂದಾಳುತ್ವ ನೀಡಿದರು. ಶೋಕಮಾತ ಪುಣ್ಯಕ್ಷೇತ್ರದ ಸಹಾಯಕ ಧರ್ಮಗುರುಗಳಾದ ವಂದನೀಯ ಸ್ವಾಮಿ ಡೆನ್ಸಿಲ್ ಲೋಬೊ, ವಂದನೀಯ ಸ್ವಾಮಿ […]