ಅಮೈ ಈಶ್ವರ ಭಟ್ ಸಂಸ್ಮರಣೆ:ಗಮಕ-ವ್ಯಾಖ್ಯಾನ ಕಾರ್ಯಕ್ರಮ

Friday, December 25th, 2015
Gamaka-Vachana

ಉಪ್ಪಳ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರನ್ನು ಸುಮಾರು 40 ವರ್ಷಗಳಿಂದಲೂ ಅನನ್ಯವಾಗಿ ಆರಾಧಿಸುತ್ತಿದ್ದು, ಸಂಗೀತದ ಗುರುಗಳೂ, ಗಮಕಿಗಳೂ, ಸಜ್ಜನರೂ ಆಗಿದ್ದು ಇತ್ತೀಚೆಗೆ ನಿಧನರಾದ ಅಮೈ ಈಶ್ವರ ಭಟ್ಟರ ಸಂಸ್ಮರಣೆಯೊಂದಿಗೆ ಗಮಕ-ವ್ಯಾಖ್ಯಾನ ಕಾರ್ಯಕ್ರಮವು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ ಗಮಕಿ, ಕವಿ ದಿ| ಕೈಂತಜೆ ನರಸಿಂಹ ಭಟ್ಟ ವಿರಚಿತ ಶ್ರೀದೇವೀ ಮಹಾತ್ಮೆ ಕೃತಿಯ ಮಹಾಲಕ್ಷ್ಮೀ ಕಾಂಡ ಭಾಗವನ್ನು ಆಯ್ದುಕೊಳ್ಳಲಾಗಿತ್ತು. ಗಮಕಿಯಾಗಿ ಗಣಪತಿ ಪದ್ಯಾಣ ಮತ್ತು ವ್ಯಾಖ್ಯಾನಕಾರರಾಗಿ ಮುಳಿಯ ಶಂಕರ ಭಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ […]

ಯುವ ಜನಾಂಗ ಶಾಸ್ತ್ರೀಯ ಸಂಗೀತವನ್ನು ಕಲಿಯುವ ಅಗತ್ಯವಿದೆ : ಡಾ.ಹರಿಕೃಷ್ಣ ಭರಣ್ಯ

Friday, December 25th, 2015
Nirchal Aradhana Sangeetha school

ಬದಿಯಡ್ಕ: ಸಂಸ್ಕೃತಿ ಮತ್ತು ನಾಗರಿಕತೆಗಳು ಮಾನವನು ಬೆಳೆದು ಬಂದ ಹಿರಿಮೆಯನ್ನು ತೋರಿಸುವ ಕೈಗನ್ನಡಿಗಳಾಗಿವೆ.ಸಂಗೀತವು ಕಲೆಯ ನೆಲೆಯಾಗಿದೆ.ಸಂಗೀತ ಕಲಿಕೆಯಿಂದ ಮನಸ್ಸು ಮತ್ತು ದೈಹಿಕ ಆರೋಗ್ಯ ಹೆಚ್ಚುವುದು.ಈ ನಿಟ್ಟಿನಲ್ಲಿ ಯುವ ಜನಾಂಗ ಶಾಸ್ತ್ರೀಯ ಸಂಗೀತವನ್ನು ಕಲಿಯುವ ಅಗತ್ಯವಿದೆಯೆಂದು ಮಧುರೈ ಕಾಮರಾಜ ವಿ.ವಿ.ಯ ವಿಶ್ರಾಂತ ಪ್ರಾಂಶುಪಾಲ ಡಾ.ಹರಿಕೃಷ್ಣ ಭರಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನೀರ್ಚಾಲಿನ ಆರಾಧನಾ ಸಂಗೀತ ಶಾಲೆಯ ವಾರ್ಷಿಕೋತ್ಸವವನ್ನು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಶಿಕ್ಷಣ ತಜ್ಞ,ಸಾಹಿತಿ ವಿ.ಬಿ.ಕುಳಮರ್ವ,ನಿವೃತ್ತ […]

ಡಿ. 24- 27: “ಆಳ್ವಾಸ್‌ ವಿರಾಸತ್‌”

Tuesday, December 22nd, 2015
Alvas Virasat

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ “ಆಳ್ವಾಸ್‌ ವಿರಾಸತ್‌’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಡಿ. 24ರಿಂದ 27ರ ವರೆಗೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಆಳ್ವಾಸ್‌ ಆವರಣ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆ ವಿರಾಸತ್‌ ಕಾರ್ಯಕ್ರಮಗಳಿಗೆ ಸಿದ್ಧಗೊಂಡಿದೆ. 35,000 ಮಂದಿ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಬಯಲುರಂಗ ಮಂದಿರ ಇದಾಗಿದೆ. 24ರಂದು ಸಂಜೆ 5.15ರಿಂದ 5.30ರ ತನಕ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಗುತ್ತದೆ. 5.30ರಿಂದ ಸಭಾ […]

ಭಾರತೀಯ ಮಜ್ದೂರ್ ಸಂಘದ ಸಮರ್ಪಣಾ ನಿಧಿ ಕಾರ್ಯಕ್ರಮ

Tuesday, December 22nd, 2015
Nidhi

ಉಪ್ಪಳ: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ 60ನೇ ವರ್ಷಾಚರಣೆಯ ಅಂಗವಾಗಿ ಕುಟುಂಬ ಸಂಗಮ ಹಾಗೂ ಸಮರ್ಪಣಾ ನಿಧಿ ಕಾರ್ಯಕ್ರಮ ಹೇರೂರಿನಲ್ಲಿ ಇತ್ತೀಚೆಗೆ ನಡೆಯಿತು. ಘಟಕದ ಅಧ್ಯಕ್ಷ ಸಂದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಜೊತೆ ಕಾರ್ಯದರ್ಶಿ ಕೆ.ನಾರಾಯಣ ಉದ್ಘಾಟಿಸಿದರು.ಜಿಲ್ಲಾ ಜೊತೆಕಾರ್ಯದರ್ಶಿ ಐತ್ತಪ್ಪ ನಾರಾಯಣಮಂಗಲ,ಕುಂಬಳೆ ವಲಯ ಕಾರ್ಯದರ್ಶಿ ಪಿ.ರಾಘವೇಂದ್ರ,ಮನೋಜ್ ಹೆಗ್ಡೆ,ಕೊರಗಪ್ಪ ಕುಲಾಲ್,ನಿರ್ಮಾಣ ಕಾರ್ಮಿಕ ಸಂಘದ ಕುಂಬಳೆ ವಲಯಾಧ್ಯಕ್ಷ ಗಂಗಾಧರ ಆಚಾರ್ಯ,ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ರೇವತಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.ಪ್ರಮೋದ್ ಕುಮಾರ್ ಪ್ರಾರ್ಥನೆ ಹಾಡಿದರು.ರಾಮಕೃಷ್ಣ ಹೇರೂರು ಸ್ವಾಗತಿಸಿ,ಉಮೇಶ್ ಪೂಜಾರಿ ವಂದಿಸಿದರು.

ಪೈವಳಿಕೆಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಜನಜಾಗೃತಿ ಸಭೆ

Tuesday, December 22nd, 2015
Uppala Bjp

ಉಪ್ಪಳ: ಕಳೆದ 15 ವರ್ಷಗಳಿಂದ ನಿಷ್ಪಕ್ಷಪಾತ,ಭ್ರಷ್ಠಾಚಾರ ರಹಿತ ಆಡಳಿತ ನೀಡಿದ ಬಿಜೆಪಿ ನೇತೃತ್ವದ ಆಡಳಿತವನ್ನು ಈ ಬಾರಿಯೂ ಜನತೆ ಒಪ್ಪಿ ಬಹುಮತದಿಂದ ಗೆಲ್ಲಿಸಿದ್ದರು.ಆದರೆ ಪ್ರತಿಪಕ್ಷಗಳ ಅನೈತಿಕ ಒಳಒಪ್ಪಂದದ ಫಲವಾಗಿ ಜನರಿಂದ ತಿರಸ್ಕರಿಸಲ್ಪಟ್ಟವರು ಅಧಿಕಾರ ಲಾಲಸೆಯಿಂದ ಒಂದಾಗಿ ಗ್ರಾಮ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತದ್ದು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಜಿಲ್ಲಾ ಪಂಚಾಯತ್ ಸದಸ್ಯ ಅಡ್ವ.ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಪೈವಳಿಕೆ ಗ್ರಾಮ ಪಂಚಾಯತಿಯಲ್ಲಿ ಬಹುಮತದಿಂದ […]

‘ದಿಲ್ ವಾಲೆ’ ಚಲನ ಚಿತ್ರ ಪ್ರದರ್ಶನಕ್ಕೆ ಬಂಟ್ವಾಳದಲ್ಲಿ ತಡೆ

Monday, December 21st, 2015
Dilwale

ಬಂಟ್ವಾಳ: ಶಾರುಖ್ ಖಾನ್ ಅವರ ‘ದಿಲ್ ವಾಲೆ’ ಚಲನ ಚಿತ್ರ ಪ್ರದರ್ಶನಕ್ಕೆ ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಕಾರ‍್ಯಕರ್ತರು ಪ್ರತಿಭಟನೆ ನಡೆಸಿ ತಡೆ ಒಡ್ಡಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಅಮೀರ್ ಖಾನ್ ನೀಡಿದ ಹೇಳಿಕೆಯನ್ನು ಶಾರುಖ್ ಖಾನ್ ಬೆಂಬಲಿಸಿದ ಕಾರಣ ಬಿ.ಸಿರೋಡಿನಲ್ಲಿ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು. ಬಿಸಿರೋಡಿನ ಕೃಷ್ಣ ಪ್ರೈಮ್ ನಲ್ಲಿರುವ ನಕ್ಷತ್ರ ಸಿನಿಮಾ ಮಂದಿರದಲ್ಲಿ ಸಂಜೆ ಸಿನಿಮಾ ಪ್ರದರ್ಶನ ನಡೆಯುವ ವಿಷಯ ತಿಳಿದ ಕಾರ‍್ಯಕರ್ತರು ಸಿನಿಮಾ ಮಂದಿರಕ್ಕೆ ನುಗ್ಗಿ ಸಿನಿಮಾ ಪ್ರದರ್ಶನ […]

ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಯತ್ನ-ಆರೋಪಿ ಪೋಲೀಸ್ ವಶಕ್ಕೆ

Monday, December 21st, 2015
Haneefa

ಉಪ್ಪಳ: ಬಾಡಿಗೆ ಕ್ವಾರ್ಟ್ರಸ್ ನಲ್ಲಿ ವಾಸವಿರುವ ಕರ್ನಾಟಕ ಮೂಲದ ದಂಪತಿಗಳ ಕುರುಡಿ ಅಪ್ರಾಪ್ತ ಬಾಲಕಿಯೋರ್ವೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸೋಮವಾರ ಅಪರಾಹ್ನ ಉಪ್ಪಳ ಹಿದಾಯತ್ ನಗರದಲ್ಲಿ ನಡೆದಿದ್ದು, ಪೋಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಉಪ್ಪಳದ ಹಿದಾಯತ್ ನಗರದ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಕರ್ನಾಟಕ ಮೂಲದ ಕಲಂದರ್ ಹಾಗೂ ಅಫ್ರಿದಾಬಾನು ದಂಪತಿಗಳ ಪುತ್ರಿ ಮೂರನೇ ತರಗತಿಯ ವಿದ್ಯಾರ್ಥಿನಿಯನ್ನು ನೆರೆಮನೆಯ ವ್ಯಕ್ತಿಯಾದ ಮೊಹಮ್ಮದ್ ಹನೀಫಾ(50)ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ದೂರಲಾಗಿದೆ. ಸೋಮವಾರ ಅಪರಾಹ್ನ ದಂಪತಿಗಳು ತಮ್ಮ ಇಬ್ಬರ ಮಕ್ಕಳ ಪೈಕಿ […]

ತಂತ್ರಜ್ಞಾನ ತಳಮಟ್ಟಕ್ಕೆ ತಲುಪಲು ಕೃಷಿಸಂಘಗಳು ಅಗತ್ಯ – ಡಾ.ಜಯಪ್ರಕಾಶ್ ಲಾಡ

Monday, December 21st, 2015
Lada Jayaprakash Bhat

ಪೆರ್ಲ : ಕಾಸರಗೋಡು ಜೈವಿಕ ಜಿಲ್ಲೆಯಾಗಿದ್ದು, ಕಾಸರಗೋಡು ಗಿಡ್ಡ ತಳಿಯ ಗೋವನ್ನು ಆಧರಿಸಿ ಕೃಷಿಯನ್ನು ಮಾಡುತ್ತಿರುವ ಸಂಘಕ್ಕೆ ಹೆಚ್ಚಿನ ಮಹತ್ವವಿದೆ. ಕೃಷಿ ಕ್ಷೇತ್ರದ ಹೊಸ ಹೊಸ ಸಂಶೋಧನೆ ಮತ್ತು ತಂತ್ರಜ್ಜಾನವನ್ನು ತಳಮಟ್ಟದ ಕೃಷಿಕರಿಗೆ ತಲುಪಿಸಲು ಇಂತಹ ಕೃಷಿಕರ ಸಂಘ ಅತ್ಯಗತ್ಯ ಎಂದು ‘ಆತ್ಮ’ದ ಡೆಪ್ಯುಟಿ ಪ್ರೋಜೆಕ್ಟ್ ಡೈರೆಕ್ಟರ್ ಡಾ. ಜಯಪ್ರಕಾಶ್ ಲಾಡಾ ಹೇಳಿದರು. ಅವರು ಇತ್ತೀಚೆಗೆ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಆರಂಭಗೊಂಡ ‘ಬಂಗಾರಿ’ ಮಂಜೇಶ್ವರ ಬ್ಲಾಕ್ ಫಾರ್ಮರ‍್ಸ್ ಎಕ್ಸ್ಟೆನ್ಶನ್ ಓರ್ಗನೈಸೇಶನ್‌ನ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಸದಸ್ಯರಿಗೆ ಸಂಘಟನೆಯು […]

ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ. ಕಾರ‍್ಯನಿರ್ವಾಹಕ ಅಭಿಯಂತರ ಬೇಟಿ

Monday, December 21st, 2015
Melkar

ಬಂಟ್ವಾಳ: ರಸ್ತೆ ಅಗಲೀಕರಣಗೊಂಡು ಧೂಳಿನಿಂದ ಕೂಡಿದ್ದ ಮೆಲ್ಕಾರ್ ಜಂಕ್ಷನ್‌ಗೆ ರಾ.ಹೆ. ಕಾರ‍್ಯನಿರ್ವಾಹಕ ಅಭಿಯಂತರರು ದಿಡೀರ್ ಬೇಟಿ ನೀಡಿ ಅಲ್ಲಿನ ಜನರ ಬೇಡಿಕೆಗಳನ್ನು ಅವಲೋಕಿಸಿದರು. ಬಳಿಕ ಮೆಲ್ಕಾರ್ ರಸ್ತೆ ಅಗಲೀಕರಣದ ರೂವಾರಿ ಟ್ರಾಫಿಕ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್ ಅಯ್ಯ ಅವರು ಮೆಲ್ಕಾರ್ ಅಗಲೀಕರಣವಾದ ಸ್ಥಳಕ್ಕೆ ಧೂಳಿನಿಂದ ಮುಕ್ತಿ ಸಿಗಲು ಡಾಮರೀಕರಣ ಮಾಡಿಕೊಡುವಂತೆ ಮತ್ತು ಜನರು ರಸ್ತೆ ದಾಟಲು ತೀರಾ ಕಷ್ಟವಾಗುತ್ತಿದ್ದು ಜೀಬ್ರಾ ಲೈನ್ ಅಳವಡಿಸಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿಯನ್ನು ನೀಡಿದರು. ಈ ಸಂದರ್ಭ ಮನವಿಯನ್ನು ಸ್ವೀಕರಸಿದ ಎಕ್ಷಿಕ್ಯೂಟಿವ್ ಇಂಜೀನಿಯರ್ […]

ನಾಟಿ ಬೀದಿ ಕೊಂದಂಡರಾಮಚಂದ್ರ ದೇವಸ್ಥಾನಕ್ಕೆ ಪ್ರದಾನ ದ್ವಾರ ಸಮರ್ಪಣೆ

Monday, December 21st, 2015
Nati

ಬಂಟ್ವಾಳ: ನರಿಕೊಂಬುವಿನ ನಾಟಿ ಬೀದಿ ಕೊಂದಂಡರಾಮಚಂದ್ರ ದೇವಸ್ಥಾನಕ್ಕೆ ಪ್ರದಾನ ದ್ವಾರವನ್ನು ಜಗದೀಶ ಬಂಗೇರ ನಿರ್ಮಲ್ ಮತ್ತು ಊರಿನ ಹತ್ತು ಸಮಸ್ತರು ಸೇರಿ ಸಮರ್ಪಿಸಿದರು. ಈ ಕಾರ‍್ಯಕ್ರಮದಲ್ಲಿ ಬ್ರಹ್ಮ ಕಲಶಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ , ಪ್ರದಾನ ಕಾರ‍್ಯದರ್ಶಿ ಸಂಜೀವ ನಾಟಿ, ಆಡಳಿತ ಮಂಡಳಿ ಅಧ್ಯಕ್ಷರಾದ ಪುರುಷೋತ್ತಮ ಬಂಗೇರ ನಾಟಿ, ಸಮಿತಿಯ ಪ್ರಮುಖರಾದ ಪ್ರೇಮನಾಥ ಶೆಟ್ಟಿ ಅಂತರ , ಕಿಶೋರ್ ಶೆಟ್ಟಿ ಅಂತರ, ಮಾದವ ಕರ್ಬೇಟ್ಟು, ಆನಂದ ಅಡ್ಯಾರ್, ಕೃಷ್ಣಪ್ಪ ಪೂಜಾರಿ ನಾಟಿ, ಜಯಂತಿ ನಾಟಿ, ಸುರೇಶ್ […]